Asianet Suvarna News Asianet Suvarna News

ದಿನಕ್ಕೆಷ್ಟು ಸಾರಿ ಕಣ್ಣು ಮಿಟುಕಿಸುತ್ತೀರಿ? ಹೆಚ್ಚು ಕಡಿಮೆಯಾದರೆ ಕಣ್ಣಿಗೆ ಅಪಾಯ!

ಕಣ್ಣುಗಳ ಸುರಕ್ಷತೆಗೆ ಹೆಚ್ಚು ಗಮನ ನೀಡಬೇಕು ಎಂದಾದರೆ ದಿನನಿತ್ಯದ ಜೀವನದಲ್ಲಿ ನಮ್ಮ ಕೆಲವು ಅಭ್ಯಾಸಗಳಿಗೆ ಬೈ ಹೇಳಬೇಕು, ಏಕೆಂದರೆ, ಕಣ್ಣುಗಳ ಸುರಕ್ಷತೆ ದೃಷ್ಟಿಯಿಂದ ಇವು ದುರಭ್ಯಾಸಗಳು. ಐ ಡ್ರಾಪ್ ಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ಹಿಡಿದು ಬಿಸಿನೀರು ಬಳಕೆಯವರೆಗೆ ಹಲವು ದುರಭ್ಯಾಸಗಳನ್ನು ದೂರವಿಟ್ಟಾಗ ಕಣ್ಣುಗಳು ಸುರಕ್ಷಿತವಾಗಿ ಇರಬಲ್ಲವು. 
 

Some daily  habits of may damage eyes
Author
First Published Jan 3, 2023, 4:23 PM IST

ಕಣ್ಣುಗಳ ಸುರಕ್ಷತೆ ಬಗ್ಗೆ ಎಷ್ಟು ಗಮನ ವಹಿಸಿದರೂ ಕಡಿಮೆಯೇ. ಇಂದಿನ ದಿನಗಳಲ್ಲಂತೂ ಮೊಬೈಲ್, ಟಿವಿ, ಲ್ಯಾಪ್ ಟಾಪ್ ಸೇರಿದಂತೆ ಹಲವು ಡಿಜಿಟಲ್ ಸ್ಕ್ರೀನ್ ವೀಕ್ಷಣೆ ಮಾಡುವ ಸಮಯ ಹೆಚ್ಚಾಗಿರುವುದರಿಂದ ಕಣ್ಣುಗಳು ಮತ್ತಷ್ಟು ಅಪಾಯಕ್ಕೆ ತುತ್ತಾಗಿವೆ, ಸಾಕಷ್ಟು ಹಾನಿಯೂ ಈಗಾಗಲೇ ಸಂಭವಿಸಿದೆ. ಇದರೊಂದಿಗೆ ನಮ್ಮ ಕೆಲವು ಅಭ್ಯಾಸಗಳೂ ಕಣ್ಣುಗಳ ಸುರಕ್ಷತೆಗೆ ಧಕ್ಕೆ ತರುತ್ತವೆ ಎಂದರೆ ಅಚ್ಚರಿಯಾದೀತು. ದೇಹದ ಬೇರೆ ಎಲ್ಲ ಅಂಗಗಳ ಬಗ್ಗೆ ಸಾಕಷ್ಟು ಗಮನ ಹರಿಸುವ ನಾವು ಕಣ್ಣುಗಳ ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ಹೆಚ್ಚು ಆದ್ಯತೆ ನೀಡುವುದಿಲ್ಲ ಎನ್ನುವುದು ವಿಚಿತ್ರ ಸತ್ಯ. ನಮ್ಮ ಕೆಲವು ಅಭ್ಯಾಸಗಳಂತೂ ಕಣ್ಣುಗಳಿಗೆ ಎಷ್ಟು ಹಾನಿಯುಂಟು ಮಾಡಬಲ್ಲವು ಎಂದರೆ, ಕ್ರಮೇಣ ಕಣ್ಣುಗಳು ಶಾಶ್ವತವಾಗಿ ಅಂಧತ್ವ ಹೊಂದಬಲ್ಲವು. ಕಣ್ಣುಗಳಿಗೆ ಕಿರಿಕಿರಿ, ಶುಷ್ಕತನದ ಸಮಸ್ಯೆ, ನೋವು, ದೃಷ್ಟಿ ಮಂದವಾಗುವಿಕೆ ಮುಂತಾದ ಸಮಸ್ಯೆಗಳು ಉಂಟಾಗಬಲ್ಲವು. ಕಣ್ಣುಗಳ ಮೂಲಕವೇ ನಾವು ಜಗತ್ತಿನ ಸೌಂದರ್ಯ ಆಸ್ವಾದಿಸಲು ಸಾಧ್ಯವಾಗುತ್ತದೆ. ಹೀಗಿರುವಾಗ ಕಣ್ಣುಗಳ ಸುರಕ್ಷತೆಗೆ ಅಪಾಯ ತಂದೊಡ್ಡುವ ಸಾಮಾನ್ಯ ದಿನನಿತ್ಯದ ಅಭ್ಯಾಸಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ದೂರ ಮಾಡಿಕೊಳ್ಳುವುದರಲ್ಲಿ ಅರ್ಥವಿದೆ. 

•    ಸ್ನಾನ (Bathing) ಮಾಡುವಾಗ ಕಾಂಟ್ಯಾಕ್ಟ್ ಲೆನ್ಸ್ (Contact Lens) ಧರಿಸಿರುವುದು
ಸ್ನಾನ ಮಾಡುವ ಸಮಯದಲ್ಲಿ ಕಣ್ಣುಗಳಿಗೆ ಧರಿಸುವ ಕಾಂಟ್ಯಾಕ್ಟ್ ಲೆನ್ಸ್ ತೆಗೆದಿಡುವುದು ಶ್ರೇಯಸ್ಕರ. ಆದರೂ ಒಮ್ಮೊಮ್ಮೆ ಗಡಿಬಿಡಿಗೋ ಅಥವಾ ಉದಾಸೀನತೆಯಿಂದಲೋ (Negligence) ಲೆನ್ಸ್ ಇಟ್ಟುಕೊಂಡೇ ಸ್ನಾನ ಮಾಡುವುದು ತೀರ ದುಬಾರಿಯಾದ ಅಭ್ಯಾಸವಾಗಬಹುದು. ಏಕೆಂದರೆ, ಇದರಿಂದ ಕಣ್ಣುಗಳ ದೃಷ್ಟಿಯೇ (Vision) ಹೋಗಿಬಿಡಬಹುದು. ಅತ್ಯಂತ ಗಂಭೀರವಾದ ಸೋಂಕಿಗೆ (Infection) ತುತ್ತಾಗಬಹುದು. ಲೆನ್ಸ್ ಧರಿಸಿ ಸ್ನಾನ ಮಾಡುವ ಅಭ್ಯಾಸ ಹೊಂದಿದ್ದ ಲಂಡನ್ ಮಹಿಳೆಯೊಬ್ಬರಿಗೆ ಕೆಲ ಸಮಯದ ಹಿಂದೆ ಅಮೀಬಾ ಸೋಂಕಿಗೆ ಒಳಗಾಗಿದ್ದರು, ಅಷ್ಟೇ ಅಲ್ಲ, ಒಂದು ಕಣ್ಣನ್ನೇ ತೆಗೆಯಬೇಕಾಗಿ ಬಂದಿತ್ತು. ಹೀಗಾಗಿ, ಎಂದಿಗೂ ಲೆನ್ಸ್ ಧರಿಸಿ ಸ್ನಾನ ಮಾಡಬೇಡಿ. 

Reading Eyes: ಕಣ್ಣು ನೋಡಿ ಮನಸ್ಸು ಅರಿಯೋದ್ರಲ್ಲಿ ಮಹಿಳೆಯರೇ ಗ್ರೇಟ್

•    ಕಣ್ಣುಗಳಿಗೆ ಬಿಸಿನೀರಿನ (Warm Water) ಬಳಕೆ
ಕಣ್ಣುಗಳನ್ನು ತೊಳೆಯಲು ಬಿಸಿ (Hot) ಅಥವಾ ಬೆಚ್ಚಗಿನ ನೀರನ್ನು ಎಂದಿಗೂ ಬಳಕೆ ಮಾಡಬಾರದು. ಕೆಲವರು ಸ್ನಾನ ಮಾಡುವ ಸಮಯದಲ್ಲಿ ಮುಖ ಹಾಗೂ ಕಣ್ಣುಗಳಿಗೆ (Eyes) ಬಿಸಿನೀರನ್ನು ಸೋಕಿಸುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಕಣ್ಣುಗಳಿಗೆ ಎಂದಿಗೂ ಬಿಸಿನೀರನ್ನು ಬಳಕೆ ಮಾಡಬಾರದು. ಸಾಮಾನ್ಯ ತಾಪಮಾನದಲ್ಲಿರುವ ತಣ್ಣೀರನ್ನೇ ಬಳಕೆ ಮಾಡಬೇಕು. ಇದರಿಂದ ಕಣ್ಣುಗಳ ದೃಷ್ಟಿ ಮಂದವಾಗುವ (Blurred Vision) ಸಮಸ್ಯೆ ಉಂಟಾಗಬಹುದು.

•    ಕಣ್ಣುಗಳನ್ನು ಉಜ್ಜುವುದು (Rubbing)
ನವೆಯಾದಾಗ, ಅಕಸ್ಮಾತ್ತಾಗಿ ಕಣ್ಣುಗಳಿಗೆ ಕಸ ಬಿದ್ದಾಕ್ಷಣ ಸಾಮಾನ್ಯವಾಗಿ ಉಜ್ಜುತ್ತೇವೆ. ಈ ಅಭ್ಯಾಸವೂ ಸಮಸ್ಯೆ ತಂದೊಡ್ಡುತ್ತದೆ. ಕಣ್ಣುಗಳಿಗೆ ಏನಾದರೂ ಸಣ್ಣ ಕಸ ಬಿದ್ದಾಕ್ಷಣ ಉಜ್ಜಬಾರದು. ಏನು ಬಿದ್ದಿದೆ ಎಂದು ನೋಡಿ, ಅದನ್ನು ತೆಗೆಯುವ ಪ್ರಯತ್ನ ಮಾಡಬೇಕು. ಉಜ್ಜಿದರೆ ಕಣ್ಣುಗಳು ಶಾಶ್ವತವಾಗಿ ಹಾನಿಗೀಡಾಗಬಹುದು.

Beauty Tips : ಕಣ್ಣು ಸೌಂದರ್ಯ ಕಳೆದುಕೊಳ್ಳುತ್ತಿದ್ದರೆ, ಇಲ್ಲಿದೆ ಟಿಪ್ಸ್

•    ಮಲಗುವಾಗ ಕಣ್ಣುಗಳಿಗೆ ಮಾಸ್ಕ್ (Eye Mask) ಧರಿಸ್ತೀರಾ?
ರೂಮ್ (Room) ಅಥವಾ ಹೊರಗಿನ ಬೆಳಕು (Light) ಕಣ್ಣುಗಳಿಗೆ ಬೀಳದಿರಲಿ ಎಂದು ಕಣ್ಣುಗಳ ಮೇಲೆ ಮಾಸ್ಕ್ ಅಥವಾ ಇಡೀ ಮುಖಕ್ಕೆ ಹೊದಿಕೆ ಎಳೆದುಕೊಂಡು ಮಲಗುವ ಅಭ್ಯಾಸ (Habit) ಹೊಂದಿರುತ್ತಾರೆ. ಬಾಹ್ಯ ಬೆಳಕಿಗೆ ದಪ್ಪನೆಯ ಕರ್ಟನ್ಸ್ ಬಳಕೆ ಮಾಡಿ ಅವಾಯ್ಡ್ ಮಾಡಬಹುದು. ಒಳಾಂಗಣ ಬೆಳಕನ್ನು ನೀವೇ ಆರಿಸಿಕೊಳ್ಳುವ ಅಭ್ಯಾಸ ಇರಿಸಿಕೊಳ್ಳಬಹುದು. ಬದಲಿಗೆ, ಕಣ್ಣುಗಳನ್ನೇ ಮುಚ್ಚಿಕೊಳ್ಳುವುದು ಒಳ್ಳೆಯ ಅಭ್ಯಾಸವಲ್ಲ. ಇದರಿಂದ ಕಣ್ಣುಗಳು ಅನಗತ್ಯ ಭಾರ ಹೊರುವಂತಾಗುತ್ತದೆ. 

•    ಮಿಟುಕಿಸದೆ ಇರುವುದು 
ಇತ್ತೀಚೆಗೆ ಈ ಅಭ್ಯಾಸ ಎಲ್ಲರಲ್ಲೂ ಹೆಚ್ಚಾಗಿದೆ. ಯಾವುದೇ ಸ್ಕ್ರೀನ್ (Screen) ನೋಡುವ ಸಮಯದಲ್ಲಿ ನಾವು ಕಣ್ಣುಗಳನ್ನು ಮಿಟುಕಿಸುವುದು ಕಡಿಮೆ. ಇದರಿಂದ ಕಣ್ಣುಗಳು ಶುಷ್ಕವಾಗುವ (Dry Eye) ಸಮಸ್ಯೆ ಎದುರಾಗುತ್ತದೆ. ಕಣ್ಣಿನ ಕೋಶಗಳಿಗೆ ಹಾನಿಯಾಗುತ್ತದೆ. ಕಣ್ಣುಗಳು ಸದಾಕಾಲ ತೇವಾಂಶದಿಂದ ಕೂಡಿರಲು ಮಿಟುಕಿಸುವ ಕ್ರಿಯೆ ಅಗತ್ಯ.
 

Follow Us:
Download App:
  • android
  • ios