ಮದ್ಯಪಾನ ಚಟ ಬಿಡಿಸೋಕೆ ಎಲೆಕ್ಟ್ರಿಕ್ ಶಾಕ್ ನೀಡ್ತಿದ್ದಾರೆ ವೈದ್ಯರು, ಏನಿದು ಥೆರಪಿ?

ಮನೆಯಲ್ಲಿ ಒಬ್ಬ ಮದ್ಯವ್ಯಸನಿಯಾದ ಅಂದ್ರೆ ಆ ಮನೆ ಬೀದಿಗೆ ಬಂದಂತೆ. ಈ ದುಷ್ಚಟ ಬಿಡಿಸಲು ನಾನಾ ಪ್ರಯತ್ನಗಳು ನಡೆಯುತ್ತವೆ. ಆದ್ರೀಗ ವೈದ್ಯರು ಅಚ್ಚರಿಯ ಹಾಗೂ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ಸಣ್ಣ ಶಾಕ್ ಟ್ರೀಟ್ಮೆಂಟ್ ಆಲ್ಕೋಹಾಲ್ ಚಟ ಬಿಡಿಸ್ತಿದೆ. ಎಲ್ಲಿ ಎಂಬ ಮಾಹಿತಿ ಇಲ್ಲಿದೆ.
 

Electric Shock Therapy For Alcohol Addicts roo

ಮದ್ಯಪಾನ ಚಟವಾದ್ರೆ ಅದನ್ನು ಬಿಡೋದು ಬಹಳ ಕಷ್ಟ. ಆಲ್ಕೋಹಾಲ್ ದೇಹವನ್ನು ಮಾತ್ರವಲ್ಲ ಕುಟುಂಬವನ್ನೇ ಹಾಳು ಮಾಡುತ್ತೆ. ಅನೇಕ ಸಂಸಾರ ಬೀದಿಗೆ ಬಂದಿದೆ. ಹಗಲು – ರಾತ್ರಿ ಎನ್ನದೆ ಮದ್ಯಪಾನ ಸೇವನೆ ಮಾಡಿ, ರಸ್ತೆಯಲ್ಲಿ ಬೀಳುವ ಜನರ ಸಂಖ್ಯೆ ಸಾಕಷ್ಟಿದೆ. ಈಗಿನ ದಿನಗಳಲ್ಲಿ ಯುವಕರಲ್ಲಿ ಮದ್ಯಪಾನ ಹೆಚ್ಚಾಗ್ತಿದೆ. ಇತ್ತೀಚಿಗೆ ನಡೆದ ಒಂದು ಸಂಶೋಧನೆ ಪ್ರಕಾರ, ಶ್ರೀಮಂತರಿಗಿಂತ ಬಡವರು ಹಾಗೂ ಮದ್ಯವಯಸ್ಸಿನ ಜನರು ಹೆಚ್ಚು ಮದ್ಯಪಾನ ಮಾಡ್ತಿದ್ದಾರೆ ಎಂಬ ಅಂಶ ಬಹಿರಂಗವಾಗಿದೆರ. ಆಲ್ಕೋಹಾಲ್ ಸೇವನೆ ಅನೇಕ ಗಂಭೀರ ರೋಗಕ್ಕೆ ಕಾರಣವಾಗ್ತಿದೆ. ಆರೋಗ್ಯ ಹಾಳಾಗ್ತಿದೆ, ಸಾವು ಹತ್ತಿರ ಬರ್ತಿದೆ ಎಂದ್ರೂ ಅನೇಕರಿಗೆ ಮದ್ಯಪಾನ ಬಿಡಲು ಸಿದ್ಧರಾಗೋದಿಲ್ಲ. ಮದ್ಯಪಾನ ವ್ಯಸನದಿಂದ ಹೊರಗೆ ತರಲು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅಲ್ಲಲ್ಲಿ ಅನೇಕ ವೈದ್ಯರು ಔಷಧಿಗಳನ್ನು ನೀಡೋದಾಗಿ ಹೇಳ್ತಾರೆ. ಮನೆ ಮದ್ದುಗಳ ಪ್ರಯೋಗ ಕೂಡ ನಡೆಯೋದಿದೆ. ಇದ್ರಿಂದ ಎಷ್ಟು ಲಾಭವಾಗಿದೆ, ಯಾರು ಮದ್ಯಪಾನ ತ್ಯಜಿಸಿದ್ದಾರೆ ಎಂಬುದನ್ನು ನಿಖರವಾಗಿ ಹೇಳೋದು ಕಷ್ಟ. ಈ ಮಧ್ಯೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ವೈದ್ಯರೊಬ್ಬರು ಗಮನ ಸೆಳೆದಿದ್ದಾರೆ. ಮದ್ಯದ ಚಟದಿಂದ ಮುಕ್ತಿ ಹೊಂದಲು ಬಯಸುವ ಜನರಿಗೆ ಅವರು ನೀಡ್ತಿರುವ ಚಿಕಿತ್ಸೆ ಅಚ್ಚರಿ ಹುಟ್ಟಿಸುವಂತಿದೆ. ವೈದ್ಯರು ಜನರಿಗೆ ವಿದ್ಯುತ್ ಶಾಕ್ ನೀಡುವ ಮೂಲಕ ಆಲ್ಕೋಹಾಲ್ ಚಟ ಬಿಡಿಸ್ತಿದ್ದಾರೆ.

ಲಕ್ನೋ (Lucknow) ದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನಲ್ಲಿ ಈ ಚಿಕಿತ್ಸೆ ನಡೆಯುತ್ತಿದೆ. ಈವರೆಗೆ ಹದಿನೇಳು ಮಂದಿಗೆ ಈ ಚಿಕಿತ್ಸೆ ಮೂಲಕ ಮದ್ಯವ್ಯಸನ (Alcoholism) ವನ್ನು ಬಿಡಿಸಲಾಗಿದೆ. ಇದನ್ನು ಟ್ರಾನ್ಸ್‌ಕ್ರೇನಿಯಲ್ ಡೈರೆಕ್ಟ್ ಕರೆಂಟ್ ಸ್ಟಿಮ್ಯುಲೇಶನ್ ಟೆಕ್ನಿಕ್ ಎಂದು ಕರೆಯಲಾಗುತ್ತಿದೆ. ಸಾಂಪ್ರದಾಯಿಕವಾಗಿ ಬಳಸಲಾಗುವ ಈ ಎಲೆಕ್ಟ್ರೋ ಥೆರಪಿಯಲ್ಲಿ, ರೋಗಿಯನ್ನು ಪ್ರಜ್ಞಾಹೀನಗೊಳಿಸಲಾಗುತ್ತದೆ, ನಂತರ ಅವನಿಗೆ ವಿದ್ಯುತ್ ಶಾಕ್ (Electric Shock) ನೀಡಲಾಗುತ್ತದೆ. ಮೊದಲು ಪ್ರಜ್ಞೆ ಇರುವಾಗ್ಲೆ ಕರೆಂಟ್ ಶಾಕ್ ನೀಡಲಾಗ್ತಾಯಿತ್ತು. ಅದನ್ನು ನಿಷೇಧಿಸಿದ ಕಾರಣ ಈಗ ಪ್ರಜ್ಞೆತಪ್ಪಿಸಿ ವಿದ್ಯುತ್ ಶಾಕ್ ನೀಡಲಾಗ್ತಾಯಿತ್ತು.  ಮದ್ಯಪಾನಿಯ ಪ್ರಜ್ಞೆ ತಪ್ಪಿಸಿ ನಂತ್ರ ಅವರನ್ನು ಕುಳಿಸಿ, ತಲೆಯ ಕೆಲ ಭಾಗಗಳಿಗೆ ವಿಶೇಷ ಸಾಧನವನ್ನು ಅವಳಡಿಸಿ ಶಾಕ್ ನೀಡಲಾಗುತ್ತದೆ.  ಈ ವೇಳೆ ವ್ಯಕ್ತಿಗೆ ಟಿಕ್ ಟಿಕ್ ಶಬ್ಧ ಕೇಳುತ್ತದೆ. ಈ ಕರೆಂಟನ್ನು ಎರಡು ಮಿಲಿಯಂಪಿಯರ್‌ಗಳಲ್ಲಿ ಇರಿಸಲಾಗುತ್ತದೆ.

ದೇಹದಲ್ಲಿ ಈ ವಿಟಮಿನ್‌ ಕೊರತೆಯಾದ್ರೆ ಕೂದಲು ಬೇಗ ಬಿಳಿಯಾಗುತ್ತೆ!

34 ಜನರ ಮೇಲೆ ನಡೆದಿದೆ ಈ ಪ್ರಯೋಗ : ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನಲ್ಲಿ ಈವರೆಗೆ 34 ಜನರ ಮೇಲೆ ಈ ಪ್ರಯೋಗ ನಡೆಸಲಾಗಿದೆ. ಇವರನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ಮೊದಲ ಗುಂಪಿನ ರೋಗಿಗಳಿಗೆ ಕರೆಂಟ್ ನೀಡಲಾಯಿತು. ಅವರಿಗೆ ಒಂದು ವಾರದಲ್ಲಿ ಇಪ್ಪತ್ತು ನಿಮಿಷಗಳ, ಐದು ಸೆಷನ್ ನೀಡಿದ ನಂತ್ರ ವಿಶ್ಲೇಷಣೆ ಮಾಡಲಾಯ್ತು. ಮೊದಲ ಗುಂಪಿನ ಎಲ್ಲರೂ ಮದ್ಯಪಾನವನ್ನು ಬಿಟ್ಟಿದ್ದರು. ಕರೆಂಟ್ ಶಾಕ್ ನಿಂದ ಅವರಿಗೆ ಮತ್ತ್ಯಾವ ಸಮಸ್ಯೆಯೂ ಆಗಿರಲಿಲ್ಲ. 

ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ ಡಾ.ಅಮಿತ್ ಆರ್ಯ ಪ್ರಕಾರ, ಮೆದುಳು ವಿದ್ಯುತ್ ಅಂಗವಾಗಿದ್ದು, ವಿದ್ಯುತ್ ಸಂಕೇತಗಳನ್ನು ರವಾನಿಸುತ್ತದೆ. ಈ ಸಿಗ್ನಲ್ ನಲ್ಲಿ ಏನಾದರೂ ತೊಂದರೆಯಾದರೆ, ಆ ವ್ಯಕ್ತಿ ಯಾವುದಾದ್ರೂ ಒಂದು ಚಟಕ್ಕೆ ಬಿದ್ದು ಒತ್ತಡಕ್ಕೆ (Stress) ಒಳಗಾಗುತ್ತಾರೆ ಎಂದು ವೈದ್ಯರು ಹೇಳ್ತಾರೆ. ಮೆದುಳಿನ (Brain) ಕೆಲವು ಭಾಗಗಳಿಗೆ ವಿದ್ಯುತ್ ಪ್ರವಾಹವನ್ನು (Electric Flow) ನೀಡುವ ಮೂಲಕ, ಈ ವಿದ್ಯುತ್ ಸಂಕೇತಗಳನ್ನು (Electric Signals) ಅವುಗಳ ಹಿಂದಿನ ಸ್ಥಿತಿಗೆ ತರಲಾಗುತ್ತದೆ, ಇದರಿಂದಾಗಿ ರೋಗಿಯು ಸಹಜ ಸ್ಥಿತಿಗೆ ಮರಳುತ್ತಾನೆ. ಅಲ್ಲದೆ ಅಂಟಿಕೊಂಡಿದ್ದ ಮದ್ಯದ ಚಟವನ್ನು ಬಿಡುತ್ತಾನೆ ಎಂದು ವೈದ್ಯರು ಹೇಳಿದ್ದಾರೆ. 

Health Tips: ಕೊಲೆಸ್ಟ್ರಾಲ್ ಹೆಚ್ಚಾದ್ರೆ ರಾತ್ರಿ ನಿದ್ರೆಯಲ್ಲಿ ಕಾಡುತ್ತೆ ಈ ಸಮಸ್ಯೆ

Latest Videos
Follow Us:
Download App:
  • android
  • ios