ಕೋವಿಡ್ ಆತಂಕ ಮತ್ತೆ ಆರಂಭ, ಲಂಡನ್‌ನಲ್ಲಿ ಎರಿಸ್ ವೇರಿಯೆಂಟ್ ಪ್ರಕರಣ ಗಣನೀಯ ಏರಿಕೆ!

ಕೋವಿಡ್ ಪ್ರಕರಗಳು ಸಂಪೂರ್ಣವಾಗಿ ನಿಯಂತ್ರದಲ್ಲಿದೆ ಅನ್ನುವಷ್ಟರಲ್ಲೇ ಹೊಸ ರೂಪಾಂತರಿಗಳು ಇದೀಗ ಆತಂಕ ಸೃಷ್ಟಿಸುತ್ತಿದೆ. ಇದೀಗ EG.5.1 ಹೊಸ ರೂಪಾಂತರಿ ತಳಿ ಲಂಡನ್‌ನಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಲಂಡನ್‌ನಲ್ಲಿ ಇದೀಗ 7 ಮಂದಿಯಲ್ಲಿ ಒಬ್ಬರಲ್ಲಿ ನೂತನ ಎರಿಸ್ ವೈರಸ್ ಪತ್ತೆಯಾಗುತ್ತಿದೆ.

Eirs new covid variant cases raised in across London WHO Issues Guidelines ckm

ಲಂಡನ್(ಆ.05) ಕೊರೋನಾ ವೈರಸ್ ಪ್ರಕರಣ ಬಹುತೇಕ ರಾಷ್ಟ್ರದಲ್ಲಿ ನಿಯಂತ್ರಣದಲ್ಲಿದೆ. ಮಹಾಮಾರಿಯಿಂದ ಅನುಭವಿಸಿದ ಸಾವು ನೋವಿನಿಂದ ಜನ ಈಗಷ್ಟೆ ಹೊರಬರುತ್ತಿದ್ದಾರೆ. ಪ್ರತಿ ಬಾರಿ ಕೊರೋನಾವನ್ನು ಮಟ್ಟಹಾಕಿದ ಬೆನ್ನಲ್ಲೇ ಹೊಸ ರೂಪದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಇದೀಗ ಕೋವಿಡ್ ಹೊಸ ರೂಪಾಂತರಿ ವೈರಸ್ ಕಾಣಿಸಿಕೊಂಡಿದೆ. EG.5.1 ಹೊಸ ರೂಪಾಂತರಿ ವೈರಸ್‌ಗೆ ಎರಿಸ್ ಎಂದು ಹೆಸರಿಡಲಾಗಿದೆ. ಲಂಡನ್‌ನಲ್ಲಿ ಕಳೆದ ತಿಂಗಳು ಪತ್ತೆಯಾದ ಈ ವೈರಸ್ ಇದೀಗ ವ್ಯಾಪಕವಾಗಿ ಹರಡುತ್ತಿದೆ.

ಕಳೆದ ತಿಂಗಳು EG.5.1 ವೈರಸ್ ಲಂಡನ್‌ನಲ್ಲಿ ಪತ್ತೆಯಾಗಿತ್ತು. ಒಮಿಕ್ರಾನ್ ಗುಣಲಕ್ಷಣಗಳನ್ನು ಹೊಂದಿರುವ ಈ ವೈರಸ್ ಇದೀಗ ಅಪಾಯ ಶುರುಮಾಡಿದೆ. ಒಂದೇ ತಿಂಗಳಲ್ಲಿ ಎರಿಸ್ ಪ್ರಕರಣ ಶೇಕಡಾ 14.6 ರಷ್ಟು ಏರಿಕೆಯಾಗಿದೆ. ಲಂಡನ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಆಸ್ಪತ್ರೆ ದಾಖಲಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ಮುನ್ನಚ್ಚೆರಿಕೆ ವಹಿಸುವಂತೆ ಲಂಡನ್ ಇನ್ಯುನೈಸೇಶನ್ ಮುಖ್ಯಸ್ಥೆ ಡಾ. ಮೇರಿ ರ್ಯಾಮ್ಸೇ ಹೇಳಿದ್ದಾರೆ.

ಕೊರೋನಾದಿಂದ ನೆನಪಿನ ಶಕ್ತಿ ಕುಂಠಿತ, ಅಧ್ಯಯನದಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ

ರೂಪಾಂತರಿ ವೈರಸ್ ಎರಿಸ್ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕೂಡ ಮುನ್ನಚ್ಚೆರಿಕೆ ವಹಿಸುವಂತೆ ಸೂಚನೆ ನೀಡಿದೆ. ಎರಿಸ್ ವೈರಸ್ ಪ್ರಕರಣ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಜನರು ಮುನ್ನಚ್ಚೆರಿಕೆಯಾಗಿ ಲಸಿಕೆ ಹಾಕಿಸಿಕೊಳ್ಳಿ. ಜೊತೆಗೆ ಕೋವಿಡ್ ವೇಳೆ ತೆಗೆದುಕೊಂಡ ಮುನ್ನಚ್ಚೆರಿಕೆಯನ್ನು ಪಾಲಿಸಿ. ಕೋವಿಡ್ ಹಾಗೂ ರೂಪಾಂತರಿ ವೈರಸ್‌ಗಳನ್ನು ಯಶಸ್ವಿಯಾಗಿ ನಿಯಂತ್ರಣ ಮಾಡಲಾಗಿದೆ. ಹೀಗಾಗಿ ಎರಿಸ್ ವೈರಸ್‌ ಹರಡಲು ಅವಕಾಶ ಮಾಡಿಕೊಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಟಡ್ರೋಸ್ ಅಧಮೊನ್ ಗೆಬ್ರಿಯಾಸಸ್ ಸೂಚಿಸಿದ್ದಾರೆ.

ಕಳೆದ ತಿಂಗಳು ಇಳಿಮುಖವಾಗಿದ್ದ ಕೋವಿಡ್‌ನ ಹೊಸ ರೂಪಾಂತರಿ ಇಜಿ.5.1 ಇದೀಗ ಬ್ರಿಟನ್‌ನಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಈ ರುಪಾಂತರಿಗೆ ಏರಿಸ್‌ ಎಂದು ಹೆಸರಿಡಲಾಗಿದ್ದು, ದಾಖಲಾಗುತ್ತಿರುವ 7 ಪ್ರಕರಣಗಳಲ್ಲಿ ಇದು ಒಂದಾಗಿದೆ. ಈ ರೂಪಾಂತರಿ ಜು.3ರಂದು ಮೊದಲು ಏಷ್ಯಾದ ಭಾಗದಲ್ಲಿ ಕಾಣಿಸಿಕೊಂಡಿದ್ದು, ಜು.31ರ ವೇಳೆಗೆ ಬ್ರಿಟನ್‌ನಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಜಾಗತಿಕವಾಗಿ ಅತಿ ಹೆಚ್ಚು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಇದನ್ನು ಹೊಸ ರೂಪಾಂತರಿ ಎಂದು ಘೋಷಿಸಲಾಗಿತ್ತು.

ಕೋವಿಡ್‌ ಮಾಹಿತಿ ಕೇಳಿ ಆರ್‌ಟಿಐ ಅರ್ಜಿ, 40 ಸಾವಿರ ಪುಟದ ಉತ್ತರ ನೀಡಿದ ಇಲಾಖೆ!

ಆದರೆ, ‘ಹೊಸ ರೂಪಾಂತರಿಯ ಬಳಿಕ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದ್ದರೂ ಗಾಬರಿಯಾಗುವ ಅಗತ್ಯವಿಲ್ಲ. ಸೋಂಕಿನ ತೀವ್ರತೆ ಹೆಚ್ಚಲ್ಲ. ಹೊಸ ರೂಪಾಂತರಿಯಿಂದ ಲಸಿಕೆಗಳು ರಕ್ಷಣೆ ನೀಡುತ್ತಿವೆ. ಆದರೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದರನ್ನು ನಿಲ್ಲಿಸಬಾರದು’ ಎಂದು ಡಬ್ಲ್ಯುಎಚ್‌ಒ ಸಲಹೆ ನೀಡಿದೆ.

2 ವಾರದ ಹಿಂದಿನ ವಾರ 4,403 ಉಸಿರಾಟ ಸಮಸ್ಯೆ ಪ್ರಕರಣ ದಾಖಲಾಗಿದ್ದವು. ಅದರಲ್ಲಿ ಕೋವಿಡ್‌ ಪಾಲು ಶೇ.3.7 ಆಗಿತ್ತು. ಇನ್ನು ಕಳೆದ ವಾರ 4,396 ಉಸಿರಾಟ ಸಮಸ್ಯೆ ಪ್ರಕರಣಗಳಲ್ಲಿ ಕೋವಿಡ್‌ ಪಾಲು ಶೇ.5.4 ಎಂದು ಬ್ರಿಟನ್‌ ಸರ್ಕಾರ ಹೇಳಿದೆ.
 

Latest Videos
Follow Us:
Download App:
  • android
  • ios