ಕೋವಿಡ್‌ ಕುರಿತಾಗಿ ಮಾಹಿತಿ ಕೇಳಿ ಆರ್‌ಟಿಐ ಅರ್ಜಿ ಹಾಕಿದ್ದ ವ್ಯಕ್ತಿಗೆ 40 ಸಾವಿರ ಪುಟಗಳ ದಾಖಲೆಯನ್ನು ಸರ್ಕಾರ ನೀಡಿದೆ. ಆದರೆ, ಶುಕ್ಲಾ ಅವರ ಮನವಿಗೆ ಒಂದು ತಿಂಗಳೊಳಗೆ ಉತ್ತರಿಸದ ಕಾರಣ ಪ್ರತಿ ಪುಟಕ್ಕೆ 2 ರೂಪಾಯಿ ನೀಡುವ ಸಂಕಷ್ಟದಿಂದ ತಪ್ಪಿಸಿಕೊಂಡಿದ್ದಾರೆ.

ಇಂದೋರ್‌ (ಜು.29): ಯಾವುದೋ ಒಂದು ಮಾಹಿತಿ ಹೇಳಿ, ಮಾಹಿತಿ ಹಕ್ಕು ಕಾನೂನಿನ ಅಡಿಯಲ್ಲಿ ದಾಖಲೆಗಳು ಸಿಕ್ಕರೆ ಅದು ಎಷ್ಟು ಪುಟ ಇರಬಹುದು. ಹೆಚ್ಚೆಂದರೆ 100 ಪುಟ. ನಿಗದಿತ ಸಮಯದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಉತ್ತರ ಪಡೆಯುವುದೇ ಈಗ ಸವಾಲಿನ ಕೆಲಸ. ಆದರೆ, ಮಧ್ಯಪ್ರದೇಶದ ಇಂದೋರ್‌ನಲ್ಲಿ ವ್ಯಕ್ತಿಯೊಬ್ಬನಿಗೆ ಆರ್‌ಟಿಐ ಉತ್ತರ ಬಂದಿರುವ ಪುಟ ಎಷ್ಟು ಗೊತ್ತಾ? ಬರೋಬ್ಬರಿ 40 ಸಾವಿರ ಪುಟ. ಹೌದು.. ಆರ್‌ಟಿಐ ಕಾರ್ಯಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಆರೋಗ್ಯ ಇಲಾಖೆಯು ಬರೋಬ್ಬರಿ 40 ಸಾವಿರ ಪುಟಗಳ ಉತ್ತರ ನೀಡಿದೆ. ಇಂದೋರ್‌ನ ಧರ್ಮೇಂದ್ರ ಶುಕ್ಲಾ ಎನ್ನುವ ವ್ಯಕ್ತಿ ಕೋವಿಡ್‌-19 ಸಾಂಕ್ರಾಮಿಕ ಸಮಯಕ್ಕೆ ಸಂಬಂಧಪಟ್ಟ ದಾಖಲೆಯನ್ನು ಆರ್‌ಟಿಐ ಅಡಿಯಲ್ಲಿ ಕೇಳಿದ್ದರು. ಇದಕ್ಕೆ ಆರೋಗ್ಯ ಇಲಾಖೆ ಉತ್ತರ ನೀಡಿದ್ದು, ಬರೋಬ್ಬರಿ 40 ಸಾವಿರ ಪುಟಗಳ ಉತ್ತರ ಇದಾಗಿದೆ. ಈ ಉತ್ತರಗಳನ್ನು ತೆಗೆದುಕೊಂಡುಹೋಗಲು ಧರ್ಮೇಂದ್ರ ಶುಕ್ಲಾ ತಮ್ಮ ಎಸ್‌ಯುವಿ ಕಾರ್‌ಅನ್ನು ಕಚೇರಿಗೆ ತೆಗೆದುಕೊಂಡು ಬಂದಿದ್ದರು. ಸಾಮಾನ್ಯವಾಗಿ ಆರ್‌ಟಿಐ ಅಡಿ ಉತ್ತರ ಕೇಳಿದಾಗ ಪ್ರತಿ ಪುಟಕ್ಕೆ 2 ರೂಪಾಯಿ ಹಣ ಪಾವತಿ ಮಾಡಬೇಕು. ಹಾಗಿದ್ದಾಗಿ ಈ ಪ್ರಕರಣದಲ್ಲಿ ಧರ್ಮೇಂದ್ರ ಶುಕ್ಲಾ 80 ಸಾವಿರ ರೂಪಾಯಿ ಪಾವತಿ ಮಾಡಬೇಕಿತ್ತು. ಆದರೆ, ಆರ್‌ಟಿಐ ಅಡಿಯಲ್ಲಿ ಉತ್ತರ ಒಂದು ತಿಂಗಳ ಒಳಗಾಗಿ ಬಾರದ ಹಿನ್ನಲೆಯಲ್ಲಿ ಧರ್ಮೇಂದ್ರ ಶುಕ್ಲಾ ಇದರಿಂದಲೂ ಬಚಾವ್‌ ಆಗಿದ್ದಾರೆ.

"ಕೋವಿಡ್‌-19 ಸಾಂಕ್ರಾಮಿಕ ಅವಧಿಯಲ್ಲಿ ಔಷಧಗಳು, ಉಪಕರಣಗಳು ಮತ್ತು ಸಂಬಂಧಿತ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದ ಟೆಂಡರ್‌ಗಳು ಮತ್ತು ಬಿಲ್ ಪಾವತಿಗಳ ವಿವರಗಳನ್ನು ಕೋರಿ ಇಂದೋರ್‌ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (CMHO) ಗೆ ನಾನು ಆರ್‌ಟಿಐ ಮನವಿಯನ್ನು ಸಲ್ಲಿಸಿದ್ದೆ' ಎಂದು ಧರ್ಮೇಂದ್ರ ಶುಕ್ಲಾ ಹೇಳಿಕೊಂಡಿದ್ದಾರೆ.

ಒಂದು ತಿಂಗಳೊಳಗೆ ಮಾಹಿತಿಯನ್ನು ಒದಗಿಸದ ಕಾರಣ, ಶುಕ್ಲಾ ಮೊದಲ ಮೇಲ್ಮನವಿ ಅಧಿಕಾರಿ ಡಾ ಶರದ್ ಗುಪ್ತಾ ಅವರನ್ನು ಸಂಪರ್ಕಿಸಿದರು. ನಂತರದ ಮನವಿಯನ್ನು ಸ್ವೀಕರಿಸಿ ಅವರಿಗೆ ಉಚಿತವಾಗಿ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದರು. "ನಾನು ದಾಖಲೆಗಳನ್ನು ಸಾಗಿಸಲು ನನ್ನ ಎಸ್‌ಯುವಿಯನ್ನು ತೆಗೆದುಕೊಂಡು ಬಂದಿದ್ದೆ. ಇಡೀ ವಾಹನವು ದಾಖಲೆಗಳಿಂದ ಪ್ಯಾಕ್‌ ಆಗಿತ್ತಲ್ಲದೆ, ಡ್ರೈವರ್ ಸೀಟ್ ಮಾತ್ರ ಖಾಲಿಯಾಗಿ ಉಳಿದಿತ್ತು' ಎಂದು ಹೇಳಿದ್ದಾರೆ.

ಮಾಸ್ಟರ್‌ ಆನಂದ್‌ ಮಗಳಿಂದ ನಾನು ಬದುಕಿಲ್ಲ, ಯಶಸ್ವಿನಿ ಪುಗ್ಸಟ್ಟೆ ಯಾವ ಕಾರ್ಯಕ್ರಮಕ್ಕೂ ಮಗಳನ್ನ ಕಳಿಸಲ್ಲ!

ಮೇಲ್ಮನವಿ ಅಧಿಕಾರಿ ಮತ್ತು ರಾಜ್ಯ ಆರೋಗ್ಯ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ಶರದ್ ಗುಪ್ತಾ ಅವರು ಮಾಹಿತಿಯನ್ನು ಉಚಿತವಾಗಿ ನೀಡುವಂತೆ ಆದೇಶಿಸಿದ್ದಾರೆ ಎಂದು ವರದಿಯಲ್ಲಿ ಸೇರಿಸಲಾಗಿದೆ. ಸಕಾಲದಲ್ಲಿ ಮಾಹಿತಿ ನೀಡದ ಕಾರಣ ರಾಜ್ಯದ ಬೊಕ್ಕಸಕ್ಕೆ ₹80,000 ನಷ್ಟ ಉಂಟಾಗಿರುವ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂಎಚ್‌ಒಗೆ ಸೂಚಿಸಿರುವುದಾಗಿ ಪ್ರಥಮ ಮೇಲ್ಮನವಿ ಅಧಿಕಾರಿ ತಿಳಿಸಿದ್ದಾರೆ.

Bengaluru: ತಾಯಿ ಜೊತೆ ಅಫೇರ್‌, ಬಾಣಸಿಗನ ಹತ್ಯೆ ಮಾಡಿದ ಪುತ್ರ!