Healthy Sleep: ಆರೋಗ್ಯಕ್ಕೆ 8 ಗಂಟೆಯ ನಿದ್ದೆಯ ಅಗತ್ಯವಿಲ್ಲ, ಮತ್ತೇನು ಬೇಕು ?
ಅದೆಷ್ಟೇ ಬಿಝಿ (Busy) ಡೇ ಆಗಿರ್ಲಿ ದಿನಕ್ಕೆ 8 ಗಂಟೆ ನಿದ್ದೆ (Sleep) ಮಾಡ್ಬೇಬೇಕು ಎಂದು ವೈದ್ಯರು (Doctors) ಹೇಳ್ತಾರೆ. ಆದ್ರೆ ಹೊಸ ಅಧ್ಯಯನವೊಂದರ ಪ್ರಕಾರ ದಿನಕ್ಕೆ 8 ಗಂಟೆ ನಿದ್ದೆ ಮಾಡೋದಕ್ಕಿಂತ ಇನ್ನೇನೋ ಮುಖ್ಯವಂತೆ. ಅದೇನು ತಿಳ್ಕೊಳ್ಳಿ.
ಮನುಷ್ಯ ದಿನಪೂರ್ತಿ ಚಟುವಟಿಕೆಯಿಂದ ಇರುವುದು ಹೇಗೆ ಮುಖ್ಯವೋ ಹಾಗೆಯೇ ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ (Sleep) ಮಾಡಿ ವಿಶ್ರಾಂತಿ (Rest) ಪಡೆಯುವುದು ಸಹ ಮುಖ್ಯ. ನಿದ್ದೆ ಸರಿಯಾಗಿ ಆಗದೆ, ದೇಹ (Body) ಸರಿಯಾಗಿ ವಿಶ್ರಾಂತಿ ಪಡೆಯದೇ ಇದ್ದಾಗ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಧ್ಯಯನಗಳ ಪ್ರಕಾರ ಮನುಷ್ಯನೊಬ್ಬರಿಗೆ ಪ್ರತಿದಿನ ಕನಿಷ್ಠ 8 ಗಂಟೆಗಳ ಕಾಲ ನಿದ್ದೆಯ ಅಗತ್ಯವಿದೆ ಎಂದು ತಿಳಿದುಬಂದಿದೆ. ಹೆಚ್ಚಿನವರು ಆರೋಗ್ಯವಾಗಿರಲು ಇದನ್ನು ಅನುಸರಿಸುತ್ತಾರೆ ಕೂಡಾ.
ಆದರೆ ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿರುವ ಹೊಸ ವಿಚಾರ ಏನೂಂತ ಕೇಳಿ. ಹೊಸ ಅಧ್ಯಯನದ ಪ್ರಕಾರ ಮನುಷ್ಯನಿಗೆ 8 ಗಂಟೆಗಳ ಕಾಲ ನಿದ್ದೆ ಅಗತ್ಯವಿಲ್ಲವಂತೆ ಬದಲಾಗಿ ಗುಣಮಟ್ಟದ ನಿದ್ದೆಯಾಗಿದ್ದರೆ ಅದು ಕಡಿಮೆ ಗಂಟೆಯಾದರೂ ಸಾಕು ಆರೋಗ್ಯವಾಗಿರಲು ಸಾಧ್ಯ ಎನ್ನುತ್ತದೆ ಅಧ್ಯಯನ.
ಸಾಮಾನ್ಯವಾಗಿ ಎಲ್ಲರೂ ಬೇಗ ಮಲಗುವ ಅಭ್ಯಾಸವನ್ನೇನೋ ರೂಢಿಸಿಕೊಂಡಿರುತ್ತಾರೆ. ಆದ್ರೆ ಬೆಡ್‌ನಲ್ಲಿ ನಾಮಕಾವಸ್ತೆಗೆ ಮಲಗುತ್ತಾರಷ್ಟೇ. ಅದೆಷ್ಟೋ ಹೊತ್ತು ಟಿವಿಯಲ್ಲಿ ನೆಟ್‌ಫ್ಲಿಕ್ಸ್ ಅಥವಾ ಮೊಬೈಲ್‌ನಲ್ಲಿ ವೀಡಿಯೋಗಳನ್ನು ನೋಡುತ್ತಾ ಸಮಯ ಕಳೆಯುತ್ತಿರುತ್ತಾರೆ. ಇನ್ನು ಕೆಲವೊಬ್ಬರು ಫೋನಿನಲ್ಲಿ ಮಾತನಾಡಿ, ಆಫೀಸಿನ ಕೆಲಸಗಳನ್ನು ಮುಗಿಸಿ ತಕ್ಷಣ ಮಲಗಿಬಿಡುತ್ತಾರೆ. ಇದು ನಿದ್ದೆಯ ಗುಣಮಟ್ಟ (Quality)ವನ್ನು ಕಡಿಮೆ ಮಾಡುತ್ತದೆ. ಮಲಗುವ ಮುನ್ನ ನಡೆಸಿದ ಚರ್ಚೆಗಳು, ಕೆಲಸಗಳು ಅರೆನಿದ್ರಾವಸ್ಥೆಗೆ ಕಾರಣವಾಗುತ್ತದೆ. ನಿದ್ದೆಯಲ್ಲಿ ಕನವರಿಸುವುದು, ಬೆಚ್ಚಿಬೀಳುವುದು ಮೊದಲಾದವು ನಡೆಯುತ್ತದೆ. ಇದು ಗುಣಮಟ್ಟದ ನಿದ್ದೆಯಲ್ಲ.
Health Tips: ಮಧ್ಯಾಹ್ನ ಊಟ ಆದ ಕೂಡ್ಲೇ ನಿದ್ದೆ ಬರ್ತಿದ್ಯಾ ? ಹೀಗೆ ಮಾಡಿ ತೂಕಡಿಕೆನೂ ಇರಲ್ಲ !
ನಿದ್ರೆಯ ವಿಷಯಕ್ಕೆ ಬಂದಾಗ, ಗುಣಮಟ್ಟವು ನಿದ್ದೆಯ ಪ್ರಮಾಣಕ್ಕಿಂತ ಮುಖ್ಯವಾಗಿದೆ ಎಂಬುದಾಗಿ ಸಂಶೋಧಕರು ಹೇಳುತ್ತಾರೆ. ಫ್ಯಾಮಿಲಿಯಲ್ ನ್ಯಾಚುರಲ್ ಶಾರ್ಟ್ ಸ್ಲೀಪ್ ಸಂಸ್ಥೆ,ಜನರು ರಾತ್ರಿಯಲ್ಲಿ ಕೇವಲ ನಾಲ್ಕರಿಂದ ಆರು ಗಂಟೆಗಳ ಕಾಲ ಮಲಗಲು ಬಯಸುತ್ತಾರೆ ಮತ್ತು ಇನ್ನೂ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ತಿಳಿಸುತ್ತದೆ. ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ, ಗುಣಮಟ್ಟದ ನಿದ್ರೆ ಮಾನಸಿಕ ಸ್ಥಿತಿಸ್ಥಾಪಕತ್ವವನ್ನು ತೋರಿಸುತ್ತಾರೆ.
8 ಗಂಟೆಯಷ್ಟು ನಿದ್ದೆ ಆಗದಿದ್ದರೂ ಪರವಾಗಿಲ್ಲ, ಗುಣಮಟ್ಟದ ನಿದ್ದೆಯಾದಾಗ ಇದು ನರಸಂಬಂಧಿ ಪರಿಸ್ಥಿತಿಗಳಿಗೆ ಪ್ರತಿರೋಧವನ್ನು ತೋರಿಸುತ್ತದೆ. ಇದು ನರವೈಜ್ಞಾನಿಕ ಕಾಯಿಲೆಯನ್ನು ತಡೆಗಟ್ಟುವ ಮಾರ್ಗವನ್ನು ಸೂಚಿಸುತ್ತದೆ. ಇದರರ್ಥ ಮೆದುಳು ತನ್ನ ನಿದ್ರೆಯ ಕಾರ್ಯಗಳನ್ನು ಕಡಿಮೆ ಸಮಯದಲ್ಲಿ ಸಾಧಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಕಡಿಮೆ ಸಮಯವನ್ನು ಪರಿಣಾಮಕಾರಿಯಾಗಿ ಮಲಗುವುದು ನಿದ್ರೆಯ ಕೊರತೆಗೆ ಸಮನಾಗಿರುವುದಿಲ್ಲ ಎಂದು ವೇಲ್ ಇನ್‌ಸ್ಟಿಟ್ಯೂಟ್ ಫಾರ್ ನ್ಯೂರೋಸೈನ್ಸ್‌ನಿಂದ ಸ್ಪಷ್ಟಪಡಿಸಿದೆ.
Dry mouth at night: ರಾತ್ರಿ ಸಿಕ್ಕಾಪಟ್ಟೆ ಬಾಯಿ ಒಣಗಿದ್ರೆ ಏನ್ಬಾಡ್ಮೇಕು?
ಪ್ರತಿಯೊಬ್ಬರಿಗೂ ಎಂಟು ಗಂಟೆಗಳ ನಿದ್ದೆ ಬೇಕು ಎಂದು ಆರೋಗ್ಯ ಶಾಸ್ತ್ರದಲ್ಲಿ ಸಿದ್ಧಾಂತವಿದೆ. ಆದರೆ ಇಂದಿನ ಕೆಲಸವು ಜೆನೆಟಿಕ್ಸ್ ಆಧಾರದ ಮೇಲೆ ಜನರಿಗೆ ಅಗತ್ಯವಿರುವ ನಿದ್ರೆಯ ಪ್ರಮಾಣವು ವಿಭಿನ್ನವಾಗಿದೆ ಎಂದು ಖಚಿತಪಡಿಸುತ್ತದೆ ಎಂದು ಇನ್ಸಿಟ್ಯೂಟ್‌ನಿಂದ ನರವಿಜ್ಞಾನಿ ಲೂಯಿಸ್ ಪ್ಟಾಸೆಕ್ ಹೇಳಿದ್ದಾರೆ. ಐಸೈಯನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಜನರು ನಿದ್ದೆಯ ಗುಣಮಟ್ಟವನ್ನು ಸುಧಾರಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ (Immunity Power)ಯನ್ನು ಹೆಚ್ಚಿಸಬಹುದು ಎಂದು ತಿಳಿಸಲಾಗಿದೆ.
ಮೆದುಳಿನ ಎಲ್ಲಾ ಕಾಯಿಲೆಗಳಲ್ಲಿ ನಿದ್ರೆಯ ಸಮಸ್ಯೆಗಳು ಸಾಮಾನ್ಯವಾಗಿದೆ. ಏಕೆಂದರೆ ನಿದ್ರೆ ಒಂದು ಸಂಕೀರ್ಣ ಚಟುವಟಿಕೆಯಾಗಿದೆ. ನೀವು ನಿದ್ರಿಸಲು ಮತ್ತು ಎಚ್ಚರಗೊಳ್ಳಲು ನಿಮ್ಮ ಮೆದುಳಿನ ಹಲವು ಭಾಗಗಳು ಒಟ್ಟಿಗೆ ಕೆಲಸ ಮಾಡಬೇಕು. ಮೆದುಳಿನ ಈ ಭಾಗಗಳು ಹಾನಿಗೊಳಗಾದಾಗ, ಅದು ನಿದ್ರಿಸಲು ಅಥವಾ ಗುಣಮಟ್ಟದ ನಿದ್ರೆಯನ್ನು ಪಡೆಯಲು ಕಷ್ಟವಾಗುತ್ತದೆ.
ಹೀಗಾಗಿ ಮೊದಲಾಗಿ ಗುಣಮಟ್ಟದ ನಿದ್ದೆಗೆ ಆಗುತ್ತಿರುವ ತೊಂದರೆಗಳ ಕುರಿತು ಸರಿಯಾಗಿ ತಿಳಿದುಕೊಳ್ಳಬೇಕು. ಹೆಚ್ಚುವರಿಯಾಗಿ, ಆರೋಗ್ಯವಂತ ಜನರಲ್ಲಿ ನಿದ್ರೆಯನ್ನು ಸುಧಾರಿಸುವುದು ಉತ್ತಮ ಆರೋಗ್ಯಕ್ಕೆ ಕಾರಣವಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ.