Asianet Suvarna News Asianet Suvarna News

Rajma Health Benefits: ಮಧುಮೇಹ ಇರುವವರು ರಾಜ್ಮಾ ತಿನ್ನುವುದು ಪ್ರಯೋಜನಕಾರಿ

ರಾಜ್ಮಾ (Rajma) ತಿನ್ನಲು ಬಲು ರುಚಿಕರವಾದ ಧಾನ್ಯವಾಗಿದೆ. ಎಲ್ಲಾ ರೀತಿಯ ಮಸಾಲೆ ಪದಾರ್ಥಗಳನ್ನು ಸೇರಿಸಿ ತಯಾರಿಸಿದ ರಾಜ್ಮಾ ಗ್ರೇವಿ, ರಾಜ್ಮಾ ಸಾಂಬಾರು ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಹಾಗೆಯೇ ರಾಜ್ಮಾ ಸೇವನೆ ಆರೋಗ್ಯ (Health)ಕ್ಕೂ ಸಹ ಒಳ್ಳೆಯದು. 

Eating Rajma Is Beneficial For People With Diabetes
Author
Bengaluru, First Published Jan 17, 2022, 6:11 PM IST

ರಾಜ್ಮಾ. ಉತ್ತರಭಾರತದ ರಾಜ್ಯಗಳಲ್ಲಿ ಬಹಳ ಜನಪ್ರಿಯ ಧಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಇದನ್ನು ದಕ್ಷಿಣಭಾರತದಲ್ಲೂ ಅಡುಗೆಯಲ್ಲಿ ಬಳಸಿಕೊಳ್ಳುತ್ತಾರೆ. ಸಾಂಬಾರು, ಪಲ್ಯ ಮಾಡಲು ರಾಜ್ಮಾ (Rajma) ವನ್ನು ಬಳಸಲಾಗುತ್ತದೆ. ಬೀನ್ಸ್ ಬೀಜದಂತಿದ್ದು, ದೊಡ್ಡ ಗಾತ್ರದಲ್ಲಿರುವ ರಾಜ್ಮಾ ಹಲವು ಆರೋಗ್ಯಕರ ಗುಣಗಳನ್ನು ಸಹ ಹೊಂದಿದೆ. ರಾಜ್ಮಾವನ್ನು ನೀರಿನಲ್ಲಿ ನೆನೆಸಿಟ್ಟು, ಕುಕ್ಕರ್‌ನಲ್ಲಿ ಬೇಯಿಸಿ ಜೀರಿಗೆ, ಧನಿಯಾ, ಬೆಳ್ಳುಳ್ಳಿ, ಮೆಣಸು ಮೊದಲಾದ ಮಸಾಲೆಗಳನ್ನು ಸೇರಿಸಿ ಸಾಂಬಾರನ್ನು ಸಿದ್ಧಪಡಿಸಲಾಗುತ್ತದೆ. ಅನ್ನದ ಜತೆಗೆ ಇದನ್ನು ಬಡಿಸಲಾಗುತ್ತದೆ. ಆರೋಗ್ಯ (Health) ಕ್ಕೆ ಹಿತವಾಗಿರುವ ಉತ್ತರಭಾರತದಲ್ಲಿ ಮೂರು ಹೊತ್ತಿನ ಊಟದಲ್ಲೂ ರಾಜ್ಮಾವನ್ನು ಕಡ್ಡಾಯವಾಗಿ ಬಳಸುತ್ತಾರೆ,

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ
ಸ್ವಲ್ಪ ಪ್ರಮಾಣದ ಬಿಳಿ ಅನ್ನ ಅಥವಾ ಚಪಾತಿಯೊಂದಿಗೆ ರಾಜ್ಮಾವನ್ನು ತಿನ್ನುವುದು ಮಧುಮೇಹ (Diabetes) ಇರುವವರಿಗೆ ಆರೋಗ್ಯಕರ ಊಟವಾಗಿದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಮೈಕ್ರೋ ನ್ಯೂಟ್ರಿಯಂಟ್‌ಗಳು, ಫೈಬರ್ ಮತ್ತು ಪ್ರೊಟೀನ್‌ಗಳು ರಾಜ್ಮಾದಲ್ಲಿ ಸಮೃದ್ಧವಾಗಿದೆ. ರಾಜ್ಮಾ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಅಲ್ಲದೆ, ಮಧುಮೇಹ ಹೊಂದಿರುವ ಜನರಲ್ಲಿ ಸಕ್ಕರೆ (Sugar) ಮಟ್ಟವನ್ನು ನಿಯಂತ್ರಣದಲ್ಲಿಡಲು ರಾಜ್ಮಾ ಸೇವನೆ ಸಹಾಯ ಮಾಡುತ್ತದೆ.

Cooking Tips: ರಾಜ್ಮಾ, ,ಬೀನ್ಸ್ ತಿಂದ್ರೆ ಹೊಟ್ಟೆ ಉಬ್ಬುತ್ತಾ? ಇಲ್ಲಿದೆ ಪರಿಹಾರ

ಹೃದಯದ ಆರೋಗ್ಯಕ್ಕೂ ಬೆಸ್ಟ್
ಹೃದಯದ ಆರೋಗ್ಯಕ್ಕೂ ರಾಜ್ಮಾ ಸೇವನೆ ಬೆಸ್ಟ್. ಇದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ರಾಜ್ಮಾದಲ್ಲಿರುವ ನಾರಿನಂಶವು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. 

ಮೂಳೆಗಳನ್ನು ಬಲಪಡಿಸುತ್ತದೆ 
ರಾಜ್ಮಾದಲ್ಲಿರುವ ಖನಿಜಗಳು, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸಮೃದ್ಧಿಯು ಮೂಳೆಗಳನ್ನು ಬಲಪಡಿಸಲು ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ರಾಜ್ಮಾವನ್ನು ನಿಯಮಿತವಾಗಿ ಸೇವಿಸುವುದು ದೇಹದ ಮೂಳೆಗಳನ್ನು ಬಲಪಡಿಸುತ್ತದೆ. ಕ್ಯಾನ್ಸರ್ (Cancer) ಅಪಾಯವನ್ನು ತಡೆಯುತ್ತದೆ.

ತೂಕ ನಷ್ಟವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ
ರಾಜ್ಮಾದಲ್ಲಿ ಹೆಚ್ಚಿನ ಫೈಬರ್ ಮತ್ತು ಪ್ರೋಟೀನ್ ಇರುವ ಕಾರಣ, ಇದು ಪರಿಪೂರ್ಣ ತೂಕ ನಷ್ಟ (Weight Loss)ದ ಆಹಾರವಾಗಿದೆ. ರಾಜ್ಮಾದಲ್ಲಿನ ಕರಗುವ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್) ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಯಲ್ಲಿ ಜೆಲ್ ತರಹದ ವಸ್ತುವನ್ನು ರೂಪಿಸುವ ಮೂಲಕ ಉತ್ತಮ ಕೊಲೆಸ್ಟ್ರಾಲ್ (ಎಚ್‌ಡಿಎಲ್) ಅನ್ನು ಹೆಚ್ಚಿಸುತ್ತದೆ ಮತ್ತು ದೇಹಕ್ಕೆ ಕೊಲೆಸ್ಟ್ರಾಲ್ ಅನ್ನು ಮರುಹೀರಿಕೆ ಮಾಡುವುದನ್ನು ತಡೆಯುತ್ತದೆ ಎಂದು ಪುರಾವೆಗಳು ಸಾಬೀತುಪಡಿಸುತ್ತವೆ.

ನಾಲಿಗೆಗೂ ಹಿತ, ತೂಕ ಇಳಿಸೋಕೂ ಸಹಾಯಕ Weight loss Curries

ಕರುಳಿನ ಆರೋಗ್ಯವನ್ನು ಉತ್ತಮವಾಗಿಸುತ್ತದೆ
ಕರುಳಿನ ಆರೋಗ್ಯವನ್ನು ಉತ್ತಮವಾಗಿಸಲು ಸಹ ರಾಜ್ಮಾ ಸೇವನೆ ಅತ್ಯುತ್ತಮವಾಗಿದೆ. ರಾಜ್ಮಾದಲ್ಲಿರುವ ಹೆಚ್ಚಿನ ಫೈಬರ್ (Fiber) ಕರುಳಿನ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸಲು ಪ್ರಿಬಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ದೇಹಕ್ಕೆ ಪ್ರತಿದಿನ ಸುಮಾರು 25ರಿಂದ 30 ಗ್ರಾಂ ಫೈಬರ್ ಬೇಕಾಗುತ್ತದೆ. ಇದು ರಾಜ್ಮಾದಲ್ಲಿ ಹೇರಳವಾಗಿದೆ. ರಾಜ್ಮಾದಲ್ಲಿ ಹೆಚ್ಚಿನ ಪ್ರಮಾಣದ ಅಮೈಲೋಸ್ ಅಂಶವಿದ್ದು, ಇದರಿಂದ ಜೀರ್ಣ ಕ್ರಿಯೆ ಸುಲಭವಾಗುತ್ತದೆ ಎಂದು ಪೌಷ್ಟಿಕತಜ್ಞ ಭುವನ್ ರಸ್ತೋಗಿ ಹೇಳುತ್ತಾರೆ.

ಖನಿಜಗಳ ಸಮೃದ್ಧ ಮೂಲ
ರಾಜ್ಮಾ ಪ್ರೋಟೀನ್‌ (Protein)ನಲ್ಲಿ ಮಧ್ಯಮ ಮತ್ತು ಹೆಚ್ಚಿನ ಫೈಬರ್‌ನಲ್ಲಿದೆ. ರಾಜ್ಮಾವು ಎಲ್ಲಾ ಆಹಾರಗಳಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ನ್ನು ಹೊಂದಿದೆ. ಹೀಗಾಗಿ ಮಧುಮೇಹ ಇರುವವರ ಆಹಾರದಲ್ಲಿ ಇದನ್ನು ಸೇರಿಸುವುದು ಒಳ್ಳೆಯದು. ರಾಜ್ಮಾದಲ್ಲಿ ಕಬ್ಬಿಣ, ತಾಮ್ರ, ಫೋಲೇಟ್, ಮ್ಯಾಂಗನೀಸ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಕೆ 1 ಸಮೃದ್ಧವಾಗಿದೆ. 

ಇವುಗಳಲ್ಲಿ  ಕಬ್ಬಿಣವು ದೇಹದ ಹಲವಾರು ಪ್ರಮುಖ ಕಾರ್ಯಗಳಲ್ಲಿ ಸಹಾಯ ಮಾಡುತ್ತದೆ. ಆದರೆ ವಿಟಮಿನ್ ಕೆ 1 ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ. ಕಬ್ಬಿಣದ ಜೊತೆಗೆ ತಾಮ್ರವು ದೇಹವು ಕೆಂಪು ರಕ್ತ ಕಣಗಳನ್ನು ರೂಪಿಸುತ್ತದೆ. ಆಹಾರದಲ್ಲಿ ಸಾಕಷ್ಟು ತಾಮ್ರದ ಅಂಶ ಇರುವುದರಿಂದ ಇದು ಹೃದಯರಕ್ತನಾಳದ ಕಾಯಿಲೆಯನ್ನು ತಡೆಯಲು ಸಹಾಯ ಮಾಡುತ್ತದೆ.

Follow Us:
Download App:
  • android
  • ios