ನಾಲಿಗೆಗೂ ಹಿತ, ತೂಕ ಇಳಿಸೋಕೂ ಸಹಾಯಕ Weight loss Curries
ದೇಹದ ತೂಕ ಇಳಿಸುವ ಆಸೆ ನಿಮಗಿದ್ದರೆ ಆಹಾರದಲ್ಲಿ ಬಳಸಬೇಕಾದ ಕೆಲವು ವಸ್ತುಗಳನ್ನು ಪಟ್ಟಿಮಾಡಿಕೊಳ್ಳಿ. ಅವುಗಳನ್ನು ವಾರದಲ್ಲೊಮ್ಮೆಯಾದರೂ ಸೇವಿಸುವ ಅಭ್ಯಾಸವಿಟ್ಟುಕೊಂಡರೆ ದೇಹದ ಬೊಜ್ಜು ಕರಗುತ್ತದೆ.
ಮಾರುಕಟ್ಟೆಯಲ್ಲೀಗ ಥರಾವರಿ ಡ್ರೆಸ್ಸು(Dress) ಗಳ ಕಾಲ. ಶೋರೂಮ್ ಗಳಲ್ಲಿ ಸ್ಟೈಲಿಷ್ (Stylish) ಎನಿಸುವಂಥಹ ದಿರಿಸುಗಳು ಕಣ್ಮನ ಸೆಳೆಯುತ್ತವೆ. ಅವುಗಳನ್ನು ಧರಿಸೋಣ ಎನ್ನುವ ಆಸೆಯಾದರೂ ಹೊಟ್ಟೆ (Belly) ಹಾಗೂ ಸೊಂಟದ್ದೇ ಸಮಸ್ಯೆ. ಹೇಗಾದರೂ ಮಾಡಿ, ಅಂತಹ ಡ್ರೆಸ್ಸುಗಳನ್ನು ಧರಿಸಬೇಕೆಂಬ ಆಸೆಯಿಂದ ತೂಕ ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿರುವವರೂ ಇದ್ದಾರೆ. ಅಂತಹ ಪ್ರಯತ್ನ ನಿಮ್ಮದೂ ಆಗಿದ್ದರೆ ಇಲ್ಲಿ ಕೇಳಿ. |
ತೂಕ (Weight) ಕಡಿಮೆ ಮಾಡಿಕೊಳ್ಳುವುದು ಸುಲಭವೇನೂ ಅಲ್ಲ. ಇಷ್ಟು ದಿನಗಳ ಕಾಲ ಏನು ಬೇಕೋ ಅದನ್ನೆಲ್ಲ ಸೇವಿಸಿ ಅಭ್ಯಾಸ ಇರುವವರಿಗೆ ಏಕಾಏಕಿ ಏನಾದರೊಂದು ಡಯೆಟ್ (Diet) ಆರಂಭಿಸಲು ಸಾಧ್ಯವಾಗುವುದಿಲ್ಲ. ಮಾಡಿದರೂ ಆರೋಗ್ಯದ ಮೇಲೆ ಪರಿಣಾಮವುಂಟಾಗಬಹುದು. ಹೀಗಾಗಿ, ದಿಢೀರ್ ಆಹಾರಶೈಲಿ (Food Style) ಬದಲಿಸಿಕೊಳ್ಳುವ ಬದಲು ಕೆಲವು ಪದಾರ್ಥಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಕಡಿಮೆ ಕ್ಯಾಲರಿ (Low Calorie) ಇರುವ ಹಾಗೂ ಹೆಚ್ಚು ಪ್ರಮಾಣದಲ್ಲಿ ಕ್ಯಾಲರಿ ಕರಗಿಸುವ ಆಹಾರ ಪದಾರ್ಥಗಳಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ.
ಅಧಿಕ ಮಸಾಲೆ(Spice) ಯುಕ್ತ ಪದಾರ್ಥವನ್ನು ಹೆಚ್ಚು ಸೇವನೆ ಮಾಡುವುದು ಸರಿಯಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಹೆಚ್ಚು ಎಣ್ಣೆ (Oil) ಅಥವಾ ಬೆಣ್ಣೆ (Cheese), ಪನೀರ್ (Paneer) ಬೆರೆಸದ, ಕ್ಯಾಲರಿ ಹೆಚ್ಚಿಲ್ಲದ ಆಹಾರ ಪದಾರ್ಥಗಳನ್ನು ಹೊಂದಿರುವ ಸಾಗು (Curry) ಅಥವಾ ಮೇಲೋಗರಗಳನ್ನು ಆಹಾರದಲ್ಲಿ ಬಳಸಬೇಕು. ಇದರಿಂದ ತೂಕವನ್ನು ಇಳಿಸಿಕೊಳ್ಳಬಹುದು. ಪಾರಂಪರಿಕವಾಗಿ ನಾವು ಬಳಕೆ ಮಾಡುವ ಮಸಾಲೆ ಪದಾರ್ಥಗಳು ತೂಕ ಇಳಿಸಿಕೊಳ್ಳಲು ನೆರವಾಗಿದ್ದು, ರಕ್ತದ ಹರಿವನ್ನು ಉತ್ತಮಗೊಳಿಸುತ್ತವೆ, ಜೀರ್ಣಾಂಗ ಸುಧಾರಿಸುತ್ತವೆ. ಹೃದಯಕ್ಕೆ ಬಲ ನೀಡುತ್ತವೆ. ಮಧುಮೇಹವನ್ನೂ ಸಹ ನಿಯಂತ್ರಣಕ್ಕೆ ತರುತ್ತವೆ.
ಕಿಡ್ನಿ ಬೀನ್ಸ್ (Kidney Beans)
ಕೆಂಪಗಿರುವ ಈ ಕಿಡ್ನಿ ಬೀನ್ಸ್ ಅನ್ನು ಬಳಕೆ ಮಾಡುವವರು ಕಡಿಮೆ. ಕಬ್ಬಿಣಾಂಶ ಅಧಿಕವಾಗಿರುವ ಕಿಡ್ನಿ ಬೀನ್ಸ್ ನಲ್ಲಿ ಪ್ರೊಟೀನ್, ನಾರಿನಂಶ, ತಾಮ್ರ, ವಿಟಮಿನ್ ಕೆ ಹಾಗೂ ಇತರ ಉತ್ತಮ ಪೌಷ್ಟಿಕಾಂಶಗಳಿರುತ್ತವೆ. ಕಡಿಮೆ ಕ್ಯಾಲರಿ ಹೊಂದಿರುವ ಇದನ್ನು ಚೆನ್ನಾಗಿ ಬೇಯಿಸಿ, ಸಾಗು ಮಾಡಿಕೊಂಡು ಸೇವಿಸಬಹುದು.
ದ್ವಿದಳ ಧಾನ್ಯಗಳು (Lentils)
ದ್ವಿದಳ ಧಾನ್ಯಗಳಲ್ಲಿ ಪ್ರೊಟೀನ್, ವಿಟಮಿನ್ ಮತ್ತು ಮಿನರಲ್ಸ್ ಅಪಾರ ಪ್ರಮಾಣದಲ್ಲಿರುತ್ತದೆ. ಯಾವುದಾದರೂ ದ್ವಿದಳ ಧಾನ್ಯದೊಂದಿಗೆ ಬಸಳೆ ಸೊಪ್ಪು ಸೇರಿಸಿ ಪಲ್ಯ ಅಥವಾ ಮೇಲೋಗರ ಮಾಡಿದರೆ ಕೊಬ್ಬು ನಿಯಂತ್ರಣಕ್ಕೆ ಸಹಕಾರಿ. ಮಧುಮೇಹವೂ ನಿಯಂತ್ರಣಕ್ಕೆ ಬರುತ್ತದೆ.
Milk with Fennel : ಮಲಗೋ ಮುನ್ನ ಇದನ್ನು ಹಾಲಲ್ಲಿ ಹಾಕಿ ಕುಡಿದು ನೋಡಿ
ಕಡಲೆ (ChickPea)
ಕಡಲೆಕಾಳಿನ ಸಾಗು ತಿನ್ನಲು ಬಲುರುಚಿ. ಜತೆಗೆ, ಕಡಲೆಯಲ್ಲಿ ಪ್ರೊಟೀನ್, ವಿಟಮಿನ್ ಮತ್ತು ಇತರ ಪೌಷ್ಟಿಕಾಂಶಗಳ ಆಗರವೇ ಇರುತ್ತದೆ. ಮ್ಯಾಂಗನೀಸ್, ಫೋಲೇಟ್, ತಾಮ್ರ, ಕಬ್ಬಿಣ, ಫಾಸ್ಪರಸ್, ಝಿಂಕ್ ಇನ್ನೂ ಹಲವಾರು ಅಂಶಗಳಿರುತ್ತವೆ. ಆರೋಗ್ಯಪೂರ್ಣವಾಗಿರುವ ಕಡಲೆಯನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ಬೊಜ್ಜು ನಿಯಂತ್ರಣ ಮಾಡಬಹುದು. ಜೀರ್ಣಾಂಗ ವ್ಯವಸ್ಥೆ ಸುಧಾರಣೆಯಾಗುವ ಜತೆಗೆ, ಹಲವು ದೀರ್ಘಕಾಲಿಕ ಸಮಸ್ಯೆಗಳ ಅಪಾಯವನ್ನೂ ಇದು ತಡೆಯುತ್ತದೆ. ಕೆಂಪಕ್ಕಿ ಅನ್ನದೊಂದಿಗೆ ಕಡಲೆ ಪಲ್ಯ ಸೇವಿಸಿದರೆ ಧಾರಾಳವಾಗಿ ಪ್ರೊಟೀನ್ ದೊರೆಯುತ್ತದೆ.
Kitchen Tips: ಅನ್ನ ಮಾಡುವಾಗ ಅಕ್ಕಿ ಹೆಚ್ಚು ಬೆಂದರೆ ಏನು ಮಾಡೋದು?
ಕಾಲಿಫ್ಲವರ್ (cauliflower)
ಕಾಲಿಫ್ಲವರ್ ಎಂದಾಕ್ಷಣ ಹಲವರು ಮೂಗು ಮುರಿಯಬಹುದು. ಬೆಳೆಗಾರರು ಇದಕ್ಕೆ ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಸೇರಿಸಿರುತ್ತಾರೆ ಎನ್ನುವುದು ನಿಜ. ಆದರೆ, ರಾಸಾಯನಿಕರಹಿತವಾದ ಕಾಲಿಫ್ಲವರ್ ಉತ್ತಮ ಡಯೆಟ್ ಆಹಾರ. ವಿಟಮಿನ್ ಡಿ, ವಿಟಮಿನ್ ಸಿ, ಕಬ್ಬಿಣಾಂಶ ಸೇರಿದಂತೆ ಪೌಷ್ಟಿಕಾಂಶಭರಿತ, ಕ್ಯಾಲರಿ ಕಡಿಮೆ ಇರುವ ಫ್ಲವರ್ ಅನ್ನು ಪಲ್ಯ, ಸಾಗು ಮಾಡಿಕೊಂಡು ಸವಿಯಬಹುದು.
ಅಣಬೆ (Mashroom)
ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕ್ಯಾಲರಿ ಹೊಂದಿದ್ದು, ಉತ್ತಮ ಪೌಷ್ಟಿಕಾಂಶ ಹೊಂದಿರುವ ಪದಾರ್ಥ ಎಂದರೆ ಅಣಬೆ. ಇದರ ಪಲ್ಯಕ್ಕೆ ಬಟಾಣಿಯನ್ನೂ ಸೇರಿಸಿಕೊಂಡರೆ ಸಂಪೂರ್ಣ ಆಹಾರವಾಗುತ್ತದೆ. ಇದನ್ನು ಅನ್ನ, ಚಪಾತಿ, ದೋಸೆಯೊಂದಿಗೆ ಸವಿಯಬಹುದು. ಅವ್ಯಾವುದೂ ಬೇಡವೆನಿಸಿದರೆ ಹಾಗೆಯೇ ತಿನ್ನಬಹುದು.
ಕಿರುಧಾನ್ಯಗಳು (Millet)
ಕಿರುಧಾನ್ಯಗಳ ಮಹತ್ವದ ಬಗ್ಗೆ ತಿಳಿದೇ ಇದೆ. ಯಾವುದೇ ಕಿರುಧಾನ್ಯಗಳ ಪಲ್ಯ, ಸಾಗು ಮಾಡಿ ಬಳಸಬಹುದು. ಅಸಲಿಗೆ, ಕಿರುಧಾನ್ಯಗಳು ಉತ್ತಮ ಡಯೆಟ್ ಆಹಾರ.