Asianet Suvarna News Asianet Suvarna News

ಹಾಲು, ಬಾಳೆಹಣ್ಣು ಒಟ್ಟೊಟ್ಟಿಗೆ ಸೇವಿಸುತ್ತೀರಿ ಎಂದರೆ ಇಂದೇ ಬಿಟ್ಟುಬಿಡಿ

ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಾಳೆಹಣ್ಣು ಇಷ್ಟ ಪಡುವುದು ಸಾಮಾನ್ಯ. ಹಸಿದಾಗ ಈ ಒಂದು ಹಣ್ಣು ತಿಂದರೆ ಸಾಕು ಸ್ವಲ್ಪ ಮಟ್ಟಿಗೆ ತಡೆಯಬಹುದು ಎನಿಸುತ್ತದೆ. ಬಾಳೆಹಣ್ಣನ್ನು ಪೂಜೆಯಲ್ಲಿ, ಸಿಹಿ ಪದಾರ್ಥಗಳಲ್ಲಿ ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಬಾಳೆಹಣ್ಣು ಮತ್ತು ಹಾಲು ಎರಡನ್ನೂ ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದು ಏಕೆ ಎಂಬುದನ್ನು ಇಲ್ಲಿ ಹೇಳಲಾಗಿದೆ.

Eating Banana And Milk together not good for health
Author
First Published Dec 6, 2022, 5:26 PM IST

ನಮ್ಮ ಹಿಂದಿನ ಕಾಲದಿಂದಲೂ ಊಟವಾದ ಮೇಲೆ ಒಂದು ಬಾಳೆಹಣ್ಣು(Banana) ತಿನ್ನುವುದು ರೂಢಿ. ಇದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯ ಪ್ರಯೋಜನಗಳಿವೆ. ಅಷ್ಟೇ ಅಲ್ಲ ಬಾಲ್ಯದಲ್ಲಿ ಬಾಳೆಹಣ್ಣನ್ನು ಹಾಲಿನೊಂದಿಗೆ ಸಣ್ಣದಾಗಿ ಹೆಚ್ಚಿಕೊಂಡು ತಿಂದಿರುವುದಿದೆ. ಈಗೀಗ ಬಾಳೆಹಣ್ಣಿನ ಮಿಲ್ಕಶೇಕ್, ಸಿಹಿ ತಿಂಡಗಳು ಹೆಚ್ಚಾಗಿವೆ. ಇದರಿಂದ ತ್ವರಿತವಾಗಿ ಮಾಡಬಹುದಾದ ಪದಾರ್ಥಗಳು ಹಲವು ಇವೆ. ಅದರಲ್ಲೂ ಬಾಳೆಹಣ್ಣು ಮತ್ತು ಹಾಲು ಒಟ್ಟಿಗೆ ಸೇವಿಸುವುದು ಬಹಳ ಜನಪ್ರಿಯ. 

ಅನೇಕ ಕ್ರೀಡಾಪಡುಗಳು(Sports person), ಬಾಡಿಬ್ಯುಲ್ಡರ್(Body Builders), ಹಾಸ್ಟೆಲ್ ಮಕ್ಕಳು, ವೃತ್ತಿಪರರು(Workers), ಎಲ್ಲರಿಗೂ ತ್ವರಿತ ಉಪಹಾರ ಆಯ್ಕೆಗಳು ಬೇಕಾಗುತ್ತವೆ. ಅಂತಹವರಿಗೆ ಜನಪ್ರಿಯ ಊಟವೆಂದರೆ ಅದು ಬಾಳೆಹಣ್ಣು ಮತ್ತು ಹಾಲು. ನೈಸರ್ಗಿಕವಾಗಿ ತೂಕ ಪಡೆಯಲು(Natural Weight Gain) ಅಥವಾ ಸ್ನಾಯುವಿನ(Muscles) ದ್ರವ್ಯರಾಶಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಜನರಿಗೆ ಇದನ್ನು ಸೇವಿಸಲು ಹೇಳಲಾಗುತ್ತದೆ ಕೂಡ. ಈ ಎರಡೂ ಆಹಾರಗಳು ಒಟ್ಟಿಗೆ ತಿನ್ನುವುದು ತೃಪ್ತಿಕರ ಸಂಯೋಜನೆಯಾಗಿದ್ದರೂ ಅವುಗಳ ಪೌಷ್ಠಿಕಾಂಶದ ಮೌಲ್ಯವನ್ನು ಮರೆಯಬಾರದು. ಆಯುರ್ವೇದದ ಪ್ರಕಾರ ಬಾಳೆಹಣ್ಣು ಮತ್ತು ಹಾಲು ಎರಡೂ ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿಸುತ್ತದೆ. ಅದು ಏಕೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. 

ಹಾಲಿನಲ್ಲಿ ಕ್ಯಾಲ್ಸಿಯಂ(Calcium), ಪ್ರೋಟೀನ್(Protein) ಅಂಶಗಳಿದ್ದು, ಇವು ಆರೋಗ್ಯಕರ ಕೊಬ್ಬು(Cholesterol), ವಿಟಮಿನ್ ಬಿ(VItamin B) ಇದೆ. ಇನ್ನು ಬಾಳೆಹಣ್ಣಿನಲ್ಲಿ ಫೈಬರ್(Fiber), ಪೊಟ್ಯಾಸಿಯಂ(Potassium), ಮೆಗ್ನೀಸಿಯಂ(Magnesium) ಸಮೃದ್ಧವಾಗಿವೆ. ಆದರೂ ಇದರಿಂದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎನ್ನಲಾಗುತ್ತದೆ. ಬಾಳೆಹಣ್ಣು ಮತ್ತು ಹಾಲು ಎರಡೂ ಒಟ್ಟಿಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಮೇಲೆ ಹಿಡಿತ ಸಾಧಿಸಬಹುದು. ಅಲ್ಲದೆ ನಿದ್ರೆಯಲ್ಲೂ(Sleep) ತೊಂದರೆ ಕಾಣಿಸಿಕೊಳ್ಳಬಹುದು. ಹಾಲು ಕುಡಿದ ನಂತರ ಬಾಳೆಹಣ್ಣು ತಿನ್ನಲು ಬಯಸಿದರೆ ಅಡ್ಡ ಪರಿಣಾಮಗಳನ್ನು ತಡೆಗಟ್ಟಲು 20 ನಿಮಿಷ ಕಾಯಬೇಕೆಂದು ತಜ್ಞರು ತಿಳಿಸುತ್ತಾರೆ.

ಚಳೀಲಿ ಮಲಬದ್ಧತೆ ಕಾಡೋದು ಕಾಮನ್, ಬಾಳೆ ಹಣ್ಣು ತಿಂದು ಆರೋಗ್ಯ ನೋಡ್ಕಳ್ಳಿ

ಹಾಲಿನೊಂದಿಗೆ ಬಾಳೆಹಣ್ಣನ್ನು ತಿನ್ನುವುದು ಒಳ್ಳೆಯದಲ್ಲ ಏಕೆ? 
ಆಯುರ್ವೇದದಲ್ಲಿ ಪ್ರತಿ ಆಹಾರವು ರುಚಿ(Taste) ಮತ್ತು ಜೀರ್ಣಕ್ರಿಯೆಯ(Digestion) ನಂತರದ ಪರಿಣಾಮವನ್ನು ಹೊಂದಿರುತ್ತದೆ. ಜೊತೆಗೆ ಶಾಖ(Hot) ಮತ್ತು ತಂಪಾಗಿಸುವ(Cool) ಶಕ್ತಿಗಳನ್ನು ಅನುಸರಿಸುತ್ತದೆ. ವ್ಯಕ್ತಿಯು ಗ್ಯಾಸ್ಟಿçಕ್(Gastric) ಆಹಾರವು ಹೇಗೆ ಜೀರ್ಣವಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಹಾಗೂ ಸರಿಯಾದ ಆಹಾರ ಸಂಯೋಜನೆಗಳು ಅತ್ಯಗತ್ಯವಾಗಿರುತ್ತದೆ. ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಅಂದರೆ ಆಯುರ್ವೇದದಲ್ಲಿ(Ayurveda) ಹಾಲು ಮತ್ತು ಬಾಳೆಹಣ್ಣು ಒಟ್ಟಿಗೆ ಸೇವಿಸುವುದು ಒಳ್ಳೆಯದಲ್ಲ ಎಂದಿದೆ. 
ಹಾಲು ಮತ್ತು ಬಾಳೆಹಣ್ಣು ಪರಸ್ಪರ ಪೌಷ್ಟಿಕಾಂಶದ ಕೊರತೆಯನ್ನು(Nutritional Deficiency) ತುಂಬುತ್ತವೆ. ಇವುಗಳನ್ನು ಸೇವಿಸುವುದು ಜೀರ್ಣಾಂಗ ವ್ಯವಸ್ಥೆಯ(Digestive System) ಮೇಲೆ ಒತ್ತಡವನ್ನು(Stress) ಉಂಟುಮಾಡುತ್ತದೆ. ಅದು ಭಾರವಾಗಿರುತ್ತದೆ ಮತ್ತು ಸೈನಸ್ ಸಮಸ್ಯೆಗಳಿಗೆ(Sinus Problem) ಕಾರಣವಾಗುತ್ತದೆ. ಕಿಬ್ಬೊಟ್ಟೆಯ ಗ್ಯಾಸ್ಟಿçಕ್(Abdominal Gas), ಸೈನಸ್ ದಟ್ಟಣೆ, ಶೀತ(Cold), ಕೆಮ್ಮು(Cough), ದೇಹದ ಮೇಲೆ ದದ್ದುಗಳು(Rashes on the body), ವಾಂತಿ(Vomit), ಭೇದಿ(Diarrhoea) ಮುಂತಾದ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಬಹುದು.
ಆಯುರ್ವೇದದಲ್ಲಿ ಹಾಲು ಮತ್ತು ಬಾಳೆಹಣ್ಣು ಒಟ್ಟಿಗೆ ಸೇವಿಸುವುದು ದೇಹದಲ್ಲಿ ವಿಷತ್ವವನ್ನು(Toxic) ಉಂಟುಮಾಡುತ್ತದೆ ಎಂದು ನಂಬಲಾಗಿದೆ. ಅದು ದೇಹದ ಕಾರ್ಯಗಳಿಗೆ ಅಡ್ಡಿಯಾಗಬಹುದು. ಭಾರದಿಂದಾಗಿ ಮೆದುಳಿನ(Brain) ಕಾರ್ಯವನ್ನು ನಿಧಾನಗೊಳಿಸುತ್ತದೆ ಎಂದು ಹೇಳಲಾಗಿದೆ. 

ಎಲ್ಲರೂ ಹೆಚ್ಚಿಗೆ ತಿನ್ನೋ ಹಣ್ಣು, ಬೇಗ ಹಾಳಾಗಬಾರದು ಅಂದ್ರೆ ಹೀಗ್ ಮಾಡಿ

ಹಾಲು ಮತ್ತು ಬಾಳೆಹಣ್ಣು ಹೇಗೆ ಸೇವಿಸಬೇಕು?
ಡಯೆಟ್(Diet), ಫಿಟ್ನೆಸ್(Fitness), ಬಾಡಿಬಿಲ್ಡ್(Body builder), ವ್ಯಾಯಾಮ(Exercise) ಮಾಡುವವರು ನೀವಾಗಿದ್ದರೆ, ಸಾಮಾನ್ಯ ಜನರೂ ಸಹ ಹಾಲು ಮತ್ತು ಬಾಳೆಹಣ್ಣನ್ನು ಒಟ್ಟಿಗೆ ಸೇವಿಸಲು 20 ನಿಮಿಷಗಳ ಅಂತರವನ್ನು ಇಟ್ಟುಕೊಳ್ಳಬೇಕು ಎಂದು ಪೌಷ್ಠಿಕಾಂಶ ಮತ್ತು ಆಹಾರ ತಜ್ಞರು ಹೇಳುತ್ತಾರೆ. ಅವುಗಳನ್ನು ಒಟ್ಟಿಗೆ ಆನಂದಿಸಲು ಬಯಸಿದರೆ ಸುರಕ್ಷಿತ ಸೇವನೆಗಾಗಿ ಬಾಳೆಹಣ್ಣುಗಳಿಗೆ ಮತ್ತೊಂದು ಡೈರಿ ಅಂಶವನ್ನು ಸೇರಿಸಲು ಪ್ರಯತ್ನಿಸಿ. ಅಂದರೆ ಬಾಳೆಹಣ್ಣಿನ ಮಿಲ್ಕಶೇಕ್(MilkShake) ಅಥವಾ ಸ್ಮೂಥೀಸ್(Smoothie) ಮಾಡುವುದಾದರೆ ಅದಕ್ಕೆ ಐಸ್ ಕ್ರೀಮ್(Ice Cream) ಅಥವಾ ಡೇಟ್ಸ್ ಅನ್ನು ಸೇರಿಸಿ. 

Follow Us:
Download App:
  • android
  • ios