ಬೇಸಿಗೆ (Summer) ಬಂತು ಅಂದ್ರೆ ಒಂಥರಾ ಆಲಸೀತನ ಶುರುವಾಗುತ್ತೆ. ಅನೇಕರು ನಿದ್ರೆ (Sleep0 ಮೂಡಿನಲ್ಲಿರುತ್ತಾರೆ. ಸಣ್ಣ ಕೆಲಸ ಮಾಡಿದ್ರೂ ಸುಸ್ತಾಗುತ್ತದೆ. ಈ ಆಯಾಸ (Tired), ಆಲಸ್ಯಕ್ಕೆ ಟೀ ಮದ್ದಲ್ಲ. ಬೇಸಿಗೆಯಲ್ಲೂ ಆಕ್ಟಿವ್ ಆಗ್ಬೇಕೆಂದ್ರೆ ಡಯಟ್ (Diet)ನಲ್ಲಿ ಇದನ್ನು ಸೇರಿಸಿ.
ಬೇಸಿಗೆ (Summer) ಬಿಸಿ ದಿನ ದಿನಕ್ಕೂ ಏರ್ತಿದೆ. ತ್ವಚೆಯ ಜೊತೆಗೆ ಆರೋಗ್ಯ (Health) ದ ಮೇಲೂ ಬೇಸಿಗೆಯ ಪರಿಣಾಮವನ್ನು ಕಾಣಬಹುದಾಗಿದೆ. ಬೇಸಿಗೆಯಲ್ಲಿ ಅನೇಕ ಕಾಯಿಲೆ (Disease)ಗಳು ಕಾಡುತ್ತವೆ. ಅದ್ರ ಜೊತೆಗೆ ಆಲಸ್ಯ ಹಿಂಸೆ ನೀಡುತ್ತದೆ. ಅನೇಕ ಜನರು ರಾತ್ರಿ ಸರಿಯಾದ ನಿದ್ರೆ ಮಾಡಿದ ಮೇಲೂ ದಣಿವು ಮತ್ತು ಆಲಸ್ಯವನ್ನು ಅನುಭವಿಸುವ ಸಮಸ್ಯೆಯನ್ನು ಎದುರಿಸುತ್ತಾರೆ. ಬೆಳಿಗ್ಗೆ ಬಿಸಿಲು ಬರ್ತಿದ್ದಂತೆ ನಿದ್ದೆಯ ಗುಂಗು ಶುರುವಾಗುತ್ತದೆ. ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ. ನಿದ್ರೆಯ (Sleep) ಕಾರಣಕ್ಕೆ ಕೆಲಸ ಬಿಡಲು ಸಾಧ್ಯವಿಲ್ಲ.
ಹಾಗಾಗಿ ನಿದ್ದೆ ಹಾಗೂ ಆಲಸ್ಯವನ್ನು ಕಡಿಮೆ ಮಾಡಲು ಬಹುತೇಕರು ಒಂದರ ನಂತರ ಒಂದರಂತೆ ಚಹಾ (Tea)ವನ್ನು ಕುಡಿಯುತ್ತಾರೆ. ದಿನಕ್ಕೆ ನಾಲ್ಕೈದು ಬಾರಿ ಟೀ ಕುಡಿಯುವ ಜನರಿದ್ದಾರೆ. ಆದರೆ ಟೀ – ಕಾಫಿಯಲ್ಲಿರುವ ಕೆಫೀನ್ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಬೇಸಿಗೆಯಲ್ಲಿ ಆಹಾರದ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಬಿಸಿಲು ಹೆಚ್ಚಿದೆ ಎಂಬ ಕಾರಣಕ್ಕೆ ಐಸ್ ನೀರು ಕುಡಿದ್ರೆ ಆರೋಗ್ಯ ಕೆಡುತ್ತದೆ. ಹಾಗೆ ಕಾಫಿ, ಟೀ ಸೇವನೆಯಿಂದ ಆರೋಗ್ಯ ಮತ್ತಷ್ಟು ಹದಗೆಡುತ್ತದೆ. ಬೇಸಿಗೆಯಲ್ಲಿ ಆಲಸ್ಯ ಹೋಗಲಾಡಿಸಿ, ದೇಹಕ್ಕೆ ಶಕ್ತಿ ನೀಡಬೇಕೆಂದ್ರೆ ಎಂಥ ಆಹಾರ ತೆಗೆದುಕೊಳ್ಳುಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಆಲಸ್ಯಕ್ಕೆ ಹೇಳಿ ಗುಡ್ ಬೈ :
ಮೊಸರಿನ ಸೇವನೆ : ಬೇಸಿಗೆ ಮಾತ್ರವಲ್ಲ ಎಲ್ಲ ಸಮಯದಲ್ಲೂ ಮೊಸರು (Curd) ಆರೋಗ್ಯಕ್ಕೆ ಒಳ್ಳೆಯದು. ಪ್ರತಿ ದಿನ ಮೊಸರು ಸೇವನೆ ಮಾಡ್ಬೇಕು. ಅದ್ರಲ್ಲೂ ಬೇಸಿಗೆಯಲ್ಲಿ, ಆಲಸ್ಯ ಸಮಸ್ಯೆಯಿರುವವರು ಮೊಸರನ್ನು ಕಡ್ಡಾಯವಾಗಿ ಸೇವನೆ ಮಾಡ್ಬೇಕು. ಮೊಸರು ಪ್ರೋಟೀನ್ ಮತ್ತು ಕಾರ್ಬೋ ಹೈಡ್ರೇಟ್‌ಗಳನ್ನು ಹೊಂದಿದ್ದು ಇದು ಆಯಾಸ ಮತ್ತು ಆಲಸ್ಯವನ್ನು ಓಡಿಸಲು ಸಹಾಯ ಮಾಡುತ್ತದೆ. ಮೊಸರಿನೊಂದಿಗೆ ಕರಿಮೆಣಸು ಬೆರೆಸಿ ತಿನ್ನುವುದು ಹೆಚ್ಚು ಲಾಭಕರ. ಇದರಿಂದ ಆಲಸ್ಯವೂ ದೂರವಾಗುತ್ತದೆ ಮತ್ತು ಜೀರ್ಣಕ್ರಿಯೆಯೂ ಸರಿಯಾಗುತ್ತದೆ.
ಆಯಾಸ – ಆಲಸ್ಯಕ್ಕೆ ಗ್ರೀನ್ ಟೀ ಬೆಸ್ಟ್ : ಹಾಲಿನ ಟೀ ಬದಲು ನೀವು ಗ್ರೀನ್ ಟೀ (Green Tea) ಕುಡಿಯುವುದು ಒಳ್ಳೆಯದು. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಆಲಸ್ಯವನ್ನು ದೂರ ಮಾಡುತ್ತದೆ ಮತ್ತು ಮಾನಸಿಕ ಆಯಾಸವನ್ನು ಕಡಿಮೆ ಮಾಡುತ್ತದೆ. ಗ್ರೀನ್ ಟೀ ಕುಡಿಯುವ ಮೂಲಕ ದಿನವನ್ನು ಆರಂಭಿಸಿದ್ರೆ ಬಹಳ ಒಳ್ಳೆಯದು. ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಗ್ರೀನ್ ಟೀ ಸೇವನೆ ಮಾಡುತ್ತ ಬನ್ನಿ. ಕೆಲವೇ ದಿನಗಳಲ್ಲಿ ಪರಿಣಾಮ ಕಾಣಬಹುದು.
ಬೇಸಿಗೆಯಲ್ಲಿ ಆರೋಗ್ಯ ಹದಗೆಡಿಸೋ ಕಾಯಿಲೆಗಳಿವು, ಪರಿಹಾರವೇನು ?
ಸೋಂಪು : ಊಟದ ನಂತ್ರ ನಾವು ಸೋಂಪು ತಿನ್ನುತ್ತೇವೆ. ಈ ಸೋಂಪು ನಮ್ಮನ್ನು ಫ್ರೆಶ್ ಆಗಿಡುತ್ತದೆ. ಕ್ಯಾಲ್ಸಿಯಂ, ಸೋಡಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿರುವ ಸೋಂಪು ಆಲಸ್ಯ ಮತ್ತು ಆಯಾಸವನ್ನು ನಿವಾರಿಸಲು ಸಹ ಸಹಕಾರಿಯಾಗಿದೆ. ಹಾಗೆ ತಿನ್ನಲು ಇಷ್ಟವಿಲ್ಲ ಎನ್ನುವವರು ಸೋಂಪಿನ ಟೀ ಮಾಡಿ ಕುಡಿಯಬಹುದು.
ನಿಂಬೆ ಪಾನಕ : ಬೇಸಿಗೆಯಲ್ಲಿ ಅನೇಕರ ಅಚ್ಚುಮೆಚ್ಚಿನ ಪಾನೀಯ ನಿಂಬೆ ಪಾನಕ. ನಿಂಬೆ ಪಾನಕ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ದಿನಕ್ಕೆ ಕನಿಷ್ಠ 1-2 ಗ್ಲಾಸ್ ನಿಂಬೆ ನೀರನ್ನು ಕುಡಿಯುವುದು ಬಹಳ ಒಳ್ಳೆಯದು. ಇದು ದೇಹ ತೇವಾಂಶದಿಂದಿರಲು ನೆರವಾಗುತ್ತದೆ. ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಿದೆ. ಒಂದು ನಿಂಬೆ ಹಣ್ಣು ದೇಹಕ್ಕೆ ಬೇಕಾಗುವ ವಿಟಮಿನ್ ಸಿ ಯ ಶೇಕಡಾ 40ರಷ್ಟು ಅಗತ್ಯವನ್ನು ಪೂರೈಸುತ್ತದೆ. ಇದು ಆಲಸ್ಯ ಮತ್ತು ಆಯಾಸವನ್ನೂ ದೂರವಿಡುತ್ತದೆ.
ಚಾಕೊಲೇಟ್ : ಯಾವ ಕೆಲಸ ಮಾಡಲೂ ಮನಸ್ಸಿಲ್ಲ. ಬೇಸಿಗೆ ಬಿಸಿಲಿಗೆ ಮನಸ್ಸು ಆಲಸ್ಯ ಮತ್ತು ಆಯಾಸಗೊಂಡಿದೆ ಅಂದ್ರೆ ಸ್ವಲ್ಪ ಚಾಕೊಲೇಟ್ ತಿನ್ನಿರಿ. ಇದು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಇದು ಆಲಸ್ಯವನ್ನು ತೆಗೆದುಹಾಕುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ.
ಆಗಾಗ ಹುಷಾರು ತಪ್ಪುತ್ತಾ ? ಕಾರಣವೇನು ತಿಳ್ಕೊಳ್ಳಿ
ಓಟ್ಸ್ : ಓಟ್ಸ್ ಕರಗುವ ಫೈಬರ್ ಹೊಂದಿದೆ. ಹಸಿವಾದಾಗ ಇದನ್ನು ನೀವು ಸೇವನೆ ಮಾಡ್ಬಹುದು. ಆಲಸ್ಯ ಮತ್ತು ಆಯಾಸವನ್ನು ಓಡಿಸಲು ಓಟ್ಸ್ ಉತ್ತಮ ಆಯ್ಕೆಯಾಗಿದೆ.
