ಆಗಾಗ ಹುಷಾರು ತಪ್ಪುತ್ತಾ ? ಕಾರಣವೇನು ತಿಳ್ಕೊಳ್ಳಿ

ಕೆಲವೊಬ್ರನ್ನು ನೀವು ನೋಡಿರ್ಬೋದು ಯಾವಾಗ ನೋಡಿದ್ರೂ ಹುಷಾರಿಲ್ಲ (Sickness) ಅಂತಿರ್ತಾರೆ. ಆಗಾಗ ಜ್ವರ (Fever), ಶೀತದ ಕಾಟ. ದೇಹದ (Body) ಸುಸ್ತಂತೂ ಕಡಿಮೆಯಾಗೋದೆ ಇಲ್ಲ. ಆರ್ಯುವೇದಿಕ್ (Ayurvedic), ಅಲೋಪತಿ ಅಂತ ಎಲ್ಲಾ ರೀತಿಯ ಮೆಡಿಸಿನ್ ಟ್ರೈ ಮಾಡ್ತಾರೆ. ನಿಜಕ್ಕೂ ಈ ರೀತಿ ಹುಷಾರು ತಪ್ಪೋಕೆ ಕಾರಣ ಏನು ?

How To Know If You Have Weak Immune System And What To Do To Improve It Vin

ಪ್ರತಿಯೊಬ್ಬ ಮನುಷ್ಯನಲ್ಲಿರುವ ರೋಗ ನಿರೋಧಕ ಶಕ್ತಿ (Immunity Power)ಯು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಯಾವುದೇ ವೈರಸ್‌, ಫಂಗಸ್‌, ಬ್ಯಾಕ್ಟೀರಿಯಾ ದಾಳಿಯಿಂದ ನಮ್ಮನ್ನು ರಕ್ಷಿಸುವಲ್ಲಿ ರೋಗ ನಿರೋಧಕ ಶಕ್ತಿಯ ಪಾತ್ರ ಪ್ರಮುಖವಾಗಿದೆ. ರೋಗ ನಿರೋಧಕ ಶಕ್ತಿ ಸದೃಢವಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಆದರೆ, ಹಲವಾರು ಕಾರಣಗಳಿಂದ ಇಮ್ಯೂನಿಟಿ ಕುಗ್ಗುತ್ತದೆ. ಇಂಥಹಾ ಸಂದರ್ಭಗಳಲ್ಲಿ ವೈರಸ್‌ (Virus), ಫಂಗಸ್‌ (Fungus), ಬ್ಯಾಕ್ಟೀರಿಯಾ (Bacteria)ಗಳ ದಾಳಿಗೆ ನಮ್ಮ ದೇಹ (Body) ಸುಲಭವಾಗಿ ತುತ್ತಾಗುತ್ತದೆ. ಆಗ ದೇಹ ಅವುಗಳಿಗೆ ಪ್ರತಿಕ್ರಿಯೆ ನೀಡುತ್ತದೆ. ಅವುಗಳನ್ನು ಗುರುತಿಸಿಕೊಳ್ಳುವುದು ಅಗತ್ಯ.

ರೋಗನಿರೋಧಕ ಶಕ್ತಿಯು ಬಿಳಿ ರಕ್ತಕಣ (White Blood Cells), ಲಿಂಫ್‌ ನೋಡ್ಸ್‌ ಹಾಗೂ ಆಂಟಿಬಾಡಿ(Antibody)ಗಳಿಂದ ರೂಪುಗೊಳ್ಳುತ್ತದೆ. ಇವುಗಳೇ ದೇಹವನ್ನು ಬಾಹ್ಯ ದಾಳಿಯಿಂದ ರಕ್ಷಿಸುತ್ತವೆ. ದೇಹಕ್ಕೆ ವೈರಸ್‌ ಪ್ರವೇಶಿಸಿದರೆ ಅದರ ಮೇಲೆ ಪ್ರತಿರಕ್ಷಕ ಕೋಶಗಳು ಅಂದರೆ, ರೋಗ ನಿರೋಧಕ ಕೋಶಗಳು ದಾಳಿ ನಡೆಸಿ ಅದನ್ನು ನಿಷ್ಕ್ರಿಯಗೊಳಿಸುತ್ತವೆ. ಹೀಗಾಗಿ, ರೋಗ ನಿರೋಧಕ ಶಕ್ತಿ ಅಮೂಲ್ಯವಾಗಿದೆ. ದೇಹದಲ್ಲಿ ಇಮ್ಯುನಿಟಿ ಪವರ್ ಕಡಿಮೆಯಾಗುತ್ತಿರುವುದನ್ನು ಗಮನಿಸಿಕೊಂಡು ಅದನ್ನು ಬಗೆಹರಿಸಿಕೊಳ್ಳಬೇಕಾಗಿದೆ.

ಹಿರಿಯರು ಮಕ್ಕಳನ್ನು ಮಣ್ಣಲ್ಲಿ ಆಡೋಕೆ ಬಿಡಿ ಅಂತ ಹೇಳೋದ್ಯಾಕೆ ?

ಪ್ರತಿಯೊಬ್ಬರೂ ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯೊಂದಿಗೆ ಜನಿಸುವುದಿಲ್ಲ, ಆದರೆ ವೈರಸ್ ರೋಗಗಳು ಮತ್ತು ಇತರ ಪರಿಸ್ಥಿತಿಗಳನ್ನು ನಿಭಾಯಿಸಲು ನೀವು ಎಷ್ಟು ಸಮರ್ಥರಾಗಿದ್ದೀರಿ ಎಂಬುದನ್ನು ತಿಳಿಸಲು ದೇಹವು ತನ್ನದೇ ಆದ ಮಾರ್ಗವನ್ನು ಹೊಂದಿದೆ. ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಂಡಾಗ ಮತ್ತು ಬ್ಯಾಕ್ಟಿರೀಯಾ, ವೈರಸ್‌ಗಳಿಂದ ರಕ್ಷಿಸಲು ಸಾಧ್ಯವಾಗದಿದ್ದಾಗ ಇದು ಎಚ್ಚರಿಕೆಗಳನ್ನು ನೀಡುತ್ತದೆ. ಅಂತಹ ಚಿಹ್ನೆಗಳನ್ನು ತಿಳಿದುಕೊಳ್ಳುವುದು ನಿಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುವ ಮೊದಲು ಅವುಗಳನ್ನು ಪರಿಹರಿಸಲು ನಿಮಗೆ ಸಹಾಯ ಮಾಡುತ್ತದೆ. ಆ ಸೂಚನೆಗಳು ಏನು ಎಂಬುದನ್ನು ಮೊದಲು ತಿಳಿದುಕೊಳ್ಳೋಣ.

ಆಗಾಗ ಅನಾರೋಗ್ಯಕ್ಕೆ ಒಳಗಾಗುವುದು
ನೀವು ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಮತ್ತು ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡರೆ, ಇದರರ್ಥ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿದೆ ಎಂದಾಗಿದೆ. ಚಳಿಗಾಲವಲ್ಲದಿದ್ದರೂ ಸಹ ಆಗಾಗ ಶೀತ, ಜ್ವರ ಮೊದಲಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ನೀವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವತ್ತ ಗಮನಹರಿಸಬೇಕು.

ಒತ್ತಡದ ಭಾವನೆ
ಟ್ರಾಫಿಕ್ ಜಾಮ್‌ಗಳಿಂದ ಹಿಡಿದು ಆಫೀಸ್ ಕೆಲಸ, ಮನೆಯ ಸಮಸ್ಯೆ ಹೀಗೆ ಸಣ್ಣಪುಟ್ಟ ಒತ್ತಡವೂ ಸಹ ಮಾನಸಿಕವಾಗಿ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡಬಹುದು. ಈ ರೀತಿ ಆಗಾಗ ನಿಮಗೆ ಒತ್ತಡಕ್ಕೊಳಗಾದ ಅನುಭವವಾಗುತ್ತಿದ್ದರೆ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಕುಂಠಿತವಾಗಿರಬೇಕು. 

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ ?
ಇಂಟರ್ನಲ್ ಮೆಡಿಸಿನ್ ವೈದ್ಯ ಡಾ. ಮೈಕೆಲ್ ಇ. ಫೋರ್ಡ್, MD, ನ್ಯೂಯಾರ್ಕ್-ಪ್ರೆಸ್ಬಿಟೇರಿಯನ್ ಆಸ್ಪತ್ರೆಯ ವೆಬ್‌ಸೈಟ್ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸರಳ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ವಿಟಮಿನ್ ಡಿ ಕೊರತೆ ಯಾರಿಗೆ ಕಾಡುತ್ತೆ ಗೊತ್ತೇ? ಯಾಕೆ ಕಾಡುತ್ತೆ ತಿಳಿಯಿರಿ

ಏರೋಬಿಕ್ ವ್ಯಾಯಾಮ
ನಿಯಮಿತ. ವ್ಯಾಯಾಮ (Exercise)ವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ವ್ಯಾಯಾಮದಲ್ಲಿ ತೊಡಗಿರುವ ಜನರು ಮಾಡದ ಜನರಿಗಿಂತ ಕಡಿಮೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಚಟುವಟಿಕೆಯು ದೇಹಕ್ಕೆ ಹಲವಾರು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ದೇಹದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸಾಕಷ್ಟು ಪ್ರಮಾಣದ ನಿದ್ರೆ
ಸಾಕಷ್ಟು ನಿದ್ರೆ (Sleep) ಉತ್ತಮ ಆರೋಗ್ಯಕ್ಕೆ ಪ್ರಮುಖವಾಗಿದೆ. ನಿದ್ರೆಯು ವಿಶ್ರಾಂತಿಯ ಸ್ಥಿತಿಗಿಂತ ಹೆಚ್ಚು. ಇದು ಸಂಪೂರ್ಣ ದೈಹಿಕ ಕಾರ್ಯಗಳ ಪುನರುಜ್ಜೀವನವನ್ನು ಒಳಗೊಂಡಿರುತ್ತದೆ. ಪ್ರತಿಯೊಬ್ಬರೂ ಪ್ರತಿ ರಾತ್ರಿಗೆ ಆರರಿಂದ ಎಂಟು ಗಂಟೆಗಳ ನಿದ್ದೆಗೆ ಗುರಿಪಡಿಸಬೇಕು ಮತ್ತು ಉತ್ತಮ ನಿದ್ರೆಯ ಮಾದರಿಗಳಿಗಾಗಿ ಮಲಗುವ ಸಮಯದ ದಿನಚರಿಯನ್ನು ಅನುಸರಿಸಲು ಪ್ರಯತ್ನಿಸಬೇಕು.

ಹೆಚ್ಚು ಹಣ್ಣು, ತರಕಾರಿಗಳ ಸೇವನೆ
ಆರೋಗ್ಯ ಚೆನ್ನಾಗಿರಬೇಕಾದರೆ ದೇಹಕ್ಕೆ ಸಮರ್ಪಕವಾದ ಆಹಾರ ಪೂರೈಕೆಯಾಗುವುದು ಮುಖ್ಯ. ನಿಮ್ಮ ಆಹಾರದಲ್ಲಿ ಯಾವಾಗಲೂ ಹೆಚ್ಚಿನ ಪ್ರಮಾಣದ ಸೊಪ್ಪು, ತರಕಾರಿಗಳು (Vegetables), ಹಣ್ಣುಗಳು (Fruits) ಅಳವಡಿಕೆಯಾಗಿರಲಿ. ಇವು ದೇಹಕ್ಕೆ ಬೇಕಾಗುವ ಎಲ್ಲಾ ಪ್ರೊಟೀನ್, ವಿಟಮಿನ್‌. ಖನಿಜಗಳನ್ನು ನೀಡುತ್ತವೆ.

ಹೆಚ್ಚು ನೀರು ಕುಡಿಯಿರಿ
ದೇಹ ನಿರ್ಜಲೀಕರಣಗೊಂಡಾಗ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಹೀಗಾಗಿ ಯಾವುದೇ ಕಾರಣಕ್ಕೂ ನೀರು ಕುಡಿಯುವುದನ್ನು ಕಡಿಮೆ ಮಾಡಿ. ಆದಷ್ಟೂ ಹೆಚ್ಚು ನೀರು (Water) ಕುಡಿಯಿರಿ. ಜ್ಯೂಸ್, ಗಂಜಿ ನೀರು, ಎಳನೀರಿನ ಸೇವನೆಯನ್ನು ಹೆಚ್ಚು ಮಾಡಿ.

Latest Videos
Follow Us:
Download App:
  • android
  • ios