ಹಾರ್ಟ್​ ಬ್ಲಾಕೇಜ್​ ತೆಗೆಯುವ ಅದ್ಭುತ ಔಷಧ ಈ ಕಷಾಯ: ಹೃದಯ ಸಮಸ್ಯೆಗಳಿಗೆ ರಾಮಬಾಣ- ಡಾ.ಗೌರಿ ಮಾಹಿತಿ

ಹೃದಯಾಘಾತ, ಹಾರ್ಟ್​ ಬ್ಲಾಕೇಜ್​ ತೆಗೆಯಲು ಮನೆಯಲ್ಲಿಯೇ ಮಾಡಬಹುದಾದ ಸುಲಭದ ಕಷಾಯ ತಿಳಿಸಿಕೊಟ್ಟಿದ್ದಾರೆ ಡಾ.ಗೌರಿ. 
 

dr gowri about easy kashaya at home to remove  heart blockage home remedy is here suc

ಇಂದು ಸಾಧಾರಣವಾಗಿ ಹೃದಯಘಾತ ಸಮಸ್ಯೆಗಳು ಹೆಚ್ಚಾಗುತ್ತಿವೆ. ಚಿಕ್ಕ ವಯಸ್ಸಿನಲ್ಲಿಯೇ ಯುವಕ-ಯುವತಿಯರು ಸಾವನ್ನಪ್ಪುತ್ತಿದ್ದಾರೆ. ಕೆಲ ವರ್ಷಗಳಿಂದ ಹಾರ್ಟ್​ ಎಟ್ಯಾಕ್​ ಎನ್ನುವುದು ಮಾಮೂಲಾಗಿ ಬಿಟ್ಟಿದೆ. ಹಿಂದೆಲ್ಲಾ 60-70 ವರ್ಷ ವಯಸ್ಸಾದ ನಂತರ ಬರುತ್ತಿದ್ದ ಬಿ.ಪಿ,  ಶುಗರ್​, ಹೃದಯ ಸಮಸ್ಯೆ ಎಲ್ಲವೂ ಚಿಕ್ಕವಯಸ್ಸಿನಲ್ಲಿಯೇ ಬಂದು ಅಕಾಲಿಕ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಹೃದಯಗಳಲ್ಲಿ ಬ್ಲಾಕೇಜ್​ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನುತ್ತಲೇ ಈ ಸಮಸ್ಯೆ ನಿವಾರಣೆಗೆ ಅದ್ಭುತ ಔಷಧ ತೋರಿಸಿಕೊಟ್ಟಿದ್ದಾರೆ ಖ್ಯಾತ ವೈದ್ಯೆ ಡಾ.ಗೌರಿ. 

ಸ್ಟಾರ್​ ಸುವರ್ಣದಲ್ಲಿ ಪ್ರಸಾರ ಆಗುವ ಬೊಂಬಾಟ್​ ಭೋಜನ ಕಾರ್ಯಕ್ರಮದಲ್ಲಿ ಡಾ.ಗೌರಿ ಅವರು ಮನೆಯಲ್ಲಿಯೇ ತಯಾರು ಮಾಡಬಹುದಾದ ಸುಲಭದ ಔಷಧವನ್ನು ಹೇಳಿಕೊಟ್ಟಿದ್ದಾರೆ. ಈ ಕಷಾಯವನ್ನು ಮಾಡಿ ವಾರಕ್ಕೊಮ್ಮೆ ಕುಡಿದರೆ ಹೃದಯ ಸಮಸ್ಯೆ, ಹಾರ್ಟ್​ ಬ್ಲಾಕೇಜ್​ ತಪ್ಪಿಸಬಹುದು ಎನ್ನುವುದು ಅವರ ಮಾತು. ಅದಕ್ಕಾಗಿ ಅವರು ಹೇಳಿದ್ದು, ಪಾತ್ರೆಯಲ್ಲಿ ನೀರು ತೆಗೆದುಕೊಳ್ಳಬೇಕು.  ಚಕ್ಕೆ ಮತ್ತು ಅರಿಶಿಣವನ್ನು ಸರಿ ಪ್ರಮಾಣದಲ್ಲಿ ಪುಡಿ ಮಾಡಿಕೊಳ್ಳಬೇಕು.  ನಂತರ ಅದನ್ನು ನೀರಿಗೆ ಹಾಕಬೇಕು. ಲಿಂಬೆಹಣ್ಣಿನ ಹೋಳು ಮತ್ತು ಅರಳಿ ಮರದ ಎಲೆ ಹಾಕಬೇಕು. ಚೆನ್ನಾಗಿ ಕುದಿಸಬೇಕು. ಶೋಧಿಸಿ, ಆರಿಸಿ ಜೇನುತುಪ್ಪ ಹಾಕಿ ಕುಡಿಯಬೇಕು. ವಾರಕ್ಕೊಮ್ಮೆ ಈ ಕಷಾಯ ಅಥವಾ ಟೀ ಸೇವನೆ ಮಾಡುತ್ತಾ ಬಂದರೆ ಶೀಘ್ರದಲ್ಲಿಯೇ ಪರಿಣಾಮ ಕಾಣುತ್ತದೆ ಎಂದಿದ್ದಾರೆ ವೈದ್ಯೆ.

ಕೆಮ್ಮು, ಶೀತ, ಅಲರ್ಜಿ, ಕ್ರಿಮಿ ಕಡಿತ... ಅಬ್ಬಬ್ಬಾ ದೊಡ್ಡಪತ್ರೆ ಪ್ರಯೋಜನ ಒಂದೆರಡಲ್ಲ... ಅದಿತಿ ಪ್ರಭುದೇವ ಟಿಪ್ಸ್​​

ಇದೇ ವೇಳೆ ಚಿಕ್ಕ ವಯಸ್ಸಿನಲ್ಲಿ ಈ ಸಮಸ್ಯೆ ಬರಲು ಕಾರಣವೇನು ಎಂಬ ಬಗ್ಗೆ ಡಾ.ಗೌರಿ ತಿಳಿಸಿದ್ದಾರೆ.  ಹಿಂದಿನ ದಿನಗಳಲ್ಲಿ ಶುದ್ಧ ಹಸುವಿನ ತುಪ್ಪ ಅಂದ್ರೆ ಬೆಣ್ಣೆಯಿಂದ ತೆಗೆದ ತುಪ್ಪದ ಸೇವನೆ ಅಧಿಕವಾಗಿತ್ತು. ತುಪ್ಪ ಶರೀರಕ್ಕೆ ಅತ್ಯಗತ್ಯವಾಗಿ ಬೇಕು.  ತುಪ್ಪ ತಿನ್ನುವುದರಿಂದ ಗುಡ್​  ಕಾಲೆಸ್ಟ್ರಲ್​ ಜಾಸ್ತಿಯಾಗುತ್ತದೆ. ಶರೀರದಲ್ಲಿ ಕೆಲಸ ಚೆನ್ನಾಗಿ ಆಗುತ್ತದೆ. ಆದರೆ ಇಂದು ಹೆಚ್ಚಿನವರು ತುಪ್ಪ ತಿಂದರೆ ದಪ್ಪ  ಆಗುತ್ತೇವೆ ಎಂಬ ಹುಚ್ಚು ಮಾತನ್ನು ನಂಬಿ ಅದನ್ನು ತಿನ್ನುವುದನ್ನು ಬಿಟ್ಟಿದ್ದಾರೆ. ಹಸಿ ತೆಂಗಿನಕಾಯಿ ತಿಂದರೂ ಇದು ಲಿವರ್​ಗೆ ಒಳ್ಳೆಯದ್ದನ್ನು ಮಾಡುತ್ತದೆ. ಆದರೆ ತೆಳ್ಳಗಿನ ಶರೀರದ ಹುಚ್ಚು ಹಿಡಿಸಿಕೊಂಡಿರುವವರು ತುಪ್ಪ, ತೆಂಗಿನ ಕಾಯಿಯನ್ನು ತಿನ್ನುವುದನ್ನು ಬಿಟ್ಟಿರುವ ಕಾರಣ, ಇದು ಹೃದಯದ ಮೇಲೆ ಪರಿಣಾಮ ಬೀರುತ್ತಿದೆ ಎಂದಿದ್ದಾರೆ. ಇದರಿಂದ ರಕ್ತದ ಸರಬರಾಜು ಸರಿಯಾಗಿ ಆಗುವುದಿಲ್ಲ. ಹೃದಯದ ಪಂಪ್​ ಆಗದೇ ಸಮಸ್ಯೆ ಆಗುತ್ತಿದೆ. ಇವೆಲ್ಲವನ್ನೂ ನಾವೇ ಸ್ವಾಗತ ಮಾಡುತ್ತಿರುವುದು ಎನ್ನುವುದು ಡಾ.ಗೌರಿ ಅವರ ಮಾತು.  

ಇಷ್ಟೆಲ್ಲಾ ಸಮಸ್ಯೆ ತಂದುಕೊಂಡಿದ್ದೇವೆ ಎಂದ ಮೇಲೆ ಅದನ್ನು ಸರಿಪಡಿಸಬೇಕಲ್ಲ, ಅದಕ್ಕಾಗಿಯೇ ಈ ಅದ್ಭುತ ಕಷಾಯ ಕಂಡು ಹಿಡಿದಿರುವುದಾಗಿ ಹೇಳಿರುವ ವೈದ್ಯೆ, ರಕ್ತನಾಳದಲ್ಲಿ ಗಂಟು ಕಟ್ಟಿಕೊಂಡಿರುವುದನ್ನು ಈ ಕಷಾಯ ಸರಿಪಡಿಸುತ್ತದೆ. ಅಷ್ಟೇ ಅಲ್ಲದೇ,  ನಮ್ಮ ಶರೀರಕ್ಕೆ  ಅರಿಶಿಣದ ಅವಶ್ಯಕತೆ ತುಂಬಾ ಇದೆ. ನಮ್ಮ ಪೂರ್ವಿಕರು ಸಾಕಷ್ಟು ಅರಿಶಿಣ ಬಳಸುತ್ತಿದ್ದರು. ಆದ್ದರಿಂದ ಪ್ರತಿನಿತ್ಯ ಆಹಾರದಲ್ಲಿ ಅರಿಶಿಣ ಬಳಕೆ ಶುರು ಮಾಡಿ ನೋಡಿ, ನಿಮಗೇ ವ್ಯತ್ಯಾಸ ಗೊತ್ತಾಗುತ್ತದೆ ಎಂದಿರುವ ಡಾ.ಗೌರಿ,  ದಾಲ್ಚಿನ್ನಿ, ಚಕ್ಕೆ ಕೂಡ ವರ ಎನ್ನುತ್ತಲೇ ಅದರ ಮಾಹಿತಿ ನೀಡಿದ್ದಾರೆ. ಅದರ ವಿಡಿಯೋ ಇಲ್ಲಿದೆ.  

ದಿನಪೂರ್ತಿ ಚುರುಕಾಗಿರಬೇಕಾ? ಬೇವು, ನಿಂಬೆ, ಜೇನುತುಪ್ಪದ ಗುಟ್ಟು ತಿಳಿಸಿಕೊಟ್ಟ ನಟಿ ಅದಿತಿ ಪ್ರಭುದೇವ

Latest Videos
Follow Us:
Download App:
  • android
  • ios