ನವದೆಹಲಿ(ಮೇ  10)  ದೇಶದಲ್ಲಿ ಕರೋನಾ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಪ್ರತಿದಿನ 4 ಲಕ್ಷ ಕರೋನಾ ಪ್ರಕರಣಗಳು ವರದಿಯಾಗುತ್ತಿದ್ದು, ಇದು ಜನರನ್ನು ತೊಂದರೆಗೆ ಸಿಲುಕಿಸಿದೆ. ಕರೋನಾ ಸೋಂಕನ್ನು ತಡೆಗಟ್ಟಲು, ಅನೇಕ ರಾಜ್ಯಗಳು ತಮ್ಮನ್ನು ತಾವು ಲಾಕ್ ಡೌನ್ ಮಾಡುವುದಾಗಿ ಘೋಷಿಸಿವೆ. 

ಈ ನಡುವೆ ಡಬಲ್ ಮಾಸ್ಕ್ ಧರಿಸುವುದು ಪರಿಣಾಮಕಾರಿ ಎನ್ನುವ ಮಾಹಿತಿಯೂ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಹರಿದಾಡಿದೆ. ಹಾಗಾದರೆ ವಾಸ್ತವ ಏನು? ಸರ್ಕಾರವೇ ಈ ಬಗ್ಗೆ  ಒಂದಷ್ಟು ವಿಚಾರಗಳನ್ನು ಸ್ಪಷ್ಟಮಾಡಿದೆ.


ಏನು ಮಾಡಬೇಕು? 
* ಡಬಲ್ ಮಾಸ್ಕ್ ಎಂದರೆ ಅಲ್ಲಿ ಸರ್ಜಿಕಲ್ ಮಾಸ್ಕ್ ಇರಬೇಕು, ಎರಡು ಅಥವಾ ಮೂರು ಲೇಯರ್ ಇರಬೇಕು
* ಮೂಗಿನ  ಮೇಲಿನಿಂದ ಸರಿಯಾದ ರೀತಿಯಲ್ಲಿ ಒತ್ತಿಕೊಂಡಿರಬೇಕು. ಅಂದರೆ ಟೈಟ್ ಆಗಿ ಕುಳಿತುಕೊಂಡಿರಬೇಕು
* ಉಸಿರಾಟಕ್ಕೆ ಟಡಚಣೆಯಾಗದ ರೀತಿಯಲ್ಲಿ ಮಾಸ್ಕ್ ಇರಬೇಕು
* ಮುಖಕ್ಕೆ ಧರಿಸುವ ಮಾಸ್ಕ್ ನ್ನು ಆಗಾಗ್ಗೆ ವಾಶ್ ಮಾಡುತ್ತಿರುವುದು ಮುಖ್ಯ

ಕೊರೋನಾ ಕಂಡುಹಿಡಿಯುವ ಮೂರು ವಿಧಾನಗಳು

ಏನು ಮಾಡಬಾರದು? 
* ಒಂದೇ ಬಗೆಯ ಎರಡು ಮಾಸ್ಕ್ ಧರಿಸುವುದು ಸರಿ ಅಲ್ಲ
* ಒಂದೇ ಮಾಸ್ಕ್ ನ್ನು ನಿರಂತರವಾಗಿ ಧರಿಸಬೇಡಿ


ಅಧ್ಯಯನದ ಪ್ರಕಾರ, ಬಿಗಿಯಾಗಿರುವ ಎರಡು ಮಾಸ್ಕ್ ಧರಿಸುವುದರಿಂದ ವೈರಸ್ ನಿಂದ ಹೆಚ್ಚಿನ ರಕ್ಷಣೆ ಸಿಗುತ್ತದೆ. SARS-CoV-2-ಕಣಗಳನ್ನು ಫಿಲ್ಟರ್ ಮಾಡುವ ಪರಿಣಾಮ ಡಬಲ್ ಆಗುತ್ತದೆ.

ಜಮಾ ಇಂಟರ್ನಲ್ ಮೆಡಿಸಿನ್ ಜರ್ನಲ್ ಹೇಳುವ ಪ್ರಕಾರ   ಬಟ್ಟೆಯ ಪದರ ಹೆಚ್ಚಿಸುವುದು ಪರಿಹಾರವಲ್ಲ.. ಬದಲಾಗಿ ವೈದ್ಯಕೀಯ ಮಾಸ್ಕ್ ಗಳನ್ನು ಸರಿಯಾದ ರೀತಿ ಧರಿಸಿ. ಮುಖಕ್ಕೆ ಹೊಂದಿಕೊಳ್ಳುವಂತೆ ಅಂದರೆ ಟೈಟ್ ಆಗಿ ಇರುವಂತೆ ನೋಡಿಕೊಳ್ಳಬೇಕು.