Asianet Suvarna News Asianet Suvarna News

Breakup ನಂತ್ರ ದಪ್ಪಗಾಗ್ತಾರೆ ಹುಡುಗಿಯರು!

ಪ್ರೀತಿಸುವ ವ್ಯಕ್ತಿ ಜಗತ್ತು ಮರೆತ್ರೂ ಸೌಂದರ್ಯ, ಆರೋಗ್ಯ ಮರೆಯೋದಿಲ್ಲ. ಸಂಗಾತಿಯನ್ನು ಇನ್ನಷ್ಟು ಆಕರ್ಷಿಸಬೇಕೆಂಬ ತುಡಿತವಿರುತ್ತದೆ. ಅದೇ ಬ್ರೇಕ್ ಅಪ್ ನಂತ್ರ ಜಗತ್ತೇ ಬೇಡ ಎನ್ನುವ ಜನರು ಫಿಟ್ನೆಸ್ ಕೂಡ ನಿರ್ಲಕ್ಷ್ಯಿಸುತ್ತಾರೆ. ಇದು ಅವರ ಆರೋಗ್ಯ ಹಾಳು ಮಾಡುತ್ತದೆ. 
 

Dont Want To Look Ugly After A Breakup Follow These Self Care Tips
Author
First Published Jan 30, 2023, 3:08 PM IST

ಬ್ರೇಕಪ್.. ಮನಸ್ಸನ್ನು ಘಾಸಿಗೊಳಿಸುವ ಶಬ್ಧ. ಕನಸಿನ ಗೋಪುರ ಮುರಿದು ಬೀಳುವ ಸಮಯ. ಜೀವನದ ಅನೇಕ ಆಸೆಗಳು ಕೊನೆಗೊಳ್ಳುವ ದಿನ ಎನ್ನುತ್ತಾರೆ ಪ್ರೇಮಿಗಳು. ಯಾವುದೇ ಕಾರಣದಿಂದ ಬ್ರೇಕ್ ಅಪ್ ಆಗಿದ್ರೂ ಅದು ನೋವು ನೀಡದೆ ಇರೋದಿಲ್ಲ. ಇಷ್ಟು ದಿನ ಜೀವಕ್ಕೆ ಜೀವವೆಂದು ಜೊತೆಗಿದ್ದವರು ದೂರವಾದಾಗ ಜೀವನ ಕತ್ತಲು ಎನ್ನಿಸುವುದು ಸಹಜ. ಬ್ರೇಕ್ ಅಪ್ ಮನಸ್ಸಿನ ಜೊತೆ ದೇಹದ ಆರೋಗ್ಯವನ್ನೂ ಹಾಳು ಮಾಡುತ್ತದೆ. ಈ ಬ್ರೇಕ್ ಅಪ್ ನೋವಿನಲ್ಲಿ ಜನರು ತಮ್ಮ ಆಹಾರವನ್ನು ನಿರ್ಲಕ್ಷ್ಯಿಸುತ್ತಾರೆ. ಕೆಲವರು ನೋವಿನಲ್ಲಿ ಅತಿಯಾಗಿ ಮದ್ಯಪಾನ, ಧೂಮಪಾನ ಮಾಡಿದ್ರೆ ಮತ್ತೆ ಕೆಲವರು ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ. ಇಲ್ಲವೆ ಅನಾರೋಗ್ಯಕರ ಆಹಾರ ಸೇವನೆ ಶುರು ಮಾಡ್ತಾರೆ. ಇದ್ರಿಂದ ಆರೋಗ್ಯ ಹಾಳಾಗುವ ಜೊತೆಗೆ ತೂಕದಲ್ಲಿ ಏರಿಕೆಯಾಗುತ್ತದೆ.  

ಪ್ರೀತಿ (Love) ಒಂದು ಟಾನಿಕ್ ಇದ್ದಂತೆ. ಇದು ನಮ್ಮ ಮೆದುಳಿ (Brain) ನಲ್ಲಿ ಉತ್ತಮ ರಾಸಾಯನಿಕ ಹೆಚ್ಚಿಸುವ ಕೆಲಸ ಮಾಡುತ್ತದೆ. ಪ್ರೀತಿಯಲ್ಲಿ ಬಿದ್ದ ವ್ಯಕ್ತಿ  ಒಳ್ಳೆಯವನಾಗುತ್ತಾನೆ. ಬ್ರೇಕ್ ಅಪ್ (Break up) ನಂತ್ರ ನಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಚಿಂತೆ ಮತ್ತು ಒತ್ತಡ ಕಾಡುತ್ತದೆ.  ಒತ್ತಡದ ಹಾರ್ಮೋನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುವ ಕಾರಣ ಇದು ಹೃದಯಾಘಾತ (Heartattack) ಕ್ಕೆ ಕೂಡ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು. ಇದನ್ನು ಬ್ರೋಕನ್ ಹಾರ್ಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಬ್ರೇಕ್ ಅಪ್ ನಂತ್ರ ಕೆಲ ಟಿಪ್ಸ್ ಪಾಲನೆ ಮಾಡಿದ್ರೆ ನಕಾರಾತ್ಮಕ ಚಿಂತನೆ, ಬೊಜ್ಜಿನಿಂದ ಹೊರಗೆ ಬರಬಹುದು.

ಖಾಲಿ ಮನಸ್ಸು ಅನಾರೋಗ್ಯಕ್ಕೆ ದಾರಿ : ಮನಸ್ಸು ಖಾಲಿಯಿದ್ದಷ್ಟು ಅನಾವಶ್ಯಕ ಆಲೋಚನೆ ನಮ್ಮನ್ನು ಮುತ್ತಿಕೊಳ್ಳುತ್ತದೆ. ಬ್ರೇಕ್ ಅಪ್ ನಂತ್ರ ಎಲ್ಲ ಮುಗಿತು ಎಂದು ಭಾವಿಸುವ ಜನರು ಒಂಟಿಯಾಗಿ ಒಂದೇ ಕಡೆ ಕುಳಿತು ಆಲೋಚನೆ ಮಾಡ್ತಿರುತ್ತಾರೆ. ಈ ಆಲೋಚನೆ ಮನಸ್ಸಿನಲ್ಲಿ ಸುಳಿಯಬಾರದು, ಮೊದಲಿನಂತೆ ಲವಲವಿಕೆಯಿಂದ ಇರಬೇಕೆಂದ್ರೆ ನಿಮ್ಮ ಮನಸ್ಸನ್ನು ಬೇರೆ ಕಡೆ ಕೇಂದ್ರೀಕರಿಸಬೇಕು. ಸದಾ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಬೇಕು. ಮನಸ್ಸಿಗೆ ಆತ್ಮವಿಶ್ವಾಸ  ತುಂಬಬೇಕು. ಸದಾ ಕೋಣೆಯಲ್ಲಿಯೇ ನೀವು ಕಾಲ ಕಳೆದ್ರೆ ನಿಮ್ಮ ಆರೋಗ್ಯ ಹದಗೆಡುತ್ತದೆ ಎಂಬುದು ನನೆಪಿರಲಿ.  

Menstrual Hygiene: ಪರಿಮಳಯುಕ್ತ ಪ್ಯಾಡ್ ಖರೀದಿಸೋ ಮುನ್ನ ಈ ವಿಚಾರ ತಿಳ್ಕೊಳ್ಳಿ

ಚರ್ಮದ ಆರೈಕೆ ಮರೆಯಬೇಡಿ : ಬ್ರೇಕ್ ಅಪ್ ನಂತರ ಹುಡುಗಿಯರು ಸಾಮಾನ್ಯವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಅದರ ಪರಿಣಾಮ ಅವರ ಚರ್ಮದ ಮೇಲೆಯೂ ಗೋಚರಿಸುತ್ತದೆ. ಮುಖ ನಿರ್ಜೀವಗೊಳ್ಳುತ್ತದೆ. ಮುಖದ ಸೌಂದರ್ಯ ಹೆಚ್ಚಿಸಲು ತ್ವಚೆಯ ಆರೈಕೆ ಅಗತ್ಯ. ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್ ನೀವು ಹಚ್ಚಬಹುದು. ಹೊಸ ಹೇರ್ ಸ್ಟೈಲ್ ಮತ್ತು ನೇಲ್ ಆರ್ಟ್ ಮೂಲಕ ನಿಮ್ಮನ್ನು ನೀವು ಬದಲಿಸುವ ಪ್ರಯತ್ನ ಮಾಡಿ.       

ಫಿಟ್ನೆಸ್ ಮರೆಯಬೇಡಿ : ಬ್ರೇಕ್ ಅಪ್ ನಂತ್ರ ಜನರು ಮತ್ತೆ ಸಮಾಜಕ್ಕೆ ತೆರೆದುಕೊಳ್ಳಲು ಸಮಯ ಬೇಕಾಗುತ್ತದೆ. ನೋವಿನಲ್ಲಿ ಕೆಲವರು ಹೆಚ್ಚು ಚಲಿಸುವುದಿಲ್ಲ. ಒಂದೇ ಕಡೆ ಕುಳಿತು ಹಳೆ ನೆನಪು ಮೆಲುಕು ಹಾಕ್ತಾರೆ. ಇಲ್ಲವೆ ಸಿನಿಮಾ ನೋಡ್ತಾ ಕಾಲ ಕಳೆಯುತ್ತಾರೆ. ಇನ್ನು ಕೆಲವರು ನೋವಿನಲ್ಲಿ ಅತಿಯಾದ ಆಹಾರ ಸೇವನೆ ಮಾಡುತ್ತಾರೆ. ಇದೆಲ್ಲವೂ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಬ್ರೇಕ್ ಅಪ್ ಜೀವನದ ಒಂದು ಘಟ್ಟವೆಂದು ಭಾವಿಸಿ, ಮುಂದೆ ಸಾಗುವುದನ್ನು ಕಲಿಯಬೇಕು. ಮೊದಲಿನಂತೆ ಫಿಟ್ನೆಸ್ ಗೆ ಆದ್ಯತೆ ನೀಡ್ಬೇಕು. ಆರೋಗ್ಯಕರ ಆಹಾರವನ್ನು ಮಾತ್ರ ಸೇವನೆ ಮಾಡ್ಬೇಕು. ಫಿಟ್ನೆಸ್ ಬಗ್ಗೆ ಜಾಗೃತರಾಗಿರುವುದರಿಂದ ಆರೋಗ್ಯ ಸಂಬಂಧಿತ ಸಮಸ್ಯೆ ಕಾಡುವುದಿಲ್ಲ. ಇದ್ರಿಂದ ತೂಕ ನಿಯಂತ್ರಣಕ್ಕೆ ಬರುತ್ತೆ ಎನ್ನುತ್ತಾರೆ ತಜ್ಞರು.  

ವಯಸ್ಸು 50 ಆಯಿತು, ಈಗ ಬೆಂಬಿಡದೇ ಕಾಡುತ್ತಿದೆ ಒಂಟಿತನ, ಏನ್ಮಾಡಲಿ?

ಧನಾತ್ಮಕ ಭಾವನೆ ಹೆಚ್ಚಿಸಿಕೊಳ್ಳಿ : ಬ್ರೇಕ್ ಅಪ್ ನಂತ್ರ ನಕಾರಾತ್ಮಕ ಯೋಜನೆ ಮನಸ್ಸಿನಲ್ಲಿ ಬರಲು ಬಿಡಬೇಡಿ. ಸುತ್ತಲೂ ಸಕಾರಾತ್ಮಕ ವಾತಾವರಣವನ್ನು ಇರಿಸಿ. ಕೌನ್ಸಿಲರ್ ಭೇಟಿಯಾಗಿ ಸಲಹೆ ಪಡೆಯಬಹುದು.  ಒಳ್ಳೆಯ ಪುಸ್ತಕವನ್ನು ಓದಬಹುದು. ನೆಚ್ಚಿನ ಸಂಗೀತವನ್ನು ಆಲಿಸಬಹುದು. ಆರೋಗ್ಯಕರ ಆಹಾರ, ಸದಾ ಚಟುವಟಿಕೆ, ಶಾಂತ ಮನಸ್ಸು ನಿಮ್ಮ ತೂಕ ಹೆಚ್ಚಳವನ್ನು ನಿಯಂತ್ರಿಸುತ್ತದೆ ಎಂಬುದು ನೆನಪಿರಲಿ. 
 

Follow Us:
Download App:
  • android
  • ios