ರಕ್ತದ ಗುಂಪಿಗೂ ಸ್ಟ್ರೋಕ್‌ ಉಂಟಾಗೋದಕ್ಕೂ ಸಂಬಂಧ ಇದ್ಯಾ?

ಚಳಿಗಾಲದಲ್ಲಿ ಸ್ಟ್ರೋಕ್‌ ಪ್ರಕರಣಗಳು ಹೆಚ್ಚು. ಯಾವ ಕಾರಣಕ್ಕಾಗಿ ಸ್ಟ್ರೋಕ್‌ ಉಂಟಾಗುತ್ತದೆ, ಪಾರ್ಶ್ವವಾಯುವಿನ ಮೂಲ ಎಲ್ಲಿದೆ ಎಂದು ತಜ್ಞರು ಹುಡುಕುತ್ತ ಹೊರಟಾಗ ತಜ್ಞರಿಗೆ ಕಂಡಿದ್ದು ರಕ್ತದ ಗುಂಪು. ಅವರ ಪ್ರಕಾರ, ಎ ರಕ್ತದ ಗುಂಪಿನ ವ್ಯಕ್ತಿಗಳಿಗೆ ೬೦ಕ್ಕೂ ಮುನ್ನವೇ ಪಾರ್ಶ್ವವಾಯು ಸಂಭವಿಸುವ ಅಪಾಯ ಹೆಚ್ಚು.
 

Does there is a relation between stroke and blood group

ಚಳಿಗಾಲ ಬಂತೆಂದರೆ ಸಾಕು, ಹೃದಯಾಘಾತ, ಸ್ಟ್ರೋಕ್‌ ಪ್ರಕರಣಗಳು ಹೆಚ್ಚಾಗುತ್ತವೆ. ಇದು ಸಾಮಾನ್ಯವಾಗಿ ಪ್ರತಿ ವರ್ಷದ ಸಂಗತಿ. ಚಿಕ್ಕಪುಟ್ಟ ಪ್ರಮಾಣದಲ್ಲಾದರೂ ಸರಿ, ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿಸಿದರೆ ಆರೋಗ್ಯಕರ ಜೀವನಕ್ಕೆ ಸಾಕಷ್ಟು ಹಿನ್ನಡೆಯಾಗುತ್ತದೆ. ಜತೆಗೆ, ಮುಂದೆ ಭಾರೀ ಎಚ್ಚರಿಕೆ ವಹಿಸಬೇಕಾಗುತ್ತದೆ. ಮತ್ತೊಮ್ಮೆ ಮರುಕಳಿಸದಂತೆ ವೈದ್ಯರು ಹೇಳುವ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪಾರ್ಶ್ವವಾಯುವಿಗೆ ತುತ್ತಾಗುವವರು ಪ್ರಮಾಣ ಅಧಿಕಗೊಳ್ಳುತ್ತಿದೆ ಎನ್ನುತ್ತವೆ ವೈದ್ಯಕೀಯ ದಾಖಲೆಗಳು. ಪಾರ್ಶ್ವವಾಯು ಉಂಟಾಗಲು ಹಲವು ಕಾರಣಗಳಿವೆ. ಮಿದುಳಿಗೆ ಇದ್ದಕ್ಕಿದ್ದ ಹಾಗೆ ರಕ್ತ ಪೂರೈಕೆ ಆಗದೆ ಇದ್ದಾಗ ಸಾಮಾನ್ಯವಾಗಿ ಪಾರ್ಶ್ವವಾಯು ಸಂಭವಿಸುತ್ತದೆ. ನಿಮಗೆ ಗೊತ್ತಿರಬಹುದು, ಮಿದುಳಿನಲ್ಲಿ ರಕ್ತ ನಿರಂತರವಾಗಿ ಪ್ರವಹಿಸುತ್ತಿರಬೇಕು. ಅದರಿಂದ ಆಮ್ಲಜನಕ ಪೂರೈಕೆ ಆಗುತ್ತಿರಬೇಕು.

ಏಕೆಂದರೆ, ಮಿದುಳಿನಲ್ಲಿ ಆಮ್ಲಜನಕ ಸಂಗ್ರಹಿಸಿ ಇಟ್ಟುಕೊಳ್ಳುವ ವ್ಯವಸ್ಥೆ ಇಲ್ಲ. ಆದರೆ, ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾದಾಗ, ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದಾಗ, ಮಿದುಳಿಗೆ ಹೆಪ್ಪುಗಟ್ಟಿದಾಗ ಪಾರ್ಶ್ವವಾಯು ಉಂಟಾಗುತ್ತದೆ. ರಕ್ತಸಂಚಾರದಲ್ಲಿ ವ್ಯತ್ಯಾಸ ಏರ್ಪಟ್ಟಾಗ ಈ ಸಮಸ್ಯೆ ಉಂಟಾಗುತ್ತದೆ. ಮಿದುಳಿನ ಯಾವ ಭಾಗದಲ್ಲಿ ಈ ಸಮಸ್ಯೆ ಸೃಷ್ಟಿಯಾಗಿದೆಯೋ ಅದರ ಆಧಾರದ ಮೇಲೆ ಆರೋಗ್ಯದ ಮೇಲೆ ಪರಿಣಾಮವುಂಟಾಗುತ್ತದೆ. 
ಪಾರ್ಶ್ವವಾಯು (Stroke) ಹೇಗೆ ಉಂಟಾಗುತ್ತದೆ, ಅದರ ಮೂಲ ಕಾರಣ ಏನಿರಬಹುದು ಎನ್ನುವುದರ ಬಗ್ಗೆ ತಜ್ಞರು (Experts) ಸಾಕಷ್ಟು ಅಧ್ಯಯನಗಳನ್ನು ನಡೆಸುತ್ತಿದ್ದಾರೆ. ಅದರಲ್ಲೊಂದು ಅಂಶ ಸಾಕಷ್ಟು ಕುತೂಹಲ ಕೆರಳಿಸಿದೆ. ಪಾರ್ಶ್ವವಾಯುವಿಗೂ, ರಕ್ತದ ಗುಂಪಿಗೂ (Blood Group) ಸಂಬಂಧವಿದೆಯೇ ಎನ್ನುವ ನಿಟ್ಟಿನಲ್ಲಿ ನಡೆಸಿದ್ದ ಈ ಅಧ್ಯಯನ (Study) ಕೆಲವು ಕುತೂಹಲಕರ ಅಂಶವನ್ನು ಬಹಿರಂಗಪಡಿಸಿದೆ. ಇತ್ತೀಚೆಗೆ ಅಮೆರಿಕದ ಮೇರಿಲ್ಯಾಂಡ್‌ ವಿಶ್ವವಿದ್ಯಾಲಯ (Maryland University) ಪ್ರಕಟಿಸಿದ್ದ ಅಧ್ಯಯನವೊಂದರಲ್ಲಿ ರಕ್ತದ ಗುಂಪಿಗೂ, 60 ವರ್ಷಕ್ಕಿಂತ ಮುನ್ನವೇ ಪಾರ್ಶ್ವವಾಯು ಸಂಭವಿಸುವುದಕ್ಕೂ ಸಂಬಂಧವಿದೆ. 

ಯಾವ ರಕ್ತದ ಗುಂಪಿಗೆ ಅಪಾಯ ಹೆಚ್ಚು?: ಅಮೆರಿಕನ್‌ ಅಕಾಡೆಮಿ ಆಫ್‌ ನ್ಯೂರಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಎ ರಕ್ತದ ಗುಂಪನ್ನು ಹೊಂದಿರುವ ವ್ಯಕ್ತಿಗಳಿಗೆ ಪಾರ್ಶ್ವವಾಯುವಿನ ಅಪಾಯ ಹೆಚ್ಚು. ಒ ಮತ್ತು ಎ ರಕ್ತದ ಗುಂಪುಗಳಲ್ಲಿ ಕಂಡುಬಂದಿರುವ ಜೀನ್‌ (Gene) ತಳಿಗಳಲ್ಲಿ ಪಾರ್ಶ್ವವಾಯುವಿಗೆ ಸಂಬಂಧಿಸಿದ ಅಂಶ ಪತ್ತೆಯಾಗಿದೆ. ಎ ರಕ್ತದ ಗುಂಪುಗಳ ವ್ಯಕ್ತಿಗಳಲ್ಲಿ 60 ವರ್ಷಕ್ಕಿಂತ ಮುನ್ನವೇ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿಕೊಳ್ಳಬಹುದು ಹಾಗೂ ಅದು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಉತ್ತರ ಅಮೆರಿಕ (North America), ಯುರೋಪ್‌ (Europe) ಹಾಗೂ ಏಷ್ಯಾ (Asia) ಖಂಡಗಳ ವಿವಿಧ ದೇಶಗಳಲ್ಲಿ ಈ ಅಧ್ಯಯನ ನಡೆಸಲಾಗಿತ್ತು. 16 ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ 18-59ರ ವಯೋಮಾನದ ಪಾರ್ಶ್ವವಾಯು ಪೀಡಿತ ವ್ಯಕ್ತಿಗಳು ಹಾಗೂ 5 ಲಕ್ಷಕ್ಕೂ ಅಧಿಕ ಆರೋಗ್ಯವಂತ (Healthy) ಜನರನ್ನು ಇದರಲ್ಲಿ ಪರೀಕ್ಷಿಸಲಾಗಿದೆ. 

Ayurveda Tips : ಎರಡು ಹನಿ ಹಸುವಿನ ತುಪ್ಪದಲ್ಲಿ ಅಡಗಿದೆ ಆರೋಗ್ಯದ ಗುಟ್ಟು!

ಕಿರು ವಯಸ್ಸಿನಲ್ಲೇ ಸ್ಟ್ರೋಕ್!: 16 ಸಾವಿರ ಪ್ರಕರಣಗಳಲ್ಲಿ 5800 ಮಂದಿ ಚಿಕ್ಕ ವಯಸ್ಸಿನಲ್ಲೇ ಸ್ಟ್ರೋಕ್‌ ಗೆ ತುತ್ತಾಗಿದ್ದರೆ 9 ಸಾವಿರ ಜನ ತಡವಾಗಿ (Late) ಅಂದರೆ ಹೆಚ್ಚು ವಯಸ್ಸಾದ ಬಳಿಕ ಪಾರ್ಶ್ವವಾಯುವಿಗೆ ಒಳಗಾಗಿದ್ದರು. 60 ವರ್ಷಕ್ಕಿಂತ ಮುನ್ನವೇ (Early) ಸ್ಟ್ರೋಕ್‌ ಗೆ ಒಳಗಾದವರಲ್ಲಿ ಬಹುಪಾಲು ಜನ (People) ಎ ರಕ್ತದ ಗುಂಪನ್ನು ಹೊಂದಿದ್ದರು. ತಡವಾಗಿ ಸ್ಟ್ರೋಕ್‌ ಗೆ ಒಳಗಾದವರಲ್ಲಿ ಹೆಚ್ಚು ಜನ ಒ ರಕ್ತದ ಗುಂಪಿಗೆ ಸೇರಿದ್ದರು. ಹಾಗೆಯೇ, ಕಿರು ವಯಸ್ಸು ಮತ್ತು ತಡವಾಗಿ ಪಾರ್ಶ್ವವಾಯುವಿಗೆ ತುತ್ತಾದವರಲ್ಲಿ ಬಿ ಗುಂಪಿನ ರಕ್ತದವರೂ ಇದ್ದರು. 

ತಿಂದ ತಕ್ಷಣ ಮಲಗಿದರೆ ಗಂಭೀರ ಆರೋಗ್ಯ ತೊಂದರೆ ಕಾಡಬಹುದು ಎಚ್ಚರ

ವ್ಯಕ್ತಿಯ ಉತ್ಪಾದಕತೆ (Productivity) ಹೆಚ್ಚಿರುವ ಸಮಯದಲ್ಲಿ ಅಂದರೆ ಕಿರು ವಯಸ್ಸಿನಲ್ಲೇ ಪಾರ್ಶ್ವವಾಯುವಿನ ಅಂಶ ಹೇಗೆ ವೃದ್ಧಿಯಾಗುತ್ತದೆ, ಯಾವ ರೀತಿ ಬದಲಾವಣೆ (Change) ಹೊಂದುತ್ತದೆ ಎನ್ನುವ ನಿಟ್ಟಿನಲ್ಲಿ ಅಧ್ಯಯನ ಮುಂದುವರಿದಿದೆ. ಇದರಿಂದ ದೊರೆಯುವ ಮಾಹಿತಿಯಿಂದ ವ್ಯಕ್ತಿಗೆ ಆಗುವ ಹಾನಿಯನ್ನು (Loss) ತಪ್ಪಿಸಬಹುದಾಗಿದೆ ಎನ್ನುತ್ತಾರೆ ತಜ್ಞರು. 

Latest Videos
Follow Us:
Download App:
  • android
  • ios