ಸ್ವೀಟ್ಸ್ ತಿಂದು ನೀರು ಕುಡಿದ್ರೆ ಸಕ್ಕರೆ ಕಾಯಿಲೆ ಬೇಗ ಬರುತ್ತಂತೆ ನೋಡಿ !
ಸ್ವೀಟ್ಸ್ (Sweets) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬೇಕಾಬಿಟ್ಟಿ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಸ್ವೀಟ್ಸ್ ಕುಡಿದಾದ್ಮೇಲೆ ಸಾಮಾನ್ಯವಾಗಿ ಎಲ್ರಿಗೂ ನೀರು (Water) ಕುಡೀಬೇಕು ಅನ್ಸುತ್ತೆ. ಆದ್ರೆ ಈ ರೀತಿ ಮಾಡೋದ್ರಿಂದ ಸಕ್ಕರೆ ಕಾಯಿಲೆ (Diabetes) ಬರೋ ಛಾನ್ಸಸ್ ಜಾಸ್ತಿ ಇದ್ಯಂತೆ ನೋಡಿ.
ಸಿಹಿ, ಹುಳಿ, ಖಾರದ ರುಚಿಗಳ ವಿಷಯಕ್ಕೆ ಬಂದಾಗ ಹೆಚ್ಚಿನವರು ಸ್ವೀಟ್ಸ್‌ನ್ನು (Sweets) ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಖುಷಿಯ (Happy) ಸಂದರ್ಭವಿರಲಿ, ಹಬ್ಬವಿರಲಿ, ಪಾರ್ಟಿ, ಪ್ರಮೋಶನ್ ಇರಲಿ ಎಲ್ಲಾ ಸಂದರ್ಭಗಳಲ್ಲೂ ಸ್ವೀಟ್ಸ್ ಅಂತೂ ಬೇಕೇ ಬೇಕು. ಆದ್ರೆ ಅತಿಯಾಗಿ ಸ್ವೀಟ್ಸ್ ತಿನ್ನೋದು ಆರೋಗ್ಯಕ್ಕೆ (Health) ಒಳ್ಳೆಯದಲ್ಲ. ಇದು ಹೊಟ್ಟೆನೋವು, ಹೊಟ್ಟೆ ಹುಳು ಸೇರಿದಂತೆ ಉದರ ಸಂಬಂಧ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಮಾತ್ರವಲ್ಲ ಹಸಿವನ್ನು ಕಡಿಮೆ ಮಾಡುತ್ತದೆ, ಜೀರ್ಣಕ್ರಿಯೂ ಹಾನಿಕಾರಿಯಾಗಿದೆ.
ಅದರಲ್ಲೂ ಸ್ವೀಟ್ಸ್ ತಿಂದು ನೀರು (Water) ಕುಡಿಯವುದು ಸಾಮಾನ್ಯವಾಗಿ ಎಲ್ಲರ ಅಭ್ಯಾಸ. ಯಾಕೆಂದರೆ ಸ್ವೀಟ್ಸ್ ತಿಂದ ಕೂಡಲೇ ಬಾಯಿ ಹೆಚ್ಚು ಸಿಹಿಯಾದಂತೆ ಅನುಭವವಾಗುತ್ತದೆ. ನೀರು ಕುಡಿಯುವ ಪ್ರಚೋದನೆ ಉಂಟಾಗುತ್ತದೆ. ಆದ್ರೆ ಈ ರೀತಿ ಸ್ವೀಟ್ಸ್ ತಿಂದ ಕೂಡ್ಲೇ ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೇದಲ್ಲ ಅನ್ನೋದು ನಿಮ್ಗೆ ಗೊತ್ತಿದ್ಯಾ ?
ಮಕ್ಕಳಲ್ಲಿ ಹೆಚ್ಚುತ್ತಿದೆ Diabetes, ಈಗ್ಲೇ ಹುಷಾರಾಗಿ!
ಸಿಹಿ ತಿಂದಾದ ಬಳಿಕ ನೀರು ಕುಡಿಯಲೇಬೇಡಿ
ಸಿಹಿ ಅಂದ್ರೆ ಸಕ್ಕರೆಕಾಯಿಲೆ (Diabetes) ಇರೋರು ಮಾರು ದೂರ ಓಡ್ತಾರೆ. ಯಾಕೆಂದರೆ ನಮ್ಮ ಆರೋಗ್ಯಕ್ಕೆ ಸಿಹಿ ಆಗಿ ಬರಲ್ಲ ಎಂದು ಅವರಿಗೆ ಗೊತ್ತಿರುತ್ತೆ. ಆದ್ರೆ ಉಳಿದವರು ಸಿಹಿತಿಂಡಿ ತಿನ್ನುವಾಗ ಈ ಯಾವ ವಿಷಯದ ಬಗ್ಗೆಯೂ ಗಮನಹರಿಸುವುದಿಲ್ಲ. ತೊಂದ್ರೆ (Problem) ಆಗುವುದು ಇಲ್ಲೇ. ಕೆಲವರು ಸಿಹಿ ತಿಂಡಿಗಳನ್ನು ತಿಂದ ಕೂಡಲೇ, ಬಾಯಾರಿಕೆ ಆಗುತ್ತಿದೆ ಎಂದು ಕೋಲ್ಟ್ ಡ್ರಿಂಕ್ಸ್ ಅಥವಾ ತಂಪು ಪಾನೀಯ ಕುಡಿಯುವುದು, ಇಲ್ಲಾಂದರೆ ನೀರು ಕುಡಿಯುವ ಅಭ್ಯಾದ ಇಟ್ಟು ಕೊಂಡಿರುತ್ತಾರೆ. ಇಷ್ಟೇ ಸಾಕು ನೋಡಿ ದೀರ್ಘಕಾಲದ ಕಾಯಿಲೆ ನಮ್ಮನ್ನು ಆವರಿಸಿಬಿಡುತ್ತದೆ. ಹೌದು ಈ ರೀತಿ ಮಾಡೋದ್ರಿಂದ ಸಕ್ಕರೆ ಕಾಯಿಲೆ (Diabetes) ಬೇಗ ಕಾಣಿಸಿಕೊಳ್ಳುತ್ತೆ ಅನ್ನುತ್ತಾರೆ ವೈದ್ಯರು.
ಅಧ್ಯಯನದಲ್ಲಿ ನೀರಿಲ್ಲದೆ ಅದೇ ಪ್ರಮಾಣದ ಡೋನಟ್‌ಗಳನ್ನು ಸೇವಿಸಿದವರಿಗಿಂತ ಅದರೊಂದಿಗೆ ನೀರನ್ನು ಕುಡಿಯುವವರು ಹೆಚ್ಚಿನ ಸಕ್ಕರೆಯನ್ನು ಹೊಂದಿದ್ದಾರೆಂದು ತಿಳಿದುಬಂದಿದೆ. ಸಿಹಿ ತಿಂದು, ನೀರು ಕುಡಿಯುವ ಅಭ್ಯಾಸ ಟೈಪ್ 2 ಮಧುಮೇಹ ಮತ್ತು ಬೊಜ್ಜಿನ ಅಪಾಯವನ್ನು ಹೆಚ್ಚಿಸಬಹುದು. ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಹೃದಯ ಜೋಪಾನವಾಗಿರಬೇಕಾ ? ಆಹಾರದಲ್ಲಿ ಕಪ್ಪು ಅಕ್ಕಿ ಬಳಸಿ
ಸಿಹಿ ತಿಂದ ಕೂಡ್ಲೇ ನೀರು ಕುಡಿದ್ರೆ ಸಕ್ಕರೆ ಕಾಯಿಲೆ ಬರೋದ್ಯಾಕೆ ?
ಸಿಹಿ ತಿಂಡಿ ತಿಂದ ಕೂಡಲೇ ನೀರು ಕುಡಿಯೋದ್ರಿಂದ ಸಕ್ಕರೆ ಕಾಯಿಲೆ ಬರೋಕೆ ನಿರ್ಧಿಷ್ಟ ಕಾರಣವೂ ಇದೆ. ಇದಕ್ಕೆ ಮುಖ್ಯ ಕಾರಣ, ನೀರಿನ ಪ್ರಮಾಣವು, ಸಿಹಿ ತಿಂಡಿಗಳಲ್ಲಿ ಕಂಡು ಬರುವ ಸಕ್ಕರೆಯ ಪ್ರಮಾಣ ವನ್ನು, ದೇಹದ ರಕ್ತದಲ್ಲಿ ಬೇಗನೇ ಕರಗುವಂತೆ ಮಾಡುತ್ತವೆಯಂತೆ. ಅದರಲ್ಲೂ ಮುಖ್ಯವಾಗಿ ಯಾವುದೇ ಸಿಹಿತಿಂಡಿಗಳನ್ನು ತಿಂದ ಕೂಡಲೇ, ಒಂದೆರಡು ಲೋಟ ನೀರು ಕುಡಿದು ಬಿಟ್ಟರೆ, ರಕ್ತದಲ್ಲಿ ಸಕ್ಕರೆ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಿಬಿಡುತ್ತದೆ.ಇದರಿಂದ ಮಧು ಮೇಹದ ಲಕ್ಷಣಗಳು ಇನ್ನಷ್ಟು ಏರಿಕೆ ಕಂಡು ಆರೋ ಗ್ಯದಲ್ಲಿ ಅಸ್ವಸ್ಥತೆ ಕಂಡು ಬರುವ ಅಪಾಯ ಹೆಚ್ಚಿರುತ್ತದೆ. ಕೆಲವರಿಗೆ ಈ ಸಮಯದಲ್ಲಿ ತಲೆಸುತ್ತು ಸಮಸ್ಯೆ ಬರುವ ಅಪಾಯ ಕೂಡ ಹೆಚ್ಚಿರುತ್ತದೆ.
ಸಕ್ಕರೆ ಕಾಯಿಲೆ ಎನ್ನುವುದು ದೀರ್ಘಕಾಲ ಕಾಡುವಂತಹ ಒಂದು ಆರೋಗ್ಯ ಸಮಸ್ಯೆ. ಮನುಷ್ಯನಲ್ಲಿ ಒಮ್ಮೆ ಈ ಕಾಯಿಲೆ ಕಾಣಿಸಿಕೊಂಡರೆ, ನಂತರ ಈ ಕಾಯಿಲೆ ಬಿಟ್ಟು ಹೋಗುವುದೇ ಇಲ್ಲ. ಆದರೆ ಸರಿಯಾದ ಆಹಾರ ಪದ್ಧತಿ ಹಾಗೂ ವೈದ್ಯರ ಸಲಹೆಗಳನ್ನು ಅನುಸರಿಸಿದರೆ ಮಾತ್ರ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಹೀಗಾಗಿ ಈ ಕಾಯಿಲೆ ನಮ್ಮ ಹಿಂದೆ ಬೀಳುವ ಮೊದಲು, ಇದರಿಂದ ಆದಷ್ಟು ದೂರವಿರಬೇಕು, ಇದಕ್ಕಾಗಿ ಸರಿಯಾದ ಆಹಾರ ಪದ್ಧತಿ ಹಾಗೂ ಒಳ್ಳೆಯ ಜೀವನ ಶೈಲಿಯನ್ನು ಅನುಸರಿಸಿಕೊಂಡು ಹೋಗಬೇಕು.