Asianet Suvarna News Asianet Suvarna News

1 ಗ್ರಾಂ ಮೀನು, 40 ನಿಮಿಷ ಆಪರೇಶನ್, 8 ಸಾವಿರ ಖರ್ಚು: ಜಗತ್ತಿನ ಅತೀ ಚಿಕ್ಕ ರೋಗಿ!

1 ಗ್ರಾಂ ಮೀನಿನ ಯಶಸ್ವಿ ಶಸ್ತ್ರ ಚಿಕಿತ್ಸೆ| ಮೌಲಿ ಪ್ರಜಾತಿಯ ಗೋಲ್ಡ್ ಫಿಶ್’ಗೆ ಯಶಸ್ವಿ ಶಸ್ತ್ರಚಿಕಿತ್ಸೆ| ಗೋಲ್ಡ್ ಫಿಶ್ ಹೊಟ್ಟೆಯಲ್ಲಿದ್ದ ಟ್ಯೂಮರ್ ಹೊರ ತೆಗೆದ ವೈದ್ಯೆ ಸೋನ್ಯಾ ಮೈಲ್ಸ್| ಶಸ್ತ್ರಚಿಕಿತ್ಸೆಗೆ 8,800 ರೂ ಖರ್ಚು| 

Doctor Removes Tumors From Tiny 1 Gram Fish In England
Author
Bengaluru, First Published Sep 22, 2019, 5:33 PM IST

ಇಂಗ್ಲೆಂಡ್(ಸೆ.22): ವೈದ್ಯ ಲೋಕ ಅದೆಷ್ಟು ಮುಂದುವರೆದಿದೆ ಎಂದರೆ ಮಾನವನ ರೋಗಗಳಿಗೇನು? ಪ್ರಾಣಿ, ಜಲಚರಗಳ ರೋಗಗಳಿಗೂ ಇದೀಗ ವೈದ್ಯರು ಚಿಕಿತ್ಸೆ ನೀಡುತ್ತಾರೆ.

ಅದರಂತೆ ಇಂಗ್ಲೆಂಡ್’ನ ಬ್ರಿಸ್ಟಸ್’ನ ವೈದ್ಯೆ ಸೋನ್ಯಾ ಮೈಲ್ಸ್ ಕೇವಲ 1 ಗ್ರಾಂ ತೂಕದ ಮೌಲಿ ಪ್ರಜಾತಿಯ ಗೋಲ್ಡ್ ಫಿಶ್’ಗೆ ಶಸ್ತ್ರ ಚಿಕಿತ್ಸೆ ಮಾಡಿ ಮನೆ ಮಾತಾಗಿದ್ದಾರೆ.

1 ಗ್ರಾಂ ತೂಕದ ಗೋಲ್ಡ್ ಫಿಶ್ ಹೊಟ್ಟೆಯಲ್ಲಿದ್ದ ಟ್ಯೂಮರ್’ನ್ನು ಸೋನ್ಯಾ ಮೈಲ್ಸ್ ಯಶಸ್ವಿಯಾಗಿ ತೆಗೆದಿದ್ದು, ಈ ಮೀನು ಇದೀಗ ವಿಶ್ವದ ಅತ್ಯಂತ ಚಿಕ್ಕ ರೋಗಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಒಂದು ಸಣ್ಣ ಪೈಪ್ ಬಳಸಿ ಗೋಲ್ಡ್ ಫಿಶ್ ಟ್ಯೂಮರ್’ನ್ನು ಹೊರ ತೆಗೆಯಲಾಗಿದ್ದು, 40 ನಿಮಿಷಗಳ ಈ ಆಪರೇಶನ್’ಗಾಗಿ ಒಟ್ಟು 8,800 ರೂ. ಖರ್ಚು ಮಾಡಲಾಗಿದೆ.

Follow Us:
Download App:
  • android
  • ios