ಕೂದಲ ಎಲ್ಲ ಸಮಸ್ಯೆಗೂ ದೇಸಿ ತುಪ್ಪದಲ್ಲಿದೆ ಪರಿಹಾರ! ಟ್ರೈ ಮಾಡಿ ಹೇಳಿ..

ಕೂದಲ ಸಮಸ್ಯೆ ಬಹಳ ಸಾಮಾನ್ಯ. ಒಬ್ಬರಿಗೆ ಕೂದಲುದುರುವ ಸಮಸ್ಯೆಯಾದರೆ ಮತ್ತೊಬ್ಬರಿಗೆ ಹೊಟ್ಟು, ತಲೆತುರಿಕೆ . ಇನ್ನೊಬ್ಬರಿಗೆ ಪೇಲವಗೊಂಡ ಕೂದಲು ಸಮಸ್ಯೆಯಾಗಬಹುದು. ಕೂದಲಿನ ಯಾವುದೇ ಸಮಸ್ಯೆಯನ್ನು ಪರಿಹರಿಸುವ ಶಕ್ತಿ ದೇಸಿ ತುಪ್ಪಕ್ಕಿದೆ ಎಂದು ನಿಮಗೆ ಗೊತ್ತೇ?

Desi ghee is the solution to all hair problems skr

ಕೂದಲಿಲ್ಲದವರಿಗೆ ಇಲ್ಲ ಎಂಬುದಷ್ಟೇ ಸಮಸ್ಯೆಯಾದರೆ ಇದ್ದವರ ಸಮಸ್ಯೆ ಹಲವು. ಅವು ಒಣಗಿದಂತಿರುವುದು, ಉದುರುವುದು, ಬಿಳಿಯಾಗುವುದು, ಹೊಟ್ಟು ಹೇನಿನ ಕಾಟ, ಬೆಳೆಯೋಲ್ಲ.. ಹೀಗೆ ಕೂದಲಿನ ಸಮಸ್ಯೆಗಳು ಮುಗಿಯುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಮಾಲಿನ್ಯ, ಒತ್ತಡ ಮತ್ತು ತಪ್ಪು ಜೀವನಶೈಲಿಯಿಂದಾಗಿ ಈ ಸಮಸ್ಯೆಗಳು ಮತ್ತೂ ಹೆಚ್ಚು. 

ಕೂದಲು ನಮ್ಮ ಸೌಂದರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸುಂದರವಾದ ಮತ್ತು ಆರೋಗ್ಯಕರ ಕೂದಲನ್ನು ಬಯಸುತ್ತಾರೆ. ಈ ಕೂದಲ ಆರೋಗ್ಯಕ್ಕಾಗಿ ನೀವು ಸಾಕಷ್ಟು ಔಷಧಿಗಳನ್ನು, ಶಾಂಪೂಗಳನ್ನು, ಮನೆಮದ್ದನ್ನೂ ಪ್ರಯತ್ನಿಸಿರಬಹುದು. ಆದರೆ, ದೇಸಿ ತುಪ್ಪ ಟ್ರೈ ಮಾಡಿದ್ದೀರಾ?

ಇಲ್ಲ ಅಲ್ವಾ? ಕೂದಲಿನ ಬಹುತೇಕ ಸಮಸ್ಯೆಗಳಿಗೆ ದೇಸಿ ತುಪ್ಪದಲ್ಲಿದೆ ಪರಿಹಾರ. ದೇಸಿ ತುಪ್ಪವನ್ನು ಕೂದಲ ಆರೋಗ್ಯಕ್ಕಾಗಿ ಹೇಗೆ ಬಳಸಬೇಕು, ಎಷ್ಟು ಬಾರಿ ಅನ್ವಯಿಸಬೇಕು ಎಲ್ಲ ವಿವರಗಳೂ ಇಲ್ಲಿವೆ.

ಒತ್ತಡ ಎಷ್ಟೇ ಇರ್ಲಿ, ಈ ಫುಡ್ ತಿಂದ್ರೆ ಎಲ್ಲ ನಿವಾರಣೆ ಆಗುತ್ತೆ; ಇದ್ರಲ್ಲಿವೆ ಆ್ಯಂಟಿ ಡಿಪ್ರೆಸೆಂಟ್ಸ್

ಗೀ ಮಸಾಜ್
ಬಿಸಿ ತುಪ್ಪದಿಂದ ಕೂದಲಿಗೆ ಮಸಾಜ್ ಮಾಡುವುದರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದರಿಂದಾಗಿ ಕೂದಲು ವೇಗವಾಗಿ ಬೆಳೆಯುತ್ತದೆ. ತುಪ್ಪವು ಆರೋಗ್ಯಕರ ಕೊಬ್ಬನ್ನು ಹೊಂದಿದ್ದು ಅದು ಕೂದಲಿಗೆ ಪೋಷಕಾಂಶಗಳನ್ನು ನೀಡುತ್ತದೆ. ಆದ್ದರಿಂದ ತುಪ್ಪವು ಕೂದಲಿನ ನೈಸರ್ಗಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆಂಟಿಆಕ್ಸಿಡೆಂಟ್ ಮತ್ತು ಕೊಬ್ಬಿನಾಮ್ಲ ಗುಣಲಕ್ಷಣಗಳು ತುಪ್ಪದಲ್ಲಿ ಕಂಡುಬರುತ್ತವೆ. ಈ ಎರಡೂ ಅಂಶಗಳು ಕೂದಲು ಮತ್ತು ನೆತ್ತಿಗೆ ತುಂಬಾ ಪ್ರಯೋಜನಕಾರಿ.

ಕೂದಲಿಗೆ ತುಪ್ಪವನ್ನು ಹಚ್ಚುವುದರಿಂದ ಆಗುವ ಪ್ರಯೋಜನಗಳು
ಕೂದಲನ್ನು ಪೋಷಿಸುತ್ತದೆ: ತುಪ್ಪದಲ್ಲಿ ವಿಟಮಿನ್ ಎ, ಇ, ಜೊತೆಗೆ ಪ್ರೊಟೀನ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಇದ್ದು, ಇವು ಕೂದಲಿಗೆ ಪೋಷಣೆ ನೀಡುತ್ತವೆ.
ಕೂದಲು ಉದುರುವುದನ್ನು ತಡೆಯುತ್ತದೆ: ತುಪ್ಪದಲ್ಲಿರುವ ವಿಟಮಿನ್ ಇ ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ನೆತ್ತಿಯನ್ನು ಬಲಪಡಿಸುತ್ತದೆ.
ತಲೆಹೊಟ್ಟು ಹೋಗಲಾಡಿಸುತ್ತದೆ: ತುಪ್ಪದ ಮಸಾಜ್ ಸತ್ತ ಚರ್ಮಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಕೂದಲಿನಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ, ಇದು ತಲೆ ಹೊಟ್ಟು ತೆಗೆದು ಹಾಕುತ್ತದೆ.
ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ: ತುಪ್ಪವು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ.
ಕೂದಲಿಗೆ ಹೊಳಪನ್ನು ತರುತ್ತದೆ: ನಿಯಮಿತವಾಗಿ ತುಪ್ಪವನ್ನು ಅನ್ವಯಿಸುವುದರಿಂದ ಕೂದಲಿನ ಹೊಳಪು ಹೆಚ್ಚಾಗುತ್ತದೆ ಮತ್ತು ಅವುಗಳನ್ನು ಮೃದುಗೊಳಿಸುತ್ತದೆ.

Business Idea: ಬಾಯಾರಿದವರಿಗೆ ಜ್ಯೂಸ್ ಕೊಟ್ಟು ಹಣ ಗಳಿಸಿ,
 
ದೇಸಿ ತುಪ್ಪವನ್ನು ಬಳಸುವ ಸರಿಯಾದ ವಿಧಾನ
ಸ್ವಲ್ಪ ದೇಸಿ ತುಪ್ಪವನ್ನು ತೆಗೆದುಕೊಂಡು ಅದನ್ನು ಲಘುವಾಗಿ ಬಿಸಿ ಮಾಡಿ. ಬಿಸಿ ತುಪ್ಪ ಕೂದಲಿನ ರಂಧ್ರಗಳಲ್ಲಿ ಚೆನ್ನಾಗಿ ಹೀರಲ್ಪಡುತ್ತದೆ. ದೇಸಿ ತುಪ್ಪದಿಂದ ನಿಮ್ಮ ನೆತ್ತಿ ಮತ್ತು ಕೂದಲಿನ ಬೇರುಗಳನ್ನು ಮಸಾಜ್ ಮಾಡಿ. ಇದನ್ನು ನಿಧಾನವಾಗಿ ಅನ್ವಯಿಸಿ ಇದರಿಂದ ಅದು ನೆತ್ತಿಯಲ್ಲಿ ಚೆನ್ನಾಗಿ ಹೀರಲ್ಪಡುತ್ತದೆ. ತುಪ್ಪವು ಕನಿಷ್ಠ ಒಂದು ಗಂಟೆ ಅಥವಾ ರಾತ್ರಿ ಪೂರ್ತಿ ಕೂದಲಿನಲ್ಲಿ ಉಳಿಯಲು ಬಿಡಿ. ಇದರಿಂದ ಕೂದಲಿಗೆ ಸಾಕಷ್ಟು ಪೋಷಣೆ ದೊರೆಯುತ್ತದೆ.
ಸಾಮಾನ್ಯ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ, ತುಪ್ಪವನ್ನು ಹಚ್ಚಿದರೆ ಎರಡು ಬಾರಿ ಶಾಂಪೂ ಮಾಡುವುದು ಉತ್ತಮ.
ಬಳಕೆ: ವಾರಕ್ಕೊಮ್ಮೆಯಾದರೂ ದೇಸಿ ತುಪ್ಪವನ್ನು ಬಳಸಿ.

Latest Videos
Follow Us:
Download App:
  • android
  • ios