ಆಕ್ಸಿಜನ್ ಇಲ್ಲದ ಹೊತ್ತಲ್ಲಿ ಡಿಆರ್‌ಡಿಒದ ಹೊಸ ಔಷಧಿ.. ತುರ್ತು ಬಳಕೆ ಅನುಮತಿ

ಕೊರೋನಾ ನಿಯಂತ್ರಣಕ್ಕೆ ಹೊಸ ಔಷಧ/ ವೈದ್ಯಕೀಯ ಆಮ್ಲಜನಕ ಬೇಕಾಗಿಲ್ಲ/ ಡಿಆರ್‌ಡಿಒ  ಸಿದ್ಧಪಡಿಸಿದ ಔಷಧ ತುರ್ತು ಬಳಕೆಗೆ ಅನುಮತಿ/ ರೋಗಿಗಳಿಗೆ ಹೇಗೆ ಲಭ್ಯವಾಗಲಿದೆ ಎಂಬುದನ್ನು ನೋಡಬೇಕಿದೆ.

DCGI gives approval to use 2-DG as adjunct therapy for Covid 19 patients mah

ನವದೆಹಲಿ(ಮೇ 08) ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಹೊಸದೊಂದು ಔಷಧಿ ಹೊಸ ಆಶಾಭಾವ ಮೂಡಿಸಿದೆ.  ಆಕ್ಸಿಜನ್ ಕೊರತೆ ಎಂಬ ಸುದ್ದಿಗಳೆ ಎಲ್ಲ ಕಡೆ ತುಂಬಿರುವಾಗ ಇದೊಂದು ಶುಭ ಸುದ್ದಿ ಇದೆ.

ಕೊರೋನಾದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಅಭಿವೃದ್ಧಿಪಡಿಸಿರುವ ಆಂಟಿ ಕೋವಿಡ್ ಔಷಧದ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ.  2- ಡಿಜಿ ಎಂಬ ಔಷಧವು ಕೋವಿಡ್ -19 ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಜತೆಗೆ ವೈದ್ಯಕೀಯ ಆಮ್ಲಜನಕದ ಅವಲಂಬನೆ ಕಡಿಮೆ ಮಾಡತ್ತದೆ. 

ಕೊರೋನಾ ಪತ್ತೆ ಮಾಡುವ ಮೂರು ವಿಧಾನಗಳು

ಹೈದರಾಬಾದ್‌ನ ಡಾ. ರೆಡ್ಡಿ ಲ್ಯಾಬೋರೆಟರಿ ಸಹಯೋಗದೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತನ್ನ ಅಂಗಸಂಸ್ಥೆ ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (ಐಎನ್‌ಎಂಎಎಸ್ ) ಮೂಲಕ ಔಷಧಿ ಸಿದ್ಧ ಮಾಡಿದೆ.

ಪ್ರಾಯೋಗಿಕ ಪರೀಕ್ಷೆ ನಡೆಸಿ ಅದರ ಫಲಿತಾಂಶದ ಆಧಾರದ ಮೇಲೆ  ಈ ಔಷಧಕ್ಕೆ ಒಪ್ಪಿಗೆ ಸಿಕ್ಕಿದೆ.  ಏಪ್ರಿಲ್ 2020 ರಲ್ಲಿ, INMAS-DRDO ವಿಜ್ಞಾನಿಗಳು ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ (ಸಿಸಿಎಂಬಿ) ಸಹಾಯದಿಂದ ಪಾಸಿಟಿವ್ ರೋಗಿಗಳ ಮೇಲೆ ಪ್ರಯೋಗ ನಡೆಸಿದ್ದರು. SARS-CoV-2 ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಇದು ಕೆಲಸ ಮಾಡುತ್ತದೆ, ವೈರಸ್ ಬೆಳವಣಿಗೆಗೆ ಕಡಿವಾಣ ಹಾಕುತ್ತದೆ  ಎಂಬುದನ್ನು ಮನಗಂಡಿದ್ದರು.

ಕೊರೋನಾಕ್ಕೂ ಹೃದಯಾಘಾತಕ್ಕೂ ಸಂಬಂಧ ಇದೆಯಾ?

ದೇಶದದಲ್ಲಿ ಪ್ರತಿ ದಿನ ನಾಲ್ಕು ಲಕ್ಷ ಹೊಸ ಸೋಂಕಿನ ಪ್ರಕರಣಗಳೂ, ಬೆಡ್ ಕೊರತೆ, ಆಕ್ಸಿಜನ್ ಕೊರತೆ. ಲಸಿಕೆ ಲಭ್ಯತೆ ಇಲ್ಲ ಎಂಬ ಸುದ್ದಿಗಳ ನಡುವೆ ಈ ಮಾಹಿತಿ ಒಂದು ನಿಟ್ಟುಸಿರು ತರಿಸಿದೆ.  ತುರ್ತು ಬಳಕೆ ಅನುಮೋದನೆ ಸಿಕ್ಕಿದ್ದು ರೋಗಿಗಳಿಗೆ ಇದು ಹೇಗೆ ಸಿಗಲಿದೆ ಎಂಬುದನ್ನು ಸರ್ಕಾರವೇ ಸ್ಪಷ್ಟಮಾಡಬೇಕಿದೆ.

"

 

 

Latest Videos
Follow Us:
Download App:
  • android
  • ios