ಬೆಂಗಳೂರಿಗರೇ ಎಚ್ಚರ.. ನಗರದಲ್ಲಿ ಕಳಪೆ ಗುಣಮಟ್ಟದ ಗಾಳಿ ದಾಖಲು

ಬೆಂಗಳೂರಿನಲ್ಲಿ ಬಹುತೇಕ ಕಡೆಗಳಲ್ಲಿ ಉತ್ತಮ ಗಾಳಿಯ ಕೊರತೆ ಕಂಡು ಬಂದಿದೆ. ನಗರದ ಹಲವೆಡೆ ಇವತ್ತು ಕಳಪೆ ಗುಣಮಟ್ಟದ ಗಾಳಿ ದಾಖಲಾಗಿದೆ. ಆ ಬಗ್ಗೆ ಹೆಚ್ಚಿನ ಡೀಟೈಲ್ಸ್ ಇಲ್ಲಿದೆ.

Dangerous For Health:  Bengaluru Air Quality At Poor Category Today Vin

ನಗರದ AQI 210ಕ್ಕೆ ಕುಸಿದಿದ್ದರಿಂದ ಬೆಂಗಳೂರಿನಲ್ಲಿ ಇಂದು ಕಳಪೆ ಗುಣಮಟ್ಟದ ಗಾಳಿ (Poor Air Quality) ದಾಖಲಾಗಿದೆ. ವಾಯು ಸರ್ವೇಕ್ಷಣಾ ಕೇಂದ್ರಗಳ ವರದಿ ಪ್ರಕಾರ, ಬೆಂಗಳೂರಲ್ಲಿ ಕೆಲವೆಡೆ ಮಾತ್ರವೇ ಉಸಿರಾಟಕ್ಕೆ ಯೋಗ್ಯವಾದ ಉತ್ತಮ ಗಾಳಿ ಬೀಸಿದೆ. ಉಳಿದಂತೆ ಸಾಕಷ್ಟು ಕಡೆಗಳಲ್ಲಿ ಉಸಿರಾಟಕ್ಕೆ ಯೋಗ್ಯವಲ್ಲದ, ಅನಾರೋಗ್ಯ ತರಬಹುದಾದ ಗಾಳಿ ಬೀಸಿದೆ ಎನ್ನಲಾಗಿದೆ. ಬೆಂಗಳೂರಿನ ಬಹುತೇಕ ಪ್ರದೇಶಗಳು ಕಳಪೆ" ವಾಯು ಗುಣಮಟ್ಟವನ್ನು ಹೊಂದಿದ್ದು, ಬ್ರಿಗೇಡ್ ರಸ್ತೆ ಮತ್ತು ಬೆಳ್ಳಂದೂರು ಪ್ರದೇಶಗಳು ಅನಾರೋಗ್ಯಕರ ಗಾಳಿಯನ್ನು ಹೊಂದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವರದಿಯ ಪ್ರಕಾರ, PM10, ಸಲ್ಫರ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಓಝೋನ್ ಮತ್ತು ನೈಟ್ರೋಜನ್ ಡೈಆಕ್ಸೈಡ್ ಇಂದು ನಗರದಲ್ಲಿ ಪ್ರಮುಖ ಮಾಲಿನ್ಯಕಾರಕಗಳಾಗಿವೆ.

AQI 100 ಕ್ಕಿಂತ ಕಡಿಮೆ ಇರುವ ಪ್ರದೇಶಗಳು - ಸಂಜಯನಗರ ಮತ್ತು ವೆಂಕಟಾಚಾರಿ ನಗರವಾಗಿದೆ. ಪ್ರಸ್ತುತ ನಗರದಲ್ಲಿ PM2.5 ಸಾಂದ್ರತೆಯು ವಿಶ್ವ ಆರೋಗ್ಯ ಸಂಸ್ಥೆಯ (WHO) 24-ಗಂಟೆಗಳ ಗಾಳಿಯ ಗುಣಮಟ್ಟದ ಮಾರ್ಗಸೂಚಿಗಳು ನೀಡಿದ ಶಿಫಾರಸು ಮಿತಿಗಿಂತ 6.1 ಪಟ್ಟು ಹೆಚ್ಚಾಗಿದೆ.

Delhi Pollution: ಮಿತಿಮೀರಿದ ವಾಯುಮಾಲಿನ್ಯ; ಧೂಮಪಾನಕ್ಕಿಂತಲೂ ಡೇಂಜರಸ್ ಎಂದ ತಜ್ಞರು

AQI ವೆಬ್‌ಸೈಟ್ ಈ ವಾರ ಗುರುವಾರದಿಂದ ಶನಿವಾರದವರೆಗೆ ಬೆಂಗಳೂರಿನಲ್ಲಿ ಮಳೆಯ (Rain) ಮುನ್ಸೂಚನೆ ನೀಡಿದೆ.  ಬೆಂಗಳೂರಿನಲ್ಲಿ ಜನಸಂಖ್ಯೆ ಜೊತೆಗೆ ವಾಹನಗಳ ಸಂಖ್ಯೆಯೂ ಏರುಗತಿಯಲ್ಲಿದೆ. ಹೀಗಾಗಿ ಸಹಜವಾಗಿಯೇ ವಾಯು ಮಾಲಿನ್ಯ ಹೆಚ್ಚಳವಾಗಿದೆ. ಸಾಮಾನ್ಯ ದಿನಗಳಲ್ಲಿ ವಾಹನ ದಟ್ಟಣೆ, ಹೊಗೆ ನಡುವೆಯು ಸಿಲ್ಕ್‌ಬೋರ್ಡ್, ಜಯನಗರ ಐದನೇ ಬ್ಲಾಕ್ ಹಾಗೂ ಇನ್ನಿತರ ಕೆಲವೇ ಪ್ರದೇಶ ಹೊರತುಪಡಿಸಿದರೆ ಉಳಿದೆಡೆ ಉತ್ತಮ ಗಾಳಿ ಕಂಡು ಬರುತ್ತದೆ.

ವಾಯುಗುಣಮಟ್ಟ ಸೂಚ್ಯಂಕ ತಿಳಿಯುವುದು ಹೇಗೆ ?
ವಾಯುಗುಣಮಟ್ಟ ಸೂಚ್ಯಂಕ (AQI) 0-50 ಇದ್ದರೆ ಗಾಳಿ ಉತ್ತಮವಾಗಿದೆ ಎನ್ನಬಹುದು. AQI ಮಟ್ಟ 50-100ರ ಒಳಗೆ ಇದ್ದರೆ ತೃಪ್ತಿಕರ, AQI ಮಟ್ಟ 100 ರಿಂದ 150 ಇದ್ದರೆ ಅದನ್ನು ಸಾಧಾರಣ ಮತ್ತು ಕಳಪೆ ಗುಣಮಟ್ಟದ ಗಾಳಿ ಎಂದು ಕರೆಯಲಾಗುತ್ತದೆ.

ದೆಹಲಿಯಲ್ಲೂ ಕಳಪೆ ಗುಣಮಟ್ಟದ ಗಾಳಿ
ಇನ್ನೊಂದೆಡೆ ದೆಹಲಿಯಲ್ಲಿ ಮಾಲಿನ್ಯದ ಮಟ್ಟವು ಬುಧವಾರದಂದು ಅತ್ಯಂತ ಕಳಪೆ ವರ್ಗದಲ್ಲಿಯೇ ಉಳಿದಿದೆ. ಬೆಳಗ್ಗೆ 7 ಗಂಟೆಯ ವಾಯು ಗುಣಮಟ್ಟ ಸೂಚ್ಯಂಕ (AQI) 369 ಆಗಿದೆ. ಚಳಿಗಾಲದ (Winter) ಆರಂಭದೊಂದಿಗೆ ವಾಯುಮಾಲಿನ್ಯವು ಹದಗೆಟ್ಟಿದ್ದರಿಂದ ನಿನ್ನೆ ಮತ್ತು ದಟ್ಟವಾದ ಹೊಗೆ ರಾಷ್ಟ್ರ ರಾಜಧಾನಿಯನ್ನು ಆವರಿಸಿದೆ. ದೆಹಲಿಯಲ್ಲಿ ಕಳೆದ ತಿಂಗಳ ಕೊನೆಯಲ್ಲಿ ವಾಯುವಿನ ಗುಣಮಟ್ಟ ರೆಡ್‌ಜೋನ್‌ಗೆ ತಲುಪಿತ್ತು.

Pollution in Delhi: ಮಿತಿಮೀರಿದ ಮಾಲಿನ್ಯ, ರೆಡ್‌ ಜೋನ್‌ ಸನಿಹ ದೆಹಲಿ!

ವಾಯುಮಾಲಿನ್ಯದಿಂದ ಆರೋಗ್ಯ ಮೇಲೆ ತಂಬಾಕಿಗಿಂತಲೂ ಹೆಚ್ಚು ಪರಿಣಾಮ
ದೆಹಲಿ-ಎನ್‌ಸಿಆರ್‌ನಲ್ಲಿ ಮಾಲಿನ್ಯದ ಮಟ್ಟವು ಅಪಾಯಕಾರಿ ಮಟ್ಟವನ್ನು ತಲುಪಿದ್ದು, ಇದು ತಂಬಾಕು ಹೊಗೆಗಿಂತ ಜನರ ಆರೋಗ್ಯದ (Health) ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ಏಮ್ಸ್‌ನ ಮಾಜಿ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ. ದೆಹಲಿ ಹೊಗೆಯ ತೀವ್ರತೆ ಎಷ್ಟಿದೆಯೆಂದರೆ ಇದು ಆರೋಗ್ಯದ ಮೇಲೆ ಅತಿ ಕೆಟ್ಟ ಪರಿಣಾಮ (Effect) ಬೀರಬಹುದು ಹೀಗಾಗಿ ಕೋವಿಡ್‌ನಿಂದ ಚೇತರಿಸಿಕೊಂಡ ರೋಗಿಗಳಿಗೆ ಹೆಚ್ಚಿನ ಕಾಳಜಿ (Care) ವಹಿಸಲು ವೈದ್ಯರು ಸಲಹೆ ನೀಡಿದ್ದಾರೆ. ಜನರು ಮನೆಯೊಳಗೆ ಇರುವಂತೆ ಒತ್ತಾಯಿಸಿದ್ದಾರೆ.

ಪ್ರತಿ ವರ್ಷ 1.24 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವಾಯು ಮಾಲಿನ್ಯದಿಂದ ಸಾವು
ದುರದೃಷ್ಟವಶಾತ್ ಗಾಳಿಯ ಗುಣಮಟ್ಟ ಈ ವರ್ಷ ತುಂಬಾ ಕೆಟ್ಟದಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಇದು 900 ಕ್ಕೆ ಏರಿದ ಸಂದರ್ಭಗಳಿವೆ. ಸಹಜವಾಗಿ, ಇದು ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂಬುದು ಆತಂಕಕಾರಿಯಾಗಿದೆ. 2017 ರಲ್ಲಿ ಪ್ರಕಟವಾದ ಒಂದು ಪತ್ರಿಕೆಯು ಭಾರತದಲ್ಲಿ ಪ್ರತಿ ವರ್ಷ 1.24 ಮಿಲಿಯನ್‌ಗಿಂತಲೂ ಹೆಚ್ಚು ಜನರು ವಾಯು ಮಾಲಿನ್ಯದಿಂದ ಸಾಯುತ್ತಿದ್ದಾರೆ (Death) ಎಂದು ಸೂಚಿಸಿದೆ. ಆದ್ದರಿಂದ ಇದು ದೊಡ್ಡ ಸಂಖ್ಯೆಯಾಗಿದ್ದು, ವಾಯುಮಾಲಿನ್ಯ ಹೆಚ್ಚು ಅಂಗವೈಕಲ್ಯವನ್ನು ಉಂಟುಮಾಡುತ್ತದೆ ಎಂದು ನಾವು ತಿಳಿದುಕೊಳ್ಳಬಹುದು ಎಂದಿದ್ದಾರೆ.

Latest Videos
Follow Us:
Download App:
  • android
  • ios