Delhi Pollution: ಮಿತಿಮೀರಿದ ವಾಯುಮಾಲಿನ್ಯ; ಧೂಮಪಾನಕ್ಕಿಂತಲೂ ಡೇಂಜರಸ್ ಎಂದ ತಜ್ಞರು

ದೆಹಲಿ-ಎನ್‌ಸಿಆರ್‌ನಲ್ಲಿ ಮಾಲಿನ್ಯದ ಮಟ್ಟವು ಅಪಾಯಕಾರಿ ಮಟ್ಟವನ್ನು ತಲುಪಿದ್ದು, ಇದು ತಂಬಾಕು ಹೊಗೆಗಿಂತ ಜನರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ಏಮ್ಸ್‌ನ ಮಾಜಿ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Air Pollution Affecting Peoples Health More Than Tobacco Smoke: Dr Randeep Guleria Vin

ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದೆ. ಕೇವಲ ಹಗಲಿನಲ್ಲಿ ಮಾತ್ರವಲ್ಲ ರಾತ್ರಿಯಲ್ಲೂ ಮಾಲಿನ್ಯದ ಕಾರಣದಿಂದಾಗಿ ಹೊರಗೆ ತಿರುಗಾಡಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ರಾಜಧಾನಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸುಳಿದಾಡುತ್ತಿರುವ ಧೂಳಿನ ಕಣಗಳು ಆಕಾಶವನ್ನು ಬೂದು ಬಣ್ಣಕ್ಕೆ ತಿರುಗಿಸಿವೆ. ಶನಿವಾರದಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನ.1ರ ವೇಳೆಗ ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ರೆಡ್‌ ಜೋನ್‌ಗೆ ಏರಬಹುದು ಎನ್ನಲಾಗಿದೆ. ನೆರೆಯ ಹಾಗೂ ಪಕ್ಕದ ಪಂಜಾಬ್‌ ರಾಜ್ಯದಲ್ಲಿ ಗೋಧಿ ಬೆಳೆಯ ಅವಶೇಷಗಳನ್ನು ಈ ಸಮಯದಲ್ಲಿ ಸುಡಲಾಗುತ್ತದೆ. 

ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ, ಭಾರತದಾದ್ಯಂತ 16 ನಗರಗಳು ಅತ್ಯಂತ ಕಳಪೆ ಗಾಳಿಯನ್ನು ಹೊಂದಿದ್ದವು, ಸರ್ಕಾರಿ ಮಾಹಿತಿಯ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆಯು (WHO) ಆರೋಗ್ಯಕರವೆಂದು ಪರಿಗಣಿಸುವುದಕ್ಕಿಂತ ಹೆಚ್ಚಿನ ಗಾಳಿಯ ಗುಣಮಟ್ಟದ (Air Quality) ಸಂಖ್ಯೆಯನ್ನು ಟ್ರ್ಯಾಕ್ ಮಾಡಿದೆ. ಇತರ 14 ನಗರಗಳಲ್ಲಿನ ಗಾಳಿಯು ಕೆಟ್ಟದಾಗಿತ್ತು, ಇದು ದೇಶದ ಆರು ಹಂತದ ವಾಯು ಗುಣಮಟ್ಟದ ಪ್ರಮಾಣದಲ್ಲಿ ಕೆಟ್ಟದಾಗಿದೆ. ಶುಕ್ರವಾರ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಾಥಮಿಕ ಶಾಲೆಗಳನ್ನು (School) ಮುಚ್ಚುವಂತೆ ಸೂಚಿಸಿದರು ಮತ್ತು ಹಿರಿಯ ಮಕ್ಕಳಿಗಾಗಿ ಹೊರಾಂಗಣ ಚಟುವಟಿಕೆಗಳನ್ನು ನಿಲ್ಲಿಸುವಂತೆ ಶಾಲೆಗಳಿಗೆ ತಿಳಿಸಿದರು.

Delhi Air Pollution crisis; ದೆಹಲಿ ಜನರ ಪ್ರಾಣಕ್ಕೆ ವಿಷಗಾಳಿ ಕಂಟಕ!

ವಾಯುಮಾಲಿನ್ಯದಿಂದ ಆರೋಗ್ಯ ಮೇಲೆ ತಂಬಾಕಿಗಿಂತಲೂ ಹೆಚ್ಚು ಪರಿಣಾಮ
ದೆಹಲಿ-ಎನ್‌ಸಿಆರ್‌ನಲ್ಲಿ ಮಾಲಿನ್ಯದ ಮಟ್ಟವು ಅಪಾಯಕಾರಿ ಮಟ್ಟವನ್ನು ತಲುಪಿದ್ದು, ಇದು ತಂಬಾಕು ಹೊಗೆಗಿಂತ ಜನರ ಆರೋಗ್ಯದ (Health) ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ಏಮ್ಸ್‌ನ ಮಾಜಿ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ. ದೆಹಲಿ ಹೊಗೆಯ ತೀವ್ರತೆ ಎಷ್ಟಿದೆಯೆಂದರೆ ಇದು ಆರೋಗ್ಯದ ಮೇಲೆ ಅತಿ ಕೆಟ್ಟ ಪರಿಣಾಮ (Effect) ಬೀರಬಹುದು ಹೀಗಾಗಿ ಕೋವಿಡ್‌ನಿಂದ ಚೇತರಿಸಿಕೊಂಡ ರೋಗಿಗಳಿಗೆ ಹೆಚ್ಚಿನ ಕಾಳಜಿ (Care) ವಹಿಸಲು ವೈದ್ಯರು ಸಲಹೆ ನೀಡಿದ್ದಾರೆ. ಜನರು ಮನೆಯೊಳಗೆ ಇರುವಂತೆ ಒತ್ತಾಯಿಸಿದ್ದಾರೆ.

ಮಾಲಿನ್ಯದ ಹೊಗೆ ತಂಬಾಕು ಹೊಗೆಗಿಂತ ಹೆಚ್ಚು ಅಂಗವೈಕಲ್ಯವನ್ನು ಉಂಟುಮಾಡುತ್ತದೆ. ನಾವು ಧೂಮಪಾನದ (Smoking) ಬಗ್ಗೆ ಹೆಚ್ಚು ಮಾತನಾಡುತ್ತೇವೆ, ಆದರೆ ತಂಬಾಕು ಸೇವನೆಯ ಬಗ್ಗೆ ಅಲ್ಲ. ಆದರೆ ಈಗ ಅಂಗವೈಕಲ್ಯದ ಹೊರೆಯು ವಾಯುಮಾಲಿನ್ಯದ ಕಡೆಗೆ ಹೆಚ್ಚು ಸ್ಥಳಾಂತರಗೊಂಡಿದೆ ಮತ್ತು ಇದು ಧೂಮಪಾನಕ್ಕೆ ಹೋಲಿಸಿದರೆ ದೊಡ್ಡ ಸಮಸ್ಯೆಯನ್ನು ಉಂಟುಮಾಡುತ್ತಿದೆ ಎಂದು ಡಾ.ರಂದೀಪ್ ಗುಲೇರಿಯಾ ಹೇಳಿದರು.

ಪ್ರತಿ ವರ್ಷ 1.24 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವಾಯು ಮಾಲಿನ್ಯದಿಂದ ಸಾವು
ದುರದೃಷ್ಟವಶಾತ್ ಗಾಳಿಯ ಗುಣಮಟ್ಟ ಈ ವರ್ಷ ತುಂಬಾ ಕೆಟ್ಟದಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಇದು 900 ಕ್ಕೆ ಏರಿದ ಸಂದರ್ಭಗಳಿವೆ. ಸಹಜವಾಗಿ, ಇದು ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂಬುದು ಆತಂಕಕಾರಿಯಾಗಿದೆ. 2017 ರಲ್ಲಿ ಪ್ರಕಟವಾದ ಒಂದು ಪತ್ರಿಕೆಯು ಭಾರತದಲ್ಲಿ ಪ್ರತಿ ವರ್ಷ 1.24 ಮಿಲಿಯನ್‌ಗಿಂತಲೂ ಹೆಚ್ಚು ಜನರು ವಾಯು ಮಾಲಿನ್ಯದಿಂದ ಸಾಯುತ್ತಿದ್ದಾರೆ (Death) ಎಂದು ಸೂಚಿಸಿದೆ. ಆದ್ದರಿಂದ ಇದು ದೊಡ್ಡ ಸಂಖ್ಯೆಯಾಗಿದ್ದು, ವಾಯುಮಾಲಿನ್ಯ ಹೆಚ್ಚು ಅಂಗವೈಕಲ್ಯವನ್ನು ಉಂಟುಮಾಡುತ್ತದೆ ಎಂದು ನಾವು ತಿಳಿದುಕೊಳ್ಳಬಹುದು ಎಂದಿದ್ದಾರೆ.

Delhi Pollution: ಸರ್ಕಾರಕ್ಕೆ 24 ಗಂಟೆ ಟೈಂ ಕೊಟ್ಟ ಸುಪ್ರೀಂ ಕೋರ್ಟ್

ಶುಕ್ರವಾರದಂದು ದೆಹಲಿಯನ್ನು ಹೊಗೆಯ ದಪ್ಪನೆಯ ಪದರವು ಆವರಿಸಿದೆ. ಸಂಜೆ 4 ಗಂಟೆಗೆ, ದೆಹಲಿಯ 24-ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 447 ರಷ್ಟಿತ್ತು. PM2.5 ಎಂದು ಕರೆಯಲ್ಪಡುವ ಶ್ವಾಸಕೋಶಕ್ಕೆ (Lungs) ಹಾನಿ ಮಾಡುವ ಸೂಕ್ಷ್ಮ ಕಣಗಳ ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ 470 ಮೈಕ್ರೊಗ್ರಾಮ್‌ಗಳಷ್ಟಿತ್ತು, ಇದು ಸುರಕ್ಷಿತ ಮಿತಿಗಿಂತ ಎಂಟು ಪಟ್ಟು ಹೆಚ್ಚಾಗಿದೆ. ಅನೇಕ ಪ್ರದೇಶಗಳಲ್ಲಿ ಪ್ರತಿ ಘನ ಮೀಟರ್‌ಗೆ 60 ಮೈಕ್ರೋಗ್ರಾಂನಷ್ಟಿದೆ ಎಂದು ತಿಳಿದುಬಂದಿದೆ..

Latest Videos
Follow Us:
Download App:
  • android
  • ios