ಹಸಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನಿ

ಹಿಂದೆಲ್ಲ ಔಷಧಿಗಳನ್ನು ಹಸಿ ಹೊಟ್ಟೇಲೇ ತಿನ್ನೋದಕ್ಕೆ ಹೇಳುತ್ತಿದ್ದರು. ಯಾಕೆಂದರೆ ಈ ಟೈಮ್ ನಲ್ಲಿ ತಿಂದರೆ ಹೆಚ್ಚು ಪರಿಣಾಮಕಾರಿ. ಬೇಗ ರಿಸಲ್ಟ್ ಗೊತ್ತಾಗುತ್ತೆ ಅನ್ನೋದು ರಿಯಲ್ ಕಾರಣ. ಇವತ್ತಿಗೂ ನಾಟಿ ಮದ್ದು ಕೊಡೋರು ಬೆಳಗ್ಗೆ ಹಸಿ ಹೊಟ್ಟೆಯಲ್ಲಿ ಔಷಧಿ ತಗೊಳ್ಳೋದನ್ನೇ ಒತ್ತಿ ಹೇಳುತ್ತಾರೆ. ಈ ಬೆಳ್ಳುಳ್ಳಿಯನ್ನೂ ಹಸಿ ಹೊಟ್ಟೆಗೆ ತಿಂದರೆ ಉಪಯೋಗ ಹೆಚ್ಚು. 

 

ಮೇಘನಾ ಐಟಿ ಉದ್ಯೋಗಿ. ಕಳೆದ ತಿಂಗಳು ಸಿಕ್ಕಾಪಟ್ಟೆ ಕೆಲಸದ ಒತ್ತಡ ಇತ್ತು. ಮನೆಯಲ್ಲಿ ಊಟ, ತಿಂಡಿ ಮಾಡ್ಕೊಂಡು ಕೂರುವಷ್ಟು ಟೖಮ್ ಇರಲಿಲ್ಲ. ಹಾಗಾಗಿ ಅವಳು ಆನ್ಲೈನ್‌ನಲ್ಲಿ ಫುಡ್ ತರಿಸಿಕೊಂಡು ತಿನ್ನುತ್ತಿದ್ದಳು. ಮರುದಿನದಿಂದಲೇ ಕೆಟ್ಟ ಆಸಿಡಿಟಿ ಶುರುವಾಯ್ತು. ಡಾಕ್ಟರ್ ಹತ್ರ ಹೋಗುವಷ್ಟು ಟೖಮ್ ಅವಳಿಗಿಲ್ಲ. ಹಾಗಂತ ಈ ಹಿಂಸೆಯನ್ನು ತಡೆದುಕೊಂಡು ಕೂರಕ್ಕಾಗಲ್ಲ. ಆಗ ಅವಳಿಗೆ ನೆನಪಾಗಿದ್ದು ಅಜ್ಜಿ. ಅವರು ಸಣ್ಣಪುಟ್ಟ ನಾಟಿವೖದ್ಯವನ್ನೂ ಮಾಡುತ್ತಾರೆ. ‘ಹಸಿಹೊಟ್ಟೆಗೆ ಬೆಳ್ಳುಳ್ಳಿ ತಿನ್ನು ಮಗ, ಆಮೇಲೆ ಎರಡು ಗ್ಲಾಸ್ ನೀರು ಕುಡೀಲಿಕ್ಕೆ ಮರೀಬೇಡ. ರಾತ್ರಿ ಹದ ಬಿಸಿಯ ಹಾಲು ಕುಡಿ. ಮಧ್ಯಾಹ್ನ ಮಜ್ಜಿಗೆ ಕುಡಿ..’ ಅಂತೆಲ್ಲ ಲೀಸ್ಟ್ ಕೊಟ್ಟರು. ಅಜ್ಜಿ ಹೇಳಿದಂತೆ ಮೇಘನಾ ಹಸಿ ಬೆಳ್ಳುಳ್ಳಿ ನೀರಿನಲ್ಲಿ ಮಾತ್ರೆ ಥರ ನುಂಗಿದಳು. ಆಮೇಲೆ ಉಪ್ಪಿನ ಜೊತೆಗೆ ಬೆಳ್ಳುಳ್ಳಿ ಜಜ್ಜಿ ತಿನ್ನೋದು ಇದಕ್ಕಿಂತ ಪರಿಣಾಮಕಾರಿ ಅಂತ ಗೊತ್ತಾಯ್ತು. ಮರುದಿನದಿಂದ ಆ ಪ್ರಯೋಗವೂ ಆಯಿತು. ಆ ವಾಸನೆಗೆ ತಿನ್ನೋದು ಕಷ್ಟ ಆದರೂ ಆರೋಗ್ಯದ ದೃಷ್ಟಿಯಿಂದ ತಿನ್ನಲಾರಂಭಿಸಿದಳು. ಬಾಯಿ ವಾಸನೆಗೆ ಮತ್ತೊಮ್ಮೆ ಬ್ರೆಶ್‌ ಮಾಡಿ ಲವಂಗ ಅಥವಾ ಏಲಕ್ಕಿ ಕಾಳು ಬಾಯಿಗೆ ಹಾಕ್ಕೊಂಡಳು. ಮೌತ್‌ ಫ್ರೆಶ್ನರ್ ಅವಳ ಸಹಾಯಕ್ಕೆ ಬಂತು. ಅವಳಿಗೇ ಅಚ್ಚರಿಯಾಗುವಂತೆ ಬೆಳ್ಳ್ಳುಳ್ಳಿ ತಿನ್ನಲಾರಂಭಿಸಿದ ಎರಡು ದಿನಗಳಿಗೆಲ್ಲ ಅವಳ ಗ್ಯಾಸ್ಟ್ರಿಕ್‌ ಹೇಳ ಹೆಸರಿಲ್ಲದ ಹಾಗೆ ಮಾಯವಾಯ್ತು. 

 

ನೀವೂ ಇದನ್ನು ಟ್ರೈ ಮಾಡಿ. ಗ್ಯಾಸ್ಟ್ರಿಕ್‌ ಇರಲಿ, ಇಲ್ಲದೇ ಇರಲಿ ಹಸಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನಿ. ಆಸಿಡಿಟಿ ಹತ್ರನೂ ಸುಳಿಯಲ್ಲ. ಆದರೆ ದೊಡ್ಡ ಲೋಟದಲ್ಲಿ ಎರಡು ಲೋಟ ಹದ ಬಿಸಿ ನೀರು ಕುಡಿಯೋದು ಮರೀಬೇಡಿ. 

 

ಡಯಟ್‌ನಲ್ಲಿ ಶುಗರ್ ಡಿಟಾಕ್ಸ್ ಮಾಡಿದರೆ ಏನೆಲ್ಲ ಲಾಭಗಳಿರಬಹುದು?

 

ಲೈಂಗಿಕ ಆಸಕ್ತಿ ಹೆಚ್ಚುತ್ತದೆ

ಇವತ್ತಿ ಸ್ಟ್ರೆಸ್ ಲೈಫ್‌ನಲ್ಲಿ ಎಷ್ಟೋ ಸಂಬಂಧಗಳು ನಲುಗಿ ಹೋಗುತ್ತಿವೆ. ಈ ಪ್ರಾಬ್ಲೆಂ ಈ ಪರಿ ಹೆಚ್ಚಾಗಲು ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳೋದೂ ಮುಖ್ಯ ಕಾರಣ. ಬೆಳ್ಳುಳ್ಳಿಯನ್ನು ಆಹಾರದ ಜೊತೆಗೆ ನಿಯಮಿತವಾಗಿ ಸೇವಿಸುತ್ತಿದ್ದರೆ ಕಾಮಾಸಕ್ತಿ ಹೆಚ್ಚುತ್ತದೆ ಅನ್ನೋದು ಅಧ್ಯಯನಗಳಿಂದ ಸಾಬೀತಾಗಿದೆ. ಮುಖ್ಯವಾಗಿ ಹೆಣ್ಮಕ್ಕಳು ಬೆಳ್ಳುಳ್ಳಿ ಸೇವನೆ ನಿಯಮಿತಗೊಳಿಸಿದರೆ ಕೆಲವೊಂದು ಗೈನಕಾಲಜಿ ಸಮಸ್ಯೆಗಳಿಂದಲೂ ಹೊರಬರಬಹುದು. 

 

ರಕ್ತಶುದ್ಧಿಗೆ ಉತ್ತಮ

ಬೆಳ್ಳುಳ್ಳಿ ರಕ್ತಶುದ್ಧಿಗೆ ಅತ್ಯುತ್ತಮ. ನಿಮಗೆ ಬ್ಲಡ್ ಪ್ರೆಶರ್‌ ಜಾಸ್ತಿ ಇದ್ದರೆ ಇದು ಅದನ್ನು ಸಮತೋಲನಗೊಳಿಸುತ್ತದೆ. ಬ್ಲಡ್ ಪ್ರೆಶರ್ ಹೆಚ್ಚಾಗದ, ಕಡಿಮೆಯಾಗದ ಹಾಗೆ ಮಾಡಿ ಸಮತೋಲನದಲ್ಲಿರುವ ಹಾಗೆ ಮಾಡುತ್ತೆ. 

 

ನಿಮ್ಮ ಆರೋಗ್ಯಕ್ಕೂ, ಅದೃಷ್ಟಕ್ಕೂ ಮನೇಲಿ ಇರಲಿ ಈ ಅದ್ಭುತ ಸಸ್ಯ!

 

ನೆಗಡಿ, ಕಫ ಸಮಸ್ಯೆ ಕಡಿಮೆ ಮಾಡುತ್ತೆ

ಬೆಳ್ಳುಳ್ಳಿ ಹಾಗೂ ಶುಂಠಿ ಸಮ ಸಮವಾಗಿ ಹಾಕಿ ಕಷಾಯ ಮಾಡಿ ಕುಡಿಯಿರಿ. ನಿಮ್ಮ ನೆಗಡಿ, ಕೆಮ್ಮಿನಂಥ ಸಮಸ್ಯೆ ಕಡಿಮೆಯಾಗುತ್ತೆ. ಈಗಂತೂ ಎಲ್ಲ ಕಡೆ ಕೊರೋನಾದ್ದೇ ಮಾತು. ಸಾರ್ವಜನಿಕ ಸ್ಥಳದಲ್ಲಿ ಸೀನಿದರೆ, ಕೆಮ್ಮಿದರೆ ಪಕ್ಕದಲ್ಲಿರುವವರು ಹೌಹಾರುತ್ತಾರೆ. ಶೀತ, ಕೆಮ್ಮಿನ ಲಕ್ಷಣ ಕಾಣಿಸಿದರೆ ಬೆಳ್ಳುಳ್ಳಿ ಕಷಾಯ ಸೇವಿಸಿ, ಪ್ರಾಬ್ಲೆಂ ಖತಂ!

 

ಡಿಮೆನ್ಶಿಯಾ, ಅಲ್ಝೀಮರ್ ಬರಲ್ಲ

ನಿತ್ಯವೂ ಆಹಾರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡಿದರೆ ವಯಸ್ಸಾದ ಮೇಲೆ ಮರೆವಿನ ಸಮಸ್ಯೆ ಬಾಧಿಸಲ್ಲ. ಡಿಮೆನ್ಶಿಯಾ, ಅಲ್ಝೖಮರ್ ನಂಥ ಮಾನಸಿಕ ಸಮಸ್ಯೆಗಳು ಬಂದು ನಿಮ್ಮನ್ನು ಹೖರಾಣಾಗಿಸುವ ಸಾಧ್ಯತೆ ಇರಲ್ಲ. 

 

ಎಲ್ಲಕ್ಕಿಂತ ಮುಖ್ಯವಾಗಿ ಹೆಚ್ಚು ಕಾಲ ಬದುಕ್ತೀರಾ

ಸುಮ್ ಸುಮ್ನೇ ರೋಗದಿಂದ ಬಳಲುತ್ತಾ ಹೆಚ್ಚು ಕಾಲ ಬದುಕಿದ್ರೆ ಪ್ರಯೋಜನ ಇಲ್ಲ. ಆದರೆ ನಿತ್ಯವೂ ಬೆಳ್ಳುಳ್ಳಿ ತಿನ್ನುತ್ತಿದ್ದರೆ ದೀರ್ಘಾಯುಸ್ಸು ಸಿಗುತ್ತೆ. ಜೊತೆಗೆ ಕೊನೇ ತನಕ ಆರೋಗ್ಯವಾಗಿಯೂ ಇರುತ್ತೀರಿ. 

 

ಇನ್ಮೇಲಾದ್ರೂ ನಿತ್ಯ ಬೆಳ್ಳುಳ್ಳಿ ಬಳಸಿ. ಹೆಲ್ದಿಯಾಗಿರಿ.