ನಿಮ್ಮ ಆರೋಗ್ಯಕ್ಕೂ, ಅದೃಷ್ಟಕ್ಕೂ ಮನೇಲಿ ಇರಲಿ ಈ ಅದ್ಭುತ ಸಸ್ಯ!
ಲೋಳೆಸರ ಅನೇಕ ಪ್ರಯೋಜನಗಳನ್ನು ನೀಡುವ ಅದ್ಭುತ ಸಸ್ಯಗಳಲ್ಲಿ ಒಂದು. ಅಲೋವೆರಾವನ್ನು ಹೆಚ್ಚಾಗಿ ಸೌಂದರ್ಯ ವರ್ಧಕಗಳಲ್ಲಿ ಬಳಸಲಾಗುತ್ತದೆ. ಆರೋಗ್ಯಕ್ಕೂ ಅಲೋವೆರಾ ಹೇಳಿಮಾಡಿಸಿದ ಸಸ್ಯ. ಆ್ಯಂಟಿ ವೈರಲ್ ಮತ್ತು ಆಂಟಿಯಯೋಟಿಕ್ ಅಂಶಗಳನ್ನು ತುಂಬಿರುವ ಈ ಗಿಡ ಮಲಬದ್ಧತೆಯಿಂದ ಡಯಾಬಿಟಿಸ್ ಅನ್ನೂ ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ವಾಸ್ತು ಶಾಸ್ತ್ರದಲ್ಲೂ ಈ ಸಸ್ಯಕ್ಕೆ ಪ್ರಾಮುಖ್ಯತೆ ಇದೆ. ಸುಲಭವಾಗಿ ಬೆಳೆಯುವ ಈ ಸಸ್ಯ ಮನೆಯಲ್ಲಿ ಒಂದಿದ್ದರೆ ಸಾಕು, ಇವೆ ಹಲವು ಉಪಯೋಗಗಳು.
ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷ ಹೆಚ್ಚಿಸಲು ಅಲೋವೆರಾ ಗಿಡವನ್ನು ಮನೆಯ ದಕ್ಷಿಣ ಯಾ ಉತ್ತರ ದಿಕ್ಕಿನಲ್ಲಿ ನೆಡಲು ವಾಸ್ತುಶಾಸ್ತ್ರ ಸೂಚಿಸುತ್ತದೆ.
ತೂಕ ಇಳಿಸ ಬೇಕಾ ಹಾಗದರೆ ಅಲೋವೆರಾ ಸೇವಿಸಿ ಹಾಗಂತ ಹಲವು ಅಧ್ಯಯನಗಳನ್ನು ಹೇಳುತ್ತವೆ.
ಹಲ್ಲಿನ ಹುಳುಕುಗಳ ವಿರುದ್ದ ಹೋರಾಡುವ ಅಂಶ ಇರುವ ಅಲೋವೆರಾ ಹಲ್ಲು ಮತ್ತು ವಸಡುಗಳಿಗೂ ಒಳ್ಳೆಯದು.
ಸುಟ್ಟಗಾಯಗಳಿಗೆ ತಕ್ಷಣ ಅಲೋವೆರಾ ಹಚ್ಚಿ, ಸೂದಿಂಗ್ ಜೆಲ್ ಆಗಿ ಕಾರ್ಯ ನಿರ್ವಹಿಸುತ್ತದೆ.
ಅಲೋವೆರಾದ ಆ್ಯಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಮೊಡವೆಗಳಿಗೆ ಚಿಕಿತ್ಸೆ ನೀಡಬಲ್ಲದು.
2 ಚಮಚ ಅಲೋವೆರಾ ಜೆಲ್ ಅನ್ನು ಒಂದು ಗ್ಲಾಸ್ ಬಿಸಿ ನೀರಿಗೆ ಹಾಕಿ ಕುಡಿದರೆ ಮಲಬದ್ಧತೆಗೆ ರಾಮಬಾಣ.
ಅರ್ಧ ಕಪ್ ಫ್ರೆಶ್ ಅಲೋವೆರಾ ಜೆಲ್‌ಗೆ ಒಂದು ಕಪ್ ಸಕ್ಕರೆ ಮತ್ತು 2 ಟೇಬಲ್ ಸ್ಪೂನ್ ನಿಬೆ ರಸ ಬೆರೆಸಿದರೆ ಮನೆಯಲ್ಲೇ ನೈಸರ್ಗಿಕ ಸ್ಕ್ರಬ್ ರೆಡಿ.
ವಿಟಮಿನ್ ಸಿ ಮತ್ತು ಇ ಭರಿತ ಅಲೋವೆರಾ ಚರ್ಮವನ್ನು ಆರೋಗ್ಯ ಹಾಗೂ ಕಾಂತಿಯುಕ್ತವಾಗಿ ಇಡುತ್ತದೆ.
ಸಮ ಪ್ರಮಾಣದಲ್ಲಿ ಫ್ರೆಶ್ ಅಲೋವೇರಾ ಜೆಲ್ ಮತ್ತು ಕೊಬ್ಬರಿ ಎಣ್ನೆ ಬೆರೆಸಿ ಹಚ್ಚಿ ಸಾಫ್ಟ್ ಶೈನಿಂಗ್ ಕೂದಲು ನಿಮ್ಮದಾಗುವುದು ಖಚಿತ. .
ಅಲೋವೆರಾ ಅದೃಷ್ಟ ಮತ್ತು ಪಾಸಿಟಿವ್ ಎನರ್ಜಿಯನ್ನು ತರುವ ಸಸ್ಯ. ಇದು ಕೆಟ್ಟ ಅದೃಷ್ಟ ಮತ್ತು ನೆಗಟಿವ್ ವೈಬ್ಸ್‌ಗಳನ್ನು ಹತ್ತಿಕ್ಕುವ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ ಎಂಬುದು ಪ್ರತೀತಿ.