Asianet Suvarna News Asianet Suvarna News

ವಿದೇಶಿ ಗೋವುಗಳು ತಾಯಿಯಲ್ಲ, ಆಂಟಿಗಳು: ಬಂಗಾಳ ಬಿಜೆಪಿ ಮುಖ್ಯಸ್ಥ!

ವಿದೇಶಿ ಗೋವುಗಳು ಆಂಟಿ ಇದ್ದಂತೆ ಎಂದ ಪ.ಬಂಗಾಳ ಬಿಜೆಪಿ ಮುಖ್ಯಸ್ಥ/ ವಿದೇಶಿ ಹಸುಗಳನ್ನು ಪೂಜಿಸುವುದು ಸರಿಯಲ್ಲ ಎಂದ ದಿಲೀಪ್ ಘೋಷ್/ ದೇಶೀಯ ತಳಿಯ ಗೋವಿನ ಹಾಲಿನಲ್ಲಿ ಚಿನ್ನ ಇರುತ್ತದೆ ಎಂದ ದಿಲೀಪ್/ ‘ದೇಸಿ ಹಸುಗಳ ರಕ್ತನಾಳಗಳು ಸೂರ್ಯನ ಬೆಳಕಿನಿಂದ ಚಿನ್ನ ಉತ್ಪಾದಿಸುತ್ತವೆ’/ ವಿದೇಶಿ ತಳಿಯ ಹಸುಗಳು ಮೃಗಗಳು ಎಂದ ದಿಲೀಪ್ ಘೋಷ್/ ‘ರಸ್ತೆಯಲ್ಲಿ ಗೋಮಾಂಸ ತಿನ್ನುವ ಬುದ್ಧಜೀವಿಗಳು ಮನೆಯಲ್ಲಿ ನಾಯಿ ಮಾಂಸ ತಿನ್ನಲಿ’/

West Bengal BJP Chief Dilip Ghosh Says Foreign Cows Not Our Mothers But Aunties
Author
Bengaluru, First Published Nov 5, 2019, 2:42 PM IST

ಬುರ್ದ್ವಾನ್(ನ.05): ದೇಸಿ ತಳಿಯ ಗೋವುಗಳಷ್ಟೇ ನಮ್ಮ ತಾಯಿಯಾಗಿದ್ದು, ವಿದೇಶಿ ಗೋವುಗಳು ನಮಗೆ ಆಂಟಿ ಇದ್ದಂತೆ ಎಂದು ಪ.ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೇಶೀಯ ತಳಿಯ ಗೋವಿನ ಹಾಲಿನಲ್ಲಿ ಚಿನ್ನ ಇರುತ್ತದೆ ಎಂದಿರುವ ದಿಲೀಪ್ ಘೋಷ್, ಇದೇ ಕಾರಣಕ್ಕೆ ಗೋವಿನ ಹಾಲು ಚಿನ್ನದ ಬಣ್ಣದಲ್ಲಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಕರೆದರಷ್ಟೇ ಆದೀತೆ ಗೋಮಾತೆ ಎಂದು?: ಒದ್ದಾಡಿದ್ದಾಳೆ 52 ಕೆಜಿ ಪ್ಲ್ಯಾಸ್ಟಿಕ್ ತಿಂದು!

ದೇಸಿ ಹಸುಗಳ ರಕ್ತನಾಳಗಳು ಸೂರ್ಯನ ಬೆಳಕಿನಿಂದ ಚಿನ್ನ ಉತ್ಪಾದಿಸುತ್ತವೆ. ಹೀಗಾಗಿ ಸ್ಥಳೀಯ ಹಸುಗಳನ್ನು ಮನೆಗಳಲ್ಲಿ ಸಾಕಬೇಕು ಎಂದು ದಿಲೀಪ್ ಸಲಹೆ ನೀಡಿದ್ದಾರೆ.

‘ಗೋವುಗಳು ಸಿಗದಿದ್ದಕ್ಕೆ ಕತ್ತೆಗಳನ್ನು ಕಟ್ ಮಾಡಿ ತಿನ್ನುತ್ತಿದ್ದಾರೆ’

ವಿದೇಶಗಳಿಂದ ಬರುವ ತಳಿಗಳು ಹಸುಗಳಲ್ಲ ಬದಲಿಗೆ ಮೃಗಗಳು ಎಂದಿರುವ ದಿಲೀಪ್, ಅವು ನಮ್ಮ ಗೋಮಾತೆಗಳಲ್ಲ ಆಂಟಿಗಳು ಹೀಗಾಗಿ  ಅಂತವುಗಳನ್ನು ಪೂಜಿಸುವುದು ಒಳ್ಳೆಯದಲ್ಲ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಕೆಲ ಬುದ್ದಿಜೀವಿಗಳು ರಸ್ತೆಯಲ್ಲಿ ಗೋಮಾಂಸ ತಿನ್ನುತ್ತಾರೆ. ಅಂತವರು ಮನೆಯಲ್ಲಿ ನಾಯಿ ಮಾಂಸ ತಿನ್ನಲಿ ಎಂದು ದಿಲೀಪ್ ಘೋಷ್ ವ್ಯಂಗ್ಯವಾಡಿದ್ದಾರೆ.

ಗೋಮಾತೆ ಆಮ್ಲಜನಕ ಸೇವಿಸಿ ಆಮ್ಲಜನಕ ಬಿಡ್ತಾಳೆ: ಮುಖ್ಯಮಂತ್ರಿ!

Follow Us:
Download App:
  • android
  • ios