ಕೊರೋನಾ ಸೋಂಕಿನ ತವರೂರು ಚೀನಾದಲ್ಲಿ ಮತ್ತೆ ಕೋವಿಡ್‌ ಮಹಾಸ್ಪೋಟ ನಡೆದಿದ್ದರೂ ಸದ್ಯದ ಮಟ್ಟಿಗೆ ರಾಜ್ಯ ಸುರಕ್ಷಿತವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಬೆಂಗಳೂರು: ನಗರದಲ್ಲಿ ಸೋಮವಾರ 13 ಜನರಲ್ಲಿ ಕೊರೋನಾ ಸೋಂಕು (Corona virus) ದೃಢಪಟ್ಟಿದೆ. ಪಾಸಿಟಿವಿಟಿ ದರ ಶೇಕಡಾ 2.75 ದಾಖಲಾಗಿದೆ. ಸೋಂಕಿನಿಂದ 24 ಮಂದಿ ಗುಣಮುಖರಾಗಿದ್ದು, ಯಾರೂ ಮೃತಪಟ್ಟ (Death) ವರದಿಯಾಗಿಲ್ಲ. ಸದ್ಯ ನಗರದಲ್ಲಿ 1,539 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ ಇಬ್ಬರು ಆಸ್ಪತ್ರೆಯ (Hospital) ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 521 ಮಂದಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು, 44 ರ್ಯಾಪಿಡ್‌ ಆ್ಯಂಟಿಜಿನ್‌ ಪರೀಕ್ಷೆಗೆ ಮತ್ತು 477 ಮಂದಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಿದ್ದರು. 101 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 5 ಮಂದಿ ಮೊದಲ ಡೋಸ್‌, 14 ಮಂದಿ ಎರಡನೇ ಡೋಸ್‌ ಮತ್ತು 82 ಮಂದಿ ಬೂಸ್ಟರ್‌ ಡೋಸ್‌ ಲಸಿಕೆ (Vaccine) ಪಡೆದಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ನವೆಂಬರ್‌ನಲ್ಲಿ ಕೇವಲ 4 ಕೋವಿಡ್‌ ಸಾವು: ಕರ್ನಾಟಕದಲ್ಲಿ ಅತೀ ಕನಿಷ್ಠ
ಕೊರೋನಾ ಸೋಂಕಿನ ತವರೂರು ಚೀನಾದಲ್ಲಿ ಮತ್ತೆ ಕೋವಿಡ್‌ ಮಹಾಸ್ಪೋಟ ನಡೆದಿದ್ದರೂ ಸದ್ಯದ ಮಟ್ಟಿಗೆ ರಾಜ್ಯ ಸುರಕ್ಷಿತವಾಗಿದೆ. ನವೆಂಬರ್‌ ತಿಂಗಳಿನಲ್ಲಿ ಸೋಂಕಿತರ ನಾಲ್ಕೇ ನಾಲ್ಕು ಸಾವು ಸಂಭವಿಸಿದ್ದು ಕೋವಿಡ್‌ ರಾಜ್ಯ ವ್ಯಾಪಿ ಹಬ್ಬಿದ ಬಳಿಕ ತಿಂಗಳೊಂದರಲ್ಲಿ ವರದಿಯಾದ ಕನಿಷ್ಠ ಸಾವಿನ ಪ್ರಮಾಣ ಇದಾಗಿದೆ. ಹಾಗೆಯೇ ರಾಜ್ಯದ ಕೋವಿಡ್‌ ರಾಜಧಾನಿಯಾಗಿ ಬದಲಾಗಿದ್ದ ಬೆಂಗಳೂರು ನಗರದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಸೋಂಕಿತರ ಸಾವು ಘಟಿಸಿಲ್ಲ.

ಕೊರೋನಾ ವೈರಸ್ ಮಾನವ ನಿರ್ಮಿತ, ಚೀನಾದ ವುಹಾನ್ ಲ್ಯಾಬ್‌ನಿಂದಲೇ ಸೋರಿಕೆ!

2020ರ ಮಾರ್ಚ್‌ 8ಕ್ಕೆ ರಾಜ್ಯದಲ್ಲಿ ಮೊದಲ ಕೋವಿಡ್‌ ಪ್ರಕರಣ ದೃಢಪಟ್ಟಿತ್ತು. ಮಾರ್ಚ್‌ 12ಕ್ಕೆ ಕಲಬುರಗಿಯ ವೃದ್ಧರೊಬ್ಬರು ಸೋಂಕು ಉಲ್ಬಣಿಸಿ ಮೃತಪಟ್ಟಿದ್ದು ದೇಶದಲ್ಲೇ ಮೊದಲ ಕೋವಿಡ್‌ ಸಾವಾಗಿತ್ತು. ಆ ತಿಂಗಳಲ್ಲಿ ಮೂವರು ಸಾವನ್ನಪ್ಪಿದ್ದರು. ಸೋಂಕು ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಪ್ರತಿ ತಿಂಗಳು ಸಾವಿರಗಟ್ಟಲೆ ಜನ ಮೃತರಾಗಿದ್ದರು. ಆದರೆ ಇತ್ತಿಚಿನ ದಿನಗಳಲ್ಲಿ ಕೊರೋನಾ ವೈರಾಣು ವಿವಿಧ ರೂಪಾಂತರ ಹೊಂದುತ್ತಿದ್ದರೂ ಸೋಂಕಿತರಿಗೆ ಅಪಾಯಕಾರಿಯಾಗಿ (Dangerous) ಪರಿಣಮಿಸಿಲ್ಲ ಎಂಬುದನ್ನು ಅಂಕಿ-ಅಂಶಗಳು ಪುಷ್ಟಿಕರಿಸಿವೆ.

ಎಪ್ರಿಲ್ ತಿಂಗಳಿನಲ್ಲಿ ಸಾವಿನ ಸಂಖ್ಯೆ ಏರಿತ್ತು
ಕಳೆದ ಏಪ್ರಿಲ್‌ ತಿಂಗಳಿನಲ್ಲಿ 2,108 ಪ್ರಕರಣಗಳು ಪತ್ತೆಯಾಗಿ ಐವರು ಮೃತಪಟ್ಟಿದ್ದರು. ಆದರೆ ಆ ಬಳಿಕದ ತಿಂಗಳಲ್ಲಿ ಮೃತರು ಮತ್ತು ಸೋಂಕಿತರ ಸಂಖ್ಯೆ ಏರುತ್ತ ಸಾಗಿತ್ತು. ಮೇ ತಿಂಗಳಿನಲ್ಲಿ ಆರು ಮಂದಿ ಅಸುನೀಗಿದ್ದು 4,480 ಪ್ರಕರಣ ಪತ್ತೆಯಾಗಿತ್ತು. ಜೂನ್‌ನಲ್ಲಿ ಹತ್ತು ಸಾವು, 17,309 ಪ್ರಕರಣ, ಜುಲೈಯಲ್ಲಿ 29 ಸಾವು, 37,952 ಪ್ರಕರಣ, ಆಗಸ್ಟ್‌ನಲ್ಲಿ ಬರೋಬ್ಬರಿ 97 ಸಾವು, 44,191 ಪ್ರಕರಣ ದಾಖಲಾಗಿತ್ತು.

China Covid: ಚೀನಾದಲ್ಲಿ ಕೋವಿಡ್‌ಗೆ ಇನ್ನೂ 20 ಲಕ್ಷ ಮಂದಿ ಬಲಿಯಾಗುವ ಆತಂಕ !

ಆಗಸ್ಟ್‌ ನಂತರ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ:
ಇದಾದ ಬಳಿಕ ಕಳೆದ ಮೂರು ತಿಂಗಳಿನಿಂದ ಕೋವಿಡ್‌ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆಯಲ್ಲಿ ನಿರಂತರ ಇಳಿಕೆ ಕಂಡುಬಂದಿದೆ. ಸೆಪ್ಟೆಂಬರ್‌ನಲ್ಲಿ 41 ಸಾವು, 13,271 ಪ್ರಕರಣ, ಅಕ್ಟೋಬರ್‌ನಲ್ಲಿ 14 ಸಾವು ಮತ್ತು 4,085 ಪ್ರಕರಣ ವರದಿಯಾಗಿತ್ತು. ಇದೀಗ ನವೆಂಬರ್‌ನಲ್ಲಿ ಅತ್ಯಂತ ಕಡಿಮೆ ಸಾವು ವರದಿಯಾಗಿದ್ದು 2,542 ಪ್ರಕರಣ ಪತ್ತೆಯಾಗಿದೆ. ಒಟ್ಟಾರೆ ರಾಜ್ಯದ ಮರಣ ದರ ಶೇ. 0.15ಕ್ಕೆ ಕುಸಿದಿದೆ. ಒಟ್ನಲ್ಲಿ ಚೀನಾದಲ್ಲಿ ಕೋವಿಡ್ ಸ್ಫೋಟವಾಗಿರೋದ್ರಿಂದ ಆತಂಕಗೊಂಡಿದ್ದ ರಾಜ್ಯದ ಜನರು ಸೋಂಕಿನಲ್ಲಿ ಇಳಿಮುಖವಾಗಿರೋದ್ರಿಂದ ನಿರಾಳವಾಗಿದ್ದಾರೆ.