ಜಗತ್ತನ್ನು ಕೊರೋನಾ ನಡುಗಿಸಿದೆ. ದೇಶಾದ್ಯಂತ ಕೊರೋನಾದಿಂದ ಜನ ನಲುಗಿ ಹೋಗಿದ್ದಾರೆ. ಉದ್ಯಮ, ಆರ್ಥಿಕತೆ, ಆರೋಗ್ಯ ಎಲ್ಲವೂ ದೊಡ್ಡ ಹೊಡೆತ ಎದುರಿಸಿದೆ. ಉಸಿರಾಟದ ತೊಂದರೆ ಕೊರೋನಾ ವೈರಸ್ ತರುವ ಗಂಭೀರ ಸಮಸ್ಯೆ.

ಬಹುಶಃ ಇದುವೇ ಸೀರಿಯಸ್ ಪಾರ್ಟ್ ಕೂಡಾ. ಹಾಗಾದ್ರೆ ಈ ಮೊದಲೇ ಹೃದಯ ಸಂಬಂಧಿ ಕಾಯಿಲೆ ಇದ್ದಾಗ ಕೊರೋನಾ ಎಷ್ಟು ರಿಸ್ಕ್ ಆಗಬಹುದು ಎಂದು ನೀವೇ ಯೊಚಿಸಿ.

ಕಲರಿಂಗ್ ನೋಡೋಕಷ್ಟೇ ಚಂದ: ಮಹಿಳೆಯರಲ್ಲಿ ಕ್ಯಾನ್ಸರ್ ರಿಸ್ಕ್ ಹೆಚ್ಚಿಸುತ್ತೆ ಹೇರ್ ಡೈ..!

ಕೊರೋನಾ ಬಂದ ನಂತರ ಈ ಅವಧಿಯಲ್ಲಿ ಹಾರ್ಟ್ ಎಟ್ಯಾಕ್, ಸ್ಟ್ರೋಕ್‌ನಂತಹ ಪ್ರಕರಣ ಕಡಿಮೆಯಾಗಿದೆ. ಮನೆಯಲ್ಲೇ ಇದ್ದು, ಮನೆ ಊಟ, ಹೊರಗಿನ ಕಲುಷಿತವಿಲ್ಲದೆ ಜನ ಸ್ವಲ್ಪ ಆರೋಗ್ಯವಂತಾಗಿದ್ದಾರೆ ಕೂಡಾ.

ಹೃದಯ ಚಿಕಿತ್ಸೆ ಸಂಬಂಧಿತ ಸಮಸ್ಯೆಗಳು

ಆಸ್ಪತ್ರೆಗಳಿಗೆ ಭೇಟಿ ನೀಡಿ ರಿಸ್ಕ್ ತಗೊಳ್ಳೋ ಬದಲು ಆದಷ್ಟು ಜನ ತಮ್ಮಲ್ಲಿ ಕಾಣಿಸಿಕೊಳ್ಳೋ ಲಕ್ಷಣಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿರುವುದು ದೊಡ್ಡ ಆತಂಕ. ಇದಕ್ಕೆ ಹಲವು ಕಾರಣ ಇರಬಹುದು. ಕರ್ಫ್ಯೂನಿಂದಾಗಿ ಜನ ಓಡಾಟಕ್ಕೆ ಕಷ್ಟಾವಯ್ತು ಎಂಬುದೂ ಕಾರಣವಿರಬಹುದು.

ಕೆಲಸವಿಲ್ಲದೆ ಆರ್ಥಿಕವಾಗಿ ಕಷ್ಟವಾದಾಗ, ಆಸ್ಪತ್ರೆಗೆ ಹೋಗಿ ಅಲ್ಲಿ ಕೊರೋನಾ ಸೇರಿಕೊಂಡರೆ ಅನ್ನೋ ಭಯದಿಂದ ಜನರು ಆದಷ್ಟು ಆಸ್ಪತ್ರೆಯಿಂದ ದೂರವೇ ಉಳಿದಿದ್ದಾರೆ. ಆದರೆ ಇದೇ ಸಂದರ್ಭ ಹೃದಯ ಸಂಬಂಧಿ ಕಾಯಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳುವುದಕ್ಕೂ ಜನ ಹಿಂಜರಿಯುತ್ತಿದ್ದಾರೆ.

ಹದಿಹರೆಯದಲ್ಲಿ ಖಿನ್ನತೆಗೆ ಶಿಕಾರಿಯಾದ್ರೆ ಭವಿಷ್ಯದಲ್ಲಿ ಕಾಡುತ್ತೆ ಹೃದ್ರೋಗ!

ಕೊರೋನಾ ಭಯದಿಂದ ಚಿಕಿತ್ಸೆ ತಡ ಮಾಡಿಕೊಳ್ಳುತ್ತಿದ್ದಾರೆ. ಹೃದಯಾಘಾತ, ಹೃದಯ ವೈಫಲ್ಯದಂತಹ ಗಂಭೀರ ಹೃದಯ ಸಮಸಯೆಗೆ ಆರೈಕೆ ಪಡೆಯುವಲ್ಲಿ ವಿಳಂಬ ಮಾಡುವುದು ಹೆಚ್ಚು ಹಾನಿಯನ್ನುಂಟುಮಾಡುತ್ತದೆ.

ಹೃದಯಾಘಾತಕ್ಕೆ ಬೇಗನೆ ಚಿಕಿತ್ಸೆ ಸಿಗದಿದ್ದರೆ ಸಾವು ಸಂಭವಿಸುವ ಸಾಧ್ಯತೆಯೂ ಇದೆ. 
ಕೊರೋನಾ ವೈರಸ್ ನೇರ ಹೃದಯ ಸ್ನಾಯು ಹಾನಿ ಮಾಡಿ ಮಯೋಕಾರ್ಡಿಟಿಸ್ ಉಂಟುಮಾಡಬಹುದು ಎನ್ನಲಾಗುತ್ತಿದೆ. ಹೃದಯಾಘಾತದ ಅನೇಕ ಲಕ್ಷಣಗಳನ್ನು ಕೊರೋನಾ ಅನುಕರಿಸುತ್ತದೆ ಎಂಬ ಬಗ್ಗೆಯೂ ಸಾಕ್ಷಿ ಸಿಕ್ಕಿದೆ.

ರೋಗಿಗಳ ರಕ್ಷಣೆ ಹೇಗೆ..?

ಅನೇಕ ಆಸ್ಪತ್ರೆಗಳಿ ಈ ಸಂಬಂಧ ಹೆಚ್ಚು ಸಂವೇದನಾಶೀಲವಾಗಿವೆ. ತಮ್ಮ ರೋಗಿಗಳು ಮತ್ತು ಆರೋಗ್ಯ ಕಾರ್ಯಕರ್ತರನ್ನು ವೈರಸ್‌ನಿಂದ ಸುರಕ್ಷಿತವಾಗಿಸಲು ಹಲವು ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿವೆ. ಪಾರ್ಕಿಂಗ್ ಸ್ಥಳ, ತುರ್ತು ವಿಭಾಗದ ಚಿಕಿತ್ಸೆಯ ಸರದಿ, ರೋಗಿಗಳ ಸಂಖ್ಯೆ, ಸೂಕ್ತ ವಾರ್ಡ್‌ಗಳು / ಐಸಿಯುಗಳವರೆಗೆ ಗರಿಷ್ಠಮಟ್ಟದಲ್ಲಿ ಸುರಕ್ಷತೆ ಕಾಪಾಡಿಕೊಳ್ಳಲಾಗುತ್ತಿದೆ.

ಐಸಿಎಂಆರ್ ಮಾರ್ಗಸೂಚಿಯಂತೆ COVID-19 ಪರೀಕ್ಷೆಯನ್ನು ಗಮನಾರ್ಹವಾಗಿ ಹೆಚ್ಚಿಸಿ ಸೋಂಕಿತರನ್ನು ಪ್ರತ್ಯೇಕಿಸಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರು ಸಾಕಷ್ಟು ರಕ್ಷಣಾ ಸಾಧನಗಳನ್ನು ಹೊಂದಿದ್ದಾರೆ. ಭಾರತದಲ್ಲಿ ಆರಂಭದಲ್ಲಿ ಕೊರೋನಾ ಅಗತ್ಯ ಕಿಟ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದರೂ ಈಗ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿ ಬಳಸಲಾಗುತ್ತಿದೆ.

ಸಣ್ಣ ವಯಸ್ಸಲ್ಲೇ ಹೃದ್ರೋಗ ಹೆಚ್ಚೋದ್ಹೇಕೆ? ಫುಡ್, ಲೈಫ್‌ಸ್ಟೈಲ್ ಕಾರಣವೇ?

ನಾವು ಕೊರೋನಾ ಲಾಕ್-ಡೌನ್‌ಗಳೊಂದಿಗೆ ಹೊಂದಿಕೊಳ್ಳುವುದರ ಜೊತೆಗೆ ನಮ್ಮಲ್ಲಿ ಇರುವ ಸೌಲಭ್ಯ ಬಳಸುವುದು ಮುಖ್ಯ. ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಪಡೆದು ಅಪಾಯ ದೂರವಿಡುವುದು ಒಳಿತು. ಹೃದಯಾಘಾತದ ಲಕ್ಷಣಗಳು ಮತ್ತು ರೋಗನಿರ್ಣಯ, ತುರ್ತು ಚಿಕಿತ್ಸೆಯ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು. ಹೃದಯ ಸಂಬಂಧಿತ ಯಾವುದೇ ಲಕ್ಷಣಗಳು ಕಂಡುಬಂದರೆ ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುವುದು ಅಗತ್ಯ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು.