Asianet Suvarna News Asianet Suvarna News

ಕೊರೋನಾ ಭಾರತದಲ್ಲಿ ಸಾವಿರಾರು ಜನರನ್ನು ಸಾಯಿಸೊಲ್ಲ, ಯಾಕೆ ಗೊತ್ತಾ?

ಕೊರೋನಾ ವೈರಸ್‌ನಿಂದ ಸಾವಿರಾರು ಜನ ಬಲಿಯಾಗುವಂಥ ಇಟಲಿಯ ಸೀನ್‌ ಇಲ್ಲಿ ರಿಪೀಟ್‌ ಆಗಲಾರದು ಎಂಬುದು ಭಾರತದ ಹಲವು ವೈದ್ಯರು, ವಿಜ್ಞಾನಿಗಳ ಅಭಿಮತ. ಅದಕ್ಕೆ ಅವರು ಹಲವು ಕಾರಣಗಳನ್ನೂ ನೀಡಿದ್ದಾರೆ.

 

corona virus wont kill thousands in India as in Italy Spain
Author
Bengaluru, First Published Apr 4, 2020, 4:21 PM IST

ಕೊರೋನಾ ವೈರಸ್‌ನಿಂದ ಸಾವಿರಾರು ಜನ ಬಲಿಯಾಗುವಂಥ ಇಟಲಿಯ ಸೀನ್‌ ಇಲ್ಲಿ ರಿಪೀಟ್‌ ಆಗಲಾರದು ಎಂಬುದು ಭಾರತದ ಹಲವು ವೈದ್ಯರು, ವಿಜ್ಞಾನಿಗಳ ಅಭಿಮತ. ಅದಕ್ಕೆ ಅವರು ಹಲವು ಕಾರಣಗಳನ್ನೂ ನೀಡಿದ್ದಾರೆ.

1. ಇಟಲಿಯಲ್ಲಿ ಸಮಸ್ಯೆಯಾದದ್ದು ಸಾಕಷ್ಟು ವೈದ್ಯಕೀಯ ಸೇವೆಯ ಕೊರತೆಯಿಂದ. ಅಲ್ಲಿ ಪರ್ಸನಲ್‌ ಕೇರ್‌ ಅಥವಾ ವೈಯಕ್ತಿಕ ವೈದ್ಯಕೀಯ ಸೇವೆ ನೀಡುವವರ ಸಂಖ್ಯೆ ಕಡಿಮೆಯಿತ್ತು. ಆದರೆ ಭಾರತದಲ್ಲಿ ಹಾಗಲ್ಲ. ತಜ್ಞ ವೈದ್ಯರು ಸಾಕಷ್ಟಿದ್ದಾರೆ. ಜೊತೆಗೆ ಈಗ ದೊಡ್ಡ ಸಂಖ್ಯೆಯಲ್ಲಿ ಯುವ ವೈದ್ಯರು ಮತ್ತು ತರಬೇತಿ ವೈದ್ಯರು ಹಾಗೂ ನರ್ಸ್‌ಗಳನ್ನು ಜೋಡಿಸಿಕೊಳ್ಳಲಾಗಿದೆ.

ಕೊರೋನಾ ಬರದಂತೆ ಮನೆಯಲ್ಲಿ ಮುಳ್ಳುಕಾಯಿ ರಕ್ಷೆ..!

2. ವೆಂಟಿಲೇಟರ್‌ಗಳ ಸಂಖ್ಯೆ ಕಡಿಮೆ ಬೀಳಬಹುದು ಎಂಬ ಭಯವಿತ್ತು. ಆ ಭಯ ಇನ್ನೂ ಸ್ವಲ್ಪ ಇದೆ. ಯಾಕೆಂದರೆ, ಭಾರತದಲ್ಲಿರುವ ವೆಂಟಿಲೇಟರ್‌ಗಳ ಸಂಖ್ಯೆ 50,000 ಮಾತ್ರ. ಆದರೆ ಇದರಲ್ಲಿ ಕೆಲವು ವೆಂಟಿಲೇಟರ್‌ಗಳಲ್ಲಿ ಈಗಾಗಲೇ ಹೃದ್ರೋಗಿಗಳು, ಕ್ರಿಟಿಕಲ್‌ ಆಪರೇಶನ್‌ಗೆ ಒಳಗಾಗಿ ಚೇತರಿಸಿಕೊಳ್ಳುವವವರು, ಅಪಘಾತಕ್ಕೊಳಗಾಗಿ ಮೆದುಳು, ಶ್ವಾಸಕೋಶಕ್ಕೆ ಏಟು ಬಿದ್ದವರು ಅಥವಾ ಅಂಗವೈಫಲ್ಯ ಹೊಂದಿದವರು ಇದ್ದಾರೆ. ಉಳಿದ ವೆಂಟಿಲೇಟರ್‌ಗಳನ್ನು ಬಳಸಬೇಕಿದೆ. ಇಟಲಿಯಲ್ಲಿ ಒಂದೇ ಬಾರಿಗೆ ಸಾವಿರಾರು ಸೋಂಕಿತರು, ಅದರಲ್ಲೂ ವೃದ್ಧರು ಮತ್ತು ಡಯಾಬಿಟಿಸ್‌- ಹೃದಯರೋಗಗಳು ಇದ್ದ ರೋಗಿಗಳು ಏಕಕಾಲಕ್ಕೆ ಆಸ್ಪತ್ರೆಗಳಿಗೆ ಮುತ್ತಿಗೆ ಹಾಕಿದರು. ಅವರಲ್ಲಿ ಹೆಚ್ಚಿನವರಿಗೆ ಸ್ಥಿತಿ ಗಂಭೀರವಾಗಿತ್ತು. ಹತ್ತು ವೆಂಟಿಲೇಟರ್‌ಗಳು ಇದ್ದಲ್ಲಿ ನೂರು ಜನ ಅದಕ್ಕಾಗಿ ಮುತ್ತಿಗೆ ಹಾಕಿದರೆ ಏನಾದೀತು? ಹಾಗೇ ಆಯಿತು. ಆದರೆ ಭಾರತದಲ್ಲಿ ಎರಡು ಪ್ರಮುಖ ಕಂಪನಿಗಳು ಈಗಾಗಲೇ ಹೆಚ್ಚಿನ ಪ್ರಮಾಣದ ವೆಂಟಿಲೇಟರ್‌ ಉತ್ಪಾದನೆಯಲ್ಲಿ ತೊಡಗಿವೆ. ಬೆಂಗಳೂರಿನ ಸ್ಕ್ಯಾನ್‌ಕೇರ್ ಹಾಗೂ ದಿಲ್ಲಿಯ ಆಗ್ವಾ ಕಂಪನಿಗಳು ತಯಾರಿಯಲ್ಲಿ ತೊಡಗಿವೆ. ವಿಶೇಷವೆಂದರೆ ಇವುಗಳ ಜೊತೆಗೆ ನಮ್ಮ ಆಟೋಮೊಬೈಲ್‌ ದೈತ್ಯ ಕಂಪನಿಗಳಾದ ಮಹೀಂದ್ರ ಮತ್ತು ಮಾರುತಿ ಸುಜುಕಿ ಕಂಪನಿಗಳು ಕೈ ಜೋಡಿಸಿವೆ. ಹೀಗಾಗಿ ಮೇ ತಿಂಗಳ ಕೊನೆಗೆ ಸುಮಾರು ಒಂದು ಲಕ್ಷದಷ್ಟಾದರೂ ವೆಂಟಿಲೇಟರ್‌ಗಳು ಭಾರತದಲ್ಲಿ ಲಭ್ಯ ಆಗಬಹುದು ಎಂಬ ಅಂದಾಜು ಇದೆ.

3. ಇದರ ಜೊತೆಗೆ ಇನ್ನೊಂದು ವಿಶೇಷ ಅಂದರೆ, ಪುಣೆಯ ಐಐಟಿಯ ವಿದ್ಯಾರ್ಥಿಗಳು ಅಗ್ಗದ ದರದ ಒಂದು ವೆಂಟಿಲೇಟರ್‌ ಅನ್ನು ಆವಿಷ್ಕರಿಸಿದ್ದಾರೆ. ಇವರು ಇದರಲ್ಲಿ ಪರಿಣತರೇನೂ ಆಗಿರಲಿಲ್ಲ. ಆದರೆ ಮುಂದೆ ಬರಬಹುದಾದ ಗಂಭಿರ ಪರಿಸ್ಥಿತಿಯನ್ನು ಈಗಲೇ ಮನಗಡು ಅವರು ಕಾರ್ಯಪ್ರವೃತ್ತರಾಗಿದ್ದರು. ವೆಂಟಿಲೇಟರ್‌ಗಳನ್ನು ಸಿದ್ಧಪಡಿಸುವುದು ಹೇಗೆ ಎಂಬ ಬಗ್ಗೆ ಆನ್‌ಲೈನ್‌ ಮೂಲಕ ಟ್ಯುಟೋರಿಯಲ್‌ ತೆಗೆದುಕೊಂಡರು. ಅಮೆರಿಕದ ತಜ್ಞರಿಂದ ಆನ್‌ಲೈನ್‌ ಪಾಠ ಹೇಳಿಸಿಕೊಂಡರು. ನಂತರ ಹೃದಯತಜ್ಞರು, ಶ್ವಾಸತಜ್ಞರು, ನರವಿಜ್ಞಾನಿಗಳು, ಅರಿವಳಿಕೆ ತಜ್ಞರು ಎಲ್ಲರ ಜೊತೆಗೂ ಚರ್ಚಿಸಿದರು. ಭಾರತೀಯ ವೈದ್ಯಕೀಯ ಸಂಸ್ಥೆ ನಿಗದಿಪಡಿಸಿದ ಮಾನದಂಡದ ವೆಂಟಿಲೇಟರ್‌ಗಳನ್ನು ಸಿದ್ಧಪಡಿಸಿದರು, ಇದಕ್ಕೆ ಭಾರತವೇ ನಿರ್ಮಿಸಿದ ಸ್ಥಳೀಯ ಬಿಡಿಭಾಗಗಳನ್ನು ಬಳಸಿಕೊಂಡರು. ಈ ವೆಂಟಿಲೇಟರ್‌ ಒಂದು ಲಕ್ಷ ರೂಪಾಯಿಗಳ ಒಳಗೇ ಸಿದ್ಧವಾಗಿದೆ. ಸಾಮಾನ್ಯವಾಗಿ ಕಂಪನಿ ನಿರ್ಮಿತ ವೆಂಟಿಲೇಟರ್‌ಗಳ ಬೆಲೆ 15 ಲಕ್ಷದ ಆಸುಪಾಸಿನಲ್ಲಿರುತ್ತದೆ.

4. ಇದುವರೆಗೂ ಸುಮಾರು 3000 ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಇದಕ್ಕೂ ಸಾಕಷ್ಟು ಮುನ್ನವೇ ಭಾರತ ಎಚ್ಚೆತ್ತುಕೊಂಡು, ಮಾರ್ಚ್ 23ರಂದೇ ಲಾಕ್‌ಡೌನ್‌ ಘೋಷಿಸಿತ್ತು. ಈಆಗಗಲೇ ಪತ್ತೆಯಾಗಿರುವ 3000 ಪ್ರಕರಣಗಳನ್ನು ಸರಿಯಾಗಿ ನಿರ್ವಹಿಸಿದರೆ ಹಾಗೂ ಇವರಿಂದ ಯಾರು ಸೋಂಕಿತರಾಗಿರಬಹುದು ಎಂಬ ಪತ್ತೆ ಕಾರ್ಯವನ್ನು ಸರಿಯಾಗಿ ನಿರ್ವಹಿಸಿದರೆ ಹೊಸ ಪ್ರಕರಣಗಳು ಹಬ್ಬುವ ವೇಗ ಕಡಿಮೆಯಾಗಬಹುದು. ಭಾರತ ಬಹಳ ಮೊದಲೇ ಲಾಕ್‌ಡೌನ್‌ ಘೋಷಿಸಿದ್ದು ಬಹಳ ಒಳ್ಳೆಯ ಕ್ರಮ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಇತ್ತೀಚೆಗೆ ಶ್ಲಾಘಿಸಿದ್ದಾರೆ. ಸಿಂಗಾಪುರ ಕೂಡ ಎರಡು ದಿನಗಳ ಹಿಂದೆಯಷ್ಟೇ ಲಾಕ್‌ಡೌನ್‌ ಘೋಷಿಸಿದೆ.

ಹೆಚ್ಚುತ್ತಿರುವ ಕೊರೋನಾ ಪ್ರಕರಣ: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ 

೫. ಭಾರತದಲ್ಲಿ ಬೇಸಿಗೆ ಏರುತ್ತಿದೆ. ಅದರ ಜೊತೆಗೆ ಸಾಕಷ್ಟು ಬಿಸಿಲು ಹಾಗೂ ಶಾಖವೂ ಏರುತ್ತಿದೆ. ಇದುವರೆಗೆ ಶೀತವಲಯದ ರಾಷ್ಟ್ರಗಳಲ್ಲಿ ಮಾಡಿದಷ್ಟು ಪ್ರಮಾಣದ ವ್ಯಾಪಕ ಹಾನಿಯನ್ನು ಉಷ್ಣವಲಯದ ದೇಶಗಳಲ್ಲಿ ಕೊರೊನಾ ಮಾಡಿಲ್ಲ. ಅದೂ ಒಂದು ಭರವಸೆ ಇದೆ.

Follow Us:
Download App:
  • android
  • ios