ಕಾಸರಗೋಡಿನ ಯುವತಿ ಸಾವಿಗೆ ಕಾರಣ ಫುಡ್ ಪಾಯ್ಸನ್ ಅಲ್ಲ, ಇಲಿ ಪಾಷಾಣ!

ಕಾಸರಗೋಡಿನಲ್ಲಿ ಬಿರಿಯಾನಿ ಸೇವಿಸಿ ಮೃತಪಟ್ಟಿದ್ದ ಯುವತಿಯ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದೆ. ಅಂಜುಶ್ರೀ ಸಾವಿಗೆ ಕಾರಣ ಫುಡ್ ಪಾಯ್ಸನ್ ಅಲ್ಲ ಇಲಿ ಪಾಷಾಣ ಎಂದು  ರಾಸಾಯನಿಕ ತಪಾಸಣಾ ವರದಿ ದೃಢಪಡಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Consumption of rat poison caused death of Kasargod Girl says report taken Vin

ಕಾಸರಗೋಡು: ಕೇರಳದ ಕಾಸರಗೋಡಿನಲ್ಲಿ ಚಿಕನ್ ಬಿರಿಯಾನಿ ತಿಂದು ಯುವತಿ ಸಾವನ್ನಪ್ಪಿದ ಪ್ರಕರಣದಲ್ಲಿ ಅಂಜುಶ್ರೀ ಪಾರ್ವತಿಯ ಸಾವಿಗೆ ಇಲಿ ಪಾಷಾಣ ಸೇವನೆ ಕಾರಣ ಎಂದು ರಾಸಾಯನಿಕ ತಪಾಸಣಾ ವರದಿಯಿಂದ ತಿಳಿದು ಬಂದಿದೆ. ಜನವರಿ 7ರಂದು ಅಂಜುಶ್ರೀ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಟ್ಟಿದ್ದಳು. ಕೋಝಿಕ್ಕೊಡ್ ನ ಫಾರೆನ್ಸಿಕ್ ಪ್ರಯೋಗಾಲಯದಲ್ಲಿ ನಡೆಸಿದ ತಪಾಸಣೆಯಿಂದ ಇಲಿ ವಿಷ ಸೇವನೆ ಅಂಜುಶ್ರೀ ಸಾವಿಗೆ ಕಾರಣ ಎಂದು ಖಚಿತ ಪಡಿಸಿದೆ. ಈ ಕುರಿತ ವರದಿ ತನಿಖಾ ತಂಡಕ್ಕೆ ಲಭಿಸಿದೆ. ಅಂತಿಮ ಮರಣೋತ್ತರ ಪರೀಕ್ಷಾ ವರದಿಯಲ್ಲೂ ಇದನ್ನು ದೃಢೀಕರಿಸಿತ್ತು.

ಮಂಜೇಶ್ವರ ಗೋವಿಂದ ಪೈ ಕಾಲೇಜಿನ ವಿದ್ಯಾರ್ಥಿನಿ (Student)ಯಾಗಿದ್ದ ಪೆರುಂಬಳ ಬೇನೂರಿನ ಅಂಜುಶ್ರೀ ಪಾರ್ವತಿ ಕಾಸರಗೋಡು ನಗರ ಹೊರ ವಲಯದ ಹೋಟೆಲೊಂದರಿಂದ ಆನ್‌ಲೈನ್‌ನಲ್ಲಿ ಖರೀದಿಸಿದ್ದ ಆಹಾರ (Food) ಸೇವಿಸಿರುವುದು ಸಾವಿಗೆ ಕಾರಣ ಎಂದು ಕುಟುಂಬಸ್ಥರು ಮೇಲ್ಪರಂಬ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಹೋಟೆಲ್ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡಿದ್ದರು. ಆದರೆ ಆಹಾರದಿಂದ ಸಾವು (Death) ಸಂಭವಿಸಿಲ್ಲ ಎಂದು ತನಿಖೆಯಿಂದ ದೃಢಪಟ್ಟಿತ್ತು.

ಪರೋಟಾ ತಿಂದು ಫುಡ್ ಅಲರ್ಜಿ, ಕೇರಳದ ವಿದ್ಯಾರ್ಥಿನಿ ಸಾವು

ಆರಂಭದಲ್ಲಿ ಫುಡ್​ ಪಾಯಿಸನ್​ನಿಂದ ಕೇರಳದ ಕಾಸರಗೋಡಿನಲ್ಲಿ ಯುವತಿ (Girl)ಯೊಬ್ಬಳು ಮೃತಪಟ್ಟಿರುವುದಾಗಿ ಸುದ್ದಿಯಾಗಿತ್ತು. ಮೃತ ಯುವತಿಯನ್ನು ಕಾಸರಗೋಡಿನ ಥಲಕ್ಲೇ ಮೂಲದ ಅಂಜುಶ್ರೀ ಪಾರ್ವತಿ ಎಂದು ಗುರುತಿಸಲಾಗಿತ್ತು. ಉದುಮದಲ್ಲಿರುವ ಹೋಟೆಲ್​ ಒಂದರಲ್ಲಿ ಆನ್​ಲೈನ್​ ಮೂಲಕ ಚಿಕನ್​ ಆಹಾರ ತರಿಸಿ ಅಂಜುಶ್ರೀ ಸೇವಿಸಿದ್ದಳು. ಇದಾದ ಬಳಿಕ ಆಕೆಯ ಆರೋಗ್ಯ (Health)ದಲ್ಲಿ ಏರುಪೇರು ಕಂಡುಬಂದಿತ್ತು.

ಪರಿಸ್ಥಿತಿ ಗಂಭೀರವಾದ ಬೆನ್ನಲ್ಲೇ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಯುವತಿ ಮೃತಪಟ್ಟಿದ್ದಳು. ಪುಡ್​ ಪಾಯಿಸನ್​ನಿಂದ ಮೃತಪಟ್ಟಿದ್ದಾಳೆ ಎಂದು ಹೇಳಾಗಿತ್ತು. ಆದರೆ ಈಗ ಸಾವು ಫುಡ್ ಪಾಯ್ಸನ್‌ನಿಂದ ಆಗಿಲ್ಲ. ಬದಲಿಗೆ ಅಂಜುಶ್ರೀ ಪಾರ್ವತಿಯ ಸಾವಿಗೆ ಇಲಿ ಪಾಷಾಣ ಸೇವನೆ ಕಾರಣ ಎಂದು ರಾಸಾಯನಿಕ ತಪಾಸಣಾ ವರದಿಯಿಂದ ತಿಳಿದು ಬಂದಿದೆ.

ಘಟನೆ ಬೆಳಕಿಗೆ ಬರ್ತಿದ್ದಂತೆ, ಸಂಬಂಧಪಟ್ಟ ಹೋಟೆಲ್‌ನಲ್ಲಿರುವ ನೀರು ಮತ್ತು ಆಹಾರ (Food)ವನ್ನು ಪರಿಶೀಲಿಸಿದ್ದರು. ಈ ಘಟನೆ ಆರೋಗ್ಯ ಸಚಿವರ ಗಮನಕ್ಕೆ ಬರುತ್ತಿದ್ದಂತೆ ತನಿಖೆಗೆ ಆದೇಶಿಸಲಾಗಿತ್ತು. ದಿ.ಕುಮಾರನ್ ನಾಯರ್ - ಅಂಬಿಕಾ ದಂಪತಿಯ ಪುತ್ರಿಯಾದ ಅಂಜುಶ್ರೀ ಅವರು ತಾಯಿ ಅಲ್ಲದೆ ಸಹೋದರರನ್ನು ಅಗಲಿದ್ದಾರೆ. ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದರು.

Mangaluru: ಫುಡ್ ಪಾಯ್ಸನ್‌ಗೆ ನರ್ಸಿಂಗ್ ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಕೇರಳ ರಾಜ್ಯದಲ್ಲಿ ಫುಡ್‌ ಪಾರ್ಸೆಲ್‌ಗಳಿಗೆ ಎಕ್ಸ್‌ಪೈರಿ ದಿನಾಂಕ ಕಡ್ಡಾಯ
ತಿರು​ವ​ನಂತ​ಪು​ರ: ಕೇರಳ ರಾಜ್ಯ​ದಲ್ಲಿ ಫುಡ್‌ ಪಾಯ್ಸ​ನಿಂಗ್‌ ಪ್ರಕ​ರ​ಣ​ಗಳು ಹೆಚ್ಚಾದ ಹಿನ್ನೆ​ಲೆ​ಯಲ್ಲಿ ಪಾರ್ಸೆಲ್‌ ಕೊಡುವ ಆಹಾ​ರದ ಪೊಟ್ಟ​ಣ​ಗಳ ಮೇಲೆ ಆಹಾರ ಚೆನ್ನಾ​ಗಿ​ರುವ ಅಂತಿಮ ದಿನಾಂಕ​/ಸಮಯವ​ನ್ನು ಪ್ರಕ​ಟಿ​ಸು​ವು​ದನ್ನು ಕಡ್ಡಾ​ಯ​ಗೊ​ಳಿ​ಸಿದೆ. ಇದನ್ನು ನಮೂ​ದಿ​ಸಿ​ಲ್ಲದ ಆಹಾರ ಪದಾ​ರ್ಥ​ಗ​ಳನ್ನು ನಿಷೇ​ಧಿ​ಸಿದೆ. ಆಹಾ​ರ ತಯಾ​ರಿ​ಸಿದ ದಿನಾಂಕ (Manufacture date) ಮತ್ತು ಸಮಯ, ಪ್ಯಾಕ್‌ ಮಾಡ​ಲಾದ ದಿನಾಂಕ ಮತ್ತು ಸಮಯ, ಆಹಾ​ರ​ವನ್ನು ತಿನ್ನ​ಬ​ಹು​ದಾ​ದ ಅಂತಿಮ ದಿನಾಂಕ (Expiry date)​ವನ್ನು ಪ್ರಕ​ಟಿ​ಸು​ವುದು ಕಡ್ಡಾಯ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿ​ದ್ದಾರೆ.

‘ಆ​ಹಾರ ಸುರ​ಕ್ಷತಾ ಮಾನ​ದಂಡದ ನಿಯ​ಮ​ಗಳ ಪ್ರಕಾರ, ಬಿಸಿ ಆಹಾ​ರ​ಗಳನ್ನು ತಯಾ​ರಿ​ಸಿದ 2 ಗಂಟೆ​ಗಳ ಒಳಗೆ ತಿನ್ನ​ಬೇಕು. ಇಂತಹ ಆಹಾ​ರ​ಗ​ಳನ್ನು ಸಾಗಿ​ಸು​ವಾಗ 60 ಡಿಗ್ರಿ ಉಷ್ಣಾಂಶ ಇರು​ವಂತೆ ನೋಡಿ​ಕೊ​ಳ್ಳ​ಬೇಕು. 2 ಗಂಟೆ​ಗ​ಳಿಗೂ ಹೆಚ್ಚು ಕಾಲ ಸಾಮಾನ್ಯ ತಾಪ​ಮಾ​ನಕ್ಕೆ ತೆರೆ​ದಿಟ್ಟಆಹಾರ ಪದಾ​ರ್ಥ​ವನ್ನು ಸೇವಿ​ಸು​ವುದು ಆರೋ​ಗ್ಯಕ್ಕೆ (Health) ಒಳ್ಳೆ​ಯ​ದಲ್ಲ. ಹಾಗಾಗಿ ಸುರ​ಕ್ಷತಾ ಚೀಟಿ​ಗಳು ಮತ್ತು ಎಕ್ಸ್‌​ಪೈರಿ ದಿನಾಂಕ​ಗ​ಳಿ​ಲ್ಲದ ಆಹಾರ ಪದಾ​ರ್ಥ​ಗಳ ಪೊಟ್ಟ​ಣ​ಗ​ಳನ್ನು ನಿಷೇ​ಧಿ​ಸ​ಲಾ​ಗಿದೆ’ ಎಂದು ಅವರು ಹೇಳಿ​ದ್ದಾರೆ. ಇತ್ತೀಚೆಗೆ ಆನ್‌ಲೈನ್‌ನಲ್ಲಿ ಬಿರಿಯಾನಿ ತರಿಸಿಕೊಂಡಿದ್ದ ಕಾಸರಗೋಡಿನ ಮಹಿಳೆ (Woman)ಯೊಬ್ಬರು ಸಾವನ್ನಪ್ಪಿದ್ದರು.

Latest Videos
Follow Us:
Download App:
  • android
  • ios