ತ್ರಿವಳಿ ಹೃದಯ ಬೈಪಾಸ್ ಸರ್ಜರಿ ನಂತರವೂ ಸುದೀರ್ಘಕಾಲ ಬದುಕಿರುವ ಏಕೈಕ ವ್ಯಕ್ತಿ ಇವರು
ಇಲ್ಲೊಬ್ಬರು ತ್ರಿವಳಿ ಹೃದಯ ಬೈಪಾಸ್ ಸರ್ಜರಿಗೆ ಒಳಗಾದವರೊಬ್ಬರು ಇದ್ದು, ಇವರ ವಯಸ್ಸು 77 ವರ್ಷಗಳು. ವೈದ್ಯಕೀಯ ದಾಖಲೆಗಳ ಪ್ರಕಾರ ತ್ರಿವಳಿ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಯ ನಂತರ ಇಷ್ಟೊಂದು ಸುದೀರ್ಘ ಕಾಲ ಬದುಕಿರುವ ಏಕೈಕ ವ್ಯಕ್ತಿ ಇವರಂತೆ.
ಇತ್ತೀಚೆಗಂತು ಎಲ್ಲೆಡೆ ಹೃದಯ ರೋಗದ ಬಗ್ಗೆಯೇ ಸುದ್ದಿ. ಅನೇಕ ಬಾಳಿ ಬದುಕಬೇಕಾದ ಎಳೆಯ ಪ್ರಾಯದ ಮಕ್ಕಳು ಕೂಡ ಯಾವುದೇ ಮುನ್ಸೂಚನೆ ಇಲ್ಲದೇ ದಿಢೀರ್ ಎಂದು ಹೃದಯಘಾತಕ್ಕೆ ಒಳಗಾಗಿ ಹೊರಟು ಬಿಡುತ್ತಾರೆ. ಇವೆಲ್ಲವೂ ಬಾಳಿನ ಬಗ್ಗೆ ಜಿಗುಪ್ಸೆ ಮೂಡಿಸುತ್ತಿದೆ. ಈ ಮಧ್ಯೆ ಒಂದು ಆಶಾವಾದದ ಸುದ್ದಿ ಇಲ್ಲಿದೆ. ಹೌದು ಇಲ್ಲೊಬ್ಬರು ಮೂರು ಹೃದಯ ಬೈಪಾಸ್ ಸರ್ಜರಿಗೆ ಒಳಗಾದವರೊಬ್ಬರು ಇದ್ದು, ಇವರ ವಯಸ್ಸು 77 ವರ್ಷಗಳು. ವೈದ್ಯಕೀಯ ದಾಖಲೆಗಳ ಪ್ರಕಾರ ಮೂರು ಮೂರು ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಯ ನಂತರ ಇಷ್ಟೊಂದು ಸುದೀರ್ಘ ಕಾಲ ಬದುಕಿರುವ ಏಕೈಕ ವ್ಯಕ್ತಿ ಇವರಂತೆ.
'ಇನ್ನೇನು ಸರ್ಜರಿ ಆಗಿದೆ. ಇಷ್ಟೇ ವರ್ಷ ಬದುಕ್ತಾರೆ ಅಂತ ಹೇಳೋದಿಕ್ಕಾಗಲ್ಲ, ಇನ್ನೊಂದು ಸಲ ಹೃದಯಾಘಾತವಾದರೆ ಬದುಕುವ ಸಾಧ್ಯತೆ ಅಂತು ಇಲ್ಲವೇ ಇಲ್ಲ, ನೀವು ಅವರನ್ನು ತುಂಬಾ ಜಾಗರೂಕವಾಗಿ ನೋಡಿಕೊಳ್ಳಿ' ಹೀಗೆ ಮನೆಯಲ್ಲಿ, ಬಂಧುಗಳಲ್ಲಿ ಯಾರಾದರೂ ಹೃದಯ ರೋಗಿಗಳು ಇದ್ದರೆ ಅವರ ಬಂಧುಗಳಿಗೆ ಅಥವಾ ನಿಮಗೆ ವೈದ್ಯರು ನೀಡುವ ಕೆಲ ಮುನ್ನೆಚ್ಚರಿಕೆಗಳನ್ನು ನೀವು ಕೇಳಿಸಿಕೊಂಡಿರಬಹುದು. ಒಮ್ಮೆ ಹೃದಯರೋಗ ಬಂದ ಮೇಲೆ ಯಾವಾಗ ಹೊರಟು ಬಿಡುತ್ತಾರೆ ಎಂದೂ ಯಾರಿಗೂ ಹೇಳಲಾಗದು ಇದು ಬಹುತೇಕರಿಗೂ ತಿಳಿದಿರುವ ವಿಚಾರ. ಆದರೆ ಇಲ್ಲೊಬ್ಬರು ಹೃದಯ ಶಸ್ತ್ರಚಿಕಿತ್ಸೆ ನಂತರವೂ ಬರೋಬ್ಬರಿ 46 ವರ್ಷಗಳ ಕಾಲ ಬದುಕಿ ಉಳಿದಿದ್ದಾರೆ.
ಹೌದು ಬ್ರಿಟಿಷ್ ಪ್ರಜೆ ಕೊಲಿನ್ ಹಾನ್‌ಕಾಕ್ (Colin Hancock) ಅವರೇ ಈ ಅದೃಷ್ಟವಂತರು. ತ್ರಿವಳಿ ಬೈಪಾಸ್ ಸರ್ಜರಿ (Triple Heart Bypass) ನಂತರವೂ ಸುಧೀರ್ಘ ಕಾಲ ಬದುಕಿರುವ ಏಕೈಕ ವ್ಯಕ್ತಿ ಇವರು. ಈ ಬಗ್ಗೆ ವಿಶ್ವ ದಾಖಲೆ ಸಂಸ್ಥೆ ನೀಡಿದ ಹೇಳಿಕೆಯೊಂದರಲ್ಲಿ 2023ರ ಆಗಸ್ಟ್ 4 ನೇ ತಾರೀಕಿಗೆ ಇವರಿಗೆ ಬೈಪಾಸ್ ಹಾರ್ಟ್ ಸರ್ಜರಿ ಆಗಿ 46 ವರ್ಷಗಳಾಗಿವೆ. ಹೀಗೆ ಬೈಪಾಸ್ ಹೃದಯ ಶಸ್ತ್ರಚಿಕಿತ್ಸೆಯ ನಂತರವೂ ಇಷ್ಟು ಸುಧೀರ್ಘ ಕಾಲ ಬದುಕುಳಿದಿರುವುದೇ ದೊಡ್ಡ ಸಾಧನೆಯಾಗಿದ್ದು, ಈ ಮೂಲಕ ಅವರು ವಿಶ್ವದಾಖಲೆ ನಿರ್ಮಿಸಿದ್ದಾರೆ.
ಗಿನ್ನೆಸ್ ವಿಶ್ವದಾಖಲೆ ಸಂಸ್ಥೆಯ (Guinness World Records) ಪ್ರಕಾರ, ಕೊಲಿನ್ ಹಾನ್‌ಕಾಕ್ ಅವರಿಗೆ ಮೊದಲ ಬಾರಿಗ ಹೃದಯ ನೋವು ಕಾಣಿಸಿಕೊಂಡಾಗ ಅವರಿಗೆ ಕೇವಲ 30 ವರ್ಷವಾಗಿತ್ತು. ಇದಾದ ಒಂದು ವರ್ಷದೊಳಗೆ ಅವರಿಗೆ ತ್ರಿವಳಿ ಬೈಪಾಸ್ ಸರ್ಜರಿ ನಡೆಸಲಾಯಿತು. ಸರ್ಜರಿ ಯಶಸ್ವಿಯೂ ಆಯಿತು. ಆದರೆ ಇದರಿಂದ ಅವರು ಎಷ್ಟು ವರ್ಷ ಬದುಕಬಹುದು ಎಂಬ ಬಗ್ಗೆ ಯಾವುದೇ ಖಚಿತತೆ ಇರಲಿಲ್ಲ, ಅಲ್ಲದೇ ಅವರಿಗೆ, ನೀವು ಹೃದಯ ಸಮಸ್ಯೆಯೊಂದಿಗೆಯೇ ಉಳಿದ ಜೀವನವನ್ನು ಕಳೆಯಬೇಕಾಗಬಹುದು ಎಂದು ಕೂಡ ವೈದ್ಯರು ಹೇಳಿದ್ದರಂತೆ. ಆದರೆ ವೈದ್ಯರ ನಿರೀಕ್ಷೆಗೆ ತದ್ವಿರುದ್ಧ ಎಂಬಂತೆ ಕೊಲಿನ್ ಅವರು ಸುಧೀರ್ಘ ಜೀವನವನ್ನು ನಡೆಸುವುದರ ಜೊತೆ ಗಟ್ಟಿಮುಟ್ಟಾಗಿದ್ದು, ಈಗ ತಮ್ಮ 77 ನೇ ವಸಂತದಲ್ಲಿದ್ದಾರೆ.
ಈ ಮೊದಲು ಈ ರೀತಿ ಬೈಪಾಸ್ ಸರ್ಜರಿ ಆಗಿ ಸುಧೀರ್ಘ ಕಾಲ ಬಾಳಿದ ಸಾಧನೆ ಅಮೆರಿಕಾದ (USA) ಡೆಲ್ಬರ್ಟ್ ಡಾಲೆ ಮ್ಯಾಕ್‌ಬೀ (Delbert Dale McBee) ಅವರ ಹೆಸರಿನಲ್ಲಿತ್ತು. ಆದರೆ ಅವರು 2015ರಲ್ಲಿ ತಮ್ಮ 90ನೇ ವಯಸ್ಸಿಗೆ ಮೃತಪಟ್ಟರು. ಅವರು ತಮಗೆ ಶಸ್ತ್ರಚಿಕಿತ್ಸೆಯಾದ ನಂತರ 41 ವರ್ಷ 63 ದಿನ ಬದುಕಿದ್ದರು. ತನಗೆ ತ್ರಿವಳಿ ಬೈಪಾಸ್ ಸರ್ಜರಿ ಆಗಿದ್ದಾಗ ನನಗೆ ಕೇವಲ 30 ವರ್ಷ ಹಲವು ದೈಹಿಕ ವ್ಯಾಯಾಮಗಳನ್ನು ತರಬೇತಿಗಳನ್ನು ಮಾಡುವ ಮೂಲಕ ನಾನು ಬಹಳ ಉತ್ತಮ ಸ್ಥಿತಿಯಲ್ಲಿದೆ. ನನಗೆ ಹೃದಯ ರೋಗ ಇರಬಹುದು ಎಂಬ ಯಾವುದೇ ಸೂಚನೆಯೂ ನನಗಾಗ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಆಯಸ್ಸು ಗಟ್ಟಿ ಇದ್ದರೆ ಯಾರು ಏನ್ ಮಾಡಲಾಗದು ಅಲ್ವಾ?