Asianet Suvarna News Asianet Suvarna News

Menopause ಒತ್ತಡ ನಿವಾರಣೆಗೆ ಮಧ್ಯಮಾವತಿ ರಾಗವೇ ಮದ್ದು?

ಮೆನೋಪಾಸ್‌ ಹಂತದಲ್ಲಿರುವ ಮಹಿಳೆಯರು ತಮ್ಮ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಲು ಹರಸಾಹಸ ಮಾಡಬೇಕಾಗುತ್ತದೆ. ಮನಸ್ಸನ್ನು ಎಷ್ಟೇ ಶಾಂತವಾಗಿರಿಸಿಕೊಳ್ಳಲು ಯತ್ನಿಸಿದರೂ ಕಿರಿಕಿರಿ ಆಗುತ್ತಲೇ ಇರುತ್ತದೆ. ಈ ಸಮಸ್ಯೆಗೆ ಆಯುರ್ವೇದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಚಿಕಿತ್ಸೆಯೊಂದಿಗೆ ಕರ್ನಾಟಕಿ ಸಂಗೀತ ಪದ್ಧತಿಯ ಮಧ್ಯಮಾವತಿ ರಾಗವನ್ನು ಬಳಕೆ ಮಾಡಿ ಒತ್ತಡ ನಿವಾರಣೆ ಮಾಡಿದ್ದಾರೆ.
 

Classical ragas can slow down stress in menopause woman
Author
First Published Dec 13, 2022, 4:49 PM IST

ಭಾರತೀಯ ರಾಗಗಳಲ್ಲಿ ಮನಸ್ಸಿನ ಆರೋಗ್ಯಕ್ಕೆ ಬೇಕಾದ ಬಹುದೊಡ್ಡ ಶಕ್ತಿಯಿದೆ, ಅಂತಃಸತ್ವವಿದೆ ಎನ್ನುವುದು ಬಹುತೇಕರಿಗೆ ತಿಳಿದ ಸಂಗತಿ. ಹಲವು ರಾಗಗಳನ್ನು ಆತಂಕ, ಖಿನ್ನತೆ ನಿವಾರಣೆಗೂ ಚಿಕಿತ್ಸಾ ಪದ್ಧತಿಯಾಗಿ ಬಳಸುವುದುಂಟು. ಇದೀಗ, ಮತ್ತೊಂದು ಸಂಗತಿ ಏನೆಂದರೆ, ಮೆನೋಪಾಸ್‌ ಹಂತದಲ್ಲಿರುವ ಮಹಿಳೆಯರ ಮಾನಸಿಕ ಮತ್ತು ಪ್ರಜ್ಞೆಗೆ ಸಂಬಂಧಿಸಿದ ಮಿದುಳಿನ ಭಾಗದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಮಧ್ಯಮಾವತಿ ರಾಗವನ್ನು ಒಟ್ಟಾರೆ 20 ನಿಮಿಷಗಳ ಪ್ಯಾಕೇಜ್‌ ಮ್ಯೂಸಿಕ್‌ ಹೊಂದಿರುವ ಗುಚ್ಛವನ್ನಾಗಿ ಪರಿವರ್ತಿಸಿ ಅದನ್ನು ಮೆನೋಪಾಸ್‌ ಅಂತ್ಯದ ಸಮಯದಲ್ಲಿರುವ ಮಹಿಳೆಯರ ಮೇಲೆ ಪ್ರಯೋಗ ಮಾಡಲಾಗಿತ್ತು. ಇದರಲ್ಲಿ ಈ ಅಚ್ಚರಿಯ ಫಲಿತಾಂಶ ಕಂಡುಬಂದಿದೆ. ಗುಜರಾತ್‌ ಆಯುರ್ವೇದ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್‌ ಪದವಿ ಓದುತ್ತಿರುವ ಅನಘಾ ಎಂಬ ಸ್ಕಾಲರ್‌ ಈ ಸಂಶೋಧನೆಯ ಹಿಂದಿದ್ದಾರೆ. ಮಧ್ಯಮಾವತಿ ರಾಗವನ್ನು ಅವರು ನಾಲ್ಕು ವಾದ್ಯಸಂಗೀತದೊಂದಿಗೆ ಪ್ರಯೋಗಿಸಿದ್ದಾರೆ. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಶಾಸ್ತ್ರೀಯ ಸಂಗೀತವನ್ನು ಸೂಕ್ತವಾಗಿ ಅಳವಡಿಕೆ ಮಾಡಿಕೊಂಡರೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯ ಎಂದವರು ಹೇಳಿದ್ದಾರೆ. ಗೋವಾದಲ್ಲಿ ಜರುಗಿವ ವಿಶ್ವ ಆಯುರ್ವೇದ ಕಾಂಗ್ರೆಸ್‌ ನ 9ನೇ ಆವೃತ್ತಿಯಲ್ಲಿ ಇಂಥದ್ದೊಂದು ಫಲಿತಾಂಶ ಬಹಿರಂಗವಾಗಿದೆ.

ಗುಜರಾತ್‌ (Gujarat) ಆಯುರ್ವೇದ (Ayurveda) ವಿಶ್ವವಿದ್ಯಾಲಯದ (University) ಪಿಎಚ್‌ ಡಿ ಸ್ಕಾಲರ್‌ ಅನಘಾ ಶಿವಾನಂದನ್‌ (Anagha Shivanandan) ಆಯುರ್ವೇದ ಕಾಂಗ್ರೆಸ್‌ ನಲ್ಲಿ ಮೆನೋಪಾಸ್‌ (Menopause) ಮಹಿಳೆಯರ (Woman) ಮೇಲೆ ನಡೆದ ಅಧ್ಯಯನವನ್ನು (Study) ತಿಳಿಸಿರುವುದು ಇನ್ನು ಮುಂದೆ ಹೊಸದೊಂದು ಆಯಾಮಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆಗಳೂ ಇವೆ. ರಸಾಯನ (Rasayana) ಪ್ರಕ್ರಿಯೆಯಲ್ಲಿ ಸಮಯಾಧಾರಿತವಾಗಿ ಮಧ್ಯಮಾವತಿ (Madhyamavathi) ರಾಗವನ್ನು ಬಳಕೆ ಮಾಡಿಕೊಂಡರೆ ಮಧ್ಯವಯಸ್ಸಿನ ಮಹಿಳೆಯರ (Middle Age) ಜೀವನದ ಗುಣಮಟ್ಟವನ್ನು ಉತ್ತಮಪಡಿಸಬಹುದು. ತಮ್ಮ ಮಾಸಿಕ ಋತುಸ್ರಾವದ (Period) ಅಂತಿಮ ಹಂತದಲ್ಲಿರುವ ಈ ಮಹಿಳೆಯರ ಆರೋಗ್ಯ (Health) ವಿವಿಧ ರೀತಿಯಲ್ಲಿ ಹದಗೆಡುತ್ತಿರುತ್ತದೆ. ಮೈಂಡ್‌ ಫಾಗ್‌ (Mind Fog) ಅಂದರೆ, ಬುದ್ಧಿಗೆ ಮಂಕು ಕವಿಯುವುದು ಸಹ ಈ ಸಮಯದ ಸಾಮಾನ್ಯ ಸಮಸ್ಯೆ. ಇದರಿಂದಾಗಿಯೇ ಅವರು ಸಾಕಷ್ಟು ಕಿರಿಕಿರಿ (Irritation) ಅನುಭವಿಸುತ್ತಾರೆ. ಮಾಸಿಕ ಋತುಸ್ರಾವದ ಸಮಯ ಬರುತ್ತಿದ್ದಂತೆ ಮರೆಯುವುದು ಸಹ ಹೆಚ್ಚುತ್ತದೆ. ಇವೆಲ್ಲ ಮಾನಸಿಕ (Mental) ಸಮಸ್ಯೆಗಳಾದರೆ ದೈಹಿಕವಾಗಿಯೂ ಸಾಕಷ್ಟು ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಾರೆ. ಕಬ್ಬಿಣಾಂಶದ (Iron) ಕೊರತೆಯಾಗಿ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು. ದೈಹಿಕ ಅಸಾಮರ್ಥ್ಯದಿಂದಲೂ ಕಿರಿಕಿರಿ ಹೆಚ್ಚುತ್ತದೆ. 

ಮನಸ್ಸು ಹಿಡಿತದಲ್ಲಿ ಇಲ್ವಾ? ಯಾಕೋ ಮೂಡಿಲ್ಲ ಅನ್ನೋರಿಗೆ ಇಲ್ಲಿವೆ ಟಿಪ್ಸ್

ರಾಗಗಳ ಮೋಡಿ
ಮೆನೋಪಾಸ್‌ ಹಂತದಲ್ಲಿರುವ ಮಹಿಳೆಯರಿಗೆ ಮಾಸಿಕ ಋತುಸ್ರಾವದ ಸಮಯದಲ್ಲಿ ವಿಶ್ರಾಂತಿ ಅಗತ್ಯ. ಆದರೆ, ಸಾಮಾನ್ಯವಾಗಿ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ರೆಸ್ಟ್‌ ಸಿಗುವುದು ಕಡಿಮೆ. ಇದರಿಂದಾಗಿಯೂ ಸಾಕಷ್ಟು ಸಮಸ್ಯೆಗಳನ್ನು ಅವರು ಎದುರಿಸುತ್ತಾರೆ. ಈ ಸಮಯದಲ್ಲಿ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅವರಿಂದ ಸಾಧ್ಯವಾಗುವುದಿಲ್ಲ. ಆಗ ಶಾಸ್ತ್ರೀಯ ರಾಗಗಳು (Classic Ragas) ಪ್ರಯೋಜನಕ್ಕೆ ಬರುತ್ತವೆ. ರಾಗಗಳನ್ನು ಆಯುರ್ವೇದ (Ayurveda) ಚಿಕಿತ್ಸೆಯ ಭಾಗವನ್ನಾಗಿ ಮಾಡಿದಾಗ ಹೆಚ್ಚಿನ ಪರಿಣಾಮಕಾರಿ. ಈಗಾಗಲೇ ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನ ನಡೆದಿದ್ದು, ಹಿಂದುಸ್ತಾನಿ ಪದ್ಧತಿಯ ಮಾರ್ವಾ ರಾಗ ಮಾನಸಿಕ ರೋಗಗಳ ಚಿಕಿತ್ಸೆಯಲ್ಲಿ ಮಾಡಲಾಗುತ್ತದೆ.

World Menopause Day: ಕಾಯಿಲೆಯೆಂದು ಭಯಪಡದಿರಿ, ಇದು ರೋಗವಲ್ಲ ಋತುಬಂಧ

ಕರ್ನಾಟಕಿಯ ಮಧ್ಯಮಾವತಿ ಹಿಂದುಸ್ತಾನಿಯ ಮಧ್ಮದ್ ಸಾರಂಗ್
ಅನಘಾ ಅವರು ಪ್ರಯೋಗಿಸಿರುವ ಸಂಗೀತದ (Music) ಗುಚ್ಛದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರ ದನಿಯೂ ಇದೆ. ಜತೆಗೆ, ನಾಲ್ಕು ವಾದ್ಯ (Instruments)ಗಳಿವೆ. ದಕ್ಷಿಣ ಭಾರತದ ಜನಪ್ರಿಯ ಸಂಗೀತ ಪದ್ಧತಿಯಾಗಿರುವ ಕರ್ನಾಟಕ (Carnatic) ಶಾಸ್ತ್ರೀಯ ಸಂಗೀತದ ಮಧ್ಯಮಾವತಿ ರಾಗವನ್ನು ಇಲ್ಲಿ ಬಳಕೆ ಮಾಡಿರುವುದು ವಿಶೇಷ. ಇದು ಹಿಂದುಸ್ತಾನಿ ಸಂಗೀತದ ಮಧ್ಮದ್ ಸಾರಂಗ್‌ (Madhmad Sarang) ರಾಗದ ಕರ್ನಾಟಕಿ ರೂಪವಾಗಿದೆ. ನಿಮಿಷಕ್ಕೆ 70 ಬೀಟ್‌ (Beat) ಹೊಂದಿರುವ ಸಂಗೀತದಲ್ಲಿ ವೀಣೆ, ತಾನ್‌ ಪುರ, ಕೊಳಲು (Flute) ಹಾಗೂ ತಬಲಾ (Tabla) ನಾದವಿದೆ. ಇದು ಮೆನೋಪಾಸ್‌ ಸಮಯದ ಒತ್ತಡ (Stress) ಕಡಿಮೆ ಮಾಡಿ, ಮನಸ್ಸನ್ನು ಹಗುರ ಮಾಡುತ್ತದೆ. ಈ ಪ್ರಯೋಗವೇ ಅನಘಾ ಅವರ ಪಿಎಚ್‌ ಡಿ (Ph D) ಅಧ್ಯಯನದ ವಿಷಯವಾಗಿದ್ದು, ಸ್ನಾತಕೋತ್ತರ ಪದವಿ ಪಡೆಯಲು ಸಂಶೋಧನಾ ವಿಭಾಗದಕ್ಕೆ ಥಿಸೀಸ್‌ ಸಲ್ಲಿಕೆ ಮಾಡಿದ್ದಾರೆ.

ಅಷ್ಟಕ್ಕೂ ಯಾವುದೀ ರಾಗ? 
ಮಧ್ಯಮಾವತಿ ರಾಗ ಎಂದರೆ ಎಲ್ಲರಿಗೂ ಟಕ್ಕನೆ ಗುರುತು ಹತ್ತಲಿಕ್ಕಿಲ್ಲ, ಆದರೆ ಕೆಲವು ಹಾಡುಗಳನ್ನು ಕೇಳಿದರೆ 'ಓಹ್, ಇದಾ' ಅನಿಸೋದರಲ್ಲಿ ಡೌಟೇ ಇಲ್ಲ.  'ಭಾಗ್ಯದ ಲಕ್ಷ್ಮೀ ಬಾರಮ್ಮ' , ವಾರ ಬಂತಮ್ಮಾ, ಗುರುವಾರ ಬಂತಮ್ಮಾ ಅಂತಹ ಭಕ್ತಿಪ್ರಧಾನ ಹಾಡುಗಳಿಂದ ಹಿಡಿದು, 'ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ', 'ಕಂಹಾಂಸೆ ಆಯೆ ಬದರಾ ಖುಲ್ತಾ ಜಾಯೇ ಖಜರಾ'ದಂತಹ ಸೂಪರ್ ಸಿನಿಮಾ ಹಾಡುಗಳು, ' ಚೆಲುವಯ್ಯ ಚೆಲುವೋ ತಾನಿ ತಂದಾನ' ಅಂತಹ ಜಾನಪದ ಹಾಡುಗಳಲ್ಲೂ ಮಧ್ಯಮಾವತಿ ರಾಗ ಬಳಕೆ ಆಗಿದೆ.

     
 

Follow Us:
Download App:
  • android
  • ios