Asianet Suvarna News Asianet Suvarna News

ರಷ್ಯಾ ಮಗುವಿಗೆ ಮರುಜನ್ಮ ಕೊಟ್ಟ ಭಾರತದ ವೈದ್ಯರು..ಅದು 7 ಗಂಟೆಯ ಆಪರೇಶನ್!

ಸಾಧನೆ ಮೆರೆದ ವೈದ್ಯರ ತಂಡ/ ಸಸೂತ್ರವಾಗಿ ಕ್ಲಿಷ್ಟಕರ ಆಪರೇಶನ್ ಮುಗಿಸಿದ ವೈದ್ಯರು/ ರಷ್ಯಾದ ಮಗುವಿಗೆ ಮರುಜನ್ಮ/  ಯಶಸ್ವಿ ಬೈವೆಂಟ್ರಿಕುಲರ್ ಬರ್ಲಿನ್ ಹಾರ್ಟ್ ಇಂಪ್ಲಾನ್ಟೇಷನ್ ಸರ್ಜರಿ 

Chennai MGM hospital treats 3-year-old Russian child for heart ailment
Author
Bengaluru, First Published Jul 28, 2020, 11:15 PM IST

ಚನ್ನೈ(ಜು. 28)   ಕೊರೋನಾಸವಾಲಿನ ಮಧ್ಯೆಯೂ ಈ ವೈದ್ಯರು ಸಾಧನೆ ಮೆರೆದಿದ್ದಾರೆ ರಷ್ಯಾ ಮಗುವಿಗೆ ನಮ್ಮ ದೇಶದಲ್ಲಿ ಬೈವೆಂಟ್ರಿಕುಲರ್ ಬರ್ಲಿನ್ ಹಾರ್ಟ್ ಇಂಪ್ಲಾನ್ಟೇಷನ್ ಸರ್ಜರಿ ಯಶಸ್ವಿಯಾಗಿ ಮಾಡಲಾಗಿದೆ.

ತಮಿಳುನಾಡಿನ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆ ಈ ಸಾಧನೆ ಮಾಡಿದೆ. ಸತತ ಏಳು ಗಂಟೆ ಕಾಲದ ಆಪರೇಷನ್ ರಷ್ಯಾದ ಲೀವ್ ಫೆಡರೆಂಕೊ ಎಂಬ ಮೂರು ವರ್ಷದ ಮಗುವಿನ ಜೀವ ಉಳಿಸಿದೆ.ಕೆಆರ್ ಬಾಲಾ ಅವರ ತಂಡದಿಂದ ಈ ಆಪರೇಷನ್ ಯಶಸ್ವಿಯಾಗಿದೆ.

ಅಮೆರಿಕದಲ್ಲಿ ಭಾರತೀಯ ವೈದ್ಯನ ಚಮತ್ಕಾರ..ನಮ್ಮ ಹೆಮ್ಮೆ

ತಂಡದಲ್ಲಿ ಕನ್ನಡಿಗರಾದ  ಕೊ ಡೈರೆಕ್ಟರ್ ಆಫ್ ಹಾರ್ಟ್ ಅಂಡ್ ಲಂಗ್ಸ್ ಟ್ರಾನ್ಸ್ ಫಾರ್ಮ್ ಟೀಮ್ ನ ಡಾ.ಸುರೇಶ್ ರಾವ್ ಇದ್ದರು.  

ಯುಕೆ ಮತ್ತು ಜರ್ಮನ್ ಇಂಜಿನಿಯರ್ ಗಳ ತಂಡಗಳ ಸಹಾಯದಿಂದ ಸತತವಾಗಿ ಸುಮಾರು 7 ಗಂಟೆ ಶಸ್ತ್ರಚಿಕಿತ್ಸೆಯನ್ನ ಯಶಸ್ವಿಯಾಗಿ ನಡೆಸಲಾಯಿತು. ಸದ್ಯ ಮಗು ಚೇತರಿಸಿಕೊಳ್ಳುತಿದ್ದು ಕೆಲವೇ ದಿನದಲ್ಲಿ‌ ಮಗು ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ.

Follow Us:
Download App:
  • android
  • ios