ಒಂದು ಹೊತ್ತು ಸ್ನಾನ ಮಾಡದಿದ್ದರೇನೆ ಕಿರಿಕಿರಿಯಾಗಲು ಶುರುವಾಗುತ್ತದೆ. ಮೈಯಿಂದ ದುರ್ಗಂಧ ಹೊರ ಬರುತ್ತದೆ. ಹೀಗಿರುವಾಗ ಬರೋಬ್ಬರಿ 22 ವರ್ಷ ಸ್ನಾನ ಮಾಡದಿದ್ರೆ ಹೇಗಿರಬಹುದು ಪರಿಸ್ಥಿತಿ. ಯಪ್ಪಾ ಹೀಗೂ ಇದ್ಯಾ ಅನ್ಬೇಡಿ. ಬಿಹಾರದಲ್ಲೊಬ್ಬ ವ್ಯಕ್ತಿ ಹಾಗೆ ಮಾಡಿದ್ದಾನೆ. 

ಸ್ನಾನ ಮಾಡುವುದು ಮನುಷ್ಯನ ದಿನಚರಿಯ ನಿತ್ಯಕರ್ಮಗಳಲ್ಲೊಂದು. ಸ್ನಾನ ಎಂದರೆ ಧೂಳು, ಬೆವರಿನಿಂದ ಆವೃತವಾಗಿರುವ ದೇಹವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಪ್ರಕ್ರಿಯೆಯಾಗಿದೆ. ಸ್ನಾನ ಮಾಡೋದು ಆರೋಗ್ಯಕ್ಕೆ ಒಳ್ಳೆಯದು. ಕೆಲವರು ದಿನಕ್ಕೆ ಎರಡು ಬಾರಿ ಸ್ನಾನ ಮಾಡ್ತಾರೆ. ಮತ್ತೆ ಕೆಲವರು ವಾರಕ್ಕೆ ಐದು ದಿನ ಸ್ನಾನ ಮಾಡ್ತಾರೆ. ಸ್ನಾನ ಮಾಡೋದು ಅವರವರ ಆಯ್ಕೆ. ಇನ್ನು ಕೆಲವರು ಬೆಳಗ್ಗೆ ಸ್ನಾನ ಮಾಡಿದರೆ, ಕೆಲವರು ರಾತ್ರಿ ಸ್ನಾನ ಮಾಡ್ತಾರೆ. ಕೆಲವರು ತಣ್ಣೀರಿನಲ್ಲಿ ಸ್ನಾನ ಮಾಡಿದರೆ, ಇನ್ನು ಕೆಲವರು ಬಿಸಿನೀರು ಉಪಯೋಗಿಸ್ತಾರೆ. ಇನ್ನು ಒಂದಷ್ಟು ಮಂದಿ ನೀರಿಗೆ ಉಪ್ಪು, ಅರಿಶಿನ, ತುಳಸಿ ಮೊದಲಾದವುಗಳನ್ನು ಬೆರೆಸಿ ಸ್ನಾನ ಮಾಡುತ್ತಾರೆ. ಆಲಸೀಗಳು ಮಾತ್ರ ದಿನ ಬಿಟ್ಟು ದಿನ ಸ್ನಾನ ಮಾಡೋ ಅಭ್ಯಾಸ ಹೊಂದಿರುತ್ತಾರೆ. ಇನ್ನೂ ಸೋಮಾರಿಗಳು ವಾರಕ್ಕೊಮ್ಮೆ ಸ್ನಾನ ಮಾಡುತ್ತಾರೆ. ಆದ್ರೆ ಇಲ್ಲೊಬ್ಬಾತ ಬರೋಬ್ಬರಿ 22 ವರ್ಷಗಳಿಂದ ಸ್ನಾನಾನೇ ಮಾಡಿಲ್ಲ.

ಒಬ್ಬ ವ್ಯಕ್ತಿಯು ಎರಡು ಅಥವಾ ಮೂರು ದಿನಗಳವರೆಗೆ ಸ್ನಾನ (Bath) ಮಾಡಲು ಸಾಧ್ಯವಾಗದಿದ್ದರೆ, ಅವನು ವಿಚಿತ್ರವಾಗಿ ವಾಸನೆ ಬರುತ್ತಾನೆ, ಅಷ್ಟೇ ಅಲ್ಲ ದೇಹದಿಂದ ದುರ್ವಾಸನೆಯೂ ಶುರುವಾಗುತ್ತದೆ. ಆದರೆ ಬಿಹಾರದ ಗೋಪಾಲಗಂಜ್ ಜಿಲ್ಲೆಯ ವ್ಯಕ್ತಿಯೊಬ್ಬ ಕಳೆದ 22 ವರ್ಷಗಳಿಂದ ಸ್ನಾನಾನೇ ಮಾಡಿಲ್ಲ. ಹೌದು ಅಚ್ಚರಿಯೆನಿಸಿದರೂ ಇದು ನಿಜ, ಇಷ್ಟು ವರ್ಷ ಸ್ನಾನ ಮಾಡುವುದಿಲ್ಲ ಎಂದು ವಿಶಿಷ್ಟ ಪ್ರತಿಜ್ಞೆ ಮಾಡಿದ್ದಾನೆ. ಅಲ್ಲದೆ ನೀಡಿರುವ ಕಾರಣ ಆಘಾತಕಾರಿಯಾಗಿದೆ.

ಊಟಕ್ಕೂ ಸ್ನಾನಕ್ಕೂ ಏನಾದ್ರೂ ಸಂಬಂಧವಿದ್ಯಾ ?

ಸ್ನಾನ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ ವ್ಯಕ್ತಿ
ವ್ಯಕ್ತಿಯ ಹೆಸರು ಧರ್ಮದೇವ್ ರಾಮ್. 62 ವರ್ಷ. ಇವರು ಗೋಪಾಲ್‌ಗಂಜ್ ಜಿಲ್ಲೆಯ ಮಂಜಾ ಬ್ಲಾಕ್‌ನ ಬೈಕುಂತ್‌ಪುರ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಕಳೆದ 22 ವರ್ಷಗಳಿಂದ ಸ್ನಾನ ಮಾಡಿಲ್ಲ. ಮಹಿಳೆ (Woman)ಯರ ಮೇಲಿನ ದೌರ್ಜನ್ಯಗಳು, ಭೂ ವಿವಾದಗಳು ಮತ್ತು ಪ್ರಾಣಿಗಳ ಹತ್ಯೆ ಕೊನೆಗೊಳ್ಳುವವರೆಗೂ ಸ್ನಾನ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾಗಿ ಧರ್ಮದೇವ್ ರಾಮ್ ಹೇಳುತ್ತಾರೆ. ಮಾತ್ರವಲ್ಲ ಈ ಹಿಂದೆ ಸ್ನಾನ ಮಾಡಿದ್ದರಿಂದ ನಾನು ಕೆಲಸ ಕಳೆದುಕೊಂಡೆ ಎಂದು ಧರ್ಮದೇವ್‌ ರಾಮ್‌ ಹೇಳುತ್ತಾರೆ. ಇದಾದ ನಂತರ ಅವರು ಸ್ನಾನ ಮಾಡಲಿಲ್ಲ.

2003ರಲ್ಲಿ ಅವರ ಪತ್ನಿ ಮಾಯಾದೇವಿ ನಿಧನರಾದ ನಂತರವೂ ಅವರು ಸ್ನಾನ ಮಾಡಿರಲಿಲ್ಲ. ಆಗ ಇಬ್ಬರು ಗಂಡು ಮಕ್ಕಳು ಸತ್ತರೂ ಒಂದು ಹನಿ ನೀರು ದೇಹಕ್ಕೆ ಸುರಿಯಲಿಲ್ಲ. ಅವರ ಈ ವಿಶಿಷ್ಟ ಪ್ರತಿಜ್ಞೆಗೆ ಅವರ ಕುಟುಂಬದ ಸದಸ್ಯರೂ ಬೆಂಬಲ ನೀಡಿದ್ದಾರೆ. ಆಶ್ಚರ್ಯವೆಂದರೆ ಈ ವ್ಯಕ್ತಿಗೆ ಇಲ್ಲಿಯವರೆಗೆ ಯಾವುದೇ ಕಾಯಿಲೆ ಬಂದಿಲ್ಲ ಅಥವಾ ದೇಹದ ಮೇಲೆ ಯಾವುದೇ ಕೊಳೆಯೂ ಸಹ ಇಲ್ಲ.

1987ರಲ್ಲಿ ಹೊಳೆದ ಉಪಾಯ ಜೀವನ ಬದಲಾಯಿಸಿತು !
1987ರಲ್ಲಿ ಇದ್ದಕ್ಕಿದ್ದಂತೆ ಭೂ ವಿವಾದಗಳು, ಪ್ರಾಣಿಗಳ ಹತ್ಯೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗತೊಡಗಿದವು ಎಂದು ನನಗೆ ಅನಿಸಿತು ಎಂದು ಧರ್ಮದೇವ್‌ಗೆ ಅನಿಸಿತ್ತಂತೆ. ಹೀಗಾಗಿ ಅಂದಿನಿಂದ ಸ್ನಾನ ಮಾಡದೇ ಇರಲು ನಿರ್ಧರಿಸಿದರು. ಈ ಸಮಯದಲ್ಲಿ, ಗುರುಗಳೊಂದಿಗೆ 6 ತಿಂಗಳುಗಳನ್ನು ಕಳೆದರು ಮತ್ತು ಗುರುದಕ್ಷಿಣೆಯನ್ನು ಪಡೆದರು. ಧರ್ಮದೇವನು ಭಗವಾನ್ ರಾಮನನ್ನು ತನ್ನ ಆದರ್ಶವೆಂದು ಪರಿಗಣಿಸುತ್ತಾನೆ ಮತ್ತು ಅವನ ಮಾತುಗಳನ್ನು ತನ್ನ ಜೀವನದಲ್ಲಿ ಬಳಸಿಕೊಳ್ಳಲು ಯತ್ನಿಸುತ್ತಾರೆ.

ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡಿದ್ರೆ ಸ್ನಾಯು ನೋವು ಕಾಡಲ್ಲ

ಕೆಲಸಕ್ಕೂ ರಾಜೀನಾಮೆ ಕೊಟ್ಟ ಧರ್ಮದೇವ್‌
ಧರ್ಮದೇವ್ 2000 ರಲ್ಲಿ ಕೋಲ್ಕತ್ತಾದ ಸೆಣಬಿನ ಕಾರ್ಖಾನೆಯಲ್ಲಿ ಕೆಲಸವನ್ನು ಮಾಡುತ್ತಿದ್ದರು, ಆದರೆ ಮಹಿಳೆಯರ ಮೇಲಿನ ದೌರ್ಜನ್ಯವನ್ನು ನೋಡಿದ ನಂತರ ಅವರು ಕೆಲಸಕ್ಕೆ ರಾಜೀನಾಮೆ ನೀಡಿದರು.. ಆದರೆ ಕುಟುಂಬದ ಸದಸ್ಯರ ಒತ್ತಡಕ್ಕೆ ಮಣಿದು ಮತ್ತೆ ಕಾರ್ಖಾನೆ ಕೆಲಸಕ್ಕೆ ಸೇರಿಕೊಂಡರು. ಅದರ ನಂತರ ಅವರು ಸ್ನಾನ ಮಾಡದಿರಲು ನಿರ್ಧರಿಸಿದರು. ಈ ವಿಷಯ ಕಾರ್ಖಾನೆ ಆಡಳಿತ ಮಂಡಳಿಗೆ ತಿಳಿದಾಗ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.