ಭಾರತ್‌ ಬಯೋಟೆಕ್‌ನಿಂದ ಕಾಲರಾ ಲಸಿಕೆ ಬಿಡುಗಡೆ

ಕೋವಿಡ್ ಲಸಿಕೆ ಬಿಡುಗಡೆ ಮಾಡಿದ ಹೈದರಾಬಾದ್‌ನ ಲಸಿಕೆ ತಯಾರಕ ಕಂಪನಿ ಭಾರತ್‌ ಬಯೋಟೆಕ್‌, ಕಾಲರಾ ರೋಗದ ವಿರುದ್ಧ ಅಭಿವೃದ್ಧಿಪಡಿಸಿದ ‘ಹಿಲ್ಚೋಲ್’ ಹೆಸರಿನ ಓರಲ್‌ ಲಸಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ. 

Bharat Biotech launches cholera vaccine akb

ಹೈದರಾಬಾದ್‌: ಕೋವಿಡ್ ಲಸಿಕೆ ಬಿಡುಗಡೆ ಮಾಡಿದ ಹೈದರಾಬಾದ್‌ನ ಲಸಿಕೆ ತಯಾರಕ ಕಂಪನಿ ಭಾರತ್‌ ಬಯೋಟೆಕ್‌, ಕಾಲರಾ ರೋಗದ ವಿರುದ್ಧ ಅಭಿವೃದ್ಧಿಪಡಿಸಿದ ‘ಹಿಲ್ಚೋಲ್’ ಹೆಸರಿನ ಓರಲ್‌ ಲಸಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ. ಇದು ಎರಡು ಡೋಸ್‌ನ ಲಸಿಕೆ ಆಗಿದ್ದು, ಮೊದಲ ಡೋಸ್ ಹಾಕಿದ 14ನೇ ದಿನಕ್ಕೆ 2ನೇ ಡೋಸ್ ಲಸಿಕೆ ಹಾಕಲಾಗುತ್ತದೆ. 1 ವರ್ಷ ಮೇಲ್ಪಟ್ಟ ಮಕ್ಕಳು ಇದನ್ನು ಪಡೆಯಲು ಅರ್ಹರಾಗಿದ್ದಾರೆ. ಅಮೆರಿಕಾ ಪ್ರಯೋಜಿತ ಹಿಲ್ಲೆಮನ್ ಲ್ಯಾಬೋರೆಟರಿಯಿಂದ ಪರವಾನಗಿ ಪಡೆದು ಹಿಲ್ಚೋಲ್ (ಬಿಬಿವಿ131) ಅಭಿವೃದ್ಧಿಪಡಿಸಿರುವುದಾಗಿ ಭಾರತ್‌ ಬಯೋಟೆಕ್‌ ಹೇಳಿಕೊಂಡಿದ್ದು, ಈ ಲಸಿಕೆಯ ಸುರಕ್ಷತೆ, ಇಮ್ಯುನೊಜೆನೆಸಿಟಿ ಹಾಗೂ ಪರಿಣಾಮಕಾರಿತ್ವವನ್ನು ಧೃಡಪಡಿಸಲಾಗಿದೆ.

ಭಾರತದ ಔಷಧಿ ನಿಯಂತ್ರಕರು ಇದಕ್ಕೆ ಅನುಮತಿ ನೀಡಿದ್ದು, ವಿಶ್ವದ ಇತರೆಡೆ ಕೂಡ ಅನುಮತಿ ಪಡೆಯಲಾಗುತ್ತದೆ ಎಂದು ಹೇಳಿದೆ. ಕಾಲರಾ ನಿಯಂತ್ರಣಕ್ಕೆ ಇದು ಅಗತ್ಯವಾಗಿದ್ದು, ಪ್ರತಿ ವರ್ಷ ವಿಶ್ವಾದ್ಯಂತ 100 ದಶಲಕ್ಷ ಡೋಸ್‌ ಲಸಿಕೆಗಳಿಗೆ ಬೇಡಿಕೆಯಿರುತ್ತದೆ. ಈಗ  ಕಾಲರಾ ವ್ಯಾಕ್ಸಿನ್‌ನ ತಯಾರಿಸುವ ಏಕೈಕ  ಕಂಪನಿ ಇರುವ ಕಾರಣ ಲಸಿಕೆಯ ಕೊರತೆ ಎದುರಾಗಿದೆ. ಈ ಕೊರತೆಯನ್ನು ಭಾರತ್ ಬಯೋಟೇಕ್ ನಿಗಿಸುವ ಸಾಧ್ಯತೆ ಇದೆ. 200 ದಶಲಕ್ಷ ಡೋಸ್‌ ಹಿಲ್ಚೋಲ್ ತಯಾರಿಸುವ ಸಾಮರ್ಥ್ಯದ ಘಟಕಗಳನ್ನು ಹೈದರಾಬಾದ್‌ ಮತ್ತು ಭುವನೇಶ್ವರದಲ್ಲಿ ಸ್ಥಾಪಿಸಲಾಗಿದೆ.

ಮಂಕಿಪಾಕ್ಸ್ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಡಬ್ಲ್ಯುಎಚ್‌ಒ ಸಲಹೆ

ಈ ವರ್ಷ 5900 ಜನ ಬಲಿ
2021ರಿಂದ ಕಾಲರಾ ಪ್ರಕರಣಗಳು ಮತ್ತು ಸಾವುಗಳು ಹೆಚ್ಚುತ್ತಿವೆ. 2023ರ ಆರಂಭದಿಂದ ಈ ವರ್ಷದ ಮಾರ್ಚ್‌ವರೆಗೆ 31 ದೇಶಗಳಲ್ಲಿ 8,24,479 ಪ್ರಕರಣಗಳು ದಾಖಲಾಗಿದ್ದು, 5900 ಸಾವುಗಳು ಸಂಭವಿಸಿವೆ. 

2 ತಿಂಗಳಲ್ಲಿ ಏರ್‌ಟೆಲ್‌ ವಿಂಕ್‌ ಮ್ಯೂಸಿಕ್‌ ಆ್ಯಪ್‌ ಬಂದ್‌

ನವದೆಹಲಿ: ಭಾರತದ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ಏರ್‌ಟೆಲ್‌ ಕಂಪನಿಯು ತನ್ನ ವಿಂಕ್‌ ಮ್ಯೂಸಿಕ್‌ ಆ್ಯಪ್‌ನನ್ನು ಶೀಘ್ರದಲ್ಲಿ ಮುಚ್ಚಲಿದೆ ಎಂದು ಕಂಪನಿ ತಿಳಿಸಿದೆ. ವಿಂಕ್‌ನ ನೌಕರರನ್ನು ಏರ್‌ಟೆಲ್‌ ಒಳಗೆ ಸೇರಿಸಿಕೊಳ್ಳಲು ಕಂಪನಿ ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಏರ್‌ಟೆಲ್‌ ವಕ್ತಾರರು,ಇನ್ನು ಕೆಲವೇ ತಿಂಗಳಲ್ಲಿ ವಿಂಕ್‌ ಮುಚ್ಚಲಿದೆ. ಇದರ ಬದಲಿಗೆ ಆ್ಯಪಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಐ ಫೋನ್‌ ಬಳಕೆದಾರರು ಆ್ಯಪಲ್‌ ಮ್ಯೂಸಿಕ್‌ ಬಳಸಬಹುದಾಗಿದೆ. ಮಿಕ್ಕವರಿಗೆ ರಿಚಾರ್ಜ್‌ನಲ್ಲಿ ಅನ್ಯ ಆಫರ್‌ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಕಡಿಮೆ ದರಕ್ಕೆ ಗರ್ಭಕಂಠದ ಕ್ಯಾನ್ಸರ್ ತಡೆ ಲಸಿಕೆ ನೀಡಿ: ರಾಜ್ಯಸಭೆಯ ತಮ್ಮ ಚೊಚ್ಚಲ ಭಾಷಣದಲ್ಲಿ ಸುಧಾಮೂರ್ತಿ ಮನವಿ

Latest Videos
Follow Us:
Download App:
  • android
  • ios