ಬೆಂಗಳೂರು: ಗರ್ಭಕೋಶವಿಲ್ಲದ ಯುವತಿಗೆ ವೈದ್ಯರಿಂದ ಯಶಸ್ವಿ ಯೋನಿ ಪುನರ್ ರಚನೆ ಶಸ್ತ್ರಚಿಕಿತ್ಸೆ
28 ವರ್ಷದ ಯುವತಿಯೊಬ್ಬಳು ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ವೈದ್ಯರನ್ನು ಸಂಪರ್ಕಿಸಿದಾಗ ಆಕೆಗೆ ಗರ್ಭಕೋಶ ಮತ್ತು ಯೋನಿ ಮಾರ್ಗದಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿದೆ. ಲ್ಯಾಪ್ರೋಸ್ಕೊಪಿಕ್ ಶಸ್ತ್ರಚಿಕಿತ್ಸೆ ಮೂಲಕ ಯೋನಿ ಪುನರ್ ರಚನೆ ಮಾಡಲಾಗಿದೆ.
ಸಾಮಾನ್ಯವಾಗಿ ಬಹುತೇಕ ಮಹಿಳೆಯರಿಗೆ ಗರ್ಭಕೋಶ ಮತ್ತು ಯೋನಿ ಮಾರ್ಗದಲ್ಲಿ ಸಮಸ್ಯೆ ಇರುವುದು ಗೊತ್ತೇ ಇರುವುದಿಲ್ಲ. ಈ ಸಮಸ್ಯೆಯು ಆಕೆಯ ಲೈಂಗಿಕ ಮತ್ತು ಕೌಟುಂಬಿಕ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಪ್ರಕರಣವೊಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವರದಿಯಾಗಿದೆ.
ಬಾಲಿವುಡ್ ನಟರಿಗಿಂತ ಭಿನ್ನ ಮೋಹನ್‌ಲಾಲ್ & ಮಮ್ಮೂಟ್ಟಿ ಸ್ನೇಹ, ಸಕ್ಸಸ್ ಸೀಕ್ರೆಟ್ ಹೇಳಿದ ಸ್ಟಾರ್ ನಟ
28 ವರ್ಷದ ಯುವತಿ ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ಅತಿಯಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ವೈದ್ಯರನ್ನು ಸಂಪರ್ಕಿಸಿದಳು. ಬಳಿಕ ಆಕೆಯನ್ನು ಪರೀಕ್ಷಿಸಿದ ವೈದ್ಯರು ಯುವತಿಯಲ್ಲಿ ಅಂಡಾಶಯವಿದ್ದು, ಯೋನಿ ಮಾರ್ಗದಲ್ಲಿ ಸಮಸ್ಯೆ ಮತ್ತು ಗರ್ಭಕೋಶವಿಲ್ಲದಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಮಾಹಿತಿ ನೀಡಿದ ಬೆಂಗಳೂರಿನ ವಾಸವಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ.ನಿಶಾ ಬುಚಾಡೆ, ಹೀಗೆ ಗರ್ಭಕೋಶವೇ ಬೆಳೆಯದಿರುವುದಕ್ಕೆ ಮುಲೇರಿಯನ್ ಏಜೆನಿಸಿಸ್ ಎನ್ನಲಾಗುತ್ತದೆ. ಇದೊಂದು ಅತೀ ವಿರಳವಾದ ಪ್ರಕರಣ ಎಂದರು.
ಯುವತಿಯ ಸಮಸ್ಯೆ ಆಲಿಸಿದ ವೈದ್ಯರು ಎಂಆರ್ ಐ ಪರೀಕ್ಷೆ ನಡೆಸಿದರು. ತದನಂತರ ಕೂಲಂಕುಶವಾಗಿ ವರದಿಯನ್ನು ಪರೀಕ್ಷಿಸಿದಾಗ, ಯೋನಿ ಇರಬೇಕಾದ ಜಾಗದಲ್ಲಿ ದೊಡ್ಡದಾದ ಗಡ್ಡೆಯಿತ್ತು ಇದರಿಂದಾಗಿ ಯುವತಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಆದರೆ ಯುವತಿಯಲ್ಲಿ ಗರ್ಭಾಶಯ ಮತ್ತು ಯೋನಿ ಇಲ್ಲದಿರುವುದು ಎಂಆರ್ ಐನಲ್ಲಿ ಖಚಿತವಾಯಿತು. ತದನಂತರ ಯುವತಿಯ ಹೊಟ್ಟೆ ನೋವಿಗೆ ಕಾರಣವಾದ ದೊಡ್ಡದಾದ ಗಡ್ಡೆಯನ್ನು ಲ್ಯಾಪ್ರೋಸ್ಕೊಪಿಕ್ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಯಿತು. ತದನಂತರ ಆ ಜಾಗದಲ್ಲಿ ಯೋನಿ ಪುನರ್ ರಚನೆ ಮಾಡಲಾಯಿತು ಎಂದು ಡಾ. ನಿಶಾ ತಿಳಿಸಿದ್ದಾರೆ.
ನಟ ಅಲ್ಲು ಅರ್ಜುನ್ ಬಂಧನದ ಬಗ್ಗೆ ಮೊದಲ ಬಾರಿಗೆ ಪವನ್ ಕಲ್ಯಾಣ್ ಅಚ್ಚರಿಯ ಪ್ರತಿಕ್ರಿಯೆ
ಇದೊಂದು ವಿರಳ ಪ್ರಕರಣ ಎಂದು ಗುರುತಿಸಲಾಗಿದ್ದು, ಶಸ್ತ್ರಚಿಕಿತ್ಸೆಯ ನಂತರ ಯುವತಿಯು ಎಲ್ಲ ಮಹಿಳೆಯರಂತೆ ಯೋನಿಯನ್ನು ಹೊಂದಿದ್ದು, ಸಾಮಾನ್ಯ ಸಂವೇದನೆಯೊಂದಿಗೆ ಚೇತರಿಕೆ ಕಾಣುತ್ತಿದ್ದಾಳೆ. ಅಲ್ಲದೆ ಯುವತಿಯು ಅಂಡಾಶಯ ಹೊಂದಿರುವುದರಿಂದ, ತನ್ನದೇ ಮಗುವನ್ನ ಪಡೆಯಲು ಸಶಕ್ತಳಾಗಿದ್ದಾಳೆ. ಆದರೆ ಗರ್ಭಕೋಶವಿಲ್ಲದಿರುವ ಕಾರಣ ಬಾಡಿಗೆ ತಾಯ್ತನದ ಮೂಲಕ ಆಕೆ ಮಗುವನ್ನು ಹೊಂದಬಹುದು ಎನ್ನುತ್ತಾರೆ ಚಿಕಿತ್ಸೆ ನೀಡಿದ ಸ್ತ್ರೀರೋಗ ತಜ್ಞರಾದ ಡಾ.ನಿಶಾ ಬುಚಾಡೆ.