ಮಹಿಳೆ ನೆತ್ತಿ ಮೇಲೆ ಬೆಳೆದ ಗೋಲಿಗಳ ಚೀಲ, ಅಚ್ಚರಿ ಪ್ರಕರಣಕ್ಕೆ ಬೆಂಗಳೂರು ವೈದ್ಯರ ಯಶಸ್ವಿ ಸರ್ಜರಿ!

ಮನುಷ್ಯನ ದೇಹದಲ್ಲಿ ಗೆಡ್ಡೆ, ಅನಗತ್ಯ ಮಾಂಸ ಬೆಳವಣಿಗೆ ಸೇರಿದಂತೆ ಹಲವು ಘಟನೆಗಳು ವರದಿಯಾಗಿದೆ. ಆದರೆ ತಲೆಯಲ್ಲಿ ಗೋಲಿಗಳ ರೀತಿಯ ಚೀಲ ಬೆಳೆದ ಮೊದಲ ಪ್ರಕರಣ ಇದಾಗಿದೆ. ಬೆಂಗಳೂರಿನ ಮಹಿಳೆಯ ತಲೆಯಲ್ಲಿ ಅಚ್ಚರಿಗೆ ಕಾರಣವಾದ ಈ ಗೋಲಿಗಳ ಚೀಲವನ್ನು ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

Bengaluru Doctor performed successful Operation on Sack of marbles growing on woman scalp ckm

ಬೆಂಗಳೂರು(ಆ.02) ವೈದ್ಯಲೋಕವನ್ನೇ ಅಚ್ಚರಿಗೊಳಿಸಿದ ಹಲವು ಪ್ರಕರಣಗಳಿವೆ. ಈ ಸಾಲಿಗೆ ಬೆಂಗಳೂರಿನ ಪ್ರಕರಣವೊಂದು ಸೇರಿಕೊಂಡಿದೆ. ಮಹಿಳೆ ತೀವ್ರ ತಲೆನೋವು, ಊತದಿಂದ ಬೆಂಗಳೂರಿನ ಶ್ರೀ ಸತ್ಯ ಸಾಯಿ ಮೆಡಿಕಲ್ ಸೈನ್ಸ್ ಆಸ್ಪತ್ರೆ ದಾಖಲಾಗಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಸ್ಕ್ರಾನಿಂಗ್ ಮಾಡಿದ್ದಾರೆ. ಈ ವೇಳೆ ಅಚ್ಚರಿ ಕಾದಿತ್ತು. ಕಾರಣ ಮಹಿಳೆಯ ತಲೆಯೊಳಗೆ ಗೋಲಿಗಳ ಚೀಲವೊಂದು ಬೆಳೆದಿತ್ತು. ಮಾರ್ಬಲ್ ಗೋಲಿಗಳ ರೀತಿಯಲ್ಲಿರುವ ಈ ಚೀಲವನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ. ಇದೀಗ ಮಹಿಳೆ ಆರೋಗ್ಯವಾಗಿದ್ದಾರೆ. 

52 ವರ್ಷದ ಬೆಂಗಳೂರಿನ ಮಹಿಳೆಗೆ(Bengaluru Women) ಬಾಲ್ಯದಿಂದಲೂ ತಲೆನೋವು ಸಾಮಾನ್ಯವಾಗಿತ್ತು. ಕೆಲವು ಬಾರಿ ವಿಪರೀತ ನೋವಿನಿಂದ ನರಳಿದ್ದಾರೆ. ಆದರೆ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ. ಇದೀಗ ಮಹಿಳೆಯ ತಲೆಯಲ್ಲಿ ಬೆಳೆದ ಗೋಲಿಗಳ ಚೀಲದ (Sack of Marbles) ಗಾತ್ರದೊಡ್ಡದಾಗಿದೆ. ತಲೆಯಲ್ಲಿ 6 ಇಂಚು ಉದ್ದ, 4 ಇಂಚು ಅಗಲ ಹಾಗೂ 5 ಇಂಚು ಎತ್ತರಕ್ಕೆ ಬೆಳೆದಿದೆ. ಇದರಿಂದ ವಿಪರೀತ ತಲೆನೋವು, ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದೆ.

ಸೊಂಡಿಲು, ಅಗಲವಾದ ಕಿವಿ: ರಾಜಸ್ಥಾನದಲ್ಲಿ ಗಣಪತಿ ಹೋಲುವ ಮಗುವಿನ ಜನನ!

ಶ್ರೀ ಸತ್ಯ ಸಾಯಿ ಮೆಡಿಕಲ್ ಕಾಲೇಜಿಗೆ ದಾಖಲಾದ ಮಹಿಳೆಯನ್ನು ವೈದ್ಯರು ತಪಾಸಣೆ ಮಾಡಿದ್ದಾರೆ. ಬಳಿಕ MRI ಸ್ಕ್ಯಾನ್‌ಗೆ ಒಳಪಡಿಸಿದ್ದಾರೆ. ತಲೆಯ  ಹಿಂಭಾಗದಲ್ಲಿ ಈ ಗೋಲಿಗಳ ಚೀಲ ಬೆಳೆದಿರುವುದು ಸ್ಕ್ಯಾನಿಂಗ್‌ನಲ್ಲಿ ಪತ್ತೆಯಾಗಿದೆ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಸೂಚಿಸಲಾಗಿತ್ತು.  ಇದು ಅಪರೂಪದ ಪ್ರಕರಣ, ಹೀಗಾಗಿ ನುರಿತ ವೈದ್ಯರ (Doctor) ತಂಡವನ್ನುರಚಿಸಿ ಶಸ್ತ್ರಚಿಕಿತ್ಸೆ ಮಾಡಲಾಯಿತು.

ಸರ್ಜರಿ ವೇಳೆ ಈ ಗೋಲಿಗಳು ದ್ರವ, ಕೂದಲು, ಕೊಬ್ಬಿನ ಅಣು ಹಾಗೂ ದಪ್ಪವಾದ ಹೊರಮೇಲೈಯನ್ನು ಹೊಂದಿತ್ತು ಎಂದು ವೈದ್ಯರು ಹೇಳಿದ್ದಾರೆ. ಇದು ಕೆರಾಟಿನ್‌ನಿಂದ ರೂಪಿತಗೊಂಡಿದೆ. ಆದರೆ ಇದರ ಬೆಳವಣಿಗೆಗೆ ಕಾರಣಗಳೇನು ಅನ್ನೋದು ಸ್ಪಷ್ಟವಾಗಿಲ್ಲ. ಕೂದಲು, ಉಗುರು, ಚರ್ಮದ ಮೇಲ್ಮೈ ಬೆಳೆಯಲು ಪ್ರಮುಖ ಕಾರಣವಾಗಿರುವ ಕೆರಾಟಿನ್ ಅಂಶದಿಂದಲೇ ಈ ಗೋಲಿಗಳ ಚೀಲ ಬೆಳೆದಿದೆ ಎಂದು ವೈದ್ಯರು ಹೇಳಿದ್ದಾರೆ.

ಕೆರಾಟಿನ್ ಅಂಶಗಳಿಂದ ಬೆಳೆಯುವ ದ್ರವ್ಯ ರಾಶಿಗಳನ್ನು ಡರ್ಮಾಯ್ಡ್ ಚೀಲ ಎಂದು ಕರೆಯುತ್ತಾರೆ. ವಿಶೇಷವಾಗಿ ಇದು ಭ್ರೂಣದ ಕೋಶಗಳಿಂದ ಬೆಳವಣಿಗೆಯಾಗುತ್ತದೆ. ಈ ಡರ್ಮಾಯ್ಡ್ ಚೀಲಗಳು ಕೂದಲು, ಹಲ್ಲು ಅಥವಾ ನರಗಳನ್ನು ಹೊಂದಿರುತ್ತದೆ. ಇದು ತಲೆ, ಕತ್ತಿನ ಜಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇಷ್ಟೇ ಅಲ್ಲ ದೇಹದ ಯಾವುದೇ ಭಾಗದಲ್ಲಿ ಇದು ಬೆಳೆಯಬಹುದು. 

ಬ್ರೈನ್ ಸರಿಯಾಗಿರ್ಬೇಕಾ? ಹಾಗಿದ್ರೆ ಹೀಗ್ ತಿನ್ನಿ, ಇಲ್ಲಾಂದ್ರೆ ಹುಚ್ಚರಾಗ್ಬೋದು

ಸಾಮಾನ್ಯವಾಗಿ ಈ ರೀತಿಯ ಡರ್ಮಾಯ್ಡ್ ಚೀಲಗಳು ಅಪಾಯಕಾರಿಯಲ್ಲ. ಆದರೆ ಮೂಳೆ ಸೇರಿದಂತೆ ಇತರ ದೇಹದ ಪ್ರಮುಖ ಅಂಗಗಳಿಗೆ ಸಮಸ್ಯೆ ತಂದೊಡ್ಡುತ್ತದೆ. ಈ ಮಹಿಳೆಯ ಪ್ರಕರಣದಲ್ಲಿ ಈ ಗೋಲಿಗಳ ಚೀಲ, ತೀವ್ರ ನೋವು ಹಾಗೂ ಆರೋಗ್ಯವನ್ನೇ ಹಾಳು ಮಾಡಿತ್ತು. ಇದೀಗ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮುಂದಿನ 6 ತಿಂಗಳ ಕಾಲ ಮಹಿಳೆಯ ಮೇಲೆ ವೈದ್ಯರ ನಿಗಾ ಇಡಲಿದ್ದಾರೆ.
 

Latest Videos
Follow Us:
Download App:
  • android
  • ios