ಸೊಂಡಿಲು, ಅಗಲವಾದ ಕಿವಿ: ರಾಜಸ್ಥಾನದಲ್ಲಿ ಗಣಪತಿ ಹೋಲುವ ಮಗುವಿನ ಜನನ!

ಗಣೇಶ ಹಬ್ಬಕ್ಕೆ ಮೂರ್ತಿಗಳ ತಯಾರಿಗಳು ಆರಂಭಗೊಂಡಿದೆ. ಇದರ ಬೆನ್ನಲ್ಲೇ ರಾಜಸ್ಥಾನದಲ್ಲಿ ಅಚ್ಚರಿಯೊಂದು ನಡೆದಿದೆ. ದೌಸಾದ ಆಸ್ಪತ್ರೆಯಲ್ಲಿ ಸೊಂಡಿಲು, ಅಗಲವಾದ ಕಿವಿ ಸೇರಿದಂತೆ ಗಣಪತಿ ಹೋಲುವ ಮಗುವಿನ ಜನನವಾಗಿದೆ. ಈ ಸುದ್ದಿ ತಿಳಿದು ಹಲವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

Baby born in Rajasthan Hospital resembles lord Ganesha like trunk other unusual features ckm

ಜೈಪುರ(ಆ.02) ಇದೊಂದು ವಿಶೇಷ ಹಾಗೂ ಅಚ್ಚರಿ ಪ್ರಕರಣ. ತುಂಬು ಗರ್ಭಿಣಿಯನ್ನು ರಾಜಸ್ಥಾನದ ದೌಸಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಜುಲೈ 31ರ ರಾತ್ರಿ 9.30ಕ್ಕೆ  ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಒಂದು ಕ್ಷಣ ಇಡೀ ಆಸ್ಪತ್ರೆಯೇ ಬೆಚ್ಚಿ ಬಿದ್ದಿತ್ತು. ಕಾರಣ ಈ ಮಗುವ ಭಗವಾನ್ ಗಣೇಶನ ಹೋಲುತ್ತಿದೆ. ಸೊಂಡಿಲು, ಅಗಲವಾದ ಕಿವಿ ಸೇರಿದಂತೆ ಗಣಪತಿಯಂತೆ ಹೋಲುತ್ತಿದೆ. ವೈದ್ಯರು, ನರ್ಸ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು ಓಡೋಡಿ ಬಂದಿದ್ದಾರೆ. ಮಗುವನ್ನು ನೋಡಿ ಹೌಹಾರಿದ್ದಾರೆ. ಈ ವಿಷಯ ಅಲ್ವಾರ ಜಿಲ್ಲೆಯಲ್ಲೇ ಭಾರಿ ಸಂಚಲನ ಸೃಷ್ಟಿಸಿದೆ. ಕೆಲವೇ ಕ್ಷಣದಲ್ಲಿ ಜನರು ಆಸ್ಪತ್ರೆಯತ್ತ ಆಗಮಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಅಲ್ವಾರ ಜಿಲ್ಲೆಯ ದೌಸಾದಲ್ಲಿನ ತುಂಬು ಗರ್ಭಿಣಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡ ಬೆನ್ನಲ್ಲೇ ಪತಿ ಹಾಗೂ ಕುಟುಬಂಸ್ಥರು ಆಸ್ಪತ್ರೆ ದಾಖಲಿಸಿದ್ದಾರೆ. ಪರಿಶೀಲನೆ ನಡೆಸಿದ ವೈದ್ಯರು ಹೆರಿಗೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಜುಲೈ 31ರ ರಾತ್ರಿ 9.30ಕ್ಕೆ ಗಂಡು ಮಗುವಿನ ಜನನವಾಗಿದೆ. ಆದರೆ ಈ ಮಗು ಗಣೇಶನನ್ನೇ ಹೋಲುತ್ತಿದೆ. ಸೊಂಡಿಲು, ಅಗಲವಾದ ಕಿವಿ, ಆಕಾರ ಎಲ್ಲವೂ ಗಣಪತಿ ರೀತಿಯಲ್ಲೇ ಇತ್ತು. 

4 ಕೈಗಳು ನಾಲ್ಕು ಕಾಲು ಎರಡು ಹೃದಯಗಳಿದ್ದ ಅಪರೂಪದ ಹೆಣ್ಣು ಮಗು ಜನನ

ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು ಮಗುವನ್ನು ನೋಡಿ ಒಂದು ಕ್ಷಣ ದಂಗಾಗಿದ್ದಾರೆ. ಇದು ದೇವರ ಸ್ವರೂಪವೇ ಅಥವಾ ಆರೋಗ್ಯ ಸಮಸ್ಯೆಯೆ ಎಂದು ಕಕ್ಕಾಬಿಕ್ಕಿಯಾಗಿದ್ದಾರೆ. ದುರಾದೃಷ್ಟವಶಾತ್ ಮಗು ಕೇವಲ 20 ನಿಮಿಷ ಮಾತ್ರ ಬದುಕುಳಿದಿತ್ತು. ಜನನವಾದ 20 ನಿಮಿಷಕ್ಕೆ ಮಗು ಮೃತಪಟ್ಟಿದೆ. ಇತ್ತ ಈ ಮಾಹಿತಿ ರಾಜಸ್ಥಾನದ ಅಲ್ವಾರ ಜಿಲ್ಲೆಯಲ್ಲಿ ಹಬ್ಬಿದ ಮಗುವನ್ನು ನೋಡಲು ಜನಸಾಗರವೇ ಹರಿದು ಬಂದಿದೆ. ಮಗು ಮೃತಪಟ್ಟಿದೆ, ಮಗುವಿನ ತಾಯಿ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ. 

ಅಚ್ಚರಿ ಮಗುವಿನ ಜನನ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆರೋಗ್ಯ ಆಧಿಕಾರಿ ಡಾ. ಶಿವರಾಂ ಮೀನಾ, ಇಂತಹ ಜನನದ ಹಿಂದೆ ಹಲವು ಕಾರಣಗಳಿರುತ್ತದೆ. ಕ್ರೋಮೋಸೋಮಲ್ ಆಸ್ವಸ್ಥತೆಗಳಿಂದ ಅನ್ಯಜೀವಿಗಳ ರೀತಿ, ಅಥವಾ ವಿಶೇಷ ಮಕ್ಕಳ ಜನನವಾಗುತ್ತದೆ. ಅನುವಂಶಿಕ ಅಸಹಜತೆಗಳು ಸೇರಿಕೊಳ್ಳುತ್ತವೆ. ಪ್ರತಿ ಗರ್ಭಿಣಿ ಮಹಿಳೆ ನಿಯಮಿತವಾಗಿ ತಪಾಸಣೆ ಮಾಡಬೇಕು. ಸರ್ಕಾರಕ್ಕೆ ಉಚಿತ ತಪಾಸಣೆ, ಪೌಷ್ಠಿಕ ಆಹಾರ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಗರ್ಭಿಣಿ ಮಹಿಳೆಯರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ತಪಾಸಣೆ, ವೈದ್ಯರ ಸಲಹೆ ಪಡೆಯಲು ಹಿಂದೇಟು ಹಾಕಬೇಡಿ ಎಂದು ಶಿವರಾಂ ಮೀನಾ ಹೇಳಿದ್ದಾರೆ.

ಯುಕೆಯಲ್ಲಿ ಅಚ್ಚರಿ: ಇಬ್ಬರಲ್ಲ, ಮೂರು ಜನರ ಡಿಎನ್‌ಎ ಹೊಂದಿದ ಮಗು ಜನನ

ಗರ್ಭಿಣಿ ಮಹಿಳೆಯರಿಗೆ ಮೊದಲ ತಿಂಗಳಿನಿಂದ ಆರೈಕೆಗೆ ಸರ್ಕಾರದಿಂದ ಹಲವು ಸೌಲಭ್ಯಗಳಿವೆ. ನಿಮ್ಮ ಮನಗೆ ಬಂದು ಕಾರ್ಯಕರ್ತರು ನೋಂದಣಿ ಮಾಡಿಕೊಳ್ಳಲಿದ್ದಾರೆ. ಬಳಿಕ ಪೌಷ್ಠಿಕ ಆಹಾರ, ಆರೈಕೆ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಲಿದ್ದಾರೆ. ನಿಯಮಿತವಾಗಿ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಶಿವರಾಂ ಮೀನಾ ಹೇಳಿದ್ದಾರೆ.

Latest Videos
Follow Us:
Download App:
  • android
  • ios