ಮಂಕಿಪಾಕ್ಸ್ ಭೀತಿ ಬೆಂಗಳೂರು ಏರ್ಪೋರ್ಟ್‌ನಲ್ಲಿ ಸ್ಕ್ರೀನಿಂಗ್, 21 ದಿನ ಕ್ವಾರಂಟೈನ್, ಮಾಸ್ಕ್ ಕಡ್ಡಾಯ ಸಾಧ್ಯತೆ!

ಭಾರತದಲ್ಲಿ ಮಂಕಿಪಾಕ್ಸ್‌ನ ಮೊದಲ ಪ್ರಕರಣ ದೆಹಲಿಯಲ್ಲಿ ಪತ್ತೆಯಾದ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯ ಮಂಕಿಪಾಕ್ಸ್ ಪರೀಕ್ಷೆ ಮತ್ತು ಪ್ರತ್ಯೇಕತಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.

bengaluru airport on high alert amid mpox outbreak  and Quarantine Mandatory Test gow

ಬೆಂಗಳೂರು (ಸೆ.17):  ಆಫ್ರಿಕಾ ಖಂಡ ಸೇರಿದಂತೆ ಜಗತ್ತಿನ ನೂರಾರು ದೇಶಗಳನ್ನು ಕಾಡುತ್ತಿರುವ ಮಂಕಿಪಾಕ್ಸ್‌  ಭಾರತಕ್ಕೂ ಇತ್ತೀಚೆಗೆ ಪುನಃ ಕಾಲಿಟ್ಟಿದೆ. ದೇಶದಲ್ಲಿ ಮಂಕಿಪಾಕ್ಸ್‌ನ ಮೊದಲ ಪ್ರಕರಣ ದೆಹಲಿಯಲ್ಲಿ ಪತ್ತೆಯಾದ ನಂತರ ಬೆಂಗಳೂರು  ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲಾ ಪ್ರಯಾಣಿಕರಿಗೂ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯದಲ್ಲಿ ಮಂಕಿಪಾಕ್ಸ್ ಹರಡುವುದನ್ನು ತಡೆಯಲು ಪ್ರತ್ಯೇಕತಾ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಪ್ರತಿದಿನ ಸುಮಾರು 2000 ಪ್ರಯಾಣಿಕರನ್ನು ಪರೀಕ್ಷಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿತ್ತು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗಾಗಿ ನಾಲ್ಕು ಮೀಸಲಾದ ಕಿಯೋಸ್ಕ್‌ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಸ್ಕ್ರೀನಿಂಗ್ ನಡೆಯುತ್ತದೆ. ಪ್ರತಿಯೊಬ್ಬ ಅಂತರರಾಷ್ಟ್ರೀಯ ಪ್ರಯಾಣಿಕರು ಇದರ ಮೂಲಕ ಹಾದು ಹೋಗಬೇಕು. ಇಲ್ಲಿ ಮಂಕಿಪಾಕ್ಸ್ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಯಾವುದೇ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಈ ಪರೀಕ್ಷೆಯಿಂದ ವಿನಾಯಿತಿ ಇಲ್ಲ. ಅಂತರರಾಷ್ಟ್ರೀಯ ಪ್ರಯಾಣಿಕರು ಪ್ರತ್ಯೇಕತಾ ಶಿಷ್ಟಾಚಾರವನ್ನು ಪಾಲಿಸುವುದನ್ನು ಸಹ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಮಂಕಿಪಾಕ್ಸ್ ಪತ್ತೆಯಾದರೆ 21 ದಿನ ಕ್ವಾರಂಟೈನ್‌ ನಲ್ಲಿ ಇರಬೇಕಾಗುತ್ತದೆ.

ಖಾಸಗಿ ಭಾಗದ ವಿಡಿಯೋ ಮಾಡಿದ ಅಭಿಮಾನಿಗಳ ನಡವಳಿಕೆಗೆ ಅರ್ಧಕ್ಕೆ ನೃತ್ಯ ನಿಲ್ಲಿಸಿ ವೇದಿಕೆ ಇಳಿದ ಪ್ರಸಿದ್ಧ ಗಾಯಕಿ!

ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಏನು ಹೇಳಿದೆ?
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಆರೋಗ್ಯ ಮತ್ತು ಸುರಕ್ಷತಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ ಎಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ವಕ್ತಾರರು ತಿಳಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಪ್ರತಿಯೊಬ್ಬ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ. ಅಂತರರಾಷ್ಟ್ರೀಯ ಪ್ರಯಾಣಿಕರಿಗಾಗಿ ಪ್ರತ್ಯೇಕ ವಲಯವನ್ನು ರಚಿಸಲಾಗಿದೆ. ಈ ಎಲ್ಲಾ ನಿಯಮಗಳಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ, ವಿಶೇಷವಾಗಿ ಆಫ್ರಿಕನ್ ದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರನ್ನು ಹೆಚ್ಚಿನ ಮೇಲ್ವಿಚಾರಣೆ ಮಾಡಲಾಗುತ್ತಿದೆ ಇದರಿಂದ ಕರ್ನಾಟಕದಲ್ಲಿ ಮಂಕಿಪಾಕ್ಸ್ ಹರಡುವುದನ್ನು ಸಂಪೂರ್ಣವಾಗಿ ತಡೆಯಬಹುದು.

ನಮ್ಮ ವೈದ್ಯಕೀಯ ಸೇವೆಯು ಆರೋಗ್ಯ ಪ್ರಾಧಿಕಾರಗಳ ಮಾರ್ಗದರ್ಶನದೊಂದಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣವಾಗಿ ಸಮರ್ಥವಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ಆರೋಗ್ಯ ತಜ್ಞರ ಪ್ರಕಾರ, ಜ್ವರ, ಚರ್ಮದ ಮೇಲೆ ದದ್ದುಗಳು, ತೀವ್ರ ತಲೆನೋವು, ಸ್ನಾಯುಗಳಲ್ಲಿ ನೋವು, ಬೆನ್ನು ನೋವು ಮುಂತಾದವು ಮಂಕಿಪಾಕ್ಸ್‌ನ ಪ್ರಮುಖ ಲಕ್ಷಣಗಳಾಗಿವೆ. ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಸಹಕರಿಸಬೇಕೆಂದು ಪ್ರಾಧಿಕಾರ ಮನವಿ ಮಾಡಿದೆ. ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಇದು ಕಡ್ಡಾಯ ತಪಾಸಣೆಯಾಗಿದೆ.

ಹಬ್ಬಕ್ಕೆ ಅಮೆಜಾನ್, ಫ್ಲಿಪ್‌ಕಾರ್ಟ್ ಭಾರೀ ಡಿಸ್ಕೌಂಟ್‌ , ಸೆ. 27, 29 ರಂದು ಅತಿದೊಡ್ಡ ವಾರ್ಷಿಕ ಮಾರಾಟ ಮೇಳ

 ವಿಶೇಷವಾಗಿ ಆಫ್ರಿಕನ್ ದೇಶಗಳಿಂದ ಬರುವವರು ಮಂಕಿಪಾಕ್ಸ್ ವೈರಸ್‌ಗಾಗಿ ಸ್ಕ್ರೀನಿಂಗ್‌ಗೆ ಒಳಗಾಗುತ್ತಾರೆ ಮತ್ತು ಪಾಸಿಟಿವ್ ಕಂಡುಬಂದಲ್ಲಿ 21 ದಿನಗಳ ಕಡ್ಡಾಯ ಕ್ವಾರಂಟೈನ್ ಮತ್ತು ಐಸೋಲೇಶನ್‌ಗೆ ಒಳಗಾಗಬೇಕಾಗುತ್ತದೆ ಎಂದು ಹೇಳಿದ್ದಾರೆ. ಆಗಸ್ಟ್ 14 ರಂದು, ವಿಶ್ವ ಆರೋಗ್ಯ ಸಂಸ್ಥೆ (WHO) ಮಂಕಿಪಾಕ್ಸ್ ಅನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತು.  2020 ರಲ್ಲಿ COVID-19 ದೇಶವನ್ನು ಪ್ರವೇಶಿಸಿದಾಗ ಅದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಪ್ರಯಾಣಿಕರಿಗೆ 21 ದಿನಗಳ ಕಡ್ಡಾಯ ಕ್ವಾರಂಟೈನ್ ಮಾಡಲಾಗಿತ್ತು. 

Mpox, ಹಿಂದೆ ಮಂಕಿಪಾಕ್ಸ್ ಎಂದು ಕರೆಯಲಾಗುತ್ತಿತ್ತು. ಇದು RNA ವೈರಸ್‌ಗಳ ವರ್ಗಕ್ಕೆ ಸೇರುತ್ತದೆ. ಇದು ಮೊದಲು ಆಗ್ನೇಯ ಏಷ್ಯಾದ ಒಂದು ಸಣ್ಣ ಹಳ್ಳಿಯಲ್ಲಿ ಪತ್ತೆಯಾಯಿತು, ಅಲ್ಲಿ ಹಲವಾರು ಜನರು ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳಿಂದ ಬಳಲಿದರು.  ಪ್ರಾಣಿಗಳಿಂದ ಮನುಷ್ಯನಿಗೆ ಹರಡುವ ವೈರಸ್ ಆಗಿದೆ.  ಕೆಮ್ಮುವಾಗ, ಸೀನುವಾಗ ಅಥವಾ ಮಾತನಾಡುವಾಗ ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.  ಹೀಗಾಗಿ ಮತ್ತೆ ಮಾಸ್ಕ್ ಧರಿಸುವುದು ಉತ್ತಮವಾಗಿದೆ.

Latest Videos
Follow Us:
Download App:
  • android
  • ios