Asianet Suvarna News Asianet Suvarna News

Beauty Tips: ಪಾದದ ಸಮಸ್ಯೆಗಳಿಗೆ ಇಲ್ಲಿವೆ ಸುಲಭ ಉಪಾಯ!

ಸಾಮಾನ್ಯವಾಗಿ ಜನರು ಕಾಲಿನ ಬಗ್ಗೆ ಗಮನ ಕೊಡುವುದು ಬಹಳ ಕಡಿಮೆ ಯಾರಾದ್ರೂ ಹೊಸ ಚಪ್ಪಲಿಯನ್ನು ಖರೀದಿಸಿದಾಗ ಅಥವಾ ಕಾಲು ಬೆರಳುಗಳ ನಡುವೆ ತುರಿಕೆ ಕಂಡು ಬಂದಾಗ ಮಾತ್ರ ಕಾಲನ್ನು ನೋಡಿಕೊಳ್ಳುತ್ತಾರೆ. ನೀವು ಕೂಡ ಹೀಗೆ ನಿಮ್ಮ ಕಾಲನ್ನು ತುಂಬಾ ಸಮಯಗಳ ಕಾಲ ಮರೆತು ಬಿಟ್ಟಿದ್ದರೆ ಈ ರೀತಿಯಾಗಿ ಮಾಡಿ.

Beauty of foot could make you feel confidence here tips
Author
Bangalore, First Published Jan 7, 2022, 9:13 PM IST

ಸಾಮಾನ್ಯವಾಗಿ ಜನರು ದೇಹದ (body) ಬಗ್ಗೆ, ತಲೆಕೂದಲಿನ (hairs) ಬಗ್ಗೆ, ಮುಖದ (face) ಬಗ್ಗೆ ಹೀಗೆ ಎಲ್ಲಾ ಅಂಗಾಗಳ ಬಗ್ಗೆ ಕಾಳಜಿಯನ್ನು ತೋರಿಸುತ್ತೇವೆ ಆದರೆ ಪಾದಗಳ (feet) ಬಗ್ಗೆ ಮಾರೆತೇ ಬಿಡುತ್ತೀವಿ. ಕಾಲಿನ ಪಾದಗಳು ಕೂಡ ನಮ್ಮ ದೇಹದ ಭಾಗನೆ ಅಲ್ವಾ. ಕಾಲನ್ನು ಯಾರು ನೋಡುತ್ತಾರೆ ಅನ್ನುವ  ಅಭಿಪ್ರಾಯ ಕೆಲವರಲ್ಲಿ ಇರುತ್ತದೆ. ಆದರೆ ಇಡೀ ದೇಹವನ್ನು ಹೊತ್ತುಕೊಂಡು ಓಡಾಡುವ ಹೊಣೆ ಪಾದಗಳ ಮೇಲೆ ಇದೆ ಅಂದಮೇಲೆ ಅವುಗಳ ಕಾಳಜಿ ನಮ್ಮದೆ. ಮನೆಯಲ್ಲಿಯೇ ಈ ಕೆಲವು ಸುಲಭ ಉಪಾಯಗಳನ್ನು (easy tips) ಪಾಲಿಸುವುದರ ಮೂಲಕ ಕಾಲಿನ ಕಾಳಜಿ ಮಾಡಬಹುದು. ವಿನೇಗರ್ (vinegar) ನಲ್ಲಿ ಆ ಗುಣಗಳಿವೆ.ಅದನ್ನು ಹೇಗೆ ಬಳಸಿಕೊಳ್ಳುವುದರ ಮೂಲಕ ಹೆಚ್ಚಿನ  ಪ್ರಯೋಜನಗಳನ್ನು ಉಪಯೋಗಗಳನ್ನು ಪಡೆಯಬಹುದು ಎಂದು ತಿಳಿಯೋಣ. 

 ಈಜುಗಾರರ ಎಸ್ಜಿಮಾವನ್ನು(eczema) ಕಡಿಮೆ ಮಾಡುತ್ತದೆ. 
 ಎಸ್ಜಿಮಾವು  ಪಾದದ ಮೇಲೆ ಕಾಣಿಸಿಕೊಳ್ಳುವ ಒಂದು ಸಾಮಾನ್ಯ ಶಿಲೀಂದ್ರ ಸೋಂಕು.  ಇದು ಸಾಮಾನ್ಯವಾಗಿ ಕಾಲಿನ ಅಡಿ ಭಾಗ ಹಾಗೂ ಕಾಲು ಬೆರಳುಗಳ ನಡುವೆ ಕಂಡುಬರುತ್ತದೆ.  ಈಜು ಮಾಡುವುದರಿಂದ ಜೊತೆಗೆ ಬರಿಗಾಲಿನಲ್ಲಿ ಹೆಚ್ಚು ನಡೆಯುವುದರಿಂದ ಕೂಡ ಈ ಸೋಂಕು ತಗುಲುವ ಅವಕಾಶಗಳಿವೆ.  ಇದರಿಂದಾಗಿ ತುರಿಕೆ, ಉರಿಯೂತ ಮತ್ತು ಗುಳ್ಳೆಗಳು ಕಾಣಿಸಿಕೊಳ್ಳಬಹುದು ಹಾಗೇ ಬಿಟ್ಟರೆ ಬೇರೆ ಭಾಗಗಳಿಗೆ ಹರಡುವ ಅವಕಾಶಗಳು ಕೂಢ ಇದೆ.  ಇದಕ್ಕೆ ಪರಿಹಾರವಾಗಿ ವಿನೆಗರ್ ಹಾಕಿದ ನೀರಿನಲ್ಲಿ ನಿಮ್ಮ ಪಾದಗಳನ್ನು ಸ್ನಾನಮಾಡುವುದರಿಂದ ರೋಗಲಕ್ಷಣ ಕಡಿಮೆ ಮಾಡಬಹುದು ಮತ್ತು ಸೋಂಕನ್ನು ನಿವಾರಿಸಿಕೊಳ್ಳ ಬಹುದು. 

 ಪಾದಗಳು ಬೆವರಿನ (sweat) ವಾಸನೆಯಿಂದ ವಿಮುಕ್ತಿ ಹೊಂದುತ್ತದೆ. 
 ಸಾಮಾನ್ಯವಾಗಿ ಕಾಲಿಗೆ ಶೂ ಧರಿಸಿದಾಗ ಕಾಡಿನಿಂದ ಒಂದು ದುರ್ಗಂಧ  (bad smell) ಹೊರಹೊಮ್ಮುತ್ತದೆ ಇದು ಬೆವರು ಹಾಗೂ ಬ್ಯಾಕ್ಟೀರಿಯಾ ಎರಡರ ಸಂಯೋಜನೆಯಿಂದ (Combination) ಉಂಟಾಗುತ್ತದೆ. ಇದು ನಮಗೆ ಮಾತ್ರವಲ್ಲದೆ ಸುತ್ತಲಿನ ಜನರಿಗೂ ಕೂಡ ಕಿರಿ ಕಿರಿ (irritation) ಉಂಟು ಮಾಡಬಹುದು. ಈ ಸಮಸ್ಯೆಗೂ ಕೂಡ ವಿನೆಗರ್ ನಲ್ಲಿ ಪರಿಹಾರವಿದೆ. ಹೀಗೆ ವಾಸನೆ ಬರುವ ಕಾಲಿನ ಪಾದಗಳನ್ನು ವಿನೆಗರ್ ಹಾಕಿದ ನೀರಿನಲ್ಲಿ ತೊಳೆಯುವುದರಿಂದ  ಈ ಕೆಟ್ಟ ವಾಸನೆಯಿಂದ ಸಂಪೂರ್ಣ ವಿಮುಕ್ತಿ ಪಡೆಯಬಹುದು. 

ಸ್ಟ್ರಾಬರಿ ಕಾಲಿನಿಂದ ಮುಕ್ತಿ ಪಡೆಯಲು ಇಲ್ಲಿವೆ ಟಿಪ್ಸ್

ಒರಟು ಕಾಲುಗಳು ಹಾಗೂ ಒಡೆದ ಹಿಮ್ಮಡಿಗಳಿಗೂ (cracked heels) ಇಲ್ಲಿದೆ ಪರಿಹಾರ
ಚಳಿಗಾಲದಲ್ಲಂತೂ ಒಡೆದ ಹಿಮ್ಮಡಿಯು ಎಲ್ಲರಲ್ಲೂ ಕಂಡು ಬರುವ ಸಮಸ್ಯೆ,  ಒಡೆದ ಹಿಮ್ಮಡಿ ಹಾಗೂ ಒಣ ಕಾಲುಗಳಿಂದ ಕೆಲವೊಮ್ಮೆ  ನೋವು ಕಾಣಿಸಿಕೊಳ್ಳುತ್ತದೆ  ಅಷ್ಟೇ ಅಲ್ಲದೆ ಇದು ಒಂದು ರೀತಿಯ ಹಿಂಸೆಯನ್ನು ಉಂಟುಮಾಡುತ್ತದೆ.  ವಿನೆಗರ್ ಈ ಸಮಸ್ಯೆಗೆ ಉತ್ತಮ ಪರಿಹಾರ ಇದು ಕಾಲುಗಳಿಗೆ ಮೋಸ್ಚರೈಸ್ (Moisturizer) ಮಾಡುತ್ತದೆ.  ಜೊತೆಗೆ ಪಾದಗಳ ಚರ್ಮವನ್ನು ಸಾಕಷ್ಟು ಮೃದುವಾಗಿರಿಸುತ್ತದೆ (smoothing). 

ವಿನೇಗರ್‌ ಸ್ನಾನ ಮಾಡುವ ವಿಧಾನ
ಕಾಲುಗಳು ನಮ್ಮ ಇಡೀ ದೇಹವನ್ನು ಹೊತ್ತುಕೊಂಡು  ತಿರುಗುತ್ತದೆ ಹೀಗಿರುವಾಗ ಇವುಗಳ ಕಾಳಜಿ ಬಹಳ ಅವಶ್ಯಕ.   ವಿನೆಗರ್ ಸ್ನಾನದಿಂದ ಇಷ್ಟೊಂದು ಉಪಯೋಗಗಳಿವೆ ಎಂದರೆ ಇದನ್ನು ಮಾಡುವ ವಿಧಾನ ಹೀಗಿದೆ.  ಒಂದು ದೊಡ್ಡ ಲೋಟದಲ್ಲಿ (glass) ವಿನೇಗರ್ ಅನ್ನು ಬಕೇಟ್ನಲ್ಲಿ (bucket) ತೆಗೆದುಕೊಳ್ಳಬೇಕು ಅದಕ್ಕೆ ಎರಡು ದೊಡ್ಡ ಗಳಷ್ಟು ಬಿಸಿ ನೀರು ಹಾಕಬೇಕು.  ಇದೇ ಅಳತೆಯ ಪ್ರಕಾರ ಬಕೆಟ್  ನಿಮ್ಮ ಪಾದವನ್ನು ಸಂಪೂರ್ಣ ಮುಚ್ಚುವ ಪ್ರಮಾಣದ ವರೆಗೂ ತುಂಬಿಸಬೇಕು.  ಸುಮಾರು ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ಪ್ರತಿ ದಿನ ಹೀಗೆ ಮಾಡಿದರೆ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

ಚಪ್ಪಲಿ ಖರೀದಿಸುವಾಗ ಈ ತಪ್ಪು ಮಾಡಬೇಡಿ

Follow Us:
Download App:
  • android
  • ios