Asianet Suvarna News Asianet Suvarna News

Health Tips : ಒಂದೇ ಕಾಲಲ್ಲಿ ಬ್ಯಾಲೆನ್ಸ್ ಮಾಡೋಕಾಕ್ತಿಲ್ವಾ? ಎಚ್ಚರ

ಆರೋಗ್ಯಕರ ವ್ಯಕ್ತಿ ದೀರ್ಘಕಾಲ ಬದಕ್ತಾನೆ. ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಯ ಆಯಸ್ಸು ಕಡಿಮೆ. ಅನೇಕ ಬಾರಿ ನೋಡೋಕೆ ಸದೃಢವಾಗಿ ಕಂಡ್ರೂ ವ್ಯಕ್ತಿ ಆರೋಗ್ಯವಾಗಿರೋದಿಲ್ಲ. ಇದನ್ನು ಕೆಲ ವಿಧಾನಗಳ ಮೂಲಕ ಕಂಡು ಹಿಡಿಯಬಹುದು. ಅನೇಕರಿಗೆ ಬಾಡಿ ಬ್ಯಾಲೆನ್ಸ್ ಮಾಡೋದು ಕಷ್ಟ. ಅವ್ರು ಈ ಸುದ್ದಿನಾ ಅವಶ್ಯಕವಾಗಿ ಓದಿ. 
 

Be careful if can not balance yourself in one leg
Author
Bangalore, First Published Jun 24, 2022, 4:02 PM IST

ಕೈಕಾಲು (Hand Foot) ನೋವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಯುವಕರು, ವೃದ್ಧ (Elder) ರು ಸೇರಿದಂತೆ ಎಲ್ಲರೂ ಕೈ – ಕಾಲು ನೋವಿನಿಂದ ಬಳಲುತ್ತಿದ್ದಾರೆ.  ಬದಲಾದ ಜೀವನ ಶೈಲಿ (Lifestyle , ಕುಳಿತಲ್ಲಿಯೇ ಕೆಲಸ (Work) ಹಾಗೂ ಒತ್ತಡ (Stress) ದಿಂದಾಗಿ ನೋವಿನ ಸಮಸ್ಯೆ ಹೆಚ್ಚಾಗಿ ಕಾಡ್ತಿದೆ. ನೋವಿಗೆ ಪರಿಹಾರ ಕಂಡುಕೊಳ್ಳಲು ಜನರು ಯೋಗ (Yoga) ದ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಏಕೆಂದರೆ, ಯೋಗ ನೋವಿನಿಂದ ಪರಿಹಾರವನ್ನು ನೀಡುವುದಲ್ಲದೆ, ಮನಸ್ಸ (Mind) ನ್ನು ಶಾಂತಗೊಳಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಜನರು ಸಾಮಾನ್ಯವಾಗಿ ಯೋಗ ಮಾಡುವಾಗ ದೇಹವನ್ನು ಬ್ಯಾಲೆನ್ಸ್ (Balance) ಮಾಡಲು ತುಂಬಾ ಕಷ್ಟಪಡ್ತಾರೆ. ನೀವೂ ದೇಹವನ್ನು ಬ್ಯಾಲೆನ್ಸ್ ಮಾಡಲು ಕಷ್ಟಪಡ್ತಿದ್ದರೆ ಇದನ್ನು ಓದಿ. ದೇಹದ ಬ್ಯಾಲೆನ್ಸ್ ನಿಮ್ಮ ಆಯಸ್ಸನ್ನು ನಿರ್ಧರಿಸುತ್ತದೆ. 

ಸಂಶೋಧನೆಯಲ್ಲಿ ಬಹಿರಂಗವಾದ ಸತ್ಯ : ಸಾಮಾನ್ಯವಾಗಿ ಯೋಗ ಮಾಡುವಾಗ ಒಂದು ಕಾಲಿನಲ್ಲಿ ನಿಂತು ಬ್ಯಾಲೆನ್ಸ್ ಮಾಡುವಂತೆ ಹೇಳಲಾಗುತ್ತದೆ. ಆದರೆ ಕೆಲವರಿಗೆ ಇದು ಸಾಧ್ಯವಾಗುವುದಿಲ್ಲ. ಕಂಬ ಅಥವಾ ಗೋಡೆ (Wall) ಬೆಂಬಲವಿಲ್ಲದೆ ಅವರು ಒಂದು ಕಾಲಿನ ಮೇಲೆ ನಿಲ್ಲಲು ಆಗೋದಿಲ್ಲ. ಒಂದ್ವೇಳೆ ನಿಮಗೂ ಒಂದು ಕಾಲಿನ ಮೇಲೆ ನಿಲ್ಲಲು ಬ್ಯಾಲೆನ್ಸ್ ಸಿಗ್ತಿಲ್ಲವೆಂದ್ರೆ  ಇದು ಗಂಭೀರ ಸಮಸ್ಯೆ (Problem) ಯ ಸಂಕೇತವಾಗಿದೆ. ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ (British Journal Of Sports Medicine) ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ನೀವು ಒಂದು ಕಾಲಿನ ಮೇಲೆ ನಿಲ್ಲಲು ಸಾಧ್ಯವಾಗದಿದ್ದರೆ ಸಾವಿನ ಅಪಾಯವು ಕೆಲವೇ ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ ಎಂದರ್ಥ. ಅಂದರೆ  ನಿಮ್ಮ ದೇಹದ ಸಮತೋಲನವು ನೀವು ಎಷ್ಟು ಕಾಲ ಬದುಕುತ್ತೀರಿ ಎಂಬುದನ್ನು ಹೇಳುತ್ತದೆ.

ವಯಸ್ಸಾದವರಲ್ಲಿ ಹೆಚ್ಚುತ್ತೆ ತೊಂದರೆ : ಸಂಶೋಧನೆಯ ಪ್ರಕಾರ, 30 ರಿಂದ 50 ವರ್ಷ ವಯಸ್ಸಿನ ಜನರು ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಜನರು ಒಂದು ಕಾಲಿನ ಮೇಲೆ ನಿಲ್ಲಲು ಅಥವಾ 10 ಸೆಕೆಂಡುಗಳ ಕಾಲ ಸಮತೋಲನದಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಯಾರು 10 ಸೆಕೆಂಡಿನ ಕಾಲ ಒಂದು ಕಾಲಿನ ಮೇಲೆ ನಿಲ್ಲುವುದಿಲ್ಲವೋ ಅವರು 10 ವರ್ಷಗಳಲ್ಲಿ ಸಾವಿನ ಅಪಾಯವನ್ನು ಹೊಂದಿರುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಯುಕೆ, ಯುಎಸ್, ಆಸ್ಟ್ರೇಲಿಯಾ, ಫಿನ್ಲ್ಯಾಂಡ್ ಮತ್ತು ಬ್ರೆಜಿಲ್ ತಜ್ಞರು 12 ವರ್ಷಗಳ ಕಾಲ ಇದನ್ನು ಅಧ್ಯಯನ ಮಾಡಿದ್ದಾರೆ. ನಂತರ ಈ ಫಲಿತಾಂಶಗಳು ಪ್ರಕಟಿಸಿದ್ದಾರೆ. 

ರಾತ್ರಿ ಲೈಟ್‌ ಆನ್ ಮಾಡಿಟ್ಟು ಮಲಗಿದ್ರೆ ಡಯಾಬಿಟಿಸ್‌ ಅಪಾಯ ಹೆಚ್ಚು !

12 ವರ್ಷಗಳ ಕಾಲ 1702 ಜನರ ಮೇಲೆ ಅಧ್ಯಯನ : 2008 ರಿಂದ 2020 ರವರೆಗಿನ ಈ ಸಂಶೋಧನೆ ನಡೆದಿದೆ. ಸಂಶೋಧನೆಯಲ್ಲಿ  51 ರಿಂದ 75 ವರ್ಷ ವಯಸ್ಸಿನ 1702 ಜನರು ಪಾಲ್ಗೊಂಡಿದ್ದರು ಎನ್ನಲಾಗಿದೆ. ಎಲ್ಲ ಜನರಿಗೂ ಯಾವುದೇ ಬೆಂಬಲವಿಲ್ಲದೆ 10 ಸೆಕೆಂಡುಗಳ ಕಾಲ ಒಂದು ಕಾಲಿನ ಮೇಲೆ ನಿಲ್ಲುವಂತೆ ಕೇಳಲಾಗಿದೆ.  ಹಾಗೆ ನಿಲ್ಲುವಾಗ  ಒಂದು ಕಾಲನ್ನು ಇನ್ನೊಂದು ಕಾಲಿನ ಹಿಂದೆ ಇಡುವಂತೆ ಕೇಳಲಾಗಿತ್ತು. ಈ ಸಮಯದಲ್ಲಿ ಎರಡೂ ಕೈಗಳನ್ನು ಬದಿಯಲ್ಲಿ ಇಡುವಂತೆ ಸೂಚಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಪಾಲ್ಗೊಂಡ 5 ಜನರಲ್ಲಿ ಒಬ್ಬರು ಅನುತ್ತೀರ್ಣರಾಗಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.  

ಬಾಡಿಗೆ ತಾಯಿಗೆ 3 ವರ್ಷ ಆರೋಗ್ಯ ವಿಮೆ ಕಡ್ಡಾಯ

ಸಂಶೋಧನೆಯ ಪ್ರಕಾರ, ಈ ಪರೀಕ್ಷೆಯಲ್ಲಿ ವಿಫಲರಾದವರ ಆರೋಗ್ಯವು ಹದಗೆಟ್ಟಿದೆ. ಆ ಜನರಲ್ಲಿ ಟೈಪ್-2 ಡಯಾಬಿಟಿಸ್ ಸಾಮಾನ್ಯವಾಗಿತ್ತು. ಜೊತೆಗೆ ಕೆಲವರು ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆಯೂ ದೂರಿದ್ದರು. ಅಂದ್ರೆ ಈ ವ್ಯಕ್ತಿಗಳು ದೈಹಿಕ ವ್ಯಾಯಾಮ ಅಥವಾ ಯಾವುದೇ ದೈಹಿಕ ಕೆಲಸವನ್ನು ಮಾಡೋದಿಲ್ಲ ಎಂದರ್ಥ. 
 

Follow Us:
Download App:
  • android
  • ios