Mental Health: ಸಾಧ್ಯವಿಲ್ಲ ಎನ್ನೋದನ್ನು ಬಿಟ್ಹಾಕಿ, ಅದ್ಯಾಕೆ ಆಗೋಲ್ಲ ನೀವೇ ನೋಡಿ!
ಅರಿತೋ ಅರಿಯದೆಯೋ ನಾವು ಹಲವು ನಂಬಿಕೆಗಳನ್ನು ನಮ್ಮೊಳಗೆ ಪೋಷಿಸುತ್ತೇವೆ. ಅವು ಋಣಾತ್ಮಕವಾಗಿದ್ದರೆ ಅವು ನೆಗೆಟಿವ್ ಚಿಂತನೆಗಳಾಗಿ ಬದಲಾಗುತ್ತವೆ. ಹೀಗಾಗಿ, ಅಂತಹ ನಂಬಿಕೆಗಳನ್ನು ದೂರಮಾಡಬೇಕು.
ನಾವೇನು ಯೋಚಿಸುತ್ತೇವೆಯೋ ಅದೇ ಆಗುತ್ತೇವೆ. ಇದು ಮನಸ್ಸಿನ ಸಾಮರ್ಥ್ಯ ತೋರಿಸುತ್ತದೆ. ಸಕಾರಾತ್ಮಕ ಚಿಂತನೆಗಳಿಗೆ ಹೇಗೋ ಹಾಗೆಯೇ ಋಣಾತ್ಮಕ ಚಿಂತನೆಗಳಿಗೂ ಇದು ನಿಜವಾದ ಅಂಶ. ಸಾಮಾನ್ಯವಾಗಿ ನಮಗೆಲ್ಲರಿಗೂ ಒಂದು ಅಭ್ಯಾಸವಿರುತ್ತದೆ. ಮೇಲ್ನೋಟಕ್ಕೆ ಎಷ್ಟೇ ಆತ್ಮವಿಶ್ವಾಸಿಗಳಂತೆ ಭಾಸವಾದರೂ ಒಳಗೊಳಗೆ ಸಣ್ಣದಾದರೂ ಒಂದು ಅಳುಕು ಇರುತ್ತದೆ. “ನಾನು ಎಲ್ಲರಷ್ಟು ಬುದ್ಧಿವಂತ ಅಲ್ಲ, ನನ್ನಿಂದ ಆಗುತ್ತದೆಯೋ ಇಲ್ಲವೋ’ ಇತ್ಯಾದಿ ಸಾಮಾನ್ಯ ಅಳುಕುಗಳು ಅವು. ಆದರೂ ಅವುಗಳನ್ನು ನಾವು ಗಟ್ಟಿಯಾಗಿ ನಂಬುತ್ತೇವೆ. ಪದೇ ಪದೆ ಅವುಗಳ ಬಗ್ಗೆ ಯೋಚಿಸುತ್ತೇವೆ. ಜಾಗೃತ ಮನಸ್ಸಿನಿಂದಲೂ ಮತ್ತು ಸುಪ್ತವಾಗಿಯೂ ನಾವು ಅವುಗಳನ್ನು ನಂಬುತ್ತ ಸಾಗುತ್ತೇವೆ. ಇವು ನೆಗೆಟಿವ್ ಯೋಚನೆಗಳಿಗೆ ಕೆಲವೊಮ್ಮೆ ಮೂಲವಾಗುತ್ತವೆ. ನೆಗೆಟಿವ್ ವಿಚಾರಗಳು ಮನಸ್ಸಿಗೆ ತೊಂದರೆ ನೀಡುತ್ತವೆ. ಆದರೆ, ನಾವು ಅವುಗಳ ಬಗ್ಗೆ ವಿಚಾರ ಮಾಡಿದಾಗ ಮಾತ್ರ. ನೆಗೆಟಿವ್ ವಿಚಾರಗಳು ಪದೇ ಪದೆ ಮೂಡಿದಾಗ ಅವು ನೆಗೆಟಿವ್ ನಂಬಿಕೆಗಳಾಗಿ ಬದಲಾಗುತ್ತವೆ. ನಂಬಿಕೆಗಳು ಬಹಳ ಬಲವಾಗಿರುತ್ತವೆ. ತಪ್ಪು ವಿಚಾರಗಳು ತಪ್ಪಾದ ನಂಬಿಕೆಗಳಿಂದ ಬರುವುದು ಹೆಚ್ಚು. ಹೀಗಾಗಿ, ಕೆಲವು ನಂಬಿಕೆಗಳನ್ನು ದೂರಮಾಡುವುದು ಕ್ಷೇಮ. ಅಂತಹ ನಂಬಿಕೆಗಳನ್ನು ನಮ್ಮೊಳಗಿಂದ ಕಿತ್ತೆಸೆಯಬೇಕು.
• ನಾನು ಅಷ್ಟು ಉತ್ತಮವಾಗಿಲ್ಲ (I am not Good)!
ನಾನು ಚೆನ್ನಾಗಿಲ್ಲ, ಒಳ್ಳೆಯನವಲ್ಲ, ನನಗೆ ಎಲ್ಲ ಕೆಲಸಗಳೂ ಬರುವುದಿಲ್ಲ ಎಂದುಕೊಳ್ಳುವುದು ಅರ್ಥಹೀನ. ಚೆನ್ನಾಗಿಲ್ಲ ಎಂದುಕೊಳ್ಳುವುದು ಯಾವ ವಿಚಾರಕ್ಕೆ? ವೃತ್ತಿ (Work), ಕುಟುಂಬ (Family), ಯಶಸ್ಸು (Success)? ಯಾವುದಕ್ಕೆ ಎನ್ನುವ ಸ್ಪಷ್ಟತೆಯಿಲ್ಲದೆ ನಮ್ಮನ್ನು ನಾವು ಹೀಗೆ ಅಂದುಕೊಳ್ಳುವುದು ತಪ್ಪು. ನಮ್ಮ ಬಳಿ ಯಾವುದು ಇಲ್ಲವೋ ಅದಕ್ಕಾಗಿ “ನಾನು ಒಳ್ಳೆಯವನಲ್ಲ’ ಎಂದುಕೊಳ್ಳುವುದು ವಿಷಕಾರಿ ನಂಬಿಕೆ (Toxic Belief).
ಚೆನ್ನಾಗಿ ಬದುಕ್ಬೇಕಾ? ಹಾಗಾದ್ರೆ ಈ ಐದು ವಿಷಯಗಳು ನಿಮ್ಮನ್ನ ನಿಯಂತ್ರಿಸದಂತೆ ನೋಡ್ಕೊಳಿ
• ಜೀವನ ತುಂಬ ಕಷ್ಟ (Life is Hard)
ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ಜೀವನ ಕಷ್ಟವಾಗಿ ಪರಿಣಮಿಸುತ್ತದೆ. ಆದರೆ, ಅದನ್ನು ಸದಾಕಾಲಕ್ಕೂ ನಂಬಿಕೆಯಾಗಿ ಬೆಳೆಸಿಕೊಳ್ಳುವುದರಿಂದ ಜೀವನ ನಿಜಕ್ಕೂ ಕಷ್ಟವಾಗುತ್ತ ಸಾಗುತ್ತದೆ. ಯಾವುದೂ ನಾವು ಅಂದುಕೊಳ್ಳುವಷ್ಟು ಕಷ್ಟ ಅಲ್ಲ. ಕಷ್ಟ ಎನ್ನುವ ಭಾವನೆಯಿಂದ (Feel) ಮುಕ್ತವಾಗಲು ಒಮ್ಮೆ ಒಂದೇ ಕೆಲಸದಲ್ಲಿ ನಿರತರಾಗಬೇಕು. ಒಂದರ ಬಗ್ಗೆ ಪೂರ್ತಿ ಗಮನವಹಿಸಿ ಅದು ಪೂರ್ಣಗೊಂಡ ಮೇಲೆ ಮತ್ತೊಂದನ್ನು ಕೈಗೆತ್ತಿಕೊಳ್ಳಬೇಕು. ಆಗ ಸುಲಭವೆನ್ನುವ ಭಾವನೆ ಮೂಡುತ್ತದೆ.
• ಸಾಧನೆ (Achieve) ಮಾಡದ ಹೊರತು ನಾನೇನೂ ಅಲ್ಲ
ಎಲ್ಲರಿಗೂ ಕನಸು (Dream)ಗಳಿರುತ್ತವೆ, ಅವುಗಳನ್ನು ಸಾಧಿಸಬೇಕೆನ್ನುವ ಹಂಬಲವಿರುತ್ತದೆ. ಆದರೆ, ಈ ವಿಚಾರ ಯಾವಾಗ ವಿಷಕಾರಿ ಆಗುತ್ತದೆ ಎಂದರೆ, ಪ್ರಸ್ತುತ ಕ್ಷಣವನ್ನು ಆನಂದಿಸುವ ಮನಸ್ಥಿತಿ (Mentality) ಹೊರಟುಹೋದಾಗ. ಮುಂದಿನ ಒಂದು ಒಳ್ಳೆಯ ಕ್ಷಣಕ್ಕಾಗಿ ಕಾಯುವ ಧೋರಣೆಗಿಂತ ಇಂದಿನ ಕ್ಷಣವನ್ನು ಆನಂದದಿಂದ ಕಳೆಯುವುದು ಉತ್ತಮ.
• ಜೀವನಕ್ಕೆ ಉದ್ದೇಶವೇ (Meaningless) ಇಲ್ಲವೆನ್ನುವ ಭಾವನೆ
ಇದರಷ್ಟು ಅನರ್ಥಕಾರಿ ಹೇಳಿಕೆ ಬೇರೊಂದಿಲ್ಲ. ನಾವೆಲ್ಲರೂ ನಮ್ಮ ನಮ್ಮ ಜೀವನಕ್ಕೆ ಅರ್ಥ, ಉದ್ದೇಶ ಹೊಂದಿದ್ದೇವೆ. ಎಲ್ಲರೂ ಮಹತ್ಕಾರ್ಯ ಮಾಡದೇ ಇರಬಹುದು. ಆದರೆ, ಜೀವನ ಎಂದಿಗೂ ವೇಸ್ಟ್ ಅಲ್ಲ. ನಮ್ಮ ಮನೆ, ಕುಟುಂಬ, ನೆರೆಹೊರೆಯನ್ನು ಚೆನ್ನಾಗಿಟ್ಟುಕೊಳ್ಳುವುದು ಸಹ ಅತ್ಯುತ್ತಮ ಸಂದೇಶ ನೀಡುವ ಜೀವನವಾಗಲು ಸಾಧ್ಯ.
Indian logic: ಹಿಂದೂ ನಂಬಿಕೆಗಳ ಹಿಂದಿದೆ ಈ ಕಾರಣ..
• ನನಗೆ ಯಾರ ಮೇಲೂ ನಂಬಿಕೆ(Trust)ಯಿಲ್ಲ
ಅತಿಯಾಗಿ ನಂಬಿಕೆ ಇಟ್ಟಿರುವ ವ್ಯಕ್ತಿಯಿಂದ ಮೋಸ (Cheat) ಹೋದರೆ ಇಂಥದ್ದೊಂದು ನಂಬಿಕೆ ಬೆಳೆಯುವುದು ಸಾಮಾನ್ಯ. ನಂಬಿಕೆಯಲ್ಲಿ ಮೋಸವಾದರೂ ಸರಿ, ಅದನ್ನೊಂದು ಅನುಭವ (Experience) ಎಂದು ತಿಳಿದು ಮುಂದೆ ಸಾಗಬೇಕು. ಆದರೆ, ಯಾರನ್ನೂ ನಂಬದಿರುವ ಸ್ಥಿತಿ ತಂದುಕೊಳ್ಳಬಾರದು.
• ಯಾರ ಸಹಾಯವೂ (Help) ಬೇಕಾಗಿಲ್ಲ
ಬಹಳಷ್ಟು ಜನಕ್ಕೆ ಇಂಥದ್ದೊಂದು ನಂಬಿಕೆ ಇರುತ್ತದೆ. ಆದರೆ, ಮನುಷ್ಯ (Man) ಸಂಘಜೀವಿ. ಅಗತ್ಯವಿರುವಾಗ ಮತ್ತೊಬ್ಬರ ಸಹಾಯ ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಇದನ್ನು ದೌರ್ಬಲ್ಯ, ಕೊರತೆ ಎಂದೂ ಭಾವಿಸುವ ಅಗತ್ಯವಿಲ್ಲ.