Asianet Suvarna News Asianet Suvarna News

Indian logic: ಹಿಂದೂ ನಂಬಿಕೆಗಳ ಹಿಂದಿದೆ ಈ ಕಾರಣ..

ರಾತ್ರಿ ಬಟ್ಟೆ ಹೊಲಿಯಬಾರದು, ಉಗುರು ತೆಗೆಯಬಾರದು, ನೆಲ ಗುಡಿಸಬಾರದು ಮುಂತಾದ ಎಲ್ಲ ಮೂಢನಂಬಿಕೆಗಳ ಹಿಂದೆ ಇರಬಹುದಾದ ವೈಜ್ಞಾನಿಕ, ತಾರ್ಕಿಕ ಕಾರಣಗಳೇನು ಎಂದು ಇಂದು ನಾವು ನಿಮಗೆ ತಿಳಿಸುತ್ತೇವೆ. 

4 Indian Traditions and logical reasons behind it skr
Author
First Published Apr 2, 2023, 4:35 PM IST

ರಾತ್ರಿ ಉಗುರು ತೆಗೆಯತೊಡಗಿದರೆ ಅಪ್ಪಅಮ್ಮ ಬೈತಾರಾ? ಅಥವಾ ಸಂಜೆ ಹೊತ್ತಿನಲ್ಲಿ ಹಿಡಿ ಹಿಡಿದುಕೊಂಡರೆ ಲಕ್ಷ್ಮೀ ಬರೋ ಹೊತ್ತಲ್ಲಿ ಪೊರಕೆ ಹಿಡೀಬಾರ್ದು ಅಂತ ಬುದ್ಧಿ ಹೇಳ್ತಾರಾ? ಮುಟ್ಟಾದಾಗ ಅಡಿಗೆ ಮನೆಗೆ ಬರಬಾರದು ಎಂದು ಮನೆಯಲ್ಲಿ ನಿಯಮವಿದೆಯೇ?  ರಾತ್ರಿ ಹೊತ್ತು ಬಟ್ಟೆ ಹೊಲಿದರೆ ಬೈತಾರಾ? ಇದೆಲ್ಲ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹರಿದು ಬರುತ್ತಿರುವ ಹಿಂದೂ ನಂಬಿಕೆಗಳು. ಕೆಲವರಿಗೆ ಇವೆಲ್ಲ ಅಸಂಬದ್ಧ ಎನಿಸಬಹುದು. ಆದರೆ, ಅದರ ಹಿಂದೆ ಅದು ಆರಂಭವಾದ ಕಾಲಕ್ಕೆ ಸರಿಯಾದ ತಾರ್ಕಿಕ ಕಾರಣವಿತ್ತು. ಈಗ ಅದು ಸರಿಯೋ ತಪ್ಪೋ ಎಂಬುದು ನಿಮ್ಮ ನಿಮ್ಮ ತಾರ್ಕಿಕತೆಗೆ ಬಿಟ್ಟಿದ್ದು. 

ರಾತ್ರಿಯಲ್ಲೇಕೆ ಉಗುರುಗಳನ್ನು ಕತ್ತರಿಸಬಾರದು?
ರಾತ್ರಿಯಲ್ಲಿ ಉಗುರನ್ನು ಕತ್ತರಿಸಬಾರದು ಎಂದು ದೊಡ್ಡವರು ಹೇಳುವುದು ಮೂರ್ಖತನದಂತೆ ಕೆಲವರಿಗೆನಿಸಬಹುದು. ಆದರೆ ಈ ಮಾತು ಹುಟ್ಟಲು ಕಾರಣವಾಗಿದ್ದು ಅಂದಿನ ಕಾಲ. ಆ ದಿನಗಳಲ್ಲಿ ಕರೆಂಟ್ ಇರಲಿಲ್ಲ. ಅಷ್ಟೇ ಅಲ್ಲ, ನೇಲ್ ಕಟರ್ ಕೂಡಾ ಇರಲಿಲ್ಲ.  ಅಂಥ ಸಂದರ್ಭದಲ್ಲಿ ಕತ್ತಿಯನ್ನೋ, ಚಾಕುವನ್ನೋ ಬಳಸಿ ಉಗುರು ತೆಗೆಯುತ್ತಿದ್ದರು. ಈ ಉಪಕರಣಗಳನ್ನು ಕತ್ತಲಲ್ಲಿ ಬಳಸುವಾಗ ಹಾಸಿಗೆ, ಬಟ್ಟೆ ಅಥವಾ ಬೆರಳನ್ನು ಕತ್ತರಿಸಿಕೊಳ್ಳುವ ಸಾಧ್ಯತೆ ಹೆಚ್ಚಿತ್ತು. ಅದರಲ್ಲೂ ಸಣ್ಣ ಮಕ್ಕಳ ಉಗುರನ್ನು ಕತ್ತರಿಸುವಾಗ ಅವರಿಗೆ ಅಪಾಯವಾಗಬಹುದಿತ್ತು. ಇದೂ ಅಲ್ಲದೆ, ಉಗುರು ಮನೆಯೊಳಗೆ ಅಲ್ಲಿ ಇಲ್ಲಿ ಬಿದ್ದು, ಕಡೆಗೆ ಕಂಡದ್ದನ್ನೆಲ್ಲ ಬಾಯಿಗೆ ಹಾಕಿಕೊಳ್ಳುವ ಪುಟ್ಟ ಮಕ್ಕಳ ಹೊಟ್ಟೆ ಸೇರುವ ಅಪಾಯವಿತ್ತು. ಈ ಕಾರಣಕ್ಕಾಗಿ ರಾತ್ರಿ ಹೊತ್ತು ಉಗುರು ತೆಗೆಯಬಾರದು ಎಂಬ ಮಾತನ್ನು ಹೇಳಲಾಯಿತು. ಸುಮ್ಮನೆ ಹೇಳಿದರೆ ಕೇಳುವವರಲ್ಲ ಎಂದು ಅದಕ್ಕೆ ಧಾರ್ಮಿಕತೆ, ಶಾಸ್ತ್ರದ ಕಟ್ಟು ಹೆಣೆಯಲಾಯಿತು. 

ವಿಧಾನಸಭಾ ಚುನಾವಣೆ ಹಿನ್ನೆಲೆ ಸ್ಫೋಟಕ ಭವಿಷ್ಯ ನುಡಿದ ಖ್ಯಾತ ಜೋತಿಷಿ!

ರಾತ್ರಿ ಬಟ್ಟೆ ಹೊಲಿಯಬಾರದೇಕೆ?
ರಾತ್ರಿಯಲ್ಲಿ ಬಟ್ಟೆ ಹೊಲಿಯಬಾರದು ಎಂಬ ಅಲಿಖಿತ ನಿಯಮ ಕೂಡಾ ರಾತ್ರಿಯಲ್ಲಿ ನಿಮ್ಮ ಉಗುರುಗಳನ್ನು ಕತ್ತರಿಸಬಾರದು ಎಂಬ ತರ್ಕವನ್ನು ಅನುಸರಿಸುತ್ತದೆ. ಸೂಜಿಗಳು, ಚೂಪಾದ ವಸ್ತುಗಳುನ್ನು ಬಳಸಿ ಹೊಲಿಯುವುದು ಕೂಡಾ ರಾತ್ರಿಯ ವಿದ್ಯುತ್ ಇಲ್ಲದ ಕತ್ತಲೆಯ ಜೀವನಕ್ಕೆ ಸರಿಯಲ್ಲ. ಅದರಿಂದ ಕೂಡಾ ಅಪಾಯ ಸಾಧ್ಯತೆಗಳಿರುತ್ತವೆ. 

ಮಹಿಳೆಯರು ಮುಟ್ಟಿನ ದಿನಗಳಲ್ಲಿ ಅಡುಗೆ ಕೋಣೆಗೆ ಹೋಗಬಾರದು?
ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರು ಅಡುಗೆ ಕೋಣೆಗೆ ಪ್ರವೇಶಿಸಬಾರದು/ಮೂಲೆಯಲ್ಲಿ ಕುಳಿತುಕೊಳ್ಳಬೇಕು ಎಂಬುದು ಇಂದಿಗೂ ಅನುಸರಿಸುತ್ತಿರುವ ಅಸಂಬದ್ಧ ಸಂಪ್ರದಾಯ. ಮುಟ್ಟಿನ ಸಮಯದಲ್ಲಿ ಮಹಿಳೆಯು ಏನನ್ನು ಅನುಭವಿಸುತ್ತಾಳೆ ಎಂದು ತಿಳಿದಿಲ್ಲದವರಿಗೆ, ಆಕೆಯ ಗರ್ಭಾಶಯದಲ್ಲಿ ರೂಪುಗೊಂಡ ರಕ್ತ ಮತ್ತು ಜೀವಕೋಶಗಳ ಗೋಡೆಯು ಹಾರ್ಮೋನ್ ಬದಲಾವಣೆಗಳಿಂದಾಗಿ ಒಡೆಯುತ್ತದೆ ಮತ್ತು ಅದು ಅವಳ ಸಂಪೂರ್ಣ ದೇಹದಲ್ಲಿ ನೋವನ್ನು ಉಂಟು ಮಾಡುತ್ತದೆ. ಇದು ಐದು ದಿನಗಳವರೆಗೆ ಭಾರೀ ರಕ್ತಸ್ರಾವದೊಂದಿಗೆ ಇರುತ್ತದೆ. ಹಿಂದೆ ಈಗಿನಂತೆ ಸ್ಯಾನಿಟರಿ ಪ್ಯಾಡ್‌ಗಳಿರಲಿಲ್ಲ. ಜೊತೆಗೆ, ನೋವು ನಿವಾರಕ ಮಾತ್ರೆಗಳೂ ಇರಲಿಲ್ಲ. ಆ ದಿನಗಳಲ್ಲಿ ಮಹಿಳೆಯರಿಗೆ ವಿಶ್ರಾಂತಿ ಅತ್ಯಗತ್ಯವಾಗಿತ್ತು ಮತ್ತು ಸ್ವಚ್ಛತೆಯ ಕಾರಣಕ್ಕಾಗಿ ಮಹಿಳೆಯರನ್ನು ಬದಿಗೆ ಕೂರಿಸಲಾಗುತ್ತಿತ್ತು. ಹೀಗೆ ನಿಯಮ ಮಾಡಿದಾಗ ಮಾತ್ರ ಅವರು ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿತ್ತು. ಇಲ್ಲದಿದ್ದಲ್ಲಿ, ಅಂದಿನ ಕೂಡು ಕುಟುಂಬಗಳಲ್ಲಿ, ಯಾವುದೇ ಆಧುನಿಕ ಉಪಕರಣಗಳಿಲ್ಲದ ಸಮಯದಲ್ಲಿ ಹಾಗೂ ಕುಟುಂಬದ ಹಿರಿಯರು ಸೊಸೆಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಕಾಲದಲ್ಲಿ ನೋವಿನಲ್ಲೂ ಮಹಿಳೆಯರು ಕೆಲಸ ಮಾಡಬೇಕಾಗುತ್ತಿತ್ತು. 

Garuda Purana: ಸ್ನಾನಗೃಹದ ವಿಷಯದಲ್ಲಿ ಈ ತಪ್ಪು ಮಾಡಿದ್ರೆ ಬಡತನ ಒಕ್ಕರಿಸುತ್ತೆ!

ಸಂಜೆ ನೆಲವನ್ನು ಗುಡಿಸಬಾರದೇಕೆ?
ಸಂಜೆ ನೆಲವನ್ನು ಗುಡಿಸಬಾರದು ಎಂದು ಕೆಲವರೆನ್ನುತ್ತಾರೆ. ಮತ್ತೆ ಕೆಲವರ ಪ್ರಕಾರ, ನೀವು ಸಂಜೆ ನೆಲವನ್ನು ಗುಡಿಸಬಹುದು ಆದರೆ ಮನೆಯಿಂದ ಕಸವನ್ನು ಎಸೆಯಬಾರದು. ಇದರಿಂದ ಲಕ್ಷ್ಮೀ ಮನೆಯಿಂದ ಹೊರ ಹೋಗುತ್ತಾಳೆ ಎನ್ನಲಾಗುತ್ತದೆ. ಕರೆಂಟ್ ಇಲ್ಲದ ಆ ದಿನಗಳಲ್ಲಿ ಹೀಗೆ ಗುಡಿಸುವಾಗ ಬೆಲೆ ಬಾಳುವ ವಸ್ತುಗಳು ಕಸದೊಂದಿಗೆ ಹೊರ ಹೋಗುವ ಸಾಧ್ಯತೆಗಳಿದ್ದವು. ಹಾಗಾಗಿ,  ಲಕ್ಷ್ಮೀ ಹೋಗುತ್ತಾಳೆ ಎನ್ನಲಾಗುತ್ತಿತ್ತು. ಅಲ್ಲದೆ, ಕಸ ಎಸೆವ ಮುನ್ನ ಅದರ ಮೇಲೆ ಕಣ್ಣಾಡಿಸಿ ಎಸೆಯಲಾಗುತ್ತಿತ್ತು. 

Follow Us:
Download App:
  • android
  • ios