Asianet Suvarna News Asianet Suvarna News

ಕೆಮ್ಮಿ ಕೆಮ್ಮಿ ಸುಸ್ತಾಯ್ತಾ.... ಈ ಮನೆಮದ್ದು ಮಾಡಿ ರಿಲ್ಯಾಕ್ಸ್ ಆಗಿ!

ಎಡಬಿಡದೆ ಸುರಿಯುತ್ತಿರುವ ಮಳೆ ಒಂದು ಕಡೆಯಾದರೆ, ಇದರಿಂದ ಹರಡುತ್ತಿರುವ ರೋಗ ರುಜಿನಗಳು ಇನ್ನೊಂದು ಕಡೆ. ಕಾಯಿಲೆಗಳು ಎಲ್ಲೆಡೆ ಹರುಡುತ್ತಿದೆ. ಕಾರಣ ವಾತಾವರಣದಲ್ಲಿನ ಏರುಪೇರು. ಇದರಿಂದ ಶಿತ, ಕೆಮ್ಮು, ನೆಗಡಿಯಂತಹ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇವುಗಳನ್ನು ನಿಯಂತ್ರಿಸಲು ಹಾಗೂ ನಿವಾರಿಸಿಕೊಳ್ಳಲು ಮನೆಯಲ್ಲಿ ಮಾಡಬಹುದಾದ ಮನೆಮದ್ದು ಇಲ್ಲಿದೆ.

Ayurvedic Home remedies to treat Cough!
Author
First Published Sep 8, 2022, 10:46 AM IST

ಎಲ್ಲಾ ವಯಸ್ಸಿನವರಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೆಮ್ಮು ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ.ಈ ರೀತಿಯ ಸಮಸ್ಯೆಗಳನ್ನು ಕಾಣಿಸಿಕೊಂಡಾಗ ನಮ್ಮ ಹಿರಿಯರು ಮನೆಯಲ್ಲೇ ಔಷಧಗಳನ್ನು ತಯಾರಿಸುತ್ತಿದ್ದರು. ಇದು ಬಹುಬೇಗ ಗುಣಮುಖವಾಗುತ್ತಿತ್ತಲ್ಲದೆ, ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತಿತ್ತು. 
ಕೆಮ್ಮು ಹೋಗತ್ತೆ ಬಿಡು ಎಂದು ನೆಗ್ಲೆಕ್ಟ್ ಮಾಡುವಂತಿಲ್ಲ. ಕೆಲವೊಮ್ಮೆ ಅದು ಜೀವಕ್ಕೇ ಕುತ್ತು ತರಬಹುದು. ಹವಾಮಾನದಲ್ಲಿನ ಬದಲಾವಣೆ ಕೆಮ್ಮು ಮತ್ತು ಶೀತದ ಕಾರಣಗಳಲ್ಲಿ ಒಂದಾಗಿದೆ. ಕೆಮ್ಮು ಸಾಮಾನ್ಯವಾಗಿ ಕಫದ ಕೆಮ್ಮು ಹಾಗೂ ಒಣ ಕೆಮ್ಮು ಕಂಡುಬರುತ್ತದೆ.  ಇದು ವಯಸ್ಕರು ಮತ್ತು ಮಕ್ಕಳಲ್ಲಿ ಎಲ್ಲಾ ವರ್ಗದ ಜನರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಈ ರೀತಿಯ ಸಮಸ್ಯೆಗಳು ಕಂಡುಬAದಲ್ಲಿ ಮನೆಮದ್ದು ಬೆಸ್ಟ್. ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಗುಣಪಡಿಸಬಹುದು.

ಇದನ್ನೂ ಓದಿ: Kids Care : ಮಕ್ಕಳ ದೇಹ ಬೇಗ ಸೇರುತ್ತೆ ಈ ರೋಗ

ಕೆಮ್ಮಿಗೆ ನೈಸರ್ಗಿಕ ಪರಿಹಾರಗಳು ಇಲ್ಲಿವೆ
1. ಅರಿಶಿಣ ಹಾಲು

ರಾತ್ರಿ ಒಣ ಕೆಮ್ಮಿಗೆ ಅರಿಶಿಣದ ಹಾಲು ಉತ್ತಮ ಔಷಧವಾಗಿದೆ. ಅರಿಶಿಣದಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್, ಉರಿಯೂತದ ಗೂಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ಕರ್ಕ್ಯುಮಿನ್ ಅಂಶ ಇರುವುದರಿಂದ ಯಾವುದೇ ಸೋಂಕುಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಅರಿಶಿಣ ಹಾಕಿ ಕುಡಿಯುವುದರಿಂದ ಬಹುಬೇಗ ಉತ್ತಮ ಫಲಿತಾಂಶ ಪಡೆಯಬಹುದು. ಬೇಕೆಂದಲ್ಲಿ ಈ ಹಾಲಿಗೆ ಶುಂಠಿ ಅಥವಾ ಬೆಳ್ಳುಳ್ಳಿ ಸಹ ಸೇರಿಸಬಹುದು.

2. ಅಮೃತಬಳ್ಳಿ ಜ್ಯೂಸ್
ಹಲವು ಕಾಯಿಲೆಗಳಿಗೆ ರಾಮಬಾಣದಂತೆ ಕೆಲಸ ಮಾಡುವ ಅಮೃತ ಬಳ್ಳಿ ಜ್ಯೂಸ್ ಮನೆಯಲ್ಲಿದ್ದರೆ ವೈದ್ಯರೇ ಮನೆಯಲ್ಲಿದ್ದಂತೆ. ಪ್ರತಿರಕ್ಷೆಯನ್ನು ನಿರ್ಮಿಸುವುದರ ಹೊರತಾಗಿ, ಇದು ಅಲರ್ಜಿ ವಿರೋಧಿಯಾಗಿದೆ. ಹೊಗೆ, ಮಾಲಿನ್ಯ, ಪರಾಗಕ್ಕೆ ಅಲರ್ಜಿಯು ಎದುರಾದರೆ ಹಾಗೂ ಕೆಮ್ಮಿಗೂ ಚಿಕಿತ್ಸೆ ನೀಡುತ್ತದೆ. ದೀರ್ಘಕಾಲದ ಕೆಮ್ಮು ಕಾಡುತ್ತಿದ್ದರೆ ಒಂದು ಲೋಟ ಅಮೃತಬಳ್ಳಿ ಜ್ಯೂಸ್ ಕುಡಿದರೆ ಬಹುಬೇಗ ಫಲಿತಾಂಶ ಪಡೆಯಬಹುದು. 

ಇದನ್ನೂ ಓದಿ: Health Tips: ರಾತ್ರಿ ಕಾಡುವ ಕೆಮ್ಮಿಗೆ ಇಲ್ಲಿದೆ ಮನೆ ಮದ್ದು

3. ಜೇನುತುಪ್ಪ ಮತ್ತು ಶುಂಠಿ
ಕೆಮ್ಮಿಗೆ ಜೇನುತುಪ್ಪ ಮತ್ತು ಶುಂಠಿ ಎರಡೂ ಅತ್ಯುತ್ತಮ ಔಷಧವೆಂದು ಸಾಬೀತಾಗಿದೆ. ಮಕ್ಕಳಲ್ಲಿ ಕೆಮ್ಮು ಕಾಣಿಸಿಕೊಂಡಾಗ ಮೊದಲು ಮನೆಮದ್ದು ಮಾಡುವುದು ಇದನ್ನೇ. ಕಡಿಮೆ ದಿನಗಳಲ್ಲಿ ತೃಪ್ತಿದಾಯಕ ಫಲಿತಾಂಶಗಳನ್ನು ಪಡೆಯಬಹುದು. ಅಗತ್ಯ ಪ್ರಮಾಣದ ಶುಂಠಿ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ ಸೇವಿಸಬೇಕು. ಇದು ರಾಸಾಯನಿಗ ಔಷಧಕ್ಕಿಂತ ಉತ್ತಮವಾಗಿದೆ. ಏಕೆಂದರೆ ಇದು ದೇಹಕ್ಕೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಒಂದು ಚಮಚ ಶುಂಠಿ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ಈ ರಸ ಕುಡಿಯುವುದರಿಂದ ಬಹುಬೇಕು ಕೆಮ್ಮು ಕಡಿಮೆ ಮಾಡುತ್ತದೆ.

4. ಕಾಳುಮೆಣಸು
ವಯಸ್ಕರಲ್ಲಿ ಕೆಮ್ಮು ಹೆಚ್ಚು ಕಾಣಿಸಿಕೊಂಡರೆ ಮೆಣಸು ಉತ್ತಮ ಔಷಧ. ಇದು ತಾಪನ ಗುಣಗಳನ್ನು ಹೊಂದಿದ್ದು, ಕೆಮ್ಮು ಹೆಚ್ಚಾಗುವುದನ್ನು ತಡೆಯುತ್ತದೆ. ಕಾಳುಮೆಣಸಿನ ಪುಡಿಯನ್ನು ದೇಸಿ ತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು. ನಿಯಮಿತವಾಗಿ ದಿನಕ್ಕೆ ಎರಡು ಬಾರಿ ಹೀಗೆ ಮಾಡಿದ್ದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

ಇದನ್ನೂ ಓದಿ: ದಾಳಿಂಬೆ ಜೀವ ರಕ್ಷಕ, ಅಂತದ್ದೇನಿದೆ ವಿಶೇಷ ಈ ಕಾಳಿನ ಹಣ್ಣಿನಲ್ಲಿ?

5. ದಾಳಿಂಬೆ ಜ್ಯೂಸ್
ಬಹುಮುಖ ಪ್ರತಿಭೆಯನ್ನು ಒಳಗೊಂಡಿರುವ ಹಣ್ಣು ಎಂದರೆ ಅದು ದಾಳಿಂಬೆ ಎಂದರೆ ತಪ್ಪಾಗಲಾರದು. ಮಕ್ಕಳಿಗೆ ಒಂದೇ ದಿನದಲ್ಲಿ ಕೆಮ್ಮು ಮತ್ತು ಶೀತಕ್ಕೆ ಹೇಗೆ ಚಿಕಿತ್ಸೆ ನೀಡಬೇಕೆಂದು ಚಿಂತಿಸುತ್ತಿದ್ದರೆ ಅದಕ್ಕೆ ದಾಳಿಂಬೆ ಜ್ಯೂಸ್ ಉತ್ತಮ. ಮಕ್ಕಳಲ್ಲಿ ಕೆಮ್ಮು ಕಾಣಿಸಿಕೊಂಡಾಗ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯ. ಇದರಲ್ಲಿ ವಿಟಮಿನ್ ಎ ಮತ್ತು ಸಿ ಅಂಶ ಹೇರಳವಾಗಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಕೂಡ. ದಾಳಿಂಬೆ ಕಾಳನ್ನು ಹಿಸುಕಿ ರಸ ತೆಗೆದುಕೊಳ್ಳಿ. ಈ ರಸಕ್ಕೆ ಶುಂಠಿ ರಸ ಅಥವಾ ಕಾಳುಮೆಣಸಿನ ಪುಡಿ ಹಾಕಿ ಸೇವಿಸಿದರೆ ತ್ವರಿತ ಫಲಿತಾಂಶ ಪಡೆಯಬಹುದು.

6. ತುಳಸಿ
ಹಲವು ಔಷಧೀಯ ಗುಣಗಳನ್ನು ಹೊಂದಿರುವ ತುಳಸಿ ಹಲವು ರೋಗಗಳಿಗೆ ಉತ್ತಮ ಮದ್ದಾಗಿದೆ. ಕೆಮ್ಮನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ನಿಯಮಿತವಾಗಿ ತುಳಸಿ ಎಲೆಗಳನ್ನು ನೇರವಾಗಿ ಸೇವಿಸಿ ಚೆನ್ನಾಗಿ ಅಗೆಯಬೇಕು. ಇದಕ್ಕೆ ಚಿಟಿಕೆ ಉಪ್ಪು ಅಥವಾ ಕಾಳುಮೆಣಸಿನ ಪುಡಿಯೊಂದಿಗೆ ಸೇವಿಸಿದರೆ ಕೆಮ್ಮು ಬೇಗ ಕಡಿಮೆಯಾಗುತ್ತದೆ.

Follow Us:
Download App:
  • android
  • ios