Asianet Suvarna News Asianet Suvarna News

ಏವಿಯನ್ ಸೋಂಕಿನಿಂದ ಮೆಕ್ಸಿಕನ್ ವ್ಯಕ್ತಿ ಸಾವು, ವಿಶ್ವದಲ್ಲೇ ಮೊದಲ ಪ್ರಕರಣ; WHO ಎಚ್ಚರಿಕೆ

ಮಾನವನಲ್ಲಿ ಮೊತ್ತ ಮೊದಲ ಬಾರಿ ಏವಿಯನ್‌ ಫ್ಲೂ ಕಾಣಿಸಿಕೊಂಡಿದೆ. ಮೆಕ್ಸಿಕನ್‌ನ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಆತ ಸಾವನ್ನಪ್ಪಿರುವುದು ದೃಢಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಎಚ್ಚರಿಕೆ ನೀಡಿದೆ.

Avian Flu Subtype Claims First Human Life, WHO Confirms Death of Mexican Vin
Author
First Published Jun 6, 2024, 9:30 AM IST

ಮಾನವನಲ್ಲಿ ಮೊತ್ತ ಮೊದಲ ಬಾರಿ ಏವಿಯನ್‌ ಫ್ಲೂ ಕಾಣಿಸಿಕೊಂಡಿದೆ. ಮೆಕ್ಸಿಕನ್‌ನ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಆತ ಸಾವನ್ನಪ್ಪಿರುವುದು ದೃಢಪಟ್ಟಿದೆ. ಮೆಕ್ಸಿಕನ್‌ನಲ್ಲಿ ಸಾವು ಸಂಭವಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಹೇಳಿದೆ. ಮೆಕ್ಸಿಕೋದ 59 ವರ್ಷದ ವ್ಯಕ್ತಿ ಜ್ವರ, ಉಸಿರಾಟದ ತೊಂದರೆ, ಅತಿಸಾರ, ವಾಕರಿಕೆ ಮತ್ತು ಸಾಮಾನ್ಯ ಅಸ್ವಸ್ಥತೆಯನ್ನು ಅನುಭವಿಸಿದ ನಂತರ ಏಪ್ರಿಲ್ 24ರಂದು ನಿಧನರಾದರು ಎಂದು WHO ಹೇಳಿದೆ.

ಇದು ಜಾಗತಿಕವಾಗಿ ವರದಿಯಾದ A(H5N2) ಉಪ ಪ್ರಕಾರದ ಹಕ್ಕಿ ಜ್ವರದ ಮೊದಲ ಪ್ರಯೋಗಾಲಯ-ದೃಢೀಕರಿಸಿದ ಮಾನವ ಪ್ರಕರಣವಾಗಿದೆ. ಮೆಕ್ಸಿಕೋದಲ್ಲಿ ವರದಿಯಾದ ವ್ಯಕ್ತಿಯಲ್ಲಿ ಮೊದಲ H5 ವೈರಸ್ ಸೋಂಕು. ಆದರೆ ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಕೋಳಿ ಅಥವಾ ಇತರ ಪ್ರಾಣಿಗಳ ಜೊತೆ ಸಂಪರ್ಕ ಹೊಂದಿರಲ್ಲಿಲ್ಲ ಎಂದು WHO ಹೇಳಿದೆ. ಏವಿಯನ್ ಇನ್ಫ್ಲುಯೆಂಜಾದ A(H5N2) ಉಪವಿಧದ ಪ್ರಕರಣಗಳು ಮೆಕ್ಸಿಕೋದಲ್ಲಿ ಕೋಳಿಗಳಲ್ಲಿ ವರದಿಯಾಗಿದೆ.

ಮಾನವನಿಗೆ ಹಕ್ಕಿ ಜ್ವರ, ಅಮೇರಿಕಾದಲ್ಲಿ ಎರಡನೇ ಪ್ರಕರಣ ದಾಖಲು; ಆರೋಗ್ಯ ಇಲಾಖೆಯಿಂದ ಎಚ್ಚರಿಕೆ

ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಈ ಹಿಂದೆಯೇ ಹಲವು ಆರೋಗ್ಯ ಸಮಸ್ಯೆಗಳನ್ನು  ಹೊಂದಿದ್ದರು. ತೀವ್ರವಾದ ರೋಗಲಕ್ಷಣಗಳು ಪ್ರಾರಂಭವಾಗುವ ಮೊದಲು ಇತರ ಕಾರಣಗಳಿಗಾಗಿ ಮೂರು ವಾರಗಳ ಕಾಲ ಹಾಸಿಗೆ ಹಿಡಿದಿದ್ದರು ಎಂದು WHO ಹೇಳಿದೆ. ರೋಗಿಯು ಮೂರು ವಾರಗಳ ಕಾಲ ಮೆಕ್ಸಿಕೋ ನಗರದಲ್ಲಿ ಹಾಸಿಗೆ ಹಿಡಿದಿದ್ದರು ಮತ್ತು ನಂತರ ಸೋಂಕಿನಿಂದ ಉಂಟಾಗುವ ತೊಂದರೆಗಳಿಂದ ಸಾವನ್ನಪ್ಪಿದರು ಎಂದು ತಿಳಿದುಬಂದಿದೆ.

ಲ್ಯಾಬ್ ಫಲಿತಾಂಶಗಳು ಇದು ಏವಿಯನ್ ಇನ್ಫ್ಲುಯೆನ್ಸ ಸಬ್ಟೈಪ್ A (H5N2) ಸೋಂಕಿಗೆ ಒಳಗಾದ ವ್ಯಕ್ತಿಯ ಮೊದಲ ಮಾನವ ಸಾವು ಮತ್ತು ಮೆಕ್ಸಿಕೋದಲ್ಲಿ ವರದಿ ಮಾಡಲಾದ ಮೊದಲ ಮಾನವ H5 ವೈರಸ್ ಸೋಂಕು ಎಂದು WHO ದೃಢಪಡಿಸಿದೆ. ವ್ಯಕ್ತಿಯು ಕೋಳಿ ಅಥವಾ ಇತರ ಪ್ರಾಣಿಗಳಿಗೆ ಯಾವುದೇ ಮುಂಚಿತವಾಗಿ ಒಡ್ಡಿಕೊಂಡಿಲ್ಲ ಮತ್ತು ಮೃತಪಟ್ಟ ವ್ಯಕ್ತಿ ವೈರಸ್‌ಗೆ ಒಡ್ಡಿಕೊಳ್ಳುವ ಮೂಲವು ತಿಳಿದಿಲ್ಲ ಎಂದು WHO ಹೇಳಿದೆ.

ಕೋವಿಡ್ 19ಕ್ಕಿಂತಲೂ ಮಾರಕವಾದ ಕಾಯಿಲೆ ಬರಲಿದೆ..ಎಚ್ಚರ

Latest Videos
Follow Us:
Download App:
  • android
  • ios