ಇಡೀ ವಿಶ್ವವೇ ಮಹಾಮಾರಿ ಕೊರೋನಾ ಭಯದಿಂದ ಇದೆ. ಆದರೆ, ಈ ರೋಗ ಬಂದವರೆಲ್ಲ ಸಾಯುವುದಿಲ್ಲ ಎಂಬುವುದು ಎಲ್ಲರಿಗೂ ಗೊತ್ತು. ಅಲ್ಲದೇ ರೋಗ ಬಾರದ ಹಾಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವೂ ಇದೆ. ಇದಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮನೆ ಮದ್ದುಗಳ ಜೊತೆ, ಪೋಷಕಾಂಶಯುಕ್ತ ಆಹಾರ ಸೇವನೆಯೂ ಅಗತ್ಯ. 

ಈಗಾಗಲೇ ಪ್ರಾಣಾಯಾಮ ಈ ರೋಗಕ್ಕೆ ಅತ್ಯುತ್ತಮ ಮದ್ದೆಂದು ದಿಲ್ಲಿಯಲ್ಲಿ ಗುಣಮುಖನಾದ ಮೊದಲ ರೋಗಿ ಹೇಳಿದ್ದು, ಶ್ವಾಸಕೋಶದ ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸುವುದು ಇಂದಿನ ಅತ್ಯಗತ್ಯ. ಈ ನಿಟ್ಟಿನಲ್ಲಿ ಸುದರ್ಶನ ಕ್ರಿಯೆ ಅತ್ಯಂತ ಉಪಯೋಗವಾಗಲಿದ್ದು, ಆರ್ಟ್ ಆಪ್ ಲೀವಿಂಗ್ ಮೇ 21, ಗುರುವಾರದಿಂದ ಮೇ 24, ಭಾನುವಾರದವರೆಗೆ ಎರಡು ಬ್ಯಾಚ್‌ಗಳಲ್ಲಿ ದಿನಕ್ಕೆ 2 ಗಂಟೆಯಂತೆ ನುರಿತ ತಜ್ಞರಿಂದ ಸುದರ್ಶನ ಕ್ರಿಯೆ ತರಬೇತಿ ನೀಡುತ್ತಿದೆ.

ಅಲ್ಲದೇ ಮನೆಯಲ್ಲಿಯೇ ಕುಳಿತಿರುವ ಮನುಷ್ಯನ ಮನಸ್ಸೂ ಸಂಕುಚಿತವಾಗುತ್ತಿದೆ. ದಾಂಪತ್ಯದಲ್ಲಿ ವಿರಸವೂ ಹೆಚ್ಚಾಗುತ್ತಿದೆ. ಈ ಲಾಕ್‌ಡೌನ್ ಅವಧಿ ಇನ್ನೂ ಕೆಲವು ದಿನ, ತಿಂಗಳ ಕಾಲ ಮುಂದುವರಿಯುವ ಸೂಚನೆ ಇದ್ದು, ಅವೆಲ್ಲವಕ್ಕೂ ಹೊಂದಿಕೊಂಡು ಮುಂದುವರಿಯುವ ಅನಿವಾರ್ಯತೆ ಇದೆ. ಒಟ್ಟಿನಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಾಳಜಿ ವಹಿಸುವುದು ಎಲ್ಲರ ಮೊದಲ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಏನೆಲ್ಲಾ ಮಾಡಲು ಸಾಧ್ಯವೋ ಅವನ್ನು ಮಾಡಿದರೆ ಮಾತ್ರ ಮನುಷ್ಯನ ಮುಂದಿನ ಬದುಕು ಯಾತನೆಯಿಂದ ದೂರವಾಗಬಹುದು. ಮನಸ್ಸು ಹಾಗೂ ದೈಹಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಸುದರ್ಶನ ಕ್ರಿಯೆ ಈ ಅವಧಿಯಲ್ಲಿ ಮಾಡಲೇಬೇಕಾದ ಕಾರ್ಯಗಳಲ್ಲಿ ಒಂದು ಎಂಬುವುದು ಈಗಾಗಲೇ ಹಲವರು ಮನಗೊಂಡಿದ್ದಾರೆ. 

ಕೋವಿಡ್ ಗೆಲ್ಲಲು ಪ್ರಾಣಾಯಾಮ ಬೆಸ್ಟ್ ಮದ್ದು

ಝೂಮ್ ಆ್ಯಪ್ ಸಹಾಯದಿಂದ ಈ ತರಬೇತಿ ನೀಡಲಿದ್ದು, ಈ ಆ್ಯಪ್‌ನೊಂದಿಗೆ ಇಂಟರ್ನೆಟ್ ಸೌಲಭ್ಯ ಇರುವವರು ಸುಲಭವಾಗಿ ಈ ಕೋರ್ಸ್ ಪೂರೈಸಬಹುದು. 

ಲಾಕ್‌ಡೌನ್ ಹಾಗೂ ಕೊರೋನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಏಕೆ ಧ್ಯಾನ, ಪ್ರಾಣಾಯಾದ ಅಗತ್ಯವಿದೆ? 

ಕೊರೋನಾ ವೈರಸ್ ಎಂಬ ಸಾಂಕ್ರಾಮಿಕ ರೋಗ ವಿಶ್ವವ್ಯಾಪಿ ಪಸರಿಸಿದ್ದು, ಇದರಿಂದ ಹೊರ ಬರುವುದು ಜಗತ್ತಿನ ಏಕೈಕ ಗುರಿಯಾಗಿದೆ. ಈ ಸಂದರ್ಭದಲ್ಲಿ ಶ್ವಾಸಕೋಶದ ಮೇಲೆ ಪ್ರಭಾವ ಬೀರುವ ಈ ವೈರಸ್‌ನಿಂದ ಪಾರಾಗಲು ನಮ್ಮ ಶ್ವಾಸಕೋಶದ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕೆಂಬುವುದು ಕಟು ಸತ್ಯ. ಈ ನಿಟ್ಟಿನಲ್ಲಿ ಆರ್ಟ್ ಆಫ್ ಲೀವಿಂಗ್‌ನ ಸುದರ್ಶನ ಕ್ರಿಯಾ ಹೆಚ್ಚು ಫಲಕಾರಿಯಾಗಿದ್ದು, ಇದನ್ನು ಕಲಿತರೆ ಮನಸ್ಸು ಹಾಗೂ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಲಭವಾಗಲಿದೆ. 

ಈ ಸುದರ್ಶನ ಕ್ರಿಯೆ ಉಪಯೋಗಗಳೇನು?
- ನಮ್ಮ ಆರೋಗ್ಯವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸದ್ಯದ ತುರ್ತು. ಅದಕ್ಕಾಗಿ ಈ ಕೋರ್ಸ್ ಸಹಕಾರಿ.
- ಆತಂಕ, ಭಯ, ಚಿಂತೆಗಳನ್ನು ದೂರ ಮಾಡಬಹುದು.
- ಸುಖವಾಗಿ ನಿದ್ರಿಸಲು. 
- ಮನಸ್ಸಿನ ಮೇಲೆ ಹಿಡಿತ ಸಾಧಿಸಿ, ಜೀವನವನ್ನು ಮತ್ತಷ್ಟು ಸುಧಾರಿಸಿಕೊಳ್ಳಲು. 
- ನಮ್ಮಲ್ಲಿರೋ ಅಗಾಧ ಶಕ್ತಿಯನ್ನು ಹೊರ ಹಾಕಲು ಈ ಕೋರ್ಸ್ ಸಹಕರಿಸುತ್ತದೆ. 

ಕೊರೋನಾ ನಿವಾರಣೆಗೆ ಯೋಗ, ಧ್ಯಾನ

ಅದೂ ಅಲ್ಲದೇ ಈ ಕ್ರಿಯೆ ಉಸಿರಾಟದ ಪ್ರಕ್ರಿಯೆ ಕಲಿಸಲಿದ್ದು, ರೋಗ ನಿರೋಧ ಶಕ್ತಿಯನ್ನೂ ಹೆಚ್ಚಿಸಿಕೊಳ್ಳುವಲ್ಲಿಯೂ ಸಹಕಾರಿಯಾಗಲಿದೆ. ಸುಮಾರು 156 ದೇಶಗಳಲ್ಲಿ ಕಳೆದ 40 ವರ್ಷಗಳಿಂದ ಈ ವಿದ್ಯೆಯ ತರಬೇತಿ ನೀಡಲಾಗುತ್ತಿದ್ದು, ಅತ್ಯುತ್ತಮ ಫಲ ನೀಡುತ್ತಿದೆ. 

ಹೆಚ್ಚಿನ ಮಾಹಿತಿಗೆ
ಅಶೋಕ್: 8861 920 769,  
ಮಾಧವಿ 9686 435 298
ಅಥವಾ 
ಮಹಾದೇವ್ ಪ್ರಸಾದ್: 9739516209
ಅವರನ್ನು ಸಂಪರ್ಕಿಸಬಹುದು.

ರಿಜಿಸ್ಟ್ರೇಷನ್‌ಗೆ ಇಲ್ಲಿ ಕ್ಲಿಕ್ಕಿಸಿ