ಕೊರೋನಾ ಆತಂಕ ನಿವಾರಣೆಗೆ ಯೋಗ, ಧ್ಯಾನ, ಪ್ರಾಣಾಯಾಮ ಮದ್ದು!
ಜನರಿಗೆ ಹಾರ್ವರ್ಡ್ ವೈದ್ಯಕೀಯ ಶಾಲೆ ಶಿಫಾರಸು| ಕೊರೋನಾ ಆತಂಕ ನಿವಾರಣೆಗೆ ಯೋಗ, ಧ್ಯಾನ, ಪ್ರಾಣಾಯಾಮ ಮದ್ದು!
ವಾಷಿಂಗ್ಟನ್[ಮಾ.17]: ಕೊರೋನಾ ವೈರಸ್‌ನಿಂದ ಉಂಟಾಗುವ ಆತಂಕ ನಿವಾರಣೆಗೆ ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಮಾಡಬೇಕು ಎಂದು ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್ ವೈದ್ಯಕೀಯ ಶಾಲೆ ಜನತೆಗೆ ಶಿಫಾರಸು ಮಾಡಿದೆ.
ಕೊರೋನಾ ಈಗ ವಿಶ್ವವ್ಯಾಪಿಯಾಗಿದ್ದು, ಅಮೆರಿಕದಲ್ಲೂ ಆತಂಕ ಮೂಡಿಸಿದೆ. ಅಮೆರಿಕದಲ್ಲಿ ಸುಮಾರು 3500 ಸೋಂಕಿತರಿದ್ದಾರೆ. 65 ಜನ ಬಲಿಯಾಗಿದ್ದಾರೆ. ಈ ಬಗ್ಗೆ ಹೊಸ ವೈದ್ಯಕೀಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಹಾರ್ವರ್ಡ್ ವೈದ್ಯಶಾಲೆ, ‘ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ. ಇಂದು ಅನೇಕ ಆ್ಯಪ್‌ಗಳಿದ್ದು, ಅವು ಧ್ಯಾನವನ್ನು ತಿಳಿಸಿಕೊಡುತ್ತವೆ’ ಎಂದು ಹೇಳಿದೆ.
‘ಯೋಗ ಕೂಡ ಆತಂಕ ನಿವಾರಿಸುತ್ತದೆ. ಯೋಗ ಸ್ಟುಡಿಯೋ ಹಾಗೂ ಪಾಕೆಟ್ ಯೋಗ ಆ್ಯಪ್‌ಗಳು ಯೋಗ ಕಲಿಸಿಕೊಡಬಲ್ಲವು’ ಎಂದು ಸಲಹೆ ನೀಡಿದೆ.
ಕೊರೋನಾ ವೈರಸ್: ಭಾರತ ತಲ್ಲಣ, ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
‘ನಿಯಂತ್ರಿತವಾಗಿ ಉಸಿರು ಏರಿಸುವುದು ಹಾಗೂ ಬಿಡುವುದು ಮಾಡಬೇಕು (ಪ್ರಾಣಾಯಾಮ). ಒಂದು, ಎರಡು, ಮೂರು ಅಂತ ಈ ರೀತಿ ಮಾಡುವಾಗ ಎಣಿಸಬೇಕು. ಆಗ ಮನಸ್ಸು ಶಾಂತವಾಗುತ್ತದೆ’ ಎಂದು ಅದು ತಿಳಿಸಿದೆ.
ಇನ್ನು ಕೊರೋನಾ ಆತಂಕದಿಂದ ಜನರನ್ನು ದೂರ ಮಾಡಲು ಅಮೆರಿಕದ ವಿಶ್ವ ಹಿಂದೂ ಕಾಂಗ್ರೆಸ್ ಉತ್ರ ಅಮೆರಿಕದಲ್ಲಿ ಪ್ರಾರ್ಥನೆ ಹಾಗೂ ಹವನ ಹಮ್ಮಿಕೊಂಡಿತ್ತು.