Asianet Suvarna News Asianet Suvarna News

ಗರ್ಭದಿಂದ 24 ವಾರದ ಕಲ್ಲು ಮಗು ಯಶಸ್ವಿಯಾಗಿ ಹೊರತೆಗೆದ ಆಂಧ್ರ ವೈದ್ಯರು, ಏನಿದು ಸ್ಟೋನ್ ಬೇಬಿ?

ಮಹಿಳೆ ಗರ್ಭದಿಂದ 24 ವಾರದ ಸ್ಟೋನ್ ಬೇಬಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ವೈದ್ಯರು ಹೊರತೆಗೆದಿದ್ದಾರೆ. ವೈದ್ಯಲೋಕದ ಅಪರೂಪದ ವಿದ್ಯಮಾನವಾಗಿರುವ ಕಲ್ಲು ಮಗು ಎಂದರೇನು?

Andhra Pradesh doctor remove 24 weeks stone baby from woman uterus rare phenomenon ckm
Author
First Published Sep 4, 2024, 5:35 PM IST | Last Updated Sep 4, 2024, 5:35 PM IST

ವಿಶಾಖಪಟ್ಟಣಂ(ಸೆ.04) ಗರ್ಭಧಾರಣೆ ಹಾಗೂ ಗರ್ಭದಲ್ಲಿನ ಮಗುವಿನ ಬೆಳವಣಿಗೆಯಲ್ಲಿನ ಆರೋಗ್ಯ ಸಮಸ್ಯೆಗಳು ಬಹುದೊಡ್ಡ ಅಪಾಯಕ್ಕೆ ಕಾರಣವಾಗುತ್ತದೆ. ಗರ್ಭದಲ್ಲೇ ಮಗುವಿನ ಮರಣ, ಆರೋಗ್ಯ ಸಮಸ್ಯೆಗಳು ಹೀಗೆ ಒಂದೆರಡಲ್ಲ. ಇದೀಗ ಆಂಧ್ರ ಪ್ರದೇಶದ ಕಿಂಗ್ ಜಾರ್ಜ್ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಪ್ರಾಣ ಉಳಿಸಿದ್ದಾರೆ. ಜೊತೆಗೆ ಗರ್ಭದಲ್ಲಿದ್ದ 24 ವಾರದ ಕಲ್ಲು ಮಗುವನ್ನು(ಸ್ಟೋನ್ ಬೇಬಿ) ಯಶಸ್ವಿಯಾಗಿ ಹೊರತೆಗೆದ ಪ್ರಕರಣ ವರದಿಯಾಗಿದೆ. 

ಅನಕಪಲ್ಲೆ ಜಿಲ್ಲೆಯ 27 ವರ್ಷದ ಮಹಿಳೆ ತೀವ್ರ ಹೊಟ್ಟೆನೋವಿನಿಂದ ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಾಗಿದ್ದರು. ಹೊಟ್ಟೆಯ ಕೆಳಭಾಗದಲ್ಲಿನ ತೀವ್ರ ನೋವು ವೈದ್ಯರ ಅನುಮಾನಕ್ಕೆ ಕಾರಣಾಗಿದೆ. ಹೀಗಾಗಿ ತಕ್ಷಣವೇ ಎಂಆರ್‌ಐ ಸ್ಕ್ರಾನ್‌ಗೆ ಸೂಚಿಸಿದ್ದಾರೆ. ಸ್ಕ್ರಾನ್ ವರದಿ ವೈದ್ಯರಿಗೆ ಅಚ್ಚರಿ ತಂದಿದೆ. ಮಹಿಳೆ ಗರ್ಭದಲ್ಲಿ 24 ತಿಂಗಳ ಮಗುವಿನ ಅವಶೇಷಗಳು ಪತ್ತೆಯಾಗಿದೆ. ಇದು ಅಪರೂಪದಲ್ಲೇ ಅಪರೂಪದ ಪ್ರಕರಣ.

ದಯವಿಟ್ಟು ಇಲ್ಲಿ ಕೇಳಿ, ನಿದ್ದೆಯಲ್ಲಿ ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ!

ಸ್ಟೋನ್ ಬೇಬಿ ಅಥವಾ ಲಿಥೋಪಿಡಿಯನ್ ಅನ್ನೋ ಈ  ಸಮಸ್ಯೆ ಮಹಿಳೆಯ ಗರ್ಭದಲ್ಲಿ ಮಗುವಿನ ಬೆಳವಣಿಗೆಯಲ್ಲಿ ಕಂಡುಬರುತ್ತದೆ. ಪ್ರಮುಖವಾಗಿ 14 ವಾರಗಳ ನಂತರ ಈ ಸಮಸ್ಯೆ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ. 14 ವಾರಗಳಿಂದ ಪೂರ್ಣ ಅವಧಿವರೆಗೂ ಈ ಸಮಸ್ಯೆಗಳು ಯಾವಾಗಬೇಕಾದರು ಸಂಭವಿಸಬಹುದು. ಗರ್ಭಾವಸ್ಥೆಯಲ್ಲಿ ಲಿಥೋಪಿಡಿಯನ್ ಸಮಸ್ಯೆ ಬಾಧಿಸಿದರೆ, ಮಗು ಗರ್ಭದಲ್ಲೇ ಮೃತಪಡಲಿದೆ. ಬಳಿಕ ಮಗುವಿನ ಅವಶೇಷಗಳು ಗರ್ಭದಲ್ಲೇ ಉಳಿದುಕೊಳ್ಳಲಿದೆ. ಒಮ್ಮೆ ಸ್ಟೋನ್ ಬೇಬಿ ಸಮಸ್ಯೆ ಭಾದಿಸಿದ ಬಳಿಕ ಕೆಲವಾರದಲ್ಲೇ ಮಗು ಮೃತಪಡಲಿದೆ. ಇಷ್ಟೇ ಅಲ್ಲ ಕೆಲ ವಾರದಲ್ಲೇ ಮಹಿಳೆ ಋತಬಂಧ ಸರಾಗವಾಗಲಿದೆ. ಹೀಗಾಗಿ ಮಗುವಿನ ಅವಶೇಷ ಹೊಟ್ಟೆಯೊಳಗಿರುವ ಸಣ್ಣ ಸುಳಿವು ಮಹಿಳೆಗೆ ಇರುವುದಿಲ್ಲ. 

ಆದರೆ ತಿಂಗಳು ಕಳೆಯುತ್ತಿದ್ದಂತೆ ಮಹಿಳೆಯ ಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಸ್ಕ್ರಾನಿಂಗ್ ಮೂಲಕ ಮಾತ್ರ ಈ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಿದೆ. ಹೀಗೆ ಅನಕಪಲ್ಲೆ ಜಿಲ್ಲೆಯ ಮಹಿಳೆ ಹೊಟ್ಟೆಯಲ್ಲಿದ್ದ ಸ್ಟೋನ್ ಬೇಬಿಯ ಪಕ್ಕೆಲುಬು, ತಲೆಬುರುಡೆ ಸೇರಿದಂತೆ ಇತರ ಅವಶೇಷಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತಗೆಯಲಾಗಿದೆ.  

ಗರ್ಭಾವಸ್ತೆಯಲ್ಲಿ ಬ್ರೂಣ ಸತ್ತ ಬಳಿಕ ಈ ಅವಶೇಷ ಕ್ಯಾಲ್ಸಿಫೈಡ್ ಆಗಿ ಬದಲಾಗಲಿದೆ. ಇದು ಕಲ್ಲು ಮಗುವಾಗಿ ಗರ್ಭದೊಳಗೆ ಶೇಖರಣೆಯಾಗಲಿದೆ. ಜಗತ್ತಿನಲ್ಲೇ ಇದು ಅಪರೂಪದ ಪ್ರಕರಣ. ಈ ಹಿಂದೆ 2015ರಲ್ಲಿ ಚಿಲಿ ದೇಶದ 91 ವರ್ಷದ ಮಹಿಳೆ ನಡೆದಾಡುವಾಗ ಬಿದ್ದ ಕಾರಣದಿಂದ ಆಸ್ಪತ್ರೆ ದಾಖಲಾಗಿದ್ದು. ಈ ವೇಳೆ ಮೂಳೆಗಳ ಮುರಿತಕ್ಕೆ ಎಕ್ಸ್‌ರೇ ತೆಗೆಯಲಾಗಿತ್ತು. ಈ ಎಕ್ಸ್‌ರೇಯಲ್ಲಿ ಕಳೆದ 60 ವರ್ಷಗಳಿಂದ ಸ್ಟೋನ್ ಬೇಬಿ ಗರ್ಭದಲ್ಲಿರುವುದು ಪತ್ತೆಯಾಗಿತ್ತು. ಮಹಿಳೆಗೆ ಒಂದು ಬಾರಿಯೂ ನೋವಿನ ಅನುಭವ ಆಗಿರಲಿಲ್ಲ.  

ಸದಾ ಕಾಲು ಮೇಲೆ ಕಾಲು ಹಾಕಿ ಕುಳಿತರ ಪುರುಷತ್ವಕ್ಕೆ ಹಾನೀನಾ?
 

Latest Videos
Follow Us:
Download App:
  • android
  • ios