De-Addiction ಟ್ರೀಟ್ಮೆಂಟ್ ತೆಗೆದುಕೊಂಡು ಕುಡಿತ ಬಿಟ್ಟ ನಾಯಿ! ನಿದ್ರೆಗೂ ಬೇಕಿತ್ತು ಸಾರಾಯಿ

ಮನುಷ್ಯರಿಗೆ ಮಾತ್ರವಲ್ಲ ಈ ಪ್ರಾಣಿಗಳಿಗೂ ಒಮ್ಮೆ ಮದ್ಯದ ಚಟ ಅಂಟಿಕೊಂಡ್ರೆ ಬಿಡಿಸೋದು ಕಷ್ಟ. ಇದು ಅಪಾಯಕಾರಿ ಕೂಡ ಹೌದು. ಮದ್ಯವಿಲ್ಲದೆ ಪರದಾಡ್ತಿದ್ದ ಈ ಪ್ರಾಣಿ ಕೊನೆಗೂ ಚಟದಿಂದ ಹೊರ ಬರ್ತಿದೆ.
 

Alcoholic Uk Dog Koko Addicted To Drinks Taken Treatment To Get Well

ಪ್ರತಿ ದಿನ ಮದ್ಯಪಾನ ಮಾಡೋರಿಗೆ ಅದಿಲ್ಲದೆ ಇದ್ರೆ ನಿದ್ರೆ ಬರೋದಿಲ್ಲ. ಇಡೀ ದಿನ ಚಡಪಡಿಕೆ ಅವರನ್ನು ಕಾಡುತ್ತೆ. ಲಾಕ್ ಡೌನ್ ಸಂದರ್ಭದಲ್ಲಿ ಮದ್ಯಸಿಗದೆ ಜನರು ಹೇಗೆಲ್ಲ ಪರದಾಡಿದ್ರು ಎಂಬುದನ್ನು ನಾವೆಲ್ಲ ನೋಡಿದ್ದೇವೆ. 

ಮದ್ಯಪಾನ (Alcohol) ಒಂದು ಚಟ. ಅದ್ರಿಂದ ಹೊರ ಬರೋದು ಸುಲಭದ ಕೆಲಸವಲ್ಲ. ಆರಂಭದಲ್ಲಿ ಇದು ಹವ್ಯಾಸವಾಗಿರುತ್ತೆ. ಆಗೊಮ್ಮೆ ಈಗೊಮ್ಮೆ ಸೇವನೆ ಮಾಡ್ತಿರುತ್ತಾರೆ ಜನ. ನಿಧಾನವಾಗಿ ಇದು ಚಟ (Addiction) ವಾಗಿ ಮಾರ್ಪಡುತ್ತೆ. ನಂತ್ರ ಇಡೀ ದಿನ ಮದ್ಯ ನೀಡಿದ್ರೂ ಅದನ್ನು ಕುಡಿತಾರೆ. ಮದ್ಯಪಾನ ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳನ್ನೂ ಬಿಡೋದಿಲ್ಲ. ಕೆಲ ಪ್ರಾಣಿಗಳು ಮದ್ಯ ಸೇವಿಸುತ್ವೆ ಎನ್ನುವ ಸುದ್ದಿಯನ್ನು ನೀವು ಕೇಳಿರ್ತಿರಿ. ಈಗ ಮತ್ತೊಂದು ನಾಯಿ (Dog) ಸುದ್ದಿಯಲ್ಲಿದೆ.  ಬ್ರಿಟನ್ನಿನ ಮುದ್ದಿನ ನಾಯಿಯೊಂದಕ್ಕೆ ಮದ್ಯ ಸೇವಿಸದೆ ನಿದ್ದೆ ಬರುತ್ತಿರಲಿಲ್ಲ. ಇದು ನಿಮಗೆ ಅಚ್ಚರಿಯುಂಟು ಮಾಡ್ಬಹುದು. ಕೆಲವರಿಗೆ ಓ ಇದು ನಮ್ಮಂತ ನಾಯಿಯೇ ಅಂತ ಅನ್ನಿಸಬಹುದು. ಆದ್ರೆ ಈ ಸುದ್ದಿ ಸತ್ಯ. ಆ ನಾಯಿ ಕಥೆ ಏನು, ಅದು ಹೇಗೆ ಮದ್ಯ ಸೇವನೆ ಚಟದಿಂದ ಹೊರಗೆ ಬಂತು ಎಂಬುದನ್ನು ನಾವು ಹೇಳ್ತೇವೆ.

ಬೇಸಿಗೆಯಲ್ಲಿ ಸಿಕ್ಕಾಪಟ್ಟೆ ಐಸ್‌ಕ್ರೀಂ ತಿನ್ತೀರಾ..ತಜ್ಞರು ಏನಂತಾರೆ ತಿಳ್ಕೊಳ್ಳಿ

ಮದ್ಯ ಸೇವನೆ ಚಟ ಶುರುವಾಗಿದ್ದು ಹೇಗೆ ಗೊತ್ತಾ? : ಕೊಕೊ ಹೆಸರಿನ ನಾಯಿಯೇ ಮದ್ಯದ ಚಟ ಅಂಟಿಸಿಕೊಂಡಿದ್ದ ನಾಯಿ. ಇದಕ್ಕೆ ರಾತ್ರಿ ಮದ್ಯ ಸೇವನೆ ಮಾಡಿಲ್ಲವೆಂದ್ರೆ ನಿದ್ರೆ ಬರ್ತಾ ಇರಲಿಲ್ಲ. ಈ ನಾಯಿಗೆ ತನ್ನ ಹಳೆಯ ಮಾಲೀಕನಿಂದ ಕುಡಿಯುವ ಅಭ್ಯಾಸ ಅಂಟಿಕೊಂಡಿತ್ತು.  ಆತ ಕುಡಿಯುವ ಚಟ ಹೊಂದಿದ್ದ. ಕುಡಿದ ನಂತ್ರ ಬಾಟಲಿಯನ್ನು ಮನೆಯ ಹೊರಗೆ ಇಡ್ತಿದ್ದ. ಅದ್ರಲ್ಲಿ ಉಳಿದಿರುವ ಮದ್ಯವನ್ನು ಸೇವನೆ ಮಾಡಿ ನಾಯಿ ಮಲಗ್ತಾ ಇತ್ತು. ಕ್ರಮೇಣ ನಾಯಿಗೆ ಇದು ಚಟವಾಯ್ತು.

ವ್ಯಸನ ಬಿಡಿಸುವ ಚಿಕಿತ್ಸೆ ಯಶಸ್ವಿ : ಕೊಕೊ ಮಾಲಿಕ ಸಾವನ್ನಪ್ಪಿದ ನಂತ್ರ ಈ ನಾಯಿಯನ್ನು ಡೆವೊನ್‌ನಲ್ಲಿರುವ ವುಡ್‌ಸೈಡ್ ಅನಿಮಲ್ (Animal) ರೆಸ್ಕ್ಯೂ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು. ಕೊಕೊ ಹಾಗೂ ಆಕೆ ಸ್ನೇಹಿತ ಇಲ್ಲಿಗೆ ಬರ್ತಿದ್ದಂತೆ ಅಸ್ವಸ್ಥರಾಗಿದ್ದರು. ಸ್ನೇಹಿತನನ್ನು ಉಳಿಸಿಕೊಳ್ಳಲು ಸಾಧ್ಯವಾಗ್ಲಿಲ್ಲ. ಇದ್ರಿಂದ ಕೊಕೊ ಆರೋಗ್ಯ ಮತ್ತಷ್ಟು  ಹದಗೆಟ್ಟಿತ್ತು. ಟ್ರಸ್ಟ್ ಸಿಬ್ಬಂದಿ ತಕ್ಷಣ ಚಿಕಿತ್ಸೆ ಶುರು ಮಾಡಿದ್ದರು.  ಚಟದಿಂದ ಹೊರಬರಲು ನಾಯಿಗೆ ಚಿಕಿತ್ಸೆ ನೀಡಿದ್ದಾರೆ. ನಿಧಾನವಾಗಿ ಕೊಕೊ ಚೇತರಿಸಿಕೊಳ್ತಿದೆ. ಆದ್ರೆ ಅದು ದತ್ತು ನೀಡುವಷ್ಟು ಆರೋಗ್ಯಕರವಾಗಿಲ್ಲ. ದೈಹಿಕವಾಗಿ ಆರೋಗ್ಯವಾಗಿ ಕಂಡ್ರೂ ಮಾನಸಿಕವಾಗಿ ಇನ್ನೂ ಸುಧಾರಿಸಿಕೊಂಡಿಲ್ಲ. ಅಮೆರಿಕಾದಲ್ಲಿ ಮದ್ಯಪಾನ ಚಟದಿಂದ ಮುಕ್ತಿ ಪಡೆದ ಮೊದಲ ನಾಯಿ ಇದು ಎಂದು ಟ್ರಸ್ಟ್ ಹೇಳಿದೆ. 

Corona Virusನಿಂದಲೂ ಬರಬಹುದು ಸಾವು! ರಕ್ತದಲ್ಲಿಯೇ ಗೊತ್ತಾಗುತ್ತೆ

ಸಾಮಾಜಿಕ ಜಾಲತಾಣದಲ್ಲಿ ಟ್ರಸ್ಟ್ ಈ ಬಗ್ಗೆ ವಿವರವಾಗಿ ಮಾಹಿತಿ ನೀಡಿದೆ. ಕೊಕೊ  ಅನಾರೋಗ್ಯಕ್ಕೆ ಒಳಗಾಗಿದ್ದ ಸಮಯದಲ್ಲಿ ರಾತ್ರಿಯಿಡಿ ಆರೈಕೆ ನಡೆಯುತ್ತಿತ್ತು. ಮದ್ಯಪಾನ ಬಿಡುವ ವೇಳೆ ಜನರಿಗಾಗುವ ಸಮಸ್ಯೆಯೇ ಕೊಕೊದಲ್ಲೂ ಕಾಣಿಸಿಕೊಂಡಿತ್ತು. ಮದ್ಯಪಾನ ಚಟದಿಂದ ಮುಕ್ತಿ ನೀಡಲು ಕೊಕೊವನ್ನು ನಾಲ್ಕು ವಾರಗಳ ಕಾಲ ಪ್ರಜ್ಞೆ ತಪ್ಪಿಸಲಾಗಿತ್ತಂತೆ. ಈಗ ಕೊಕೊ ಚೇತರಿಸಿಕೊಳ್ಳುತ್ತಿದೆ ಎಂದು ಟ್ರಸ್ಟ್ ಹೇಳಿದೆ.  ಕೊಕೊಗೆ ಈಗ ಯಾವುದೇ ಔಷಧಿ ನೀಡ್ತಿಲ್ಲ. ಎಲ್ಲ ನಾಯಿಯಂತೆ ಅದು ವರ್ತಿಸುತ್ತಿದೆ ಎಂದು ಟ್ರಸ್ಟ್ ಹೇಳಿದೆ. ಸಾಮಾಜಿಕ ಜಾಲತಾಣದಲ್ಲಿ ಕೊಕೊ ಬಗ್ಗೆ ಪೋಸ್ಟ್ ಮಾಡ್ತಿದ್ದಂತೆ ಜನರು ಪ್ರತಿಕ್ರಿಯೆ ನೀಡಲು ಶುರು ಮಾಡಿದ್ದಾರೆ. ಅನೇಕರು ಕೊಕೊ ಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕೊಕೊಗೆ ಮರುಜೀವ ನೀಡಿದ ಟ್ರಸ್ಟ್ ಗೆ ಧನ್ಯವಾದ ಹೇಳಿದ್ದಾರೆ.  
 

Latest Videos
Follow Us:
Download App:
  • android
  • ios