Health Tips: ವಯಸ್ಸಾಯ್ತು 20, ಯುವತಿಯರು ಈ ಆಹಾರ ತಿನ್ನೋದ ಮರೀಬಾರದು!
ಯುವತಿಯರಲ್ಲಿ ಅನೀಮಿಯಾ, ಕಬ್ಬಿಣಾಂಶದ ಕೊರತೆ, ಹಾರ್ಮೋನ್ ಅಸಮತೋಲನ ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿವೆ. 20ರ ವಯೋಮಾನದ ಬಳಿಕ ಮಹಿಳೆಯರು ಕೆಲವು ಆಹಾರ ಪದಾರ್ಥಗಳನ್ನು ತಮ್ಮ ದೈನಂದಿನ ಡಯೆಟ್ ನಲ್ಲಿ ಸೇರ್ಪಡೆ ಮಾಡಿಕೊಂಡರೆ ಈ ಸಮಸ್ಯೆಗಳಿಂದ ಬಚಾವಾಗಬಹುದು.
ಒತ್ತಡದ ಜೀವನದಲ್ಲಿ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವುದು ಸವಾಲಾಗಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ಏನೆಲ್ಲ ಆರೋಗ್ಯ ಸಮಸ್ಯೆಗಳನ್ನು ಕಾಣುತ್ತಿರುವ ಸಮಯ ಇದು. ಆರೋಗ್ಯದ ವಿಚಾರದಲ್ಲಿ ಮಹಿಳೆಯರು ಭಾರೀ ಎಚ್ಚರಿಕೆ ವಹಿಸಬೇಕಾಗುತ್ತದೆ. ಏಕೆಂದರೆ, ಮಹಿಳೆಯರಲ್ಲಿ ಹಾರ್ಮೋನ್ ವ್ಯತ್ಯಾಸಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿರುವುದರಿಂದ ಮತ್ತು ಈ ಸಮಸ್ಯೆ ನೇರವಾಗಿ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುವುದರಿಂದ ಹೆಚ್ಚು ಕಾಳಜಿ ಅಗತ್ಯ. ಸಮಸ್ಯೆ ಉಂಟಾದ ಬಳಿಕ ಚಿಕಿತ್ಸೆ ಮಾಡಿಕೊಳ್ಳುವುದಕ್ಕಿಂತ ಸಮಸ್ಯೆಯನ್ನು ದೂರವಿಡುವುದು ಜಾಣತನ. ಹೀಗಾಗಿ, ಯುವತಿಯರು ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ. ಕೆಲವು ಆಹಾರ ಪದಾರ್ಥಗಳನ್ನು ದೈನಂದಿನ ಲಿಸ್ಟಿಗೆ ಸೇರಿಸಿಕೊಳ್ಳುವ ಮೂಲಕ ಆರೋಗ್ಯದ ರಕ್ಷಣೆಗೆ ಮುಂದಾಗುವುದು ಉತ್ತಮ ಪದ್ಧತಿ. ಬಹಳಷ್ಟು ಯುವತಿಯರು ಅನಿಯಮಿತ ಮುಟ್ಟು, ಪಿಸಿಓಡಿ, ಅನೀಮಿಯಾ, ಕಬ್ಬಿಣಾಂಶದ ಕೊರತೆಗಳಿಂದ ಬಳಲುತ್ತಾರೆ. ಇವುಗಳನ್ನು ನಿವಾರಿಸಿಕೊಳ್ಳಲು ಕೆಲವು ಪೋಷಕಾಂಶಗಳು ದೇಹಕ್ಕೆ ಅಗತ್ಯ. ಅವುಗಳನ್ನು ಔಷಧದ ರೂಪದಲ್ಲದೆ ಆಹಾರದ ರೂಪದಲ್ಲಿ ಸೇವಿಸುವುದು ಉತ್ತಮ. ಹೀಗಾಗಿ, 20 ವರ್ಷದ ಬಳಿಕ ಯುವತಿಯರು ಕಡ್ಡಾಯವಾಗಿ ತಮ್ಮ ಡಯೆಟ್ ನಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು.
• ಫೋಲೇಟ್ (Folate)
ಹೃದಯದ ಆರೋಗ್ಯ (Heart Health), ನರವ್ಯೂಹದ (Nerves) ಕಾರ್ಯ, ಮಾಂಸಖಂಡಗಳ ಆರೋಗ್ಯಕ್ಕೆ ಫೋಲೇಟ್ ಅತ್ಯಗತ್ಯ. ಇದು ದೇಹಕ್ಕೆ ಶಕ್ತಿ (Energy) ನೀಡುತ್ತದೆ, ಜೀರ್ಣಾಂಗ (Digestion) ವ್ಯವಸ್ಥೆಗೆ ಒಳ್ಳೆಯದು. ರಕ್ತದ ಗುಣಮಟ್ಟವನ್ನು ಸುಧಾರಿಸುತ್ತದೆ. ಹಸಿವನ್ನು ನಿಯಂತ್ರಣದಲ್ಲಿಡಲೂ ಸಹ ಇದು ಸಹಕಾರಿ. ಸೂಕ್ತ ಪ್ರಮಾಣದಲ್ಲಿ ಫೋಲೇಟ್ ಅಂಶವಿರುವ ಬ್ರೊಕೋಲಿ, ಹಸಿರು ಸೊಪ್ಪುಗಳ ಸೇವನೆ ಮಾಡುತ್ತಿದ್ದರೆ ಸಂತಾನೋತ್ಪತ್ತಿಗೆ (Fertility) ಸಂಬಂಧಿಸಿದ ಸಮಸ್ಯೆಗಳು ಉಂಟಾಗುವುದಿಲ್ಲ.
ಅಮೃತ ಸಮಾನವಾಗಿರುವ ತಾಯಿಯ ಎದೆಹಾಲಿನಲ್ಲೂ ವಿಷವಿದ್ಯಾ?
• ಕಬ್ಬಿಣಾಂಶ (Iron)
ಹಾರ್ಮೋನ್ ಗಳನ್ನು ಸಮತೋಲನಗೊಳಿಸುವ ಜತೆಗೇ ದೇಹದ ವಿಭಿನ್ನ ಕಾರ್ಯಗಳಿಗೆ ಕಬ್ಬಿಣಾಂಶ ಅಗತ್ಯ. ಇದು ದೇಹದ ಕೋಶಗಳಿಗೆ ಆಮ್ಲಜನಕ (Oxigen) ತಲುಪಿಸುವ ಕೆಲಸ ಮಾಡುತ್ತದೆ. ಕಬ್ಬಿಣಾಂಶದೊಂದಿಗೆ ವಿಟಮಿನ್ ಸಿ ಅನ್ನೂ ಸೇವನೆ ಮಾಡುವುದರಿಂದ ಚೆನ್ನಾಗಿ ಜೀರ್ಣವಾಗುತ್ತದೆ. ಖರ್ಜೂರ, ಬೇಳೆ, ಸೋಯಾಬೀನ್, ಎಳ್ಳಿನಲ್ಲಿ ಕಬ್ಬಿಣಾಂಶ ಲಭ್ಯ.
• ಕ್ಯಾಲ್ಷಿಯಂ (Calcium)
ಕ್ಯಾಲ್ಷಿಯಂ ಮೂಳೆಗಳ ಆರೋಗ್ಯ, ದಂತ, ಮಾಂಸಖಂಡಗಳ ಕಾರ್ಯಕ್ಕೆ ಅಗತ್ಯ. ರಾಗಿ, ಪನ್ನೀರ್, ಹಸಿರು ಸೊಪ್ಪು, ಬೀಜಗಳಲ್ಲಿ (Nuts) ಕ್ಯಾಲ್ಷಿಯಂ ಲಭ್ಯ.
• ವಿಟಮಿನ್ ಡಿ (Vitamin D)
ವಿಟಮಿನ್ ಡಿ ದೇಹಕ್ಕೆ ಅಗತ್ಯವಾಗಿರುವ ವಿಟಮಿನ್ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದು ಕ್ಯಾಲ್ಷಿಯಂ, ಮ್ಯಾಗ್ನೀಸಿಯಂ, ಫಾಸ್ಪೇಟ್ ನಂತಹ ಖನಿಜಾಂಶಗಳನ್ನು (Minerals) ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಡಿ ರೋಗನಿರೋಧಕ (Immunity) ಶಕ್ತಿಯನ್ನು ಸದೃಢಗೊಳಿಸುತ್ತದೆ. ಸೂರ್ಯನ ಕಿರಣ (Sun Light), ಮೊಟ್ಟೆಯ ಹಳದಿ ಭಾಗ, ಅಣಬೆಯಲ್ಲಿ ದೊರೆಯುತ್ತದೆ. ಸೂರ್ಯನ ಕಿರಣಗಳಲ್ಲಿ ವಾಕ್ ಮಾಡುವ ಅಭ್ಯಾಸ ಬೆಳೆಸಿಕೊಂಡರೆ ವಿಟಮಿನ್ ಡಿ ಕೊರತೆ ಉಂಟಾಗುವುದಿಲ್ಲ.
• ವಿಟಮಿನ್ ಇ (Vitamin E)
ವಿಟಮಿನ್ ಇ ಇರುವ ಆಹಾರಗಳೆಂದರೆ, ಅಕ್ರೋಟ್, ಲಿಂಬೆ (Lemon), ಕಿತ್ತಳೆ, ಸೌತೆಕಾಯಿ ಮುಂತಾದ ಹಲವು ಪದಾರ್ಥಗಳಲ್ಲಿ ವಿಟಮಿನ್ ಇ ದೊರೆಯುತ್ತದೆ. ಆಂಟಿಆಕ್ಸಿಡೆಂಟ್ ನಂತೆ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹಾರ್ಮೋನ್ (Hormone) ಅಸಮತೋಲನ ತಪ್ಪಿಸುತ್ತದೆ.
ಸ್ಮೋಕ್ ಮಾಡೋದ್ರಿಂದ ಗರ್ಭಧಾರಣೆಗೆ ತೊಂದರೆಯಾಗುತ್ತಾ?
• ಒಮೆಗಾ-3 ಫ್ಯಾಟಿ ಆಸಿಡ್ (Omega 3 Fatty Acid)
ಒಮೆಗಾ-3 ಫ್ಯಾಟಿ ಆಸಿಡ್ ನಮ್ಮ ದೇಹಕ್ಕೆ ಬೇಕಾದ ಪ್ರಮುಖ ಅಂಶ. ದೈಹಿಕ ಮತ್ತು ಮಾನಸಿಕ (Mental) ಆರೋಗ್ಯಕ್ಕೆ ಇದು ಅಗತ್ಯ. ಇದರ ಕೊರತೆಯಾದರೆ ಹಲವು ರೋಗಗಳನ್ನು ಎದುರಿಸಬೇಕಾಗುತ್ತದೆ. ತುಪ್ಪ, ಬಟರ್ ಫ್ರೂಟ್ (Butter Fruit), ಆಲಿವ್ ಎಣ್ಣೆ, ಅಕ್ರೋಟು, ಚಿಯಾ ಬೀಜಗಳಲ್ಲಿ ಇದು ಲಭ್ಯ.
• ಮ್ಯಾಗ್ನೀಸಿಯಂ (Magnesium)
ದೇಹಕ್ಕೆ ಬೇಕಾದ ಪ್ರಮುಖ ಖನಿಜಗಳಲ್ಲಿ ಇದು ಪ್ರಮುಖವಾಗಿದೆ. ಹೃದಯ ಸರಿಯಾಗಿ ಕಾರ್ಯನಿರ್ವಹಿಸಲು ಇದು ಅಗತ್ಯ. ಬಾಳೆಹಣ್ಣು, ಬಟರ್ ಫ್ರೂಟ್, ಬೀಜಗಳು, ಹಸಿರು ಸೊಪ್ಪು, ತರಕಾರಿ, ಅಂಜೂರಗಳಲ್ಲಿ ಇದು ದೊರೆಯುತ್ತದೆ.