Health Tips : ಡೈಪರ್ ಹಾಕಿದ್ರೂ ಮೂತ್ರ ಸೋರುತ್ತೆ ಅನ್ನೋದು ಹೀಗೆ ಮಾಡಿ
ಇತ್ತೀಚಿನ ದಿನಗಳಲ್ಲಿ ವಯಸ್ಕರ ಡೈಪರ್ ಗೆ ಹೆಚ್ಚು ಬೇಡಿಕೆ ಬಂದಿದೆ. ಪ್ರವಾಸದಿಂದ ಹಿಡಿದು ಮನೆಯಲ್ಲಿ ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಲು ಸಾಧ್ಯವಿಲ್ಲ ಎನ್ನುವ ಹಿರಿಯರು ಡೈಪರ್ ಬಳಕೆ ಮಾಡ್ತಾರೆ. ಆದ್ರೆ ಡೈಪರ್ ಕೂಡ ಅನೇಕ ಬಾರಿ ಸೋರಿ ಮುಜುಗರಗೊಳಿಸುತ್ತದೆ.
ವಯಸ್ಸಾದಂತೆ ಮೂತ್ರ ನಿಯಂತ್ರಣ ಮಾಡೋದು ಕಷ್ಟವಾಗುತ್ತದೆ. ಮಧುಮೇಹ ರೋಗಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ಅನೇಕರಿಗೆ ಮೂತ್ರ ವಿಸರ್ಜನೆಯಾಗಿದ್ದೇ ತಿಳಿಯೋದಿಲ್ಲ. ಇನ್ನು ಪ್ರಯಾಣದ ವೇಳೆ ಕೂಡ ಮೂತ್ರ ವಿಸರ್ಜನೆ ಸಮಸ್ಯೆಯನ್ನು ಅನೇಕರು ಎದುರಿಸುತ್ತಾರೆ. ಮಕ್ಕಳು ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡಬಾರದು, ರಾತ್ರಿ ಅವರ ನಿದ್ರೆಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಪಾಲಕರು ಅವರಿಗೆ ಡೈಪರ್ ಹಾಕ್ತಾರೆ. ಅದೇ ರೀತಿ ಮೂತ್ರ ವಿಸರ್ಜನೆ ಸಮಸ್ಯೆಯಾಗ್ಬಾರದು ಎಂಬ ಕಾರಣಕ್ಕೆ ಹಿರಿಯರಿಗೂ ಡೈಪರ್ ಬಂದಿದೆ. ಇತ್ತೀಚಿನ ದಿನಗಳಲ್ಲಿ ವಯಸ್ಕರ ಡೈಪರ್ ಮಾರುಕಟ್ಟೆ ದೊಡ್ಡದಾಗಿ ಬೆಳೆದಿದೆ. ವಯಸ್ಕರ ಡೈಪರ್ ಗೆ ಬೇಡಿಕೆ ಕೂಡ ಹೆಚ್ಚಾಗಿದೆ. ವಯಸ್ಕರ ಡೈಪರ್ ಬಳಕೆ ಮಾಡುವಾಗ ಅನೇಕ ತಪ್ಪುಗಳನ್ನು ಮಾಡ್ತಾರೆ. ಇದ್ರಿಂದ ಮೂತ್ರ ಸೋರಿಕೆಯಾಗುವ ಸಾಧ್ಯತೆಯಿರುತ್ತದೆ. ಇಂದು ನಾವು ಡೈಬರ್ ಬಳಕೆ ಹೇಗೆ ಮಾಡ್ಬೇಕು ಎಂಬುದನ್ನು ಹೇಳ್ತೇವೆ
ಡೈಪರ್ (Diaper) ಸೋರಿಕೆ (Leakage) ಹೇಗೆ ತಡೆಗಟ್ಟುವುದು? :
ಪ್ರತಿಯೊಬ್ಬರ ದೇಹದ ಆಕಾರ ವಿಭಿನ್ನವಾಗಿರುತ್ತದೆ. ಒಬ್ಬ ವ್ಯಕ್ತಿಗೆ ಚೆನ್ನಾಗಿ ಹೊಂದಿಕೊಳ್ಳುವ ವಯಸ್ಕ ಡೈಪರ್ ಇನ್ನೊಬ್ಬರಿಗೆ ಸೋರಿಕೆ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ವಯಸ್ಕ ಡೈಪರ್ ಖರೀದಿ ವೇಳೆ ನೀವು ಕೆಲ ಸಂಗತಿಯನ್ನು ಗಮನಿಸಬೇಕು. ಮೊದಲೇ ಹೇಳಿದಂತೆ ಅನೇಕ ಬ್ರ್ಯಾಂಡ್ ನ ಹಾಗೂ ಅನೇಕ ವಿಧದ ಮತ್ತು ಅನೇಕ ಗಾತ್ರದ ಡೈಪರ್ ಲಭ್ಯವಿದೆ. ಅವುಗಳಲ್ಲಿ ಯಾವುದು ಸೂಕ್ತ ಎಂಬುದನ್ನು ಪರೀಕ್ಷಿಸಿ ನಂತ್ರ ಅದರ ಬಳಕೆ ಶುರು ಮಾಡಿ. ಡೈಪರ್ ಗಾತ್ರದ ಬಗ್ಗೆಯೂ ಗಮನ ನೀಡಬೇಕಾಗುತ್ತದೆ.
ಇನ್ನು ಮೊದಲೇ ಹೇಳಿದಂತೆ ಮಧುಮೇಹಿ (Diabetic) ಗಳಲ್ಲಿ ಮೂತ್ರ (Urine) ನಿಯಂತ್ರಣ ಕಷ್ಟವಾಗುತ್ತದೆ. ಅತಿಯಾದ ಮೂತ್ರ ವಿಸರ್ಜನೆಯಿಂದ ಡೈಪರ್ ಫುಲ್ ಆಗಿ ಸೋರಿಕೆ ಶುರುವಾಗುವ ಸಾಧ್ಯತೆಯಿರುತ್ತದೆ. ಮೂತ್ರ ವಿಸರ್ಜನೆಯನ್ನು ನೀವು ನಿಯಂತ್ರಿಸಬೇಕಾಗುತ್ತದೆ. ಸಮಯ (Time) ಕ್ಕೆ ಮೂತ್ರ ವಿಸರ್ಜನೆಯನ್ನು ಅಭ್ಯಾಸ ಮಾಡುವುದರಿಂದ ಮೂತ್ರದ ಸೋರಿಕೆಯನ್ನು ತಡೆಯಬಹುದು,
ಮಧುಮೇಹಿಗಳು ರಕ್ತ (Blood) ದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಗಾಳಿಗುಳ್ಳೆಯ ಒತ್ತಡವನ್ನು ಕಡಿಮೆ ಮಾಡಲು ಮತ್ತು ಸೋರಿಕೆಯನ್ನು ತಡೆಯಲು ಫೈಬರ್ (Fiber) ಭರಿತ ಆಹಾರ ಸೇವನೆ ಮಾಡಬೇಕು. ಆರೋಗ್ಯಕರ ಮತ್ತು ಸಮತೋಲಿತ ಆಹಾರ ಸೇವಿಸಬೇಕು. ದಿನಕ್ಕೆ ಕನಿಷ್ಠ ಎಂಟು ಗ್ಲಾಸ್ ನೀರು ಕುಡಿಯಬೇಕು. ಆಲ್ಕೊಹಾಲ್ಯುಕ್ತ-ಕಾರ್ಬೊನೇಟೆಡ್ ಮತ್ತು ಕೆಫೀನ್ ಹೊಂದಿರುವ ಪಾನೀಯಗಳಿಂದ ದೂರವಿರಬೇಕು.
ವಯಸ್ಕ ಡೈಪರ್ ತುಂಬಾ ಸಡಿಲವಾದಾಗ ಅಥವಾ ತುಂಬಾ ಬಿಗಿಯಾದಾಗ ಸೋರಿಕೆ ಸಾಧ್ಯತೆಯಿರುತ್ತದೆ. ಹಾಗಾಗಿ ಸೋರಿಕೆಯನ್ನು ಕಡಿಮೆ ಮಾಡಲು ಕಾಲುಗಳ ಸುತ್ತ ಕವರ್ ಆಗಿರುವ ಡೈಪರ್ ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ: ಹೊಟ್ಟೆಗಲ್ಲ, ತಲೆಗೆ ಸರಿಯಾಗಿ ಎಣ್ಣೆ ಹಾಕಿ, ನಿದ್ರೆ ಬರೋಲ್ಲ ಯಾಕೆ ನೋಡೋಣ!
ವಯಸ್ಕರ ಡೈಪರ್ ಸೋರಿಕೆಯನ್ನು ತಡೆಗಟ್ಟಲು ಸುಲಭವಾದ ಮಾರ್ಗವೆಂದರೆ ನಿಮ್ಮ ಡಯಾಪರ್ ಅನ್ನು ನಿಯಮಿತವಾಗಿ ಬದಲಾಯಿಸುವುದು. ತುಂಬಾ ಸಮಯದವರೆಗೆ ನೀವು ಡೈಪರ್ ಧರಿಸಿದ್ದರೆ ಸೋರಿಕೆ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ನೀವು ಆಗಾಗ ಡೈಪರ್ ಬದಲಿಸುತ್ತಿರಿ.
ವಯಸ್ಕ ಡೈಪರ್ ಸೋರುತ್ತಿದೆ ಎಂದಾದ್ರೆ ನೀವು ಡೈಪರ್ ಒಳ ಭಾಗಕ್ಕೆ ಬೂಸ್ಟರ್ ಪ್ಯಾಡ್ ಹಾಕಿಕೊಳ್ಳಿ. ಬೂಸ್ಟರ್ ಪ್ಯಾಡ್ ಡೈಪರ್ ಗೆ ಹೋಗುವ ಮುನ್ನ ಮೂತ್ರವನ್ನು ಸ್ವಲ್ಪ ಮಟ್ಟಿಗೆ ಹೀರಿಕೊಳ್ಳುತ್ತದೆ.
ವಯಸ್ಕರ ಡೈಪರನ್ನು ದೀರ್ಘಕಾಲ ಬಳಕೆಗೆ ಬರುವಂತೆ ತಯಾರಿಸಲಾಗಿರುತ್ತದೆ. ಹಾಗಾಗಿ ರಾತ್ರಿ ಸೋರಿಕೆಯಾಗುವುದು ಅಪರೂಪ. ನೀವು ಯಾವುದೇ ಭಯವಿಲ್ಲದೆ ಆರಾಮವಾಗಿ ಅದನ್ನು ಬಳಸಬಹುದು. ಒಂದ್ವೇಳೆ ಭಯವಾಗ್ತಿದೆ ಎಂದಾದ್ರೆ ನೀವು ಓವರ್‌ನೈಟ್ ಡೈಪರ್ ಪ್ಯಾಡ್ ಖರೀದಿಸಿ.
ಇದನ್ನೂ ಓದಿ: ಕೆಮಿಕಲ್ ಹೇರ್ ಕಲರಿಂಗ್ ಬಿಟ್ಬಿಡಿ, ಕೂದಲಿಗೆ ಗೋರಂಟಿ ಬಳಸಿ ನೋಡಿ
ಡೈಪರ್ ಧರಿಸಿದ ನಂತ್ರ ದೀರ್ಘಕಾಲದವರೆಗೆ ಆರಾಮವಾಗಿರಬೇಡಿ. ಸೂಕ್ತ ಸಮಯಕ್ಕೆ ಡೈಪರ್ ಸೋರಿಕೆಯಾಗಿದೆಯಾ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇದ್ರಿಂದ ಮುಜುಗರ ಎದುರಿಸುವುದು ತಪ್ಪುತ್ತದೆ.