1. ಬಿ12 ನ ಕೊರತೆ

ವಿಟಮಿನ್‌ ಬಿ 12 ನಾವು ತೆಗೆದುಕೊಳ್ಳುವ ಆಹಾರವನ್ನು ಶಕ್ತಿಯಾಗಿ ಮಾರ್ಪಡಿಸುತ್ತದೆ. ವಯಸ್ಸಾಗೋದು, ಕೇವಲ ಸಸ್ಯಾಹಾರದ ಸೇವನೆ ಇತ್ಯಾದಿಗಳಿಂದ ಬಿ12 ಕೊರತೆ ಉಂಟಾಗಬಹುದು. ಹೀಗಾದಾಗ ಎನರ್ಜಿ ಲೆವೆಲ್‌ ಕಡಿಮೆಯಾಗುತ್ತೆ. ಆಯಾಸ, ಮೈ ಕೈ ನೋವು, ಶಕ್ತಿ ಸೋರಿದಂಥಾ ಅನುಭವವಾಗಬಹುದು. ಜೊತೆಗೆ ದೇಹದ ರೋಗ ನಿರೋಧಕ ಶಕ್ತಿಯೂ ಇದರಿಂದಾಗಿ ಕಡಿಮೆಯಾಗುತ್ತೆ.

ಕೂದಲುದುರೋದು ನಿಲ್ಲಿಸೋಕೆ ಈ ಆಹಾರಗಳನ್ನು ಸೇವಿಸಿ 

ಮೀನು, ಮೊಟ್ಟೆ, ಹಾಲು, ಮಶ್ರೂಮ್‌ ಇತ್ಯಾದಿಗಳ ನಿಯಮಿತ ಸೇವನೆಯಿಂದ ಈ ಕೊರತೆ ನೀಗಿಸಬಹುದು.

2. ಕ್ಯಾಲ್ಶಿಯಂ ಮತ್ತು ಮಿಟಮಿನ್‌ ಡಿ

ಮೂಳೆ, ಸ್ನಾಯುಗಳು, ನರಮಂಡಲ, ಹಲ್ಲು ಇತ್ಯಾದಿ ಸದೃಢವಾಗಿರಲು ಸಹಕಾರಿಯಾಗೋದು ದೇಹದಲ್ಲಿನ ಕ್ಯಾಲ್ಶಿಯಂನ ಅಂಶ ಹಾಗೂ ವಿಟಮಿನ್‌ ಡಿ. ಅದರಲ್ಲೂ ವಿಟಮಿನ್‌ ಡಿ ಸೂರ್ಯನ ಬೆಳಕಲ್ಲಿ ಹೇರಳವಾಗಿರುತ್ತದೆ. ಇದು ಕ್ಯಾಲ್ಶಿಯಂ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತೆ.

ಇವುಗಳ ಕೊರತೆಯಾದಾಗ ಕೈ ಕಾಲಿನ ಜಾಯಿಂಟ್ಸ್‌ಗಳಲ್ಲಿ ನೋವು, ಕೆಳ ಬೆನ್ನು ನೋವು, ಮೊಣಕಾಲು ನೋವು ಇತ್ಯಾದಿ ಸಮಸ್ಯೆಗಳಾಗುತ್ತವೆ. ಮುಖದಲ್ಲಿ ಬಿಳಿ ಮಚ್ಚೆ ಕಾಣಿಸಿಕೊಳ್ಳಬಹುದು.

ಹಸಿರು ತರಕಾರಿ, ಹಾಲು, ಡೈರಿ ಉತ್ಪನ್ನಗಳು, ಮೀನು ಇತ್ಯಾದಿಗಳಲ್ಲಿ ಕ್ಯಾಲ್ಶಿಯಂ ಅಂಶವಿರುತ್ತೆ. ಸೂರ್ಯನ ಬೆಳಕಿನಲ್ಲಿ ದಿನದಲ್ಲಿ ಅರ್ಧ ಗಂಟೆಗಿಂತ ಹೆಚ್ಚು ವ್ಯಾಯಾಮ ಮಾಡಿದರೆ ವಿಟಮಿನ್‌ ಡಿ ಸಿಗೋದರ ಜೊತೆಗೆ ನೋವೂ ಉಪಶಮನವಾಗಬಹುದು.

ಮಾವಿನ ಕಾಯಿ ಹುಳಿಯೆಂದು ಹಳಿಯಬೇಡಿ, ಆರೋಗ್ಯಕ್ಕದು ಸಿಹಿಯೇ 

ಊಟದ ಪ್ಲೇಟ್‌ ಹೀಗಿರಲಿ

- ನಿಮ್ಮ ಊಟದ ಪ್ಲೇಟ್‌ನ ಅರ್ಧ ಭಾಗ ತರಕಾರಿಗಳಿರಲಿ. ಬೇಯಿಸದ ತರಕಾರಿಗಳಾದರೆ ಉತ್ತಮ, ಬೇಯಿಸಿದ್ದಾದರೆ ಅದು ಅರ್ಧಭಾಗ, ಉಳಿದರ್ಧ ಹಸಿ ತರಕಾರಿ ಇರಲಿ.

- ಕಾಲು ಭಾಗದಲ್ಲಿ ಅನ್ನ, ರೋಟಿ, ಚಪಾತಿ ಅಥವಾ ಮುದ್ದೆ ಇರಲಿ.

- ಕೊನೆಯ ಕಾಲು ಭಾಗದಲ್ಲಿ ಮೊಟ್ಟೆ, ಮಾಂಸ, ಪನೀರ್‌, ಬೀನ್ಸ್‌ ಇತ್ಯಾದಿಗಳಿರಲಿ.

ಈ ಬಗೆಯಲ್ಲಿ ಊಟ ಮಾಡಿದರೆ ಪೋಷಕಾಂಶಗಳ ಕೊರತೆ ಬಾಧಿಸದು.