ಸಮೀಪ ದೃಷ್ಟಿ ದೋಷ ನಿವಾರಣೆಗೆ ಸಿಕ್ಕಿದೆ ಮದ್ದು: ಅಕ್ವೋಬರ್‌ನಲ್ಲಿಯೇ ಸಿಗಲಿದೆ ಔಷಧ!

ಸಮೀಪ ದೃಷ್ಟಿ ದೋಷ ನಿವಾರಣೆಗೆ ಔಷಧ ಲಭ್ಯವಾಗಿದ್ದು, ಶೀಘ್ರದಲ್ಲಿಯೇ ಈ ಮದ್ದು ಮಾರುಕಟ್ಟೆಗೆ ಬರಲಿದೆ. ಈ ಔಷಧ ಯಾವಾಗ ಮತ್ತು ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

A medicine has been found to cure nearsightedness available in october mrq

ಮುಂಬೈ: 40-55ರ ವಯೋಮಾನದವರಲ್ಲಿ ವಯೋಸಹಜವಾಗಿ ಕಾಣಿಸಿಕೊಳ್ಳುವ ಸಮೀಪದ ದೃಷ್ಟಿದೋಷ ನಿವಾರಿಸುವ ಔಷಧವೊಂದನ್ನು ಮೊದಲ ಬಾರಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಮುಂದಿನ ತಿಂಗಳು ಅದು ಮಾರುಕಟ್ಟೆಗೆ ಬರಲಿದೆ.

ಮುಂಬೈ ಮೂಲದ ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ಎನ್ನುವ ಖಾಸಗಿ ಕಂಪನಿ ‘ಪ್ರೆಸ್‌ವು’ ಎಂಬ ಐಡ್ರಾಪ್‌ ಅಭಿವೃದ್ಧಿಪಡಿಸಿದ್ದು, ಇದರ ಮಾರಾಟಕ್ಕೆ ಔಷಧ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದೆ. ಈ ಔಷಧ ಹತ್ತಿರದ ವಸ್ತುಗಳನ್ನು ನೋಡುವುದರಲ್ಲಿ ಇರುವ ದೃಷ್ಟಿ ದೋಷ ಕಡಿಮೆ ಮಾಡುತ್ತದೆ. ಇದಕ್ಕೆ 350 ರು.ಗೆ ದರ ನಿಗದಿಪಡಿಸಲಾಗಿದೆ.

ಐ ಡ್ರಾಪ್‌ನ ಒಂದು ಹನಿ ಕೇವಲ 15 ನಿಮಿಷದಲ್ಲಿ ಕೆಲಸ ನಿರ್ವಹಿಸುವುದಕ್ಕೆ ಪ್ರಾರಂಭಿಸುತ್ತದೆ. ಇದರ ಪರಿಣಾಮ 6 ಗಂಟೆಗಳ ತನಕವೂ ಇರಲಿದೆ. ಮೊದಲ ಹನಿ ಹಾಕಿದ 3 ರಿಂದ 6 ಗಂಟೆಯ ಒಳಗೆ ಎರಡನೇ ಐ ಡ್ರಾಪ್ಸ್ ಹಾಕಿದರೆ ಅದರ ಪರಿಣಾಮ ಸುದೀರ್ಘ ಅವಧಿಗೆ ಇರಲಿದೆ ಎಂದು ಕಂಪನಿ ಹೇಳಿದೆ.

ಸಣ್ಣ ಸಣ್ಣ ಮಕ್ಕಳಲ್ಲಿ ಕಾಣಿಸಿಕೊಳ್ತಿದೆ ಈ ಜಾಗತಿಕ ಖಾಯಿಲೆ: ಮಯೋಪಿಯಾ ಜಾಗೃತಿಗೆ ನಾರಾಯಣ ನೇತ್ರಾಲಯ ಪಣ

Latest Videos
Follow Us:
Download App:
  • android
  • ios